RBI: 500 ರೂಪಾಯಿ ನೋಟಿನ ಪ್ರಮುಖ ಮಾಹಿತಿ.. ನಿಮ್ಮ ಬಳಿಯೂ ಈ ನೋಟು ಇದೆಯೇ?

Important information about 500 rupee note by RBI : ಕೆಲವು ವರ್ಷಗಳ ಹಿಂದೆ ಕೇಂದ್ರ ಸರ್ಕಾರ ನೋಟು ಅಮಾನ್ಯೀಕರಣವನ್ನು ಕೈಗೊಂಡಿತ್ತು. ಅಂದಿನಿಂದ ಕರೆನ್ಸಿ ನೋಟುಗಳಿಗೆ ಸಂಬಂಧಿಸಿದಂತೆ ನಾನಾ ರೀತಿಯ ಸುದ್ದಿಗಳು ಪ್ರಕಟವಾಗುತ್ತಿವೆ. ಸದ್ಯ 500 ರೂಪಾಯಿ ನೋಟಿನ ಬಗ್ಗೆ ಹಲವು ಸುದ್ದಿಗಳಿವೆ.   

Written by - Chetana Devarmani | Last Updated : Mar 6, 2023, 12:02 PM IST
  • 500 ರೂಪಾಯಿ ನೋಟಿನ ಪ್ರಮುಖ ಮಾಹಿತಿ
  • ಜನರಿಗೆ ಬಹು ಮುಖ್ಯ ಮಾಹಿತಿ ತಿಳಿಸಿದ RBI
  • ನಿಮ್ಮ ಬಳಿಯೂ ಈ ನೋಟು ಇದೆಯೇ?
RBI: 500 ರೂಪಾಯಿ ನೋಟಿನ ಪ್ರಮುಖ ಮಾಹಿತಿ.. ನಿಮ್ಮ ಬಳಿಯೂ ಈ ನೋಟು ಇದೆಯೇ? title=
500 rupee note

Important information about 500 rupee note by RBI : ಕೆಲವು ವರ್ಷಗಳ ಹಿಂದೆ ಕೇಂದ್ರ ಸರ್ಕಾರ ನೋಟು ಅಮಾನ್ಯೀಕರಣವನ್ನು ಕೈಗೊಂಡಿತ್ತು. ಅಂದಿನಿಂದ ಕರೆನ್ಸಿ ನೋಟುಗಳಿಗೆ ಸಂಬಂಧಿಸಿದಂತೆ ನಾನಾ ರೀತಿಯ ಸುದ್ದಿಗಳು ಪ್ರಕಟವಾಗುತ್ತಿವೆ. ಸದ್ಯ 500 ರೂಪಾಯಿ ನೋಟಿನ ಬಗ್ಗೆ ಹಲವು ಸುದ್ದಿಗಳಿವೆ. ಎಲ್ಲರ ಬಳಿಯೂ 500 ರೂಪಾಯಿ ನೋಟು ಇರುವುದು ಸಾಮಾನ್ಯ. ಹಾಗಾಗಿ ನಿಮ್ಮ ಬಳಿಯೂ 500 ರೂಪಾಯಿ ನೋಟು ಇದ್ದರೆ ಈ ಪೋಸ್ಟ್ ನಿಮಗೆ ಸಹಾಯ ಮಾಡುತ್ತದೆ. ನೀವು 500 ರೂಪಾಯಿ ನೋಟುಗಳನ್ನು ನಗದು ರೂಪದಲ್ಲಿ ಇಡುವ ವ್ಯಕ್ತಿಯೇ? ಆಗ ನೀವು ದೊಡ್ಡ ಆಘಾತಕ್ಕೆ ಒಳಗಾಗಬಹುದು. ಈ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ ಮಾಹಿತಿ ನೀಡಿದೆ.

ಮಾರುಕಟ್ಟೆಯಲ್ಲಿ 2 ರೀತಿಯ ರೂ.500 ನೋಟುಗಳು ಲಭ್ಯವಿವೆ. ಎರಡು ನೋಟುಗಳ ನಡುವೆ ಯಾವುದೇ ಗಮನಾರ್ಹ ವ್ಯತ್ಯಾಸವಿಲ್ಲ, ಅಂದರೆ ಮೊದಲ ನೋಟದಲ್ಲಿ ವ್ಯತ್ಯಾಸಗಳನ್ನು ಗುರುತಿಸುವುದು ಕಷ್ಟ. ಈ ಎರಡು ಬಗೆಯ ನೋಟುಗಳ ಪೈಕಿ ಒಂದು ಬಗೆಯ ನೋಟುಗಳನ್ನು ನಕಲಿ ನೋಟುಗಳೆಂದು ಕರೆಯಲಾಗುತ್ತದೆ. ಈ ಕುರಿತ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ : ಚೀನಾದಿಂದ ಉತ್ಪಾದಕರನ್ನು ಸೆಳೆಯಬಲ್ಲ ರಾಷ್ಟ್ರಗಳು

ವೈರಲ್‌ ವಿಡಿಯೋದಲ್ಲಿ ಒಂದು ರೀತಿಯ ನೋಟು ನಕಲಿ ಎಂದು ಹೇಳಲಾಗಿದೆ. ಪಿಐಬಿ ವಿಡಿಯೋದ ಸತ್ಯಾಸತ್ಯತೆ ಪರಿಶೀಲನೆಯನ್ನೂ ಮಾಡಿದೆ. ಸತ್ಯಾಸತ್ಯತೆ ಪರಿಶೀಲನೆ ಬಳಿಕ ವಿಡಿಯೋದ ಸತ್ಯಾಂಶ ಬೆಳಕಿಗೆ ಬಂದಿದೆ. ಆರ್‌ಬಿಐ ಗವರ್ನರ್ ಸಹಿ ಅಥವಾ ಗಾಂಧೀಜಿ ಅವರ ಚಿತ್ರಕ್ಕೆ ಹತ್ತಿರವಿರುವ ಹಸಿರು ಪಟ್ಟಿಯೊಂದಿಗೆ 500 ರೂ ನೋಟನ್ನು ತೆಗೆದುಕೊಳ್ಳಬೇಡಿ ಎಂದು ವಿಡಿಯೋ ಹೇಳುತ್ತದೆ.

ವಿಡಿಯೋವನ್ನು ಪರಿಶೀಲಿಸಿದಾಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಸಂಪೂರ್ಣ ನಕಲಿ ಎಂದು ತಿಳಿದು ಬಂದಿದೆ. ಎರಡೂ ಬಗೆಯ ನೋಟುಗಳು ಮಾರುಕಟ್ಟೆಯಲ್ಲಿ ಮಾನ್ಯವಾಗಿವೆ. ಈ ನೋಟುಗಳಲ್ಲಿ ಯಾವುದಾದರೂ ನಿಮ್ಮ ಬಳಿ ಇದ್ದರೆ ಚಿಂತಿಸಬೇಕಾಗಿಲ್ಲ. ಎರಡೂ ಬಗೆಯ ನೋಟುಗಳು ಮಾರುಕಟ್ಟೆಯಲ್ಲಿ ಚಲಾವಣೆಯಲ್ಲಿವೆ ಎಂದು ಆರ್ ಬಿಐ ಮಾಹಿತಿ ನೀಡಿದೆ.

ಇದನ್ನೂ ಓದಿ : ಮಾರ್ಚ್ 31ರೊಳಗೆ ಈ ಕೆಲಸಗಳನ್ನು ಮಾಡಿ ಮುಗಿಸಿ, ಇಲ್ಲವಾದರೆ ತೆರಬೇಕಾಗುವುದು ದಂಡ  

ನೀವು ಅಂತಹ ಸಂದೇಶವನ್ನು ಪಡೆದರೆ ಚಿಂತಿಸಬೇಡಿ. ಇಂತಹ ಸುಳ್ಳು ಸುದ್ದಿಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಇದರ ಹೊರತಾಗಿ, ಯಾವುದೇ ಸಂದೇಶವನ್ನು ಸಹ ಸತ್ಯ-ಪರಿಶೀಲಿಸಬಹುದು. ಇದಕ್ಕಾಗಿ ಅಧಿಕೃತ ಲಿಂಕ್ https://factcheck.pib.gov.in/ ಗೆ ಭೇಟಿ ನೀಡಿ. ಇದಲ್ಲದೆ, ನೀವು ವೀಡಿಯೊವನ್ನು ವಾಟ್ಸಾಪ್ ಸಂಖ್ಯೆ +918799711259 ಅಥವಾ ಇಮೇಲ್ pibfactcheck@gmail.com ಗೆ ಕಳುಹಿಸುವ ಮೂಲಕ ವೀಡಿಯೊದ ಸತ್ಯಾಸತ್ಯತೆಯನ್ನು ಪರಿಶೀಲಿಸಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News