ಟಿಕೆಟ್ ನಿಯಮಗಳಲ್ಲಿ ಬದಲಾವಣೆ ತಂದ ಭಾರತೀಯ ರೈಲ್ವೆ !

Indian Railway Rules :ಭಾರತೀಯ ರೈಲ್ವೇ ಕಾಲಕಾಲಕ್ಕೆ ಅನೇಕ ಹೊಸ ನಿಯಮಗಳನ್ನು ಜಾರಿಗೆ ತರುತ್ತಿದೆ. ಕೆಲವೊಂದು ನಿಯಮಗಳಲ್ಲಿ ಬದಲಾವಣೆ  ಕೂಡಾ ಮಾಡುತ್ತಿದೆ.   

Written by - Ranjitha R K | Last Updated : Aug 8, 2023, 12:55 PM IST
  • ಭಾರತೀಯ ರೈಲ್ವೇ ನಮ್ಮ ಸಾರಿಗೆಯ ಜೀವನಾಡಿಯಾಗಿದೆ
  • ಸಾರಿಗೆ ಸಂಚಾರದ ವಿಷಯದಲ್ಲಿ ರೈಲುಗಳು ಪ್ರಮುಖ ಪಾತ್ರವಹಿಸುತ್ತವೆ.
  • ರೈಲಿನಲ್ಲಿ ಪ್ರಯಾಣಿಸಲು ಹಲವು ವಿಭಾಗಗಳನ್ನು ಒದಗಿಸಲಾಗಿದೆ
ಟಿಕೆಟ್ ನಿಯಮಗಳಲ್ಲಿ ಬದಲಾವಣೆ ತಂದ ಭಾರತೀಯ ರೈಲ್ವೆ ! title=

Indian Railway Rules : ಭಾರತೀಯ ರೈಲ್ವೇ ನಮ್ಮ ಸಾರಿಗೆಯ ಜೀವನಾಡಿಯಾಗಿದೆ. ನಮ್ಮ ದೇಶದಲ್ಲಿ,  ಸಾರಿಗೆ ಸಂಚಾರದ ವಿಷಯದಲ್ಲಿ ರೈಲುಗಳು ಪ್ರಮುಖ ಪಾತ್ರವಹಿಸುತ್ತವೆ. ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಭಾರತೀಯ ರೈಲ್ವೇ ವಿವಿಧ ಸೌಲಭ್ಯಗಳನ್ನು ಒದಗಿಸುತ್ತದೆ. ಕಾಲಕಾಲಕ್ಕೆ ಅನೇಕ ಹೊಸ ನಿಯಮಗಳನ್ನು ಕೂಡಾ ಜಾರಿಗೆ ತರಲಾಗುತ್ತದೆ. ಕೆಲವೊಂದು ನಿಯಮಗಳಲ್ಲಿ ಬದಲಾವಣೆ ತರುತ್ತದೆ.  

ಇದಲ್ಲದೆ ರೈಲಿನಲ್ಲಿ ಪ್ರಯಾಣಿಸಲು ಹಲವು ವಿಭಾಗಗಳನ್ನು ಒದಗಿಸಲಾಗಿದೆ. ಪ್ರಯಾಣಿಕರ ಅನುಕೂಲ ಮತ್ತು ಆಯ್ಕೆಗೆ ಅನುಗುಣವಾಗಿ ಜನರಲ್, ಸ್ಲೀಪರ್, ಎಸಿ ಹೀಗೆ ಬೇರೆ ಬೇರೆ ವಿಭಾಗಗಳಲ್ಲಿ ಪ್ರಯಾಣ ಬೆಳೆಸಬಹುದು. ಅದೇ ರೀತಿ ಕೆಲವು ರೈಲುಗಳಲ್ಲಿ ಸಾಮಾನ್ಯ ಬೋಗಿಗಳನ್ನು ಅಳವಡಿಸಲಾಗಿದೆ. ಈ ಬೋಗಿಗಳಲ್ಲಿ ಪ್ರಯಾಣಿಸಲು ಯಾವುದೇ ರಿಸರ್ವೇಶನ್ ಮಾಡಿಸಿಕೊಳ್ಳುವ ಅಗತ್ಯವಿಲ್ಲ. ನೀವು ಕೂಡಾ ಸಾಮಾನ್ಯ ಟಿಕೆಟ್ ಮೂಲಕ ಪ್ರಯಾಣಿಸುತ್ತಿದ್ದರೆ, ಅದರ ನಿಯಮಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಏಕೆಂದರೆ ಒಂದು ಸಣ್ಣ ತಪ್ಪು ಕೂಡ ನಿಮ್ಮನ್ನು ದೊಡ್ಡ ತೊಂದರೆಗೆ ಸಿಲುಕಿಸಬಹುದು. 

ಇದನ್ನೂ ಓದಿ : ಇನ್ನೂ ITR ಫೈಲ್ ಮಾಡಿಲ್ಲವೇ? ಚಿಂತೆ ಬೇಡ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಇನ್ನೂ ಇದೆ ಅವಕಾಶ

ಪ್ರಯಾಣಿಕರಿಗೆ ಏನು ಲಾಭ? :
ದಿನವಿಡೀ ಕಾಯ್ದಿರಿಸದ ಟಿಕೆಟ್‌ಗಳಲ್ಲಿ ಪ್ರಯಾಣಿಸುವ ಗಿಮಿಕ್ ಅನ್ನು ನಿಲ್ಲಿಸುವ ಸಲುವಾಗಿ, ರೈಲ್ವೇಯು ಪ್ರಯಾಣದ ಆರಂಭಕ್ಕೆ ಗಡುವನ್ನು ನಿಗದಿಪಡಿಸಿದೆ. ಈ ಹಿಂದೆ ಟಿಕೆಟ್ ದುರ್ಬಳಕೆಯಾಗುತ್ತಿತ್ತು. ಇದರಿಂದ ರೈಲ್ವೆ ಇಲಾಖೆಗೆ ಭಾರೀ ಆರ್ಥಿಕ ನಷ್ಟ ಉಂಟಾಗಿದೆ. ಇದನ್ನು ತಡೆಯಲು ರೈಲ್ವೆ ಇಲಾಖೆ ಸಾಮಾನ್ಯ ಟಿಕೆಟ್ ಗಡುವು ನಿಗದಿಪಡಿಸಿದೆ.

ಸಾಮಾನ್ಯ ಟಿಕೆಟ್ ಖರೀದಿಸಿದ 3 ಗಂಟೆಗಳ ಒಳಗೆ ಪ್ರಯಾಣ ಬೆಳೆಸಬೇಕು : 
ಭಾರತೀಯ ರೈಲ್ವೇ ನಿಯಮಗಳ ಪ್ರಕಾರ, 199 ಕಿಮೀ ವರೆಗೆ ಪ್ರಯಾಣಿಸಬೇಕಾದರೆ, ಸಾಮಾನ್ಯ ಟಿಕೆಟ್ ಖರೀದಿಸಿದ 3 ಗಂಟೆಗಳ ಒಳಗೆ  ರೈಲು ಹತ್ತಬೇಕು. ಮತ್ತೊಂದೆಡೆ, ಪ್ರಯಾಣವು 200 ಕಿಲೋಮೀಟರ್ ಅಥವಾ ಅದಕ್ಕಿಂತ ಹೆಚ್ಚಿನದಾಗಿದ್ದರೆ, ಸಾಮಾನ್ಯ ಟಿಕೆಟ್ ಅನ್ನು 3 ದಿನಗಳ ಮುಂಚಿತವಾಗಿ ತೆಗೆದುಕೊಳ್ಳಬಹುದು. 199 ಕಿಮೀಗಿಂತ ಕಡಿಮೆ ಅಂತರದ ಪ್ರಯಾಣಕ್ಕಾಗಿ ಟಿಕೆಟ್ ತೆಗೆದುಕೊಂಡಿದ್ದರೆ ತನ್ನ ಗಮ್ಯಸ್ಥಾನದ ನಿಲ್ದಾಣದಿಂದ ಮೊದಲ ರೈಲು ಹೊರಡುವವರೆಗೆ ಅಥವಾ ಟಿಕೆಟ್ ಖರೀದಿಸಿದ ದಿನಾಂಕದಿಂದ 3 ಗಂಟೆಗಳ ಒಳಗೆ ಪ್ರಯಾಣವನ್ನು ಪ್ರಾರಂಭಿಸಬೇಕು. 

ಇದನ್ನೂ ಓದಿ : ಅತ್ಯಲ್ಪ ಹೂಡಿಕೆ ಮಾಡಿ ಈ ಸೂಪರ್ ಹಿಟ್ ವ್ಯವಸಾಯ ಆರಂಭಿಸಿ, ತಿಂಗಳಿಗೆ 8 ಲಕ್ಷ ಆದಾಯ ಕೊಡುತ್ತೇ!

ತೆರಬೇಕಾಗುತ್ತದೆ ದಂಡ : 
ನೀವು ಈ ಹೊಸ ನಿಯಮವನ್ನು ಅನುಸರಿಸಿದರೆ ಹೋದರೆ ದಂಡ ತೆರಬೇಕಾಗಿ ಬರಬಹುದು. ಮತ್ತೊಂದೆಡೆ, ನೀವು 3 ಗಂಟೆಗಳ ಒಳಗೆ ಪ್ರಯಾಣವನ್ನು ಪ್ರಾರಂಭಿಸದಿದ್ದರೆ,  ಟಿಕೆಟ್ ರದ್ದಾಗುತ್ತದೆ. ಮಾತ್ರವಲ್ಲ ಬೇರೆ ಯಾವುದೇ ರೈಲಿನಲ್ಲಿ ಪ್ರಯಾಣಿಸಲು ಸಾಧ್ಯವಾಗುವುದಿಲ್ಲ. ಕೆಲವರು ಸಾಮಾನ್ಯ ಟಿಕೆಟ್‌ನೊಂದಿಗೆ ಪ್ರಯಾಣ ಮುಗಿಸಿದ ನಂತರ ಮತ್ತೆ ಆ ಟಿಕೆಟ್ ಅನ್ನು ಬೇರೆಯವರಿಗೆ ಮಾರಾಟ ಮಾಡುತ್ತಾರೆ. ಈ ಮೂಲಕ ದಿನವಿಡೀ ಜನರಲ್ ಟಿಕೆಟ್ ನಲ್ಲಿ ಪ್ರಯಾಣಿಸುತ್ತಾರೆ. ಈ ವಂಚನೆ ತಡೆಯಲು ರೈಲ್ವೆ ಇಲಾಖೆ ಈ ಕ್ರಮ ಕೈಗೊಂಡಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News