PPF ಖಾತೆಯಲ್ಲಿ ತಕ್ಷಣವೇ ಈ ಕೆಲಸವನ್ನು ಮಾಡಿ.! ಇಲ್ಲವಾದರೆ ಎದುರಾಗುವುದು ನಷ್ಟ

PPF Interest Rate: ದೀರ್ಘಾವಧಿಗೆ ಹೂಡಿಕೆ ಮಾಡಲು ಜನರನ್ನು ಆಕರ್ಷಿಸುವ ಉದ್ದೇಶದಿಂದ ಸರ್ಕಾರವು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳಲ್ಲಿ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಕೂಡ ಒಂದು. 

Written by - Ranjitha R K | Last Updated : Dec 19, 2022, 04:37 PM IST
  • ಕೇಂದ್ರ ಸರ್ಕಾರ ಜನರಿಗಾಗಿ ಹಲವು ಯೋಜನೆಗಳನ್ನು ನಡೆಸಲಾಗುತ್ತಿದೆ.
  • ಹೂಡಿಕೆ ಮಾಡುವಲ್ಲಿ ಜನರನ್ನು ಸರ್ಕಾರ ಪ್ರೋತ್ಸಾಹಿಸುತ್ತಿದೆ.
  • PPF ಮೂಲಕ, ಜನರು ದೀರ್ಘಾವಧಿಗೆ ಹೂಡಿಕೆ ಮಾಡುವುದು ಸಾಧ್ಯವಾಗುತ್ತದೆ.
PPF ಖಾತೆಯಲ್ಲಿ ತಕ್ಷಣವೇ ಈ ಕೆಲಸವನ್ನು  ಮಾಡಿ.!  ಇಲ್ಲವಾದರೆ ಎದುರಾಗುವುದು ನಷ್ಟ  title=
PPF Account

PPF Interest Rate : ಕೇಂದ್ರ ಸರ್ಕಾರ ಜನರಿಗಾಗಿ ಹಲವು ಯೋಜನೆಗಳನ್ನು ನಡೆಸಲಾಗುತ್ತಿದೆ. ಈ ಯೋಜನೆಗಳ ಮೂಲಕ ಹೂಡಿಕೆ ಮಾಡುವಲ್ಲಿ ಜನರನ್ನು ಸರ್ಕಾರ ಪ್ರೋತ್ಸಾಹಿಸುತ್ತಿದೆ.  ಇನ್ನು ದೀರ್ಘಾವಧಿಗೆ ಹೂಡಿಕೆ ಮಾಡಲು ಜನರನ್ನು ಆಕರ್ಷಿಸುವ ಉದ್ದೇಶದಿಂದ ಸರ್ಕಾರವು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳಲ್ಲಿ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಕೂಡ ಒಂದು. PPF ಮೂಲಕ, ಜನರು ದೀರ್ಘಾವಧಿಗೆ ಹೂಡಿಕೆ ಮಾಡುವುದು ಸಾಧ್ಯವಾಗುತ್ತದೆ. 

PPF ಯೋಜನೆಯ ಬಡ್ಡಿ ದರ : 
ಇಲ್ಲಿ ಹೂಡಿಕೆದಾರರು ವರ್ಷದಲ್ಲಿ ಕನಿಷ್ಠ 500 ರೂ. ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ ಒಂದು ವರ್ಷದಲ್ಲಿ ಗರಿಷ್ಠ 1.5 ಲಕ್ಷದವರೆಗೆ ಹೂಡಿಕೆ ಮಾಡಬಹುದು. ಪ್ರಸ್ತುತ ಈ ಯೋಜನೆಯಲ್ಲಿ ಶೇ.7.1ರಷ್ಟು ಬಡ್ಡಿಯನ್ನು ಸರಕಾರ ನೀಡುತ್ತಿದೆ.

ಇದನ್ನೂ ಓದಿ : ಆದಾಯ ತೆರಿಗೆ ವಿನಾಯಿತಿ ಮಿತಿ 2.5 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ! ಸರ್ಕಾರ ನೀಡಲಿದೆ ಸಿಹಿ ಸುದ್ದಿ

PPF  ಅವಧಿ : 
ದೀರ್ಘಕಾಲದವರೆಗೆ ಸರ್ಕಾರದ ಈ ಯೋಜನೆಯಲ್ಲಿ ಹೂಡಿಕೆ ಮಾಡುವಂತೆ ಜನರನ್ನು ಪ್ರೋತ್ಸಾಹಿಸಲಾಗುತ್ತದೆ. 15 ವರ್ಷಗಳ ಅವಧಿಗೆ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಮತ್ತೊಂದೆಡೆ, ಹೂಡಿಕೆಯನ್ನು 15 ವರ್ಷಗಳ ನಂತರವೂ ಮುಂದುವರಿಸುವುದಾದರೆ 5 ವರ್ಷಗಳ ಪ್ರಕಾರ ಅದನ್ನು ವಿಸ್ತರಿಸಬಹುದು. ಇನ್ನು ಇಲ್ಲಿ ಹೂಡಿಕೆ  ಮಾಡಿದರೆ ನಮಗೆ ಎಷ್ಟು ಮೊತ್ತ ಸಿಗುತ್ತದೆ ಎನ್ನುವುದು ಹೂಡಿಕೆಯ ಮೇಲೆ ಅವಲಂಬಿತವಾಗಿರುತ್ತದೆ.

PPF ಆಧಾರ್ ಲಿಂಕ್ :
ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ  ಒಂದು ಕೆಲಸವನ್ನು ಮಾಡುವುದು ಬಹಳ ಮುಖ್ಯ. ಇಲ್ಲವಾದರೆ ಅಷ್ಟೂ ವರ್ಷಗಳ ಕಠಿಣ ಪರಿಶ್ರಮ ನೀರಿನಲ್ಲಿ ಇತ್ತ ಹೋಮದಂತಾಗಬಹುದು. ಪಿಪಿಎಫ್ ಖಾತೆಯನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಬೇಕು. ಪಿಪಿಎಫ್ ಖಾತೆಯನ್ನು ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಿದರೆ ಮಾತ್ರ ಅನೇಕ ಕೆಲಸಗಳು ಸುಲಭವಾಗುತ್ತವೆ.

ಇದನ್ನೂ ಓದಿ : Car Buying Tips : ನಿಮ್ಮ ಸಂಬಳದ ಪ್ರಕಾರ ನೀವು ಯಾವ ಖರೀದಿಸಬಹುದು, ಇಲ್ಲಿದೆ ನೋಡಿ ಲೆಕ್ಕಾಚಾರ

PPF ನೊಂದಿಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿ :
- ಮೊದಲನೆಯದಾಗಿ ನಿಮ್ಮ ಇಂಟರ್ನೆಟ್ ಬ್ಯಾಂಕಿಂಗ್ ಖಾತೆಗೆ ಲಾಗಿನ್ ಮಾಡಿ.
- ಇದರ ನಂತರ ಇಂಟರ್ನೆಟ್ ಬ್ಯಾಂಕಿಂಗ್‌ನಲ್ಲಿ Registration of Aadhaar Number in Internet Banking   ಆಯ್ಕೆಮಾಡಿ.
-ಇದರ ನಂತರ 12 ಅಂಕಿಗಳ ಆಧಾರ್ ಸಂಖ್ಯೆಯನ್ನು ನಮೂದಿಸಿ Confirm ಮೇಲೆ ಕ್ಲಿಕ್ ಮಾಡಿ.
- ನಂತರ, ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಲು ಬಯಸುವ ನಿಮ್ಮ PPF ಖಾತೆಯನ್ನು ಆಯ್ಕೆಮಾಡಿ.
-ಇದರ ನಂತರ Inquiry ಮೇಲೆ ಕ್ಲಿಕ್ ಮಾಡಿ.  ನಿಮ್ಮ ಆಧಾರ್ ಕಾರ್ಡ್ PPF ಖಾತೆಗೆ ಲಿಂಕ್ ಆಗಿದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಿಕೊಳ್ಳಿ 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News