Indian Railway: ರೈಲು ಏಪ್ರಿಲ್ ಒಂದರಿಂದ ಎಲ್ಲಾ ರೈಲುಗಳ ಸಂಚಾರ ಆರಂಭ..!

ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್ ಇದೆ. ಏಪ್ರಿಲ್ 1 ರಿಂದ ಎಲ್ಲಾ ರೈಲುಗಳು (Trains) ಮತ್ತೆ ಹಳಿಗೆ ಮರಳಲಿವೆ.

Written by - Ranjitha R K | Last Updated : Feb 12, 2021, 05:04 PM IST
  • ಶೀಘ್ರದಲ್ಲೇ ಹಳಿಗೆ ಮರಳಲಿವೆ ಎಲ್ಲಾ ರೈಲುಗಳು
  • ಏಪ್ರಿಲ್ ಒಂದರಿಂದ ಎಲ್ಲಾ ರೈಲುಗಳ ಸಂಚಾರ ಸಂಭವ
  • ಎಲ್ಲಾ ರೈಲುಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಲಿರುವ ರೈಲ್ವೆ ಇಲಾಖೆ
Indian Railway: ರೈಲು ಏಪ್ರಿಲ್ ಒಂದರಿಂದ ಎಲ್ಲಾ ರೈಲುಗಳ ಸಂಚಾರ ಆರಂಭ..! title=
ಶೀಘ್ರದಲ್ಲೇ ಹಳಿಗೆ ಮರಳಲಿವೆ ಎಲ್ಲಾ ರೈಲುಗಳು (file photo)

ನವದೆಹಲಿ : Indian Railway: ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್ ಇದೆ. ಏಪ್ರಿಲ್ 1 ರಿಂದ ಎಲ್ಲಾ ರೈಲುಗಳು (Trains) ಮತ್ತೆ ಹಳಿಗೆ ಮರಳಲಿವೆ. 2021 ರ ಏಪ್ರಿಲ್ 1 ರಿಂದ ಭಾರತೀಯ ರೈಲ್ವೆ ಎಲ್ಲಾ ರೈಲುಗಳ ಸಂಚಾರ ಆರಂಭಿಸುವ ಸಾಧ್ಯತೆಗಳಿವೆ.  ರೈಲ್ವೆ (Railway) ಇಲಾಖೆ ಇದಕ್ಕೆ ಬೇಕಾಗಿರುವ ಎಲ್ಲಾ ಸಿದ್ದತೆಗಳನ್ನು ಕೂಡಾ ಪೂರ್ಣಗೊಳಿಸಿದೆ.

ಏಪ್ರಿಲ್ 1 ರಿಂದ ಎಲ್ಲಾ ರೈಲುಗಳು ಸಂಚಾರ ? 
ಇನ್ನೇನು ಕೆಲವೇ ದಿನಗಳಲ್ಲಿ ಹೋಳಿ ಹಬ್ಬ ಬರಲಿದೆ.  ಈ ಸಂದರ್ಭದಲ್ಲಿ ಜನರು ತಮ್ಮ ತಮ್ಮ ಊರುಗಳಿಗೆ ಪ್ರಯಾಣ ಬೆಳೆಸುತ್ತಾರೆ. ಸಾಮಾನ್ಯವಾಗಿ ರೈಲಿನ ಬೇಡಿಕೆ ಕೂಡ ಹೆಚ್ಚುತ್ತದೆ. ಈ ಹಿನ್ನೆಲೆಯಲ್ಲಿ ಏಪ್ರಿಲ್ 1 ರಿಂದ ಲ್ಲಾ ರೈಲುಗಳ (Train) ಸಂಚಾರ ಆರಂಭಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ ಎನ್ನಲಾಗಿದೆ. ಜನರಲ್, ಶತಾಬ್ದಿ ಮತ್ತು ರಾಜಧಾನಿ ಸೇರಿದಂತೆ ಎಲ್ಲಾ ರೈಲುಗಳು ಮತ್ತೆ ಹಳಿಗೆ ಮರಳಲಿವೆ. ಕರೋನಾದ (Coronavirus) ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು  ರೈಲ್ವೆ ಎಲ್ಲಾ ರೈಲುಗಳನ್ನು ಓಡಿಸಲು ಅನುವು ಮಾಡಿಕೊಡುತ್ತದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ : Women Saftey in Train: ಮಹಿಳಾ ಸುರಕ್ಷೆಗಾಗಿ ಹೈಟೆಕ್ಕಾಗುತ್ತಿದೆ ನಮ್ಮ ರೈಲು.! ಈ ಕಾರಣಕ್ಕೆ ನೀವಿನ್ನು ಸೇಫ್

ಪ್ರಸ್ತುತ 65% ರೈಲುಗಳು ಮಾತ್ರ ಸಂಚಾರ :
ಕರೋನಾ ಸಾಂಕ್ರಾಮಿಕದ (COVOI-19) ದೃಷ್ಟಿಯಿಂದ, ಪ್ರಸ್ತುತ ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳೂ ಸೇರಿದಂತೆ,  65 ಪ್ರತಿಶತ ರೈಲುಗಳು ಮಾತ್ರ ಓಡಾಡುತ್ತಿವೆ. ರೈಲ್ವೆಯ (Railway) ಈ ನಿರ್ಧಾರದಿಂದ ಬಹುತೇಕ ಎಲ್ಲಾ ಸಬ್ ಅರ್ಬನ್ , ಮೆಟ್ರೋ (Metro) ರೈಲುಗಳು ಸಂಚಾರ ಆರಂಭವಾಗಲಿವೆ. ಮುಂಬೈನಲ್ಲಿ, ಜನವರಿ 29 ರ ಶುಕ್ರವಾರದಿಂದ 95% ಲೋಕಲ್ ರೈಲುಗಳ ಸಂಚಾರ ಆರಂಭಿಸಲಾಗಿತ್ತು. ಪ್ರಸ್ತುತ, ಮುಂಬೈನ ಪಶ್ಚಿಮ ರೈಲ್ವೆ ಮಾರ್ಗದಲ್ಲಿ ಸಂಚರಿಸುತ್ತಿರುವ 704 ಸ್ಥಳೀಯ ರೈಲುಗಳಲ್ಲಿ 3.95 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ. ಇನ್ನು, ಕೇಂದ್ರ ರೈಲ್ವೆ ಮಾರ್ಗದಲ್ಲಿ ಓಡಾಡುತ್ತಿರುವ 706 ಸ್ಥಳೀಯ ರೈಲುಗಳಲ್ಲಿ ಸುಮಾರು 4.57 ಲಕ್ಷ ಜನರು ಪ್ರಯಾಣಿಸುತ್ತಿದ್ದಾರೆ.

ಕೋವಿಡ್ ವಿಶೇಷ ರೈಲುಗಳು ಮಾತ್ರ ಈಗ ಓಡಾಟ : 
ಕರೋನಾ ಕಾರಣದಿಂದಾಗಿ , ಭಾರತೀಯ ರೈಲ್ವೆ (Indian railway) ರೈಲುಗಳ ಸಂಚರವನ್ನು ನಿಲ್ಲಿಸಿತ್ತು. ಪ್ರಸ್ತುತ ವಿಶೇಷ ರೈಲುಗಳು ಮಾತ್ರ ಓಡುತ್ತಿವೆ. ಈ ವಿಶೇಷ ರೈಲುಗಳ ದರ ಕೂಡಾ ಹೆಚ್ಚಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಎಕ್ಸ್‌ಪ್ರೆಸ್, ಮೆಮು, ಡೆಮು ಮತ್ತು ಇತರ ಎಲ್ಲಾ ಲೋಕಲ್ ಟ್ರೈನ್ ಗಳು (Local Trains) ಶೀಘ್ರದಲ್ಲೆ ಕಾರ್ಯಾರಂಭಿಸಲಿವೆ. 

ಇದನ್ನೂ ಓದಿ : ರೈಲಿನಲ್ಲಿ ಬರಲಿದೆ smart window, ಪ್ರಯಾಣಿಕರ ಪ್ರೈವೆಸಿಗೆ ರೈಲ್ವೆ ಇಲಾಖೆ ಒತ್ತು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News