Indian Railways : ರೈಲ್ವೆ ಪ್ರಯಾಣಿಕರೆ ಗಮನಿಸಿ : ಈಗ ತಕ್ಷಣವೇ ಕೈಗೆ ಸಿಗಲಿದೆ ಟಿಕೆಟ್‌

ಹೊಸ ಸೌಲಭ್ಯದ ಅಡಿಯಲ್ಲಿ, ನೀವು ಸ್ವಯಂಚಾಲಿತ ಟಿಕೆಟ್ ವಿತರಣಾ ಯಂತ್ರದಿಂದ (ATVM) ಲಭ್ಯವಿರುವ ಸೌಲಭ್ಯಗಳಿಗಾಗಿ ಡಿಜಿಟಲ್ ವಹಿವಾಟಿನ ಮೂಲಕ ಪಾವತಿಸಲು ಸಾಧ್ಯವಾಗುತ್ತದೆ.

Written by - Channabasava A Kashinakunti | Last Updated : May 26, 2022, 03:16 PM IST
  • ಡಿಜಿಟಲ್ ಮೋಡ್‌ನಲ್ಲಿ ಹಣ ಪಾವತಿಗೆ ಮನವಿ
  • ನೀವು ಸ್ವಯಂಚಾಲಿತ ಟಿಕೆಟ್ ವಿತರಣಾ ಯಂತ್ರದಿಂದ (ATVM) ಟಿಕೆಟ್ ಲಭ್ಯ
  • ಪ್ಲಾಟ್‌ಫಾರ್ಮ್ ಟಿಕೆಟ್‌ಗಳು ಮತ್ತು ಮಾಸಿಕ ಪಾಸ್‌ ಲಭ್ಯ
Indian Railways : ರೈಲ್ವೆ ಪ್ರಯಾಣಿಕರೆ ಗಮನಿಸಿ : ಈಗ ತಕ್ಷಣವೇ ಕೈಗೆ ಸಿಗಲಿದೆ ಟಿಕೆಟ್‌ title=

Indian Railways : ನೀವೂ ಆಗಾಗ ರೈಲಿನಲ್ಲಿ ಪ್ರಯಾಣಿಸುತ್ತಿದ್ದರೆ, ಈ ಸುದ್ದಿ ನಿಮ್ಮಗೆ ತುಂಬಾ ಉಪಯೋಗಕ್ಕೆ ಬರುತ್ತದೆ. ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆಯಿಂದ ಹೊಸ ಟಿಕೆಟ್ ಸೌಲಭ್ಯವನ್ನು ಆರಂಭಿಸಿದೆ. ಇದರಿಂದ ಪ್ರಯಾಣಿಕರು ಟಿಕೆಟ್ ಪಡೆಯಲು ಉದ್ದನೆಯ ಸರತಿ ಸಾಲಿನಲ್ಲಿ ನಿಲ್ಲುವ ಸ್ಥಿತಿಗೆ ಮುಕ್ತಿ ಸಿಕ್ಕಂತಾಗಿದೆ. ಹೊಸ ಸೌಲಭ್ಯದ ಅಡಿಯಲ್ಲಿ, ನೀವು ಸ್ವಯಂಚಾಲಿತ ಟಿಕೆಟ್ ವಿತರಣಾ ಯಂತ್ರದಿಂದ (ATVM) ಲಭ್ಯವಿರುವ ಸೌಲಭ್ಯಗಳಿಗಾಗಿ ಡಿಜಿಟಲ್ ವಹಿವಾಟಿನ ಮೂಲಕ ಪಾವತಿಸಲು ಸಾಧ್ಯವಾಗುತ್ತದೆ.

ಡಿಜಿಟಲ್ ಮೋಡ್‌ನಲ್ಲಿ ಹಣ ಪಾವತಿಗೆ ಮನವಿ

ಇದರ ಅಡಿಯಲ್ಲಿ, ನೀವು ATVM ನಿಂದ ಟಿಕೆಟ್‌ಗಳು, ಪ್ಲಾಟ್‌ಫಾರ್ಮ್ ಟಿಕೆಟ್‌ಗಳು ಮತ್ತು ಮಾಸಿಕ ಪಾಸ್‌ಗಳನ್ನು ಪಡೆಯಲು ಡಿಜಿಟಲ್ ಮೋಡ್‌ನಲ್ಲಿ ಹಣ ಪಾವತಿಸಬಹುದು. ಹಲವು ರೈಲು ನಿಲ್ದಾಣಗಳಲ್ಲಿ ATVMಗಳು ಮತ್ತು UPI ಮತ್ತು QR ಕೋಡ್‌ಗಳನ್ನು ಅಳವಡಿಸಲು ವ್ಯವಸ್ಥೆ ಮಾಡಲಾಗಿದೆ. ಇದರ ಮೂಲಕ ನೀವು ATVM ಸ್ಮಾರ್ಟ್ ಕಾರ್ಡ್ ಅನ್ನು ಸಹ ರೀಚಾರ್ಜ್ ಮಾಡಬಹುದು. ಈ ಸೌಲಭ್ಯವನ್ನು ರೈಲ್ವೆ ಇಲಾಖೆಯಿಂದ ಆರಂಭಿಸುವ ಸಂದರ್ಭದಲ್ಲಿ ಪ್ರಯಾಣಿಕರು ಡಿಜಿಟಲ್ ಪೇಮೆಂಟ್ ಮೂಲಕ ಹಣ ಪಾವತಿ ಮಾಡಬಹುದು, ಉದ್ದನೆಯ ಸರತಿ ಸಾಲಿನಲ್ಲಿ ನಿಲ್ಲುವುದಕ್ಕೆ ಮುಕ್ತಿ ಹಾಡಿದಂತಾಗಿದೆ.

ಇದನ್ನೂ ಓದಿ : WhatsApp ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಿ ನಿಮ್ಮ DL, RC ಬುಕ್ : ಹೇಗೆ ಇಲ್ಲಿದೆ ನೋಡಿ

ಸಾಲಿನಲ್ಲಿ ನಿಂತು ಟಿಕೆಟ್ ಪಡೆಯುವುದಕ್ಕೆ ಮುಕ್ತಿ ದೊರೆಯಲಿದೆ

ಹೆಚ್ಚಿನ ಪ್ರಯಾಣಿಕರ ದಟ್ಟಣೆ ಇರುವ ಇಂತಹ ನಿಲ್ದಾಣಗಳಲ್ಲಿ ಎಟಿವಿಎಂ ಸೌಲಭ್ಯವನ್ನು ರೈಲ್ವೆ ಆರಂಭಿಸುತ್ತಿದೆ. ಇಂತಹ ನಿಲ್ದಾಣಗಳಲ್ಲಿ ಪ್ರಯಾಣಿಕರು ಗಂಟೆಗಟ್ಟಲೆ ಸರದಿಯಲ್ಲಿ ನಿಂತು ಟಿಕೆಟ್ ಪಡೆಯುವ ಬಗ್ಗೆ ರೈಲ್ವೆ ಮಂಡಳಿಗೆ ದೂರುಗಳು ಬರುತ್ತಲೇ ಇರುತ್ತಿದ್ದವು. ಉದ್ದದ ಸರತಿ ಸಾಲುಗಳಿಂದಾಗಿ ಪ್ರಯಾಣಿಕರು ರೈಲು ಕಳೆದುಕೊಂಡ ಪ್ರಕರಣಗಳೂ ಇವೆ.

ಇದು ಹೇಗೆ ಕೆಲಸ ಮಾಡುತ್ತದೆ

ಈ ಸೌಲಭ್ಯದ ಅಡಿಯಲ್ಲಿ, ನೀವು Paytm, PhonePe, Freecharge ಮತ್ತು UPI ಆಧಾರಿತ ಮೊಬೈಲ್ ಅಪ್ಲಿಕೇಶನ್‌ಗಳಿಂದ QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಪಾವತಿಸಬೇಕಾಗುತ್ತದೆ. ಯಂತ್ರದಲ್ಲಿ QR ಕೋಡ್ ಅಳವಡಿಸಲಾಗಿದೆ, ನೀವು ಅದನ್ನು ಸ್ಕ್ಯಾನ್ ಮಾಡಬೇಕಾಗುತ್ತದೆ. ಅದನ್ನು ಸ್ಕ್ಯಾನ್ ಮಾಡಿ ಪಾವತಿ ಮಾಡಿದ ನಂತರ ನಿಮ್ಮಗೆ ಟಿಕೆಟ್ ಸಿಗುತ್ತದೆ. ರೈಲ್ವೆಯಿಂದ ಡಿಜಿಟಲ್ ಪಾವತಿ ಸೌಲಭ್ಯವನ್ನು ಉತ್ತೇಜಿಸಲು, ಕ್ಯೂಆರ್ ಕೋಡ್‌ನಿಂದ ಟಿಕೆಟ್ ಖರೀದಿಸುವ ಸೌಲಭ್ಯವನ್ನು ಪ್ರಾರಂಭಿಸಲಾಗಿದೆ.

ಇದನ್ನೂ ಓದಿ : Arecanut Today: ಕರ್ನಾಟಕ ಮಾರುಕಟ್ಟೆಯಲ್ಲಿ ಅಡಿಕೆಯ ಇಂದಿನ ದರ

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News