Jio-Airtel-Vi-BSNLಗಿಂತಲೂ ಅಗ್ಗ!: 49 ರೂ.ಗೆ 180 ದಿನಗಳ ವ್ಯಾಲಿಡಿಟಿ ಜೊತೆಗೆ ಹೆಚ್ಚಿನ ಸೌಲಭ್ಯ

ರಿಲಯನ್ಸ್ ಜಿಯೋ, ಏರ್‌ಟೆಲ್, ವೊಡಾಫೋನ್ ಐಡಿಯಾ ಮತ್ತು ಬಿಎಸ್‌ಎನ್‌ಎಲ್ ಯೋಜನೆಗಳು ಸಹ ಈ ಅಗ್ಗದ ಯೋಜನೆಗೆ ಸಲಾಂ ಎಂದಿವೆ. ಈ  ರಿಚಾರ್ಜ್ ಪ್ಲಾನ್‍ನಲ್ಲಿ 49 ರೂ.ಗಳಿಗೆ 180 ದಿನಗಳ ವ್ಯಾಲಿಡಿಟಿ ನಿಮಗೆ ಸಿಗುತ್ತದೆ. 

Written by - Puttaraj K Alur | Last Updated : Aug 31, 2022, 10:57 AM IST
  • ಪ್ರಿಪೇಯ್ಡ್ ಯೋಜನೆಗೆ ಸಂಬಂಧಿಸಿದಂತೆ Jio, Airtel, Vi & BSNL ಕಂಪನಿಗಳ ನಡುವೆ ಪೈಪೋಟಿ
  • Jio, Airtel, Vi & BSNL ಪ್ಲಾನ್‍ಗಳಿಗೆ ಸೆಡ್ಡು ಹೊಡೆಯುತ್ತಿರುವ MTNLನ ರಿಚಾರ್ಜ್ ಪ್ಲಾನ್
  • MTNLನ 49 ರೂ. ರಿಚಾರ್ಜ್ ಪ್ಲಾನ್‍ನಲ್ಲಿ 180 ದಿನಗಳ ವ್ಯಾಲಿಡಿಟಿ ಸೇರಿ ಹಲವು ಸೌಲಭ್ಯ
Jio-Airtel-Vi-BSNLಗಿಂತಲೂ ಅಗ್ಗ!: 49 ರೂ.ಗೆ 180 ದಿನಗಳ ವ್ಯಾಲಿಡಿಟಿ ಜೊತೆಗೆ ಹೆಚ್ಚಿನ ಸೌಲಭ್ಯ  title=
MTNL 180 Days Prepaid Plan

ನವದೆಹಲಿ: Jio, Airtel, Vi (Vodafone Idea) ಮತ್ತು BSNL ತಮ್ಮ ಗ್ರಾಹಕರಿಗೆ ಉತ್ತಮ ಪ್ರಿಪೇಯ್ಡ್ ಯೋಜನೆಗಳನ್ನು ನೀಡುತ್ತಿವೆ. ಈ ಕಂಪನಿಗಳು ಕಡಿಮೆ ವೆಚ್ಚದ ಪ್ಲಾನ್‍ಗಳಿಂದ ಹಿಡಿದು ದುಬಾರಿ ರಿಚಾರ್ಜ್ ಪ್ಲಾನ್‍ಗಳ ವ್ಯಾಪ್ತಿಯನ್ನು ಹೊಂದಿವೆ. ಪ್ರಿಪೇಯ್ಡ್ ಯೋಜನೆಗೆ ಸಂಬಂಧಿಸಿದಂತೆ ಈ 4 ಕಂಪನಿಗಳ ನಡುವೆ ಸಾಕಷ್ಟು ಪೈಪೋಟಿ ಇದೆ. ಆದರೆ ನಾವು ಇಂದು ಹೇಳಲು ಹೊರಟಿರುವ ಯೋಜನೆ ಬೇರೆಯ ಟೆಲಿಕಾಂ ಕಂಪನಿಯ ಯೋಜನೆಯಾಗಿದೆ. ಇದು MTNLನ 49 ರೂ. ರಿಚಾರ್ಜ್ ಪ್ಲಾನ್. ಈ ಯೋಜನೆಯಲ್ಲಿ ಕಡಿಮೆ ಬೆಲೆಯಲ್ಲಿ ಹೆಚ್ಚು ದಿನಗಳ ವ್ಯಾಲಿಡಿಟಿ ಲಭ್ಯವಿದೆ. ಈ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: UPI Payment Limit: UPI ನಿಂದ ಒಂದು ಬಾರಿಗೆ ಎಷ್ಟು ಹಣ ವರ್ಗಾಯಿಸಬಹುದು?

MTNL 49 ರೂ. ಯೋಜನೆ

MTNLನ ಈ 49 ರೂ. ಪ್ಲಾನ್‌ನಲ್ಲಿ 180 ದಿನಗಳ ವ್ಯಾಲಿಡಿಟಿ ಲಭ್ಯವಿದೆ. ಇದರಲ್ಲಿ ಬಳಕೆದಾರರಿಗೆ 60 ಸ್ಥಳೀಯ ನಿಮಿಷಗಳು ಮತ್ತು 20 STD ನಿಮಿಷಗಳನ್ನು ನೀಡಲಾಗುತ್ತದೆ. ಕರೆ ಶುಲ್ಕಗಳ ಕುರಿತು ಹೇಳುವುದಾದರೆ, ಪ್ರತಿ ಸೆಕೆಂಡಿಗೆ ಪೈಸಾ ದರದಲ್ಲಿ ಶುಲ್ಕ ವಿಧಿಸಲಾಗುತ್ತದೆ. ಅದರಂತೆ ಸೆಕೆಂಡಿಗೆ 1 ಪೈಸಾ ದರದಲ್ಲಿ ಶುಲ್ಕವಿರುತ್ತದೆ. ಎಸ್‌ಎಂಎಸ್ ಶುಲ್ಕ ಸ್ಥಳೀಯರಿಗೆ 0.50 ಪೈಸೆ, ರಾಷ್ಟ್ರೀಯಕ್ಕೆ 1.50 ಮತ್ತು ಅಂತಾರಾಷ್ಟ್ರೀಯಕ್ಕೆ 5 ರೂ. ವಿಧಿಸಲಾಗುತ್ತದೆ.

ಇದನ್ನೂ ಓದಿ: Petrol Price Today: ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಮತ್ತೆ ರಿಲೀಫ್! ಇಂದಿನ ದರ ತಿಳಿಯಿರಿ

ಅಗ್ಗದ ಯೋಜನೆ

MTNLನ ಈ ಯೋಜನೆಯ ಮುಂದೆ Jio, Airtel, Vi ಮತ್ತು BSNLನ ಯೋಜನೆಗಳು ಸ್ಪರ್ಧೆಯಲ್ಲಿಲ್ಲ. 4 ಟೆಲಿಕಾಂ ಕಂಪನಿಗಳು 180 ದಿನಗಳ ವ್ಯಾಲಿಡಿಟಿ ನೀಡುವ ಇಂತಹ ಅಗ್ಗದ ಯೋಜನೆ ಹೊಂದಿಲ್ಲ. ಆದರೆ ಸಂಪರ್ಕದ ವಿಷಯಕ್ಕೆ ಬಂದರೆ ಈ ನಾಲ್ಕು ಕಂಪನಿಗಳ ನೆಟ್‌ವರ್ಕ್ ಅಗಾಧವಾಗಿದೆ. ಅಲ್ಲದೇ ಶೀಘ್ರವೇ ಈ ನೆಟ್‍ವರ್ಕ್‍ಗಳಲ್ಲಿ ಬಳಕೆದಾರರಿಗೆ 5G ಸೇವೆ ಸಹ ಸಿಗಲಿದೆ. ಇಂತಹ ಪರಿಸ್ಥಿತಿಯಲ್ಲಿ ನೀವು ಪೋರ್ಟ್ ಬದಲಿಗೆ ಹೊಸ MTNL ಸಿಮ್ ತೆಗೆದುಕೊಂಡು ಫೋನ್‌ನ ಸೆಕೆಂಡರಿ ಸ್ಲಾಟ್‌ಗೆ ಹಾಕಿ ಬಳಸಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News