IRCTC : ಇನ್ಮೇಲೆ ರೈಲಿನಲ್ಲಿ ಸಿಗುತ್ತೆ ಊಟ ತಿಂಡಿ, ಆದರೆ ಇದೆ ಕೆಲವು ಕಂಡೀಷನ್ಸ್..!

ರೈಲಿನಲ್ಲಿ ನಾಳೆಯಿಂದ ಮತ್ತೆ e-catering ಸೇವೆ ಆರಂಭವಾಗಲಿದೆ. ಈ ಮೂಲಕ 10 ತಿಂಗಳಿನಿಂದ ಊಟೋಪಚಾರದ ಕಾರಣ ಸಮಸ್ಯೆ ಎದುರಿಸುತ್ತಿದ್ದ ಪ್ರಯಾಣಿಕರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

Written by - Ranjitha R K | Last Updated : Jan 31, 2021, 05:02 PM IST
  • ನಾಳೆಯಿಂದ ರೈಲಿನಲ್ಲಿ ಮತ್ತೆ e-catering ಸೇವೆ ಆರಂಭವಾಗಲಿದೆ
  • ಕಳೆದ 10 ತಿಂಗಳಿನಿಂದ ಸ್ಥಗಿತಗೊಂಡಿದ್ದ e-catering ಸೇವೆ
  • ರೈಲ್ವೆಯ ಅಧಿಕೃತ ವೆಬ್ ಸೈಟ್ IRCTC ಮೂಲಕ ಆಹಾರ ಬುಕ್ ಮಾಡಿಕೊಳ್ಳಬಹುದು
IRCTC  : ಇನ್ಮೇಲೆ ರೈಲಿನಲ್ಲಿ ಸಿಗುತ್ತೆ ಊಟ ತಿಂಡಿ, ಆದರೆ ಇದೆ ಕೆಲವು ಕಂಡೀಷನ್ಸ್..! title=
ನಾಳೆಯಿಂದ ರೈಲಿನಲ್ಲಿ ಮತ್ತೆ e-catering ಸೇವೆ ಆರಂಭ (file photo)

ನವದೆಹಲಿ : ರೈಲ್ವೆ ಪ್ರಯಾಣಿಕರು ಕಳೆದ ಮಾರ್ಚ್ ತಿಂಗಳಿನಿಂದ ಎದುರಿಸುತ್ತಿದ್ದ ಸಮಸ್ಯೆಗೆ ಕೊನೆಯಾಗಲಿದೆ. ನಾಳೆಯಿಂದ ಅಂದರೆ ಫೆಬ್ರವರಿ  ಒಂದರಿಂದ ರೈಲಿನಲ್ಲಿ ಮತ್ತೆ  e-catering ಸೇವೆ ಆರಂಭವಾಗಲಿದೆ. IRCTC ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದೆ. 

ಕಳೆದ10 ತಿಂಗಳಿನಿಂದ ಸ್ಥಗಿತಗೊಂಡಿದ್ದ e-catering : 
ಕರೋನಾ ವೈರಸ್ (Corona virus) ಕಾರಣದಿಂದಾಗಿ 2020ರ ಮಾರ್ಚ್ ನಲ್ಲಿ ರೈಲಿನಲ್ಲಿ e-catering ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಈ ಕಾರಣದಿಂದಾಗಿ ರೈಲು (Train) ಪ್ರಯಾಣಿಕರು ಪರದಾಡುವಂತಾಗಿತ್ತು. ಇದೀಗ ಕರೋನಾ ಲಸಿಕೆ (Corona vaccine) ಆರಂಭವಾದ ಹಿನ್ನೆಲೆಯಲ್ಲಿ, ಮತ್ತೆ IRCTC e-catering ಸೇವೆಯನ್ನು ಆರಂಭಿಸುವ ನಿರ್ದಾರ ಕೈಗೊಂಡಿದೆ. ಎಲ್ಲಾ ಸುರಕ್ಷಾ ನಿಯಮಗಳನ್ನು ಪಾಲಿಸಿಕೊಂಡು ಸೇವೆ ಆರಂಭಿಸಲು ಇಲಾಖೆ ತೀರ್ಮಾನಿಸಿದೆ. 

 

ಇದನ್ನೂ ಓದಿ : ರೈಲಿನಲ್ಲಿ ಬರಲಿದೆ smart window, ಪ್ರಯಾಣಿಕರ ಪ್ರೈವೆಸಿಗೆ ರೈಲ್ವೆ ಇಲಾಖೆ ಒತ್ತು
 

e-catering ಗೈಡ್ ಲೈನ್ ಗಳು :
e-catering ಸೇವೆಯಡಿಯಲ್ಲಿ ಬರುವ ಎಲ್ಲಾ ಕರ್ಮಚಾರಿಗಳು  ಕೋವಿಡ್ 19 (COVID-19) ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಬೇಕು. ಅಡುಗೆಯ ಸಮಯದಲ್ಲಿ ಸ್ವಚ್ಛತೆಯ ಬಗ್ಗೆ ಗಮನಹರಿಸಬೇಕು. ಮನೆಯಿಂದ ಊಟ ತೆಗೆದುಕೊಂಡು ಬರಲು ಸಾಧ್ಯವಾಗದೇ ಇರುವ ಪ್ರಯಾಣಿಕರಿಗೆ e-catering ದೊಡ್ಡ ಸಹಾಯವಾಗಲಿದೆ. ಆದರೆ ಪ್ರಯಾಣಿಕರು ಮನೆಯಿಂದ ತಮ್ಮಆಹಾರವನ್ನು ತರಲು ಇಚ್ಛಿಸಿದರೆ ಯಾವುದೇ ನಿರ್ಬಂಧಗಳಿರುವುದಿಲ್ಲ.

 

ಉಟದ ಬುಕ್ಕಿಂಗ್ ಮಾಡುವುದು ಹೇಗೆ?

ಪ್ರಯಾಣಿಕರಿಗೆ (passengers) ಬಹಳಷ್ಟು ಸಮದರ್ಭಗಳಲ್ಲಿ ತಮ್ಮ ಊಟೋಪಚಾರದ ಸಮಸ್ಯೆ ಎದುರಾಗುತ್ತದೆ. ಇದೀಗ  ಸಮಸ್ಯೆಯ ಪರಿಹಾರವಾಗಿ e-catering ಸೇವೆ ಆರಂಭವಾಗಿದೆ. ಪ್ರಯಾಣದ ವೇಳೆ ಊಟ ಪಡೆಯಲು ಇಚ್ಛಿಸುವ ಪ್ರಯಾಣಿಕರು, ರೈಲ್ವೆಯ ಅಧಿಕೃತ ವೆಬ್ ಸೈಟ್ IRCTCಯಿಂದ ಆರ್ಡರ್ ಮಾಡಿಕೊಳ್ಳಬಹುದು. ಪಿಎನ್ಆರ್ ಸಂಖ್ಯೆ (PNR), ರೈಲು ಸಂಖ್ಯೆ ಮತ್ತು ಸೀಟಿನ ಸಂಖ್ಯೆಯನ್ನು ನಮೂದಿಸಿ ತಮ್ಮ ಊಟವನ್ನು ಬುಕ್ ಮಾಡಿಕೊಳ್ಳಬಹುದು
 

ಇದನ್ನೂ ಓದಿ : Indian Railway : ಇನ್ನು ನೇರ ಮನೆಯಿಂದ ನೀವು ಬುಕ್ ಮಾಡಿರೋ ಸೀಟ್ ತನಕ ಬ್ಯಾಗೆಜ್ ತಲುಪಿಸುತ್ತದೆ ರೈಲ್ವೆ.! ಹೇಗೆ ಗೊತ್ತಾ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News