1st December 2022 : ಡಿ.1 ರಿಂದ ಬದಲಾಗಲಿವೆ ರೈಲ್ವೆ, ಬ್ಯಾಂಕ್, LPG ಬೆಲೆ ಸೇರಿದಂತೆ ಹಲವು ನಿಯಮಗಳು!

New Rules from 1st December 2022 : ಇನ್ನೆರಡು ದಿನಗಳ ನಂತರ, ವರ್ಷದ ಕೊನೆಯ ತಿಂಗಳು, ಡಿಸೆಂಬರ್ (1 ಡಿಸೆಂಬರ್ 2022) ಪ್ರಾರಂಭವಾಗಲಿದೆ... ಈ ತಿಂಗಳಲ್ಲೂ ಜನ ಸಾಮಾನ್ಯರಿಗೆ ಸಂಭಂದಿಸಿದಂತೆ ಅನೇಕ  ಬದಲಾವಣೆಗಳು ಆಗಲಿವೆ

Written by - Channabasava A Kashinakunti | Last Updated : Nov 28, 2022, 09:06 PM IST
  • ವರ್ಷದ ಕೊನೆಯ ತಿಂಗಳು, ಡಿಸೆಂಬರ್ (1 ಡಿಸೆಂಬರ್ 2022) ಪ್ರಾರಂಭ
  • ಜನ ಸಾಮಾನ್ಯರಿಗೆ ಸಂಭಂದಿಸಿದಂತೆ ಅನೇಕ ಬದಲಾವಣೆ
  • ಇವು ನಿಮ್ಮ ಜೇಬಿನ ಮೇಲೆ ನೇರವಾಗಿ ಪರಿಣಾಮ
1st December 2022 : ಡಿ.1 ರಿಂದ ಬದಲಾಗಲಿವೆ ರೈಲ್ವೆ, ಬ್ಯಾಂಕ್, LPG ಬೆಲೆ ಸೇರಿದಂತೆ ಹಲವು ನಿಯಮಗಳು! title=

New Rules from 1st December 2022 : ಇನ್ನೆರಡು ದಿನಗಳ ನಂತರ, ವರ್ಷದ ಕೊನೆಯ ತಿಂಗಳು, ಡಿಸೆಂಬರ್ (1 ಡಿಸೆಂಬರ್ 2022) ಪ್ರಾರಂಭವಾಗಲಿದೆ... ಈ ತಿಂಗಳಲ್ಲೂ ಜನ ಸಾಮಾನ್ಯರಿಗೆ ಸಂಭಂದಿಸಿದಂತೆ ಅನೇಕ ಬದಲಾವಣೆಗಳು ಆಗಲಿವೆ, ಇವು ನಿಮ್ಮ ಜೇಬಿನ ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ. ಗ್ಯಾಸ್ ಸಿಲಿಂಡರ್‌ಗಳ ಬೆಲೆಯಿಂದ ರೈಲಿನ ವೇಳಾಪಟ್ಟಿಯವರೆಗೆ ಅನೇಕ ಬದಲಾವಣೆಗಳು ಆಗಲಿವೆ.

ಜೀವನ ಪ್ರಮಾಣಪತ್ರವನ್ನು ಸಲ್ಲಿಸಿ

ಪಿಂಚಣಿದಾರರು ತಮ್ಮ ಜೀವನ ಪ್ರಮಾಣಪತ್ರವನ್ನು ಸಲ್ಲಿಸಬೇಕು. ಇದನ್ನೂ ಸಲ್ಲಿಸಲು ನವೆಂಬರ್ 30  ಕೊನೆಯ ದಿನವಾಗಿದೆ. ಆದ್ದರಿಂದ ನಿಮ್ಮ ಪ್ರಮಾಣಪತ್ರವನ್ನು ತಕ್ಷಣವೇ ಸಲ್ಲಿಸಲು ನಿಮಗೆ ಇನ್ನೂ ಎರಡು ದಿನಗಳು ಬಾಕಿ ಉಳಿದಿವೆ. ನೀವು ನಿಮ್ಮ ಪ್ರಮಾಣಪತ್ರವನ್ನು ಸಲ್ಲಿಸದಿದ್ದರೆ ನಿಮ್ಮ ಪಿಂಚಣಿಯನ್ನು ಸಹ ನಿಲ್ಲಿಸಬಹುದು.

ಇದನ್ನೂ ಓದಿ : 7th Pay Commission : ಕೇಂದ್ರ ನೌಕರರಿಗೆ ಬಿಗ್ ನ್ಯೂಸ್ : ನಿಮಗಾಗಿ ಸರ್ಕಾರದಿಂದ ಈ ಮಹತ್ವದ ಘೋಷಣೆ!

ರೈಲುಗಳ ಸಮಯದಲ್ಲೂ ಬದಲಾವಣೆ

ಇದಲ್ಲದೇ ಡಿಸೆಂಬರ್ ತಿಂಗಳಿನಲ್ಲಿ ಚಳಿ, ಮಂಜು ಹೆಚ್ಚಾಗುವುದರಿಂದ ಹಲವು ರೈಲುಗಳ ಸಮಯದಲ್ಲೂ ಬದಲಾವಣೆಯಾಗಲಿದೆ. ಇದಲ್ಲದೆ, ಹತ್ತಾರು ರೈಲುಗಳನ್ನು ಸಹ ರದ್ದುಗೊಳಿಸಲಾಗಿದೆ. ಹೀಗಾಗಿ, ನೀವು ಪ್ಲಾನ್ ಮಾಡಿ ಪ್ರಯಾಣ ತಯಾರಿ ನಡೆಸಿ.

ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬದಲಾವಣೆ

ಇದರ ಹೊರತಾಗಿ ಸಿಎನ್‌ಜಿ ಮತ್ತು ಪಿಎನ್‌ಜಿ ಬೆಲೆಗಳಲ್ಲಿ ಭಾರಿ ಬದಲಾವಣೆಯಾಗಲಿದೆ. ಪ್ರತಿ ತಿಂಗಳ ಮೊದಲನೆಯ ದಿನ, ತೈಲ ಕಂಪನಿಗಳು ದರಗಳನ್ನು ಪರಿಶೀಲಿಸುತ್ತವೆ, ಅದರ ಹೆಚ್ಚಳವು ನಿಮ್ಮ ಜೇಬಿನ ಮೇಲೆ ಪರಿಣಾಮ ಬೀರುತ್ತದೆ. ಇದರೊಂದಿಗೆ ಗ್ಯಾಸ್ ಸಿಲಿಂಡರ್‌ಗಳ ಹೊಸ ಬೆಳೆಯನ್ನು ಬಿಡುಗಡೆ ಮಾಡಲಾಗುತ್ತದೆ. ಕಳೆದ ತಿಂಗಳು, ಕಂಪನಿಗಳು ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ಕಡಿತಗೊಳಿಸಿದ್ದವು.

ಬ್ಯಾಂಕ್‌ಗಳಿಗೂ 13 ದಿನಗಳ ಕಾಲ ರಜೆ 

ಇದಲ್ಲದೆ, ಡಿಸೆಂಬರ್‌ನಲ್ಲಿ 13 ದಿನಗಳವರೆಗೆ ಬ್ಯಾಂಕುಗಳು ಬಂದ್ ಇರುತ್ತವೆ. ಇದು ರಾಜ್ಯ ಸೇರಿದಂತೆ ಅನೇಕ ರಜಾದಿನಗಳನ್ನು ಒಳಗೊಂಡಿದೆ. ವರ್ಷದ ಕೊನೆಯ ದಿನವಾದ ಕ್ರಿಸ್‌ಮಸ್ ಸೇರಿದಂತೆ ಅನೇಕ ದಿನಗಳು ಇವೆ, ಆ ದಿನಗಳಲ್ಲಿ ಬ್ಯಾಂಕುಗಳು ರಜೆ ಇರುತ್ತವೆ. ಆದ್ದರಿಂದ ಬ್ಯಾಂಕಿಗೆ ಹೋಗುವ ಮೊದಲು ರಜೆ ದಿನಗಳನ್ನು ಪರಿಶೀಸಿರಿ.

ಇದನ್ನೂ ಓದಿ : ನಿಮ್ಮ ಆದಾಯ ₹5 ರಿಂದ ₹10 ಲಕ್ಷ ಆಗಿದ್ದರೆ, ಎಚ್ಚರ! ತಪ್ಪದೆ ಈ ಕೆಲಸ ಮಾಡಿ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News