₹2,000 ನೋಟು ಬದಲಾವಣೆಗೆ ಗಡುವು ವಿಸ್ತರಿಸಿದ RBI; ಲಾಸ್ಟ್ ಡೇಟ್ ಯಾವುದು ಗೊತ್ತಾ?

Exchange Rs 2000 bank notes: ಸಾರ್ವಜನಿಕರ ಅನುಕೂಲಕ್ಕಾಗಿ RBI ಈ ಗಡುವನ್ನುಮತ್ತೊಮ್ಮೆ ವಿಸ್ತರಿಸಿದೆ. ₹2,000 ಮುಖಬೆಲೆಯ ನೋಟುಗಳನ್ನು ಬ್ಯಾಂಕುಗಳಲ್ಲಿ ವಿನಿಮಯ ಮಾಡಿಕೊಳ್ಳುವ ಕೊನೆಯ ದಿನಾಂಕವನ್ನು ಅ.7ರವರೆಗೆ ವಿಸ್ತರಿಸಲಾಗಿದೆ ಎಂದು RBI ತಿಳಿಸಿದೆ.

Written by - Puttaraj K Alur | Last Updated : Sep 30, 2023, 08:02 PM IST
  • ₹2,000 ಮುಖಬೆಲೆಯ ನೋಟುಗಳ ಬದಲಾವಣೆಗೆ ಮತ್ತೊಮ್ಮೆ ಗಡುವು ವಿಸ್ತರಣೆ
  • ಅ.7ರವರೆಗೆ ಬ್ಯಾಂಕುಗಳಲ್ಲಿ ₹2,000 ನೋಟು ಬದಲಾಯಿಸಿಕೊಳ್ಳಬಹುದು
  • ಸಾರ್ವಜನಿಕರ ಅನುಕೂಲಕ್ಕಾಗಿ ನೋಟುಗಳ ವಿನಿಮಯಕ್ಕೆ ಗಡುವು ವಿಸ್ತರಿಸಿದ RBI
₹2,000 ನೋಟು ಬದಲಾವಣೆಗೆ ಗಡುವು ವಿಸ್ತರಿಸಿದ RBI; ಲಾಸ್ಟ್ ಡೇಟ್ ಯಾವುದು ಗೊತ್ತಾ? title=
₹2,000 ನೋಟು ಬದಲಾವಣೆಗೆ ಗಡುವು ವಿಸ್ತರಣೆ!

ನವದೆಹಲಿ: ₹2,000 ಮುಖಬೆಲೆಯ ನೋಟುಗಳ ಬದಲಾವಣೆಗೆ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತೊಮ್ಮೆ ಗಡುವು ವಿಸ್ತರಣೆ ಮಾಡಿದೆ ಎಂದು ಸುದ್ದಿಸಂಸ್ಥೆ ANI ವರದಿ ಮಾಡಿದೆ.

₹2,000 ಮುಖಬೆಲೆಯ ನೋಟುಗಳನ್ನು ಬ್ಯಾಂಕುಗಳಲ್ಲಿ ವಿನಿಮಯ ಮಾಡಿಕೊಳ್ಳಲು ಇಂದು(ಸೆ.30) ಕೊನೆಯ ದಿನಾಂಕವಾಗಿತ್ತು. ಆದರೆ ಸಾರ್ವಜನಿಕರ ಅನುಕೂಲಕ್ಕಾಗಿ RBI ಈ ಗಡುವನ್ನುಮತ್ತೊಮ್ಮೆ ವಿಸ್ತರಿಸಿದೆ ₹2,000 ಮುಖಬೆಲೆಯ ನೋಟುಗಳನ್ನು ಬ್ಯಾಂಕುಗಳಲ್ಲಿ ವಿನಿಮಯ ಮಾಡಿಕೊಳ್ಳುವ ಕೊನೆಯ ದಿನಾಂಕವನ್ನು ಅಕ್ಟೋಬರ್ 7ರವರೆಗೆ ವಿಸ್ತರಿಸಲಾಗಿದೆ ಎಂದು RBI ತಿಳಿಸಿದೆ.

ಇದನ್ನೂ ಓದಿ: ಇನ್ನು ಎನ್ ಪಿಎಸ್ ನಲ್ಲೂ ಸಿಗುವುದು ಈ ಲಾಭ ! ಪಿಂಚಣಿದಾರರಲ್ಲಿ ಸಂತಸ

ಈ ಕುರಿತು ಶನಿವಾರ ಹೇಳಿಕೆ ಬಿಡುಗಡೆ ಮಾಡಿರುವ RBI, ‘₹2,000 ಮುಖಬೆಲೆಯ ನೋಟುಗಳ ವಿನಿಮಯಕ್ಕೆ ಇಂದು(ಸೆ.30) ಕೊನೆಯ ದಿನಾವಾಗಿತ್ತು. ಆದರೆ ಈ ಗಡುವನ್ನು ಅ.7ರವರೆಗೆ ವಿಸ್ತರಿಸಲಾಗಿದೆ. ಹೀಗಾಗಿ ₹2,000 ಮುಖಬಲೆಯ ನೋಟುಗಳು ಮಾನ್ಯವಾಗಿರುತ್ತದೆ’ ಎಂದು ಹೇಳಿದೆ.

ಅ.8ರಿಂದ ಬ್ಯಾಂಕುಗಳು ₹2,000 ಮುಖಬೆಲೆಯ ನೋಟುಗಳನ್ನು ವಿನಿಮಯಕ್ಕೆ ಸ್ವೀಕರಿಸುವುದಿಲ್ಲ. ಆದರೆ ಸಾರ್ವಜನಿಕರು ಇದರಿಂದ ಭಯಪಡುವ ಅಗತ್ಯವಿಲ್ಲ. RBIನ 19 ಕಚೇರಿಗಳಲ್ಲಿ ₹2,000 ಮುಖಬೆಲೆಯ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಜನರಿಗೆ ಅವಕಾಶ ಕಲ್ಪಿಸಲಾಗುವುದು. ಈ ನೋಟುಗಳನ್ನು ಇಂಡಿಯಾ ಪೋಸ್ಟ್ ಮೂಲಕ RBIನ ವಿತರಣಾ ಕಚೇರಿಗಳಿಗೆ ಅಂಚೆ ಮೂಲಕ ಕಳುಹಿಸಬಹುದು ಅಂತಾ RBI ತಿಳಿಸಿದೆ.  

ಇದನ್ನೂ ಓದಿ: ವಾರ ಪೂರ್ತಿ ಇಳಿಕೆ ಕಂಡ ನಂತರ ಇಂದು ಎಷ್ಟಿದೆ 10 ಗ್ರಾಂ ಚಿನ್ನದ ಬೆಲೆ ?

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News