Indian Economy: ಆರ್ಥಿಕತೆಯ ವಿಷಯದಲ್ಲಿ ಡ್ರ್ಯಾಗನ್ ಹಿಂದಿಕ್ಕಿದ ಭಾರತ

Indian Economy: IMF ಚೀನಾಗೆ ಭಾರಿ ಶಾಕ್ ನೀಡಿದೆ. ಐಎಂಎಫ್ ಅಂದಾಜಿನ ಪ್ರಕಾರ, ಚೀನಾದ ಬೆಳವಣಿಗೆ ದರ 2021 ಮತ್ತು 2022 ರಲ್ಲಿ ಇಳಿಕೆಯಾಗಲಿದೆ. 

Written by - Nitin Tabib | Last Updated : Oct 12, 2021, 07:43 PM IST
  • ಭಾರತದ ಆರ್ಥಿಕ ಅಭಿವೃದ್ಧಿಯಲ್ಲಿ ಗಮನಾರ್ಹ ಏರಿಕೆ
  • ಈ ವರ್ಷ ಆರ್ಥಿಕ ವೃದ್ಧಿ ದರ ಶೇ.9.5 ರಷ್ಟಿರುವ ಅಂದಾಜು
  • ಚೀನಾದ ಆರ್ಥಿಕ ಪ್ರಗತಿ ದರ ನಿಧಾನಗತಿಯಲ್ಲಿರಲಿದೆ ಎಂದ IMF
Indian Economy: ಆರ್ಥಿಕತೆಯ ವಿಷಯದಲ್ಲಿ ಡ್ರ್ಯಾಗನ್ ಹಿಂದಿಕ್ಕಿದ ಭಾರತ title=
Indian Economy (Representational Graphics)

ನವದೆಹಲಿ:  Indian Economy - ಆರ್ಥಿಕತೆಯ ದೃಷ್ಟಿಯಿಂದ, ಅಂತರಾಷ್ಟ್ರೀಯ ಹಣಕಾಸು ನಿಧಿಯಿಂದ (IMF) ಭಾರತಕ್ಕೆ ಒಳ್ಳೆಯ ಸುದ್ದಿ ನೀಡಿದೆ. ಈ ವರ್ಷ ಬೆಳವಣಿಗೆ ದರ ಶೇ 9.5 ಕ್ಕೆ ತಲುಪಲಿದೆ ಎಂದು IMF (International Monetary Fund) ಅಂದಾಜಿಸಿದೆ. ಇದರೊಂದಿಗೆ, ಮುಂದಿನ ವರ್ಷ ಅಂದರೆ 2022 ರಲ್ಲಿ ಬೆಳವಣಿಗೆ ದರವು 8.5 ಶೇಕಡಾ  ಇರುವ ನಿರೀಕ್ಷೆಯನ್ನು ವ್ಯಕ್ತಪಡಿಸಿದೆ. ಕೊರೊನಾದಿಂದಾಗಿ ಆರ್ಥಿಕತೆಯು ಶೇ. 7.3 ಕ್ಕೆ ಇಳಿದಿದೆ.

ಆರ್ಥಿಕತೆಯನ್ನು ಮರಳಿ ತರಲು ಸರ್ಕಾರದಿಂದ ಪ್ರಯತ್ನಗಳು ನಡೆಯುತ್ತಿವೆ.  NSO ನ ಇತ್ತೀಚಿನ ಮಾಹಿತಿಯ ಪ್ರಕಾರ, ದೇಶದಲ್ಲಿ ಕೈಗಾರಿಕಾ ಉತ್ಪಾದನೆಯು ನಿರಂತರವಾಗಿ ಹೆಚ್ಚುತ್ತಿದೆ ಮತ್ತು ಆಗಸ್ಟ್ 2021 ರ ಅವಧಿಯಲ್ಲಿ ಅದು ಶೇ.11.9ಕ್ಕೆ ತಲುಪಲಿದೆ. ಇದರ ಹೊರತಾಗಿ, ಕಚ್ಚಾ ತೈಲ, ಕಲ್ಲಿದ್ದಲು ಮತ್ತು ಉಕ್ಕು ಸೇರಿದಂತೆ 8 ಮೂಲಭೂತ ವಲಯದ ಕೈಗಾರಿಕೆಗಳ ಉತ್ಪಾದನೆಯಲ್ಲಿ ಹೆಚ್ಚಳವಾಗಿದೆ.

ಇದನ್ನೂ ಓದಿ-Aryan Khan Drug Case: ಕುಸಿಯುತ್ತಿದೆ ಶಾರುಖ್ ಖಾನ್ Brand Value, ಜಾಹೀರಾತಿಗೆ ಬ್ರೇಕ್ ಹಾಕಿದ ದೊಡ್ಡ ದೊಡ್ಡ ಬ್ರಾಂಡ್ ಗಳು

ಕರೋನಾ ಸಾಂಕ್ರಾಮಿಕ (Covid-19 Pandemic) ರೋಗದಿಂದಾಗಿ ಕಳೆದ ವರ್ಷ ಮಾರ್ಚ್‌ನಿಂದ ಕೈಗಾರಿಕಾ ಉತ್ಪಾದನೆಯ ಮೇಲೆ ಪರಿಣಾಮ ಬೀರಿದೆ. ಈ ಅವಧಿಯಲ್ಲಿ  ಅದು ಶೇ. 18.7 ಕುಸಿದಿದೆ. ಏಪ್ರಿಲ್, 2020 ರಲ್ಲಿ, ಕೈಗಾರಿಕಾ ಚಟುವಟಿಕೆಗಳ ಮೇಲೆ ಪರಿಣಾಮ ಬೀರುವ ಲಾಕ್‌ಡೌನ್‌ನಿಂದಾಗಿ (Covid-19 Lockdown) ಕೈಗಾರಿಕಾ ಉತ್ಪಾದನೆಯು ಶೇ 57.3 ರಷ್ಟು ಕಡಿಮೆಯಾಗಿದೆ.

ಇದನ್ನೂ ಓದಿ-Canara Bank: ಕೇವಲ 28 ರೂ.ಗಳಿಗೆ ಸಿಗುತ್ತಿದೆ 4 ಲಕ್ಷ ರೂ.ಗಳವರೆಗಿನ ಲಾಭ

ಚೀನಾಗೆ ಭಾರಿ ಶಾಕ್! (China Growth Projection)
ಇನ್ನೊಂದೆಡೆ, ಐಎಂಎಫ್ ಚೀನಾಗೆ ಭಾರಿ ಶಾಕ್ ನೀಡಿದೆ.  ಐಎಂಎಫ್ ಅಂದಾಜಿನ ಪ್ರಕಾರ, ಚೀನಾದ ಬೆಳವಣಿಗೆ ದರ 2021 ಮತ್ತು 2022 ರಲ್ಲಿ ಇಳಿಕೆ ಕಾಣಲಿದೆ. ಚೀನಾದ ಆರ್ಥಿಕತೆಯು ಈ ವರ್ಷ ಪ್ರಸ್ತುತ ವೇಗಕ್ಕಿಂತ ನಿಧಾನವಾಗಿರಲಿದೆ ಎಂದು ಅಂದಾಜಿಸಲಾಗಿದೆ. ಚೀನಾದ ಬೆಳವಣಿಗೆ ದರವು ಈ ವರ್ಷ ಕೇವಲ ಶೇ.8 ರಷ್ಟು ಇರಲಿದೆ ಎಂದು ಅಂದಾಜಿಸಲಾಗಿದೆ ಮತ್ತು ಕಾರ್ಪೊರೇಟ್ ಡೀಫಾಲ್ಟರ್‌ಗಳ ಸಂಖ್ಯೆಯನ್ನು ಹೆಚ್ಚಿಸುವುದರ ಹೊರತಾಗಿ ಪ್ರಾಪರ್ಟಿ ಸೆಕ್ಟರ್ ಇದಕ್ಕೆ ಪ್ರಮುಖ ಕಾರಣವಾಗಲಿದೆ ಎಂದು IMF ಹೇಳಿದೆ.

ಇದನ್ನೂ ಓದಿ-ITR filing FY 2020-21: ಎಸ್‌ಬಿಐ ಯೋನೋ ಆ್ಯಪ್‌ ಬಳಸಿ ಉಚಿತವಾಗಿ ತೆರಿಗೆ ರಿಟರ್ನ್ ಸಲ್ಲಿಸಿ, ಹೇಗೆಂದು ತಿಳಿಯಿರಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News