PPF: ಪ್ರತಿ ತಿಂಗಳು 7500 ರೂಪಾಯಿ ಹೂಡಿಕೆ ಮಾಡಿ ನಿವೃತ್ತಿಯ ವೇಳೆಗೆ ಮಿಲಿಯನೇರ್ ಆಗಿ

PPF Crorepati: ಕೋಟ್ಯಾಧಿಪತಿ ಆಗುವ ಬಗ್ಗೆ ನೀವೂ ಯೋಚಿಸುತ್ತಿದ್ದೀರೆ? ಅದಕ್ಕಾಗಿ ಇಂದಿನಿಂದಲೇ ಹೂಡಿಗೆ ಪ್ರಾರಂಭಿಸಿ. ಇದಕ್ಕಾಗಿ ನೀವು ಹೆಚ್ಚಾಗಿ ಏನೂ ಮಾಡಬೇಕಿಲ್ಲ. ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ ಪ್ರತಿ ತಿಂಗಳು ಹೂಡಿಕೆ ಮಾಡಿದರೆ ಸಾಕು.

Written by - Yashaswini V | Last Updated : Apr 15, 2021, 03:15 PM IST
  • ಹೂಡಿಕೆ ಮಾಡುವ ಮೊದಲು ಎಲ್ಲಿ ಹೂಡಿಕೆ ಮಾಡುತ್ತೇವೆ? ಅದರಲ್ಲಿ ರಿಟರ್ನ್ ಹೇಗಿದೆ? ಎಂದು ತಿಳಿಯುವುದು ಕೂಡ ಅತ್ಯಗತ್ಯ
  • ನೀವೂ ಕೂಡ ಈ ಬಗ್ಗೆ ಯೋಚಿಸುತ್ತಿದ್ದರೆ ಸಾರ್ವಜನಿಕ ಭವಿಷ್ಯ ನಿಧಿ ನಿಮಗೆ ಉತ್ತಮ ಆಯ್ಕೆಯಾಗಿದೆ
  • ಪಿಪಿಎಫ್ ನಲ್ಲಿ ಪ್ರತಿ ತಿಂಗಳು ನಿರ್ದಿಷ್ಟ ಹೂಡಿಕೆ ಮಾಡುವುದರಿಂದ ನಿವೃತ್ತಿಯ ವೇಳೆಗೆ ನೀವು ಕೋಟ್ಯಾಧಿಪತಿ ಆಗಬಹುದು
PPF: ಪ್ರತಿ ತಿಂಗಳು 7500 ರೂಪಾಯಿ ಹೂಡಿಕೆ ಮಾಡಿ ನಿವೃತ್ತಿಯ ವೇಳೆಗೆ ಮಿಲಿಯನೇರ್ ಆಗಿ title=
Public Provident Fund

ನವದೆಹಲಿ: PPF Crorepati: ಸಿರಿವಂತರಾಗುವ ಬಗ್ಗೆ ಯಾರಿಗೆ ತಾನೇ ಕನಸಿರುವುದಿಲ್ಲ. ಪ್ರತಿಯೊಬ್ಬರೂ ತಮ್ಮ ಜೀವನ ಉತ್ತಮವಾಗಿರಬೇಕು. ನಮ್ಮ ಹಣಕಾಸಿನ ಸ್ಥಿತಿ ಉತ್ತಮವಾಗಿರಬೇಕು ಎಂದು ಭಾವಿಸುತ್ತಾರೆ. ನೀವೂ ಕೂಡ ಈ ಬಗ್ಗೆ ಚಿಂತಿಸುತ್ತಿದ್ದರೆ ಅದಕ್ಕಾಗಿ ಹೂಡಿಕೆ ಬಹಳ ಮುಖ್ಯ. ಆದರೆ ಹೂಡಿಕೆ ಮಾಡುವ ಮೊದಲು ಎಲ್ಲಿ ಹೂಡಿಕೆ ಮಾಡುತ್ತೇವೆ? ಅದರಲ್ಲಿ ರಿಟರ್ನ್ ಹೇಗಿದೆ? ಎಂದು ತಿಳಿಯುವುದು ಕೂಡ ಅತ್ಯಗತ್ಯ. ನೀವೂ ಕೂಡ ಈ ಬಗ್ಗೆ ಯೋಚಿಸುತ್ತಿದ್ದರೆ ಸಾರ್ವಜನಿಕ ಭವಿಷ್ಯ ನಿಧಿ (Public Provident Fund) ನಿಮಗೆ ಉತ್ತಮ ಆಯ್ಕೆಯಾಗಿದೆ. ಪಿಪಿಎಫ್ ನಲ್ಲಿ ಪ್ರತಿ ತಿಂಗಳು ನಿರ್ದಿಷ್ಟ ಹೂಡಿಕೆ ಮಾಡುವುದರಿಂದ ನಿವೃತ್ತಿಯ ವೇಳೆಗೆ ನೀವು ಕೋಟ್ಯಾಧಿಪತಿ ಆಗಬಹುದು.

ಪಿಪಿಎಫ್ ದೀರ್ಘಾವಧಿಯ ಹೂಡಿಕೆಯಾಗಿದೆ:
ಸಾರ್ವಜನಿಕ ಭವಿಷ್ಯ ನಿಧಿ (Public Provident Fund)  ಅಂದರೆ ಪಿಪಿಎಫ್ ಅನ್ನು ದೀರ್ಘಾವಧಿಯ ಹೂಡಿಕೆಗೆ ಉತ್ತಮ ಆಯ್ಕೆಯೆಂದು ಪರಿಗಣಿಸಲಾಗುತ್ತದೆ. ಇದರಲ್ಲಿ ನೀವು ಉತ್ತಮ ಲಾಭವನ್ನು ಪಡೆಯುತ್ತೀರಿ. ಪಿಪಿಎಫ್‌ನಲ್ಲಿ ನೀವು ವರ್ಷದಲ್ಲಿ 1.5 ಲಕ್ಷ ರೂ.ವರೆಗೆ ಹೂಡಿಕೆ ಮಾಡಬಹುದು, ಅಂದರೆ ತಿಂಗಳಿಗೆ 12,500 ರೂ. ನೀವು ಮಿಲಿಯನೇರ್ ಆಗಲು ಬಯಸಿದರೆ, ನೀವು ಪ್ರತಿ ತಿಂಗಳು ಮತ್ತು ಯಾವಾಗ ಹೂಡಿಕೆ ಮಾಡಬೇಕೆಂಬುದನ್ನು ನೀವು ತಿಳಿದುಕೊಳ್ಳಬೇಕು.

ಪಿಪಿಎಫ್‌ನಲ್ಲಿ 7.1% ಬಡ್ಡಿ ಸಿಗುತ್ತಿದೆ:
ಪ್ರಸ್ತುತ, ಪಿಪಿಎಫ್ ಖಾತೆಗೆ ಸರ್ಕಾರವು 7.1% ವಾರ್ಷಿಕ ಬಡ್ಡಿಯನ್ನು ಪಾವತಿಸುತ್ತದೆ. ಇದರಲ್ಲಿ ಕನಿಷ್ಠ 15 ವರ್ಷಗಳವರೆಗೆ  ಹೂಡಿಕೆ ಮಾಡಲಾಗುತ್ತದೆ. ಇದರ ಪ್ರಕಾರ, 15 ವರ್ಷಗಳ ನಂತರ ತಿಂಗಳಿಗೆ 12500 ರೂ.ಗಳ ಹೂಡಿಕೆಯ ಒಟ್ಟು ಮೌಲ್ಯ 40,68,209 ರೂ. ಇದರಲ್ಲಿ ಒಟ್ಟು ಹೂಡಿಕೆ 22.5 ಲಕ್ಷ ರೂ. ಮತ್ತು ಬಡ್ಡಿ 18,18,209 ರೂ. ಆಗಿರಲಿದೆ

ಇದನ್ನೂ ಓದಿ - Post Office: ಪಿಪಿಎಫ್‌ನಲ್ಲಿ 500 ರೂ.ಗಳಿಂದ ಹೂಡಿಕೆ ಪ್ರಾರಂಭಿ ಈ ಲಾಭ ಪಡೆಯಿರಿ

ಈ ರೀತಿ ಠೇವಣಿ ಮಾಡಿ ಒಂದು ಕೋಟಿ ರೂಪಾಯಿಗಳ ಹಣವನ್ನು ಪಡೆಯಬಹುದು:

ಮೊದಲನೇ ಟಿಪ್ಸ್: 

*ನಿಮಗೆ 30 ವರ್ಷ ವಯಸ್ಸಾಗಿದೆ ಮತ್ತು ಪಿಪಿಎಫ್‌ನಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದ್ದೀರಿ ಎಂದು ಭಾವಿಸೋಣ.

* 15 ವರ್ಷಗಳ ಕಾಲ ಪ್ರತಿ ತಿಂಗಳು ಪಿಪಿಎಫ್‌ನಲ್ಲಿ 12500 ರೂ. ಠೇವಣಿ ಇರಿಸಿದರೆ ಅವಧಿ ಪೂರ್ಣಗೊಂಡ ಬಳಿಕ ನಿಮ್ಮ ಬಳಿ ಒಟ್ಟು 40,68,209 ರೂ. ಹಣ ಇರಲಿದೆ.

* ಒಂದೊಮ್ಮೆ ಈ ಹಣವನ್ನು ವಿತ್ ಡ್ರಾ ಮಾದರೆ  ನೀವು 5-5 ವರ್ಷಗಳ ಅವಧಿಯಲ್ಲಿ ಪಿಪಿಎಫ್ ಅನ್ನು ಮುಂದುವರೆಸುತ್ತೀರಿ ಎಂದು ಭಾವಿಸೋಣ.

* ಅಂದರೆ, 15 ವರ್ಷಗಳ ನಂತರ, ಇನ್ನೂ 5 ವರ್ಷಗಳ ಕಾಲ ಹೂಡಿಕೆ ಮಾಡಿ, ಅಂದರೆ 20 ವರ್ಷಗಳ ನಂತರ ಈ ಮೊತ್ತವು - 66,58,288 ರೂಪಾಯಿಗಲಾಗುತ್ತದೆ.

* 20 ವರ್ಷವಾದಾಗ, ಮುಂದಿನ 5 ವರ್ಷಗಳವರೆಗೆ ಹೂಡಿಕೆ ಅವಧಿಯನ್ನು ಹೆಚ್ಚಿಸಿ, ಅಂದರೆ, 25 ವರ್ಷಗಳ ನಂತರ, ಮೊತ್ತವು - 1,03,08,015 ರೂ. ಆಗಿರಲಿದೆ.

ಇಷ್ಟು ವರ್ಷಗಳ ಕಾಲ ಹೂಡಿಕೆ ಮುಂದುವರೆಸುವುದರಿಂದ ನೀವು ಮಿಲಿಯನೇರ್ ಆಗುತ್ತೀರಿ. ಅಂದರೆ, ನೀವು 30 ನೇ ವಯಸ್ಸಿನಲ್ಲಿ ಪಿಪಿಎಫ್‌ನಲ್ಲಿ ಪ್ರತಿ ತಿಂಗಳು 12,500 ರೂಪಾಯಿಗಳನ್ನು ಹೂಡಿಕೆ ಮಾಡಿದರೆ, 25 ವರ್ಷಗಳ ನಂತರ, ನೀವು 55ನೇ ವಯಸ್ಸಿನಲ್ಲಿ ಮಿಲಿಯನೇರ್ ಆಗಬಹುದು. 

ಇದನ್ನೂ ಓದಿ - Public Provident Fund: ಪಿಪಿಎಫ್‌ನಲ್ಲಿ ತಿಂಗಳಿಗೆ 1000 ರೂಪಾಯಿ ಹೂಡಿಕೆ ಮಾಡಿ, 26 ಲಕ್ಷ ರೂ. ಗಳಿಸಿ

ಎರಡನೇ ಟಿಪ್ಸ್:
>> ನೀವು 12500 ರೂ.ಗೆ ಬದಲಾಗಿ ಪಿಪಿಎಫ್‌(PPF) ನಲ್ಲಿ ಸ್ವಲ್ಪ ಕಡಿಮೆ ಹಣವನ್ನು ಹೂಡಿಕೆ ಮಾಡಲು ಬಯಸಿದರೆ ಆದರೆ 55 ನೇ ವಯಸ್ಸಿನಲ್ಲಿ ಮಿಲಿಯನೇರ್ ಆಗಲು ಬಯಸಿದರೆ, ನೀವು ಸ್ವಲ್ಪ ಮುಂಚಿತವಾಗಿ ಹೂಡಿಕೆ ಪ್ರಾರಂಭಿಸಬೇಕು.

>> ನೀವು 25 ನೇ ವಯಸ್ಸಿನಲ್ಲಿ ಪಿಪಿಎಫ್ ಖಾತೆಯಲ್ಲಿ ಹೂಡಿಕೆ ಮಾಡುವುದಾದರೆ ಪ್ರತಿ ತಿಂಗಳು 10,000 ರೂ. ಹೂಡಿಕೆ ಮಾಡಬೇಕು.

>> ಶೇಕಡಾ 7.1 ರ ಬಡ್ಡಿ ಪ್ರಕಾರ, 15 ವರ್ಷಗಳ ನಂತರ ನೀವು ಒಟ್ಟು 32,54,567 ರೂ. ಹಣ ಹೊಂದಿರುತ್ತೀರಿ.

>> 15 ವರ್ಷಗಳ ಮುಕ್ತಾಯದ ಅವಧಿಯ ನಂತರ ಅದನ್ನು ಮತ್ತೆ 5 ವರ್ಷಗಳವರೆಗೆ ಮುಂದುವರೆಸಿದರೆ ಬಳಿಕ 20 ವರ್ಷಗಳ ನಂತರ ಒಟ್ಟು ಮೌಲ್ಯ 53,26,631 ರೂ. ನಿಮ್ಮ ಕೈ ಸೇರಲಿದೆ.

>> ಒಂದೊಮ್ಮೆ ಇನ್ನೂ 5 ವರ್ಷಗಳ ಕಾಲ ಅದನ್ನು ಮತ್ತೆ ಮುಂದುವರಿಸಿದರೆ 25 ವರ್ಷಗಳ ನಂತರ ಒಟ್ಟು ಮೌಲ್ಯ - 82,46,412 ರೂಪಾಯಿಗಳು ನಿಮ್ಮದಾಗಲಿದೆ.

>> 5 ವರ್ಷಗಳ ಕಾಲ ಮತ್ತೆ ಮುಂದುವರಿಯಿರಿ, ಅಂದರೆ, 30 ವರ್ಷಗಳ ನಂತರ ಒಟ್ಟು ಮೌಲ್ಯ 1,23,60,728 ರೂ.ಗಳನ್ನು ನೀವು ಒಟ್ಟಿಗೆ ಪಡೆಯಬಹುದಾಗಿದೆ. ಅಂದರೆ, ನೀವು 55 ನೇ ವಯಸ್ಸಿನಲ್ಲಿ ಮಿಲಿಯನೇರ್ ಆಗುತ್ತೀರಿ.

ಇದನ್ನೂ ಓದಿ - ಈ 9 Post Office ಯೋಜನೆಗಳಲ್ಲಿ ಹೂಡಿಕೆ ಮಾಡಿ, ಉತ್ತಮ ಆದಾಯ ನಿಮ್ಮದಾಗಿಸಿ

ಮೂರನೇ ಟಿಪ್ಸ್: 
ನೀವು 10,000 ರೂಪಾಯಿಗಳ ಬದಲು ತಿಂಗಳಿಗೆ 7500 ರೂಪಾಯಿಗಳನ್ನು ಮಾತ್ರ ಪಿಪಿಎಫ್‌ನಲ್ಲಿ ಠೇವಣಿ ಇಟ್ಟರೆ ಹಾಗೂ ನೀವು 55 ನೇ ವಯಸ್ಸಿಗೆ ಕೋಟ್ಯಾಧಿಪತಿಯಾಗಲು ಬಯಸುವುದಾದರೆ ನೀವು ನಿಮ್ಮ 20ನೇ ವಯಸ್ಸಿನಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಬೇಕಾಗುತ್ತದೆ.

- ನೀವು 7500 ರೂಪಾಯಿಗಳನ್ನು ಪಿಪಿಎಫ್‌ನಲ್ಲಿ 7.1% ಬಡ್ಡಿಗೆ 15 ವರ್ಷಗಳವರೆಗೆ ಜಮಾ ಮಾಡಿದರೆ, ಒಟ್ಟು ಮೌಲ್ಯವು - 24,40,926 ರೂ. ಆಗಲಿದೆ.

- 5 ವರ್ಷಗಳ ನಂತರ, ಈ ಮೊತ್ತವನ್ನು 20 ವರ್ಷಗಳವರೆಗೆ ಮುಂದುವರೆಸಿದರೆ 39,94,973 ರೂ. ಹಣ ನಿಮ್ಮ ಕೈಸೇರಲಿದೆ.

- ಇನ್ನೂ 5 ವರ್ಷಗಳ ಮುಂದುವರೆಸಿದರೆ ಅಂದರೆ 25 ವರ್ಷಗಳ ನಂತರ, ಈ ಮೊತ್ತವು 61,84,809 ರೂ.

- ಇನ್ನೂ 5 ವರ್ಷಗಳ ಅವಧಿಗೆ ಮುಂದುವರೆಸಿದರೆ ಅಂದರೆ 30 ವರ್ಷಗಳವರೆಗೆ ಹೂಡಿಕೆ ಮಾಡುವುದರಿಂದ 92,70,546 ರೂ ಗಳನ್ನು ಪಡೆಯಬಹುದು.

- ಒಂದೊಮ್ಮೆ ಇನ್ನೂ 5 ವರ್ಷಗಳ ಹೂಡಿಕೆ ಮುಂದುವರೆಸಿದರೆ ಅಂದರೆ ಒಟ್ಟು 35 ವರ್ಷಗಳ ಹೂಡಿಕೆಯ ಬಳಿಕ 1,36,18,714 ರೂ. ಒಟ್ಟಿಗೆ ನಿಮ್ಮ ಕೈ ಸೇರಲಿದೆ. ಅಂದರೆ, ನಿಮಗೆ 55 ವರ್ಷ ವಯಸ್ಸಾದಾಗ ನೀವು ಕೋಟ್ಯಾಧಿಪತಿಯಾಗಿರಲಿದ್ದೀರಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News