Tax Saving Tips: ತೆರಿಗೆ ಉಳಿತಾಯಕ್ಕಾಗಿ ಸರ್ಕಾರದ ಈ ಯೋಜನೆಯಲ್ಲಿ ಹೂಡಿಕೆ ಮಾಡಿ

Tax Saving: ಆದಾಯ ತೆರಿಗೆ ಉಳಿತಾಯಕ್ಕಾಗಿ ಸರ್ಕಾರದ ಕೆಲವು ಯೋಜನೆಗಳಲ್ಲಿ ಹೂಡಿಕೆ ಮಾಡುವುದು ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. ಅಂತಹ ಯೋಜನೆಗಳಲ್ಲಿ ಸಾರ್ವಜನಿಕ ಭವಿಷ್ಯ ನಿಧಿ (ಪಿ‌ಪಿ‌ಎಫ್) ಕೂಡ ಒಂದು. ಈ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ಏನೆಲ್ಲಾ ಪ್ರಯೋಜನವಾಗಲಿದೆ ಎಂದು ತಿಳಿಯೋಣ... 

Written by - Yashaswini V | Last Updated : Jun 20, 2023, 01:53 PM IST
  • ಸಾರ್ವಜನಿಕ ಭವಿಷ್ಯ ನಿಧಿ (ಪಿ‌ಪಿ‌ಎಫ್) ಯೋಜನೆ ಕೇಂದ್ರ ಸರ್ಕಾರದ ಮೂಲಕ ನಡೆಸಲ್ಪಡುವ ಯೋಜನೆಯಾಗಿದೆ.
  • ಈ ಯೋಜನೆಯಲ್ಲಿ ಜನರು ಪ್ರತಿ ವರ್ಷ ಕನಿಷ್ಠ 500 ರೂ.ಗಳನ್ನು ಹೂಡಿಕೆ ಮಾಡಬಹುದು. ಗರಿಷ್ಠ 1,50,000ರೂ. ಹೂಡಿಕೆ ಮಾಡಬಹುದು.
  • ಜನರು ಹೂಡಿಕೆ ಮಾಡಿದ ಮೊತ್ತದ ಮೇಲೆ ಬಡ್ಡಿಯನ್ನು ಪಡೆಯುತ್ತಾರೆ.
Tax Saving Tips: ತೆರಿಗೆ ಉಳಿತಾಯಕ್ಕಾಗಿ ಸರ್ಕಾರದ ಈ ಯೋಜನೆಯಲ್ಲಿ ಹೂಡಿಕೆ ಮಾಡಿ  title=

Tax Saving Tips: ಹೆಚ್ಚಿನ ಆದಾಯವಿರುವವರು ಪ್ರತಿ ವರ್ಷ ತಮ್ಮ ಆದಾಯದ ಮೇಲೆ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಪ್ರತಿ ಆರ್ಥಿಕ ವರ್ಷದಲ್ಲಿ ಜನರು ತಮ್ಮ ಆದಾಯ ತೆರಿಗೆ ರಿಟರ್ನ್ ಸಲ್ಲಿಸಬೇಕಾಗುತ್ತದೆ. ನೀವು ಆದಾಯ ತೆರಿಗೆಯನ್ನು ಉಳಿಸುವ ಬಗ್ಗೆ ಯೋಚಿಸುತ್ತಿದ್ದರೆ ಸರ್ಕಾರದ ಕೆಲವು ಯೋಜನೆಗಳು ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿವೆ. ಅಂತಹ ಯೋಜನೆಗಳಲ್ಲಿ ಸಾರ್ವಜನಿಕ ಭವಿಷ್ಯ ನಿಧಿ (ಪಿ‌ಪಿ‌ಎಫ್) ಕೂಡ ಒಂದು.

ಸಾರ್ವಜನಿಕ ಭವಿಷ್ಯ ನಿಧಿ (ಪಿ‌ಪಿ‌ಎಫ್) ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ತೆರಿಗೆಯನ್ನು ಸಹ ಉಳಿಸಬಹುದು. ಈ ಲೇಖನದಲ್ಲಿ ಪಿ‌ಪಿ‌ಎಫ್ ಯೋಜನೆ ಎಂದರೇನು? ಇದರಲ್ಲಿ ಹೂಡಿಕೆ ಮಾಡುವುದರಿಂದ ಏನೆಲ್ಲಾ ಪ್ರಯೋಜನಗಳು ಲಭ್ಯವಿವೆ ಎಂದು ತಿಳಿಯೋಣ... 

ಏನಿದು ಸಾರ್ವಜನಿಕ ಭವಿಷ್ಯ ನಿಧಿ (ಪಿ‌ಪಿ‌ಎಫ್) ಯೋಜನೆ?
* ಸಾರ್ವಜನಿಕ ಭವಿಷ್ಯ ನಿಧಿ (ಪಿ‌ಪಿ‌ಎಫ್) ಯೋಜನೆ ಕೇಂದ್ರ ಸರ್ಕಾರದ ಮೂಲಕ ನಡೆಸಲ್ಪಡುವ ಯೋಜನೆಯಾಗಿದೆ. 
* ಈ ಯೋಜನೆಯಲ್ಲಿ ಜನರು ಪ್ರತಿ ವರ್ಷ ಕನಿಷ್ಠ 500 ರೂ.ಗಳನ್ನು ಹೂಡಿಕೆ ಮಾಡಬಹುದು. ಗರಿಷ್ಠ 1,50,000ರೂ. ಹೂಡಿಕೆ ಮಾಡಬಹುದು. 
* ಪಿಪಿಎಫ್ ಯೋಜನೆಯ ಮುಕ್ತಾಯ ಅವಧಿ 15 ವರ್ಷಗಳು. 

ಇದನ್ನೂ ಓದಿ- July 1 ರಿಂದ ಚಪ್ಪಲ್-ಸ್ಯಾಂಡಲ್ ಗಳಿಗೆ ಈ ನಿಯಮಗಳು ಅನ್ವಯಿಸಲಿವೆ ಎಚ್ಚರ!

ಪಿ‌ಪಿ‌ಎಫ್ ಯೋಜನೆಯ ಪ್ರಯೋಜನಗಳು: 
>> ಪಿಪಿಎಫ್ ಯೋಜನೆಯಲ್ಲಿ ಪ್ರತಿ ವರ್ಷ ಗರಿಷ್ಠ 1.5 ಲಕ್ಷ ರೂಪಾಯಿ ಹೂಡಿಕೆ ಮಾಡಬಹುದು. 
>> ಪಿ‌ಪಿ‌ಎಫ್ (PPF) ಯೋಜನೆಯ ಮೂಲಕ, ಸೆಕ್ಷನ್ 80C ಅಡಿಯಲ್ಲಿ 1.5 ಲಕ್ಷದವರೆಗೆ ತೆರಿಗೆ ಪ್ರಯೋಜನವನ್ನು ಪಡೆಯಬಹುದಾಗಿದೆ.
>> ಜನರು ಹೂಡಿಕೆ ಮಾಡಿದ ಮೊತ್ತದ ಮೇಲೆ ಬಡ್ಡಿಯನ್ನು ಪಡೆಯುತ್ತಾರೆ.
>> ಮಾತ್ರವಲ್ಲ, ಹೂಡಿಕೆ ಮಾಡಿದ ಮೊತ್ತದ ಮೇಲೆ ಪ್ರತಿ ವರ್ಷ ತೆರಿಗೆಯನ್ನು ಉಳಿಸಬಹುದು. 
>> ಪ್ರಸ್ತುತ ಈ ಯೋಜನೆಯಡಿ ಶೇ.7.1ರಷ್ಟು ಬಡ್ಡಿ ನೀಡಲಾಗುತ್ತಿದೆ.
>> ಈ ಯೋಜನೆಯಡಿ ಪಡೆದ ಬಡ್ಡಿಯನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಪರಿಶೀಲಿಸಲಾಗುತ್ತದೆ.

ಇದನ್ನೂ ಓದಿ- Airbus ಅತಿ ದೊಡ್ಡ ಆರ್ಡರ್ ನೀಡಿದ IndiGo, 500 ವಿಮಾನಗಳ ಖರೀದಿಗೆ ಆರ್ಡರ್

ಸೆಕ್ಷನ್ 80C ಅಡಿಯಲ್ಲಿ ತೆರಿಗೆ ಪ್ರಯೋಜನ: 
ಪಿ‌ಪಿ‌ಎಫ್ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ಜನರು ಪ್ರತಿ ವರ್ಷ 80C ಅಡಿಯಲ್ಲಿ ಹೆಚ್ಚು ತೆರಿಗೆ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News