ಈಗ ಸಾಕುಪ್ರಾಣಿಗಳಿಗೂ ಸಿಗಲಿದೆ ಟ್ರೈನ್ ಸೀಟ್ .! ರೈಲ್ವೇ ತಂದಿದೆ ಹೊಸ ಯೋಜನೆ

Indian Railways Latest News : ಪ್ರಯಾಣಿಕರ ನಾಯಿಗಳ ಗೂಡುಗಳನ್ನು ಇಡಲು ರೈಲುಗಳ ಪವರ್ ಕಾರ್‌ಗಳನ್ನು ತಯಾರಿಸಲಾಗುವುದು ಎಂದು ಎನ್‌ಇಆರ್ ಪರವಾಗಿ ಸಾರ್ವಜನಿಕ ಸಂಪರ್ಕ ಅಧಿಕಾರಿ  ಪಂಕಜ್ ಕುಮಾರ್ ಸಿಂಗ್  ಹೇಳಿದ್ದಾರೆ. 

Written by - Ranjitha R K | Last Updated : Jan 3, 2023, 03:18 PM IST
  • ಭಾರತೀಯ ರೈಲ್ವೆ ಹೊಸ ಸೌಲಭ್ಯವನ್ನು ಆರಂಭಿಸುತ್ತಿದೆ.
  • ಕಾವಲುಗಾರನ ಮೇಲ್ವಿಚಾರಣೆಯಲ್ಲಿರುತ್ತವೆ ಸಾಕುಪ್ರಾಣಿಗಳು
  • ರೈಲ್ವೇಯ ಆದಾಯದಲ್ಲಿ ಭಾರಿ ಏರಿಕೆ
ಈಗ ಸಾಕುಪ್ರಾಣಿಗಳಿಗೂ ಸಿಗಲಿದೆ ಟ್ರೈನ್ ಸೀಟ್ .! ರೈಲ್ವೇ ತಂದಿದೆ ಹೊಸ ಯೋಜನೆ title=
Indian Railways Latest News

Indian Railways Latest News : ಸಾಕು ಪ್ರಾಣಿಗಳಿಗೆ ಸಂಬಂಧಿಸಿದಂತೆ ಭಾರತೀಯ ರೈಲ್ವೆ ಹೊಸ ಸೌಲಭ್ಯವನ್ನು   ಆರಂಭಿಸುತ್ತಿದೆ. ಈಶಾನ್ಯ ರೈಲ್ವೆ ಅಧಿಕಾರಿಗಳು ಪ್ರಯಾಣಿಕರ ಸಾಕು ನಾಯಿಗಳಿಗೆ ಪ್ರತ್ಯೇಕ ಜಾಗ ಒದಗಿಸುವ ಪ್ರಸ್ತಾವಿತ ವಿನ್ಯಾಸಕ್ಕೆ ಅನುಮೋದನೆ ನೀಡಿದ್ದಾರೆ. ಪ್ರಯಾಣಿಕರ ನಾಯಿಗಳ ಗೂಡುಗಳನ್ನು ಇಡಲು ರೈಲುಗಳ ಪವರ್ ಕಾರ್‌ಗಳನ್ನು ತಯಾರಿಸಲಾಗುವುದು ಎಂದು ಎನ್‌ಇಆರ್ ಪರವಾಗಿ ಸಾರ್ವಜನಿಕ ಸಂಪರ್ಕ ಅಧಿಕಾರಿ  ಪಂಕಜ್ ಕುಮಾರ್ ಸಿಂಗ್  ಹೇಳಿದ್ದಾರೆ. 

ಕಾವಲುಗಾರನ ಮೇಲ್ವಿಚಾರಣೆಯಲ್ಲಿರುತ್ತವೆ ಸಾಕುಪ್ರಾಣಿಗಳು :
ರೈಲಿನಲ್ಲಿ ಸಂಚರಿಸುವ  ಪ್ರಯಾಣದ ಸಮಯದಲ್ಲಿ ಸಾಕುಪ್ರಾಣಿಗಳು ಕಾವಲುಗಾರರ ಮೇಲ್ವಿಚಾರಣೆಯಲ್ಲಿರುತ್ತವೆ. ಆದರೆ ಆ ಪ್ರಾಣಿಗಳ ಮಾಲೀಕರು ತಮ್ಮ ಪ್ರಾಣಿಗಳಿಗೆ ಆಹಾರ ಮತ್ತು ಇತರ ವ್ಯವಸ್ಥೆಗಳನ್ನು ಮಾಡಿರಬೇಕು. ಅಧಿಕಾರಿಗಳ ಪ್ರಕಾರ, ಈಶಾನ್ಯ ರೈಲ್ವೆ  ವರ್ಕ್ ಶಾಪ್ ನಲ್ಲಿ ಈಗಾಗಲೇ ನಾಯಿಗಳಿಗಾಗಿ ಸ್ಥಳವನ್ನು ಮೀಸಲಿಡುವ ಕೆಲಸವನ್ನು ಪ್ರಾರಂಭಿಸಿದೆ. ಬೇಡಿಕೆ ಮೇರೆಗೆ ಈ ಸೇವೆ ನೀಡಲಾಗುವುದು ಎಂದು ಸಿಪಿಆರ್‌ಒ ತಿಳಿಸಿದ್ದಾರೆ.

ಇದನ್ನೂ ಓದಿ : ಟೋಲ್ ತೆರಿಗೆ ಪಾವತಿಯಲ್ಲಿ ವಿನಾಯಿತಿ : ನಿತಿನ್ ಗಡ್ಕರಿ ಘೋಷಣೆ.! ಇಲ್ಲಿದೆ ಹೊಸ ಪಟ್ಟಿ

ರೈಲ್ವೇಯ ಆದಾಯದಲ್ಲಿ ಭಾರಿ ಏರಿಕೆ : 
ಭಾರತೀಯ ರೈಲ್ವೇಯು ಏಪ್ರಿಲ್ 1 ರಿಂದ ಡಿಸೆಂಬರ್ 2022 ರವರೆಗೆ ಕಾಯ್ದಿರಿಸಿದ ಪ್ರಯಾಣಿಕರ ವಿಭಾಗದಿಂದ ಶೇಕಡಾ 46 ರಷ್ಟು ಹೆಚ್ಚು ಆದಾಯವನ್ನು ಗಳಿಸಿದೆ. ಕಾಯ್ದಿರಿಸದ ಕೋಟಾಕ್ಕಿಂತ ಶೇಕಡಾ 137 ರಷ್ಟು ಹೆಚ್ಚು ಆದಾಯವನ್ನು ಗಳಿಸಿದೆ ಎಂದು ವರದಿಯಾಗಿದೆ. ಒಂದು ವರ್ಷದ ಹಿಂದಿನ ಅವಧಿಗೆ ಹೋಲಿಸಿದರೆ ಈ 9 ತಿಂಗಳಲ್ಲಿ ರೈಲ್ವೆಯ ಆದಾಯದಲ್ಲಿ ಭಾರೀ ಏರಿಕೆಯಾಗಿದೆ. ಏಪ್ರಿಲ್ ನಿಂದ ಡಿಸೆಂಬರ್ 2022 ರ ಅವಧಿಯಲ್ಲಿ, ಆರಂಭಿಕ ಆಧಾರದ ಮೇಲೆ, ಭಾರತೀಯ ರೈಲ್ವೇಯು ಅಂದಾಜು 48913 ಕೋಟಿ ರೂ.ಗಳನ್ನು ಗಳಿಸಿದೆ.

ಇದನ್ನೂ ಓದಿ : BharatPe CEO : ಭಾರತ್ ಪೇ ಸಿಇಒ ಹುದ್ದೆಯಿಂದ ಕೆಳಗಿಳಿದ ಸಮೀರ್ ಸುಹೇಲ್!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News