ರೈಲಿನ ಪೂರ್ತಿ ಕೋಚ್ ಅನ್ನು ಸುಲಭವಾಗಿ ಬುಕ್ ಮಾಡಲು ಈ ವೆಬ್ ಸೈಟ್ ಬಳಸಿ

How to Book Train Full Coach:ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಹಲವು ರೀತಿಯ ಸೇವೆಗಳನ್ನು ಒದಗಿಸುತ್ತದೆ. ಈ ಸೌಲಭ್ಯಗಳಲ್ಲಿ, ಒಂದು ಸಂಪೂರ್ಣ ರೈಲು ಅಥವಾ ಸಂಪೂರ್ಣ ಕೋಚ್ ಅನ್ನು ಬುಕ್ ಮಾಡುವುದು. 

Written by - Ranjitha R K | Last Updated : Aug 28, 2023, 11:28 AM IST
  • ದೇಶದಲ್ಲಿ ರೈಲು ಅತ್ಯಂತ ಆದ್ಯತೆಯ ಸಾರಿಗೆ ವಿಧಾನವಾಗಿದೆ.
  • ಭಾರತದ ರೈಲ್ವೆ ನೆಟ್ವರ್ಕ್ ವಿಶ್ವದ ನಾಲ್ಕನೇ ಅತಿದೊಡ್ಡ ನೆಟ್ ವರ್ಕ್ ಆಗಿದೆ.
  • ಪೂರ್ಣ ಕೋಚ್ ಅನ್ನು ಸುಲಭವಾಗಿ ಬುಕ್ ಮಾಡಬಹುದು
ರೈಲಿನ ಪೂರ್ತಿ ಕೋಚ್ ಅನ್ನು ಸುಲಭವಾಗಿ ಬುಕ್ ಮಾಡಲು ಈ ವೆಬ್ ಸೈಟ್ ಬಳಸಿ  title=

How to Book Train Full Coach : ದೇಶದಲ್ಲಿ ರೈಲು ಅತ್ಯಂತ ಆದ್ಯತೆಯ ಸಾರಿಗೆ ವಿಧಾನವಾಗಿದೆ. ಭಾರತದ ರೈಲ್ವೆ ನೆಟ್ವರ್ಕ್ ವಿಶ್ವದ ನಾಲ್ಕನೇ ಅತಿದೊಡ್ಡ ನೆಟ್ ವರ್ಕ್ ಆಗಿದೆ. ಸುರಕ್ಷಿತ ಪ್ರಯಾಣ ಮತ್ತು ಮತ್ತು ಕಡಿಮೆ ವೆಚ್ಚ ಎನ್ನುವ ಕಾರಣಕ್ಕಾಗಿ, ಜನ ರೈಲಿನಲ್ಲಿ ಪ್ರಯಾಣಿಸಲು ಬಯಸುತ್ತಾರೆ. ದೀರ್ಘ ಪ್ರಯಾಣ ಬೆಳೆಸುವವರ ಮೊದಲ ಆಯ್ಕೆ ರೈಲು ಆಗಿರುತ್ತದೆ. ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಹಲವು ರೀತಿಯ ಸೇವೆಗಳನ್ನು ಒದಗಿಸುತ್ತದೆ. ಈ ಸೌಲಭ್ಯಗಳಲ್ಲಿ, ಒಂದು ಸಂಪೂರ್ಣ ರೈಲು ಅಥವಾ ಸಂಪೂರ್ಣ ಕೋಚ್ ಅನ್ನು ಬುಕ್ ಮಾಡುವುದು. 

ಪೂರ್ಣ ಕೋಚ್ ಅನ್ನು ಸುಲಭವಾಗಿ ಬುಕ್ ಮಾಡಬಹುದು :
ನೀವು ಯಾವುದೇ ತೀರ್ಥಯಾತ್ರೆಗೆ ಹೊರಡುವ ಯೋಚನೆ ಇದ್ದರೆ, ಸಂಪೂರ್ಣ ಕೋಚ್ ಅನ್ನು ಸುಲಭವಾಗಿ ಬುಕ್ ಮಾಡಬಹುದು. IRCTC ಪರವಾಗಿ, ರೈಲಿನ ಸಂಪೂರ್ಣ ಕೋಚ್ ಅಥವಾ ಸಂಪೂರ್ಣ ರೈಲನ್ನು ಬುಕ್ ಮಾಡುವ ಆಯ್ಕೆಯನ್ನು ನೀಡಲಾಗಿದೆ. ಸಂಪೂರ್ಣ ಕೋಚ್ ಅಥವಾ ಸಂಪೂರ್ಣ ರೈಲನ್ನು ಬುಕ್ ಮಾಡುವ ಬಗೆ ಹೇಗೆ? ಇದಕ್ಕಾಗಿ ತಗಲುವ ವೆಚ್ಚ ಎಷ್ಟು ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ. 

ಇದನ್ನೂ ಓದಿ : ಇಂದಿನ ಅಡಿಕೆ ದರ: ದಾವಣಗೆರೆ, ಮಂಗಳೂರು & ತುಮಕೂರಿನ ಅಡಿಕೆ ಧಾರಣೆ

ಕೋಚ್‌ಗಳನ್ನು ಆರು ತಿಂಗಳ ಮುಂಚಿತವಾಗಿ ಕಾಯ್ದಿರಿಸಬಹುದು:
ನೀವು ರೈಲಿನ ಸಂಪೂರ್ಣ ಕೋಚ್ ಅನ್ನು ಬುಕ್ ಮಾಡುವುದಾದರೆ,  ಎಫ್‌ಟಿಆರ್ (ಫುಲ್ ಟ್ಯಾರಿಫ್ ರೇಟ್) ಸೌಲಭ್ಯವನ್ನು ರೈಲ್ವೆ ಒದಗಿಸುತ್ತದೆ. IRCTCಯ FTR ವೆಬ್‌ಸೈಟ್ www.ftr.irctc.co.in ಮೂಲಕ ಸಂಪೂರ್ಣ ಕೋಚ್ ಅನ್ನು ಬುಕ್ ಮಾಡಬಹುದು. ಆದರೆ, ರೈಲಿನ ಸಂಪೂರ್ಣ ಕೋಚ್ ಬುಕ್ ಮಾಡಿದರೆ ನಿಗದಿತ ಮೊತ್ತಕ್ಕಿಂತ ಶೇ.30ರಿಂದ 35ರಷ್ಟು ಹೆಚ್ಚು ಪಾವತಿಸಬೇಕಾಗುತ್ತದೆ ಎನ್ನುತ್ತದೆ ರೈಲ್ವೆ ನಿಯಮ. ಅಷ್ಟೇ ಅಲ್ಲ, ಪ್ರಯಾಣದ ದಿನಾಂಕಕ್ಕಿಂತ ಆರು ತಿಂಗಳಿಗಿಂತ ಮುಂಚೆಯೇ ಅದರ ಬುಕಿಂಗ್ ಅನ್ನು ಮಾಡಬೇಕಾಗುತ್ತದೆ. 

ಕನಿಷ್ಠ 30 ದಿನಗಳ ಮುಂಚಿತವಾಗಿ ಬುಕಿಂಗ್ ಮಾಡಲಾಗುತ್ತದೆ : 
ಸಂಪೂರ್ಣ ಕೋಚ್‌ನ ಬುಕಿಂಗ್ ನಿಮ್ಮೊಂದಿಗೆ ಪ್ರಯಾಣಿಸುವ ಜನರ ಸಂಖ್ಯೆಯನ್ನು ಅವಲಂಬಿಸಿರುವುದಿಲ್ಲ. ಆದರೆ, ಒಂದೇ ಬಾರಿಗೆ 10 ಕ್ಕಿಂತ ಹೆಚ್ಚು ಕೋಚ್‌ಗಳನ್ನು ಬುಕ್ ಮಾಡಲು ಸಾಧ್ಯವಿಲ್ಲ. ಪ್ರಯಾಣದ ದಿನಾಂಕಕ್ಕಿಂತ ಕನಿಷ್ಠ 30 ದಿನಗಳ ಮೊದಲು ಕೋಚ್ ಬುಕಿಂಗ್ ಮಾಡಬೇಕು. ಕೋಚ್ ಬುಕ್ಕಿಂಗ್ ಪ್ರಕ್ರಿಯೆಯನ್ನು ಪ್ರಾರಂಭಿಸಲು, ನೀವು Chief Reservation Supervisorಗೆ ಲಿಖಿತ ಪತ್ರವನ್ನು ನೀಡಬೇಕು. ಪ್ರಯಾಣದ ದಿನಾಂಕ, ರೈಲು ಸಂಖ್ಯೆ, ಅಗತ್ಯವಿರುವ ಬರ್ತ್‌ಗಳ ಸಂಖ್ಯೆ ಮತ್ತು ಪ್ರಯಾಣಿಕರ ಪಟ್ಟಿಯ ಬಗ್ಗೆ ಈ ಪತ್ರದಲ್ಲಿ ಮಾಹಿತಿಯನ್ನು ನೀಡಬೇಕು.

ಇದನ್ನೂ ಓದಿ : ವೇತನ ನಿಯಮಗಳಲ್ಲಿ ಬದಲಾವಣೆ ! ಮುಂದಿನ ತಿಂಗಳಿನಿಂದಲೇ ಕೈ ಸೇರುವುದು ಹೆಚ್ಚಿನ ವೇತನ

ನಿಮ್ಮ ಈ ಪತ್ರವನ್ನು ಮೀಸಲಾತಿ ಕಚೇರಿಯ ನಿಯಂತ್ರಣ ಕಚೇರಿ  ಅನುಮೋದಿಸಬೇಕಾಗುತ್ತದೆ. ನಿಮ್ಮ ವಿನಂತಿಗೆ ಅನುಮೋದನೆ ಸಿಕ್ಕಿದ ನಂತರ ಬಲ್ಕ್ ಟಿಕೆಟ್ ಬುಕಿಂಗ್ ಕೌಂಟರ್‌ನಲ್ಲಿ ನಿಮ್ಮ ಕೋಚ್ ಅನ್ನು ಬುಕ್ ಮಾಡಬಹುದು. ನಿಮ್ಮ ವಿನಂತಿಯನ್ನು ಅನುಮೋದಿಸಿದ ನಂತರ, ನಿಮಗೆ ರೆಫಾರೆನ್ಸ್ ನಂಬರ್ ಸಿಗುತ್ತದೆ. ನಂತರ ನೋಂದಣಿ ಮೊತ್ತವನ್ನು ಪಾವತಿಸಬೇಕಾಗುತ್ತದೆ.

ರೈಲ್ವೆ ವೆಬ್‌ಸೈಟ್‌ನಲ್ಲಿ ನೀಡಲಾದ ಮಾಹಿತಿಯ ಪ್ರಕಾರ, ಏಳು ದಿನಗಳ ಪ್ರಯಾಣದ ಅವಧಿಗೆ ಕೋಚ್‌ನ ಬುಕಿಂಗ್ ಮೊತ್ತವು ಪ್ರತಿ ಕೋಚ್‌ಗೆ 50,000 ರೂ. ಆಗಿರುತ್ತದೆ. ಇದರ ನಂತರ, ಹೆಚ್ಚುವರಿ ಕೋಚ್‌ಗಾಗಿ ದಿನಕ್ಕೆ 10,000/ಪ್ರತಿ ಕೋಚ್‌ಗೆ ಪಾವತಿಸಬೇಕಾಗುತ್ತದೆ. ಇದಲ್ಲದೆ, ನೀವು ರೈಲ್ವೆ ಖಾತೆಯಲ್ಲಿ ನಿರ್ದಿಷ್ಟ ಭದ್ರತಾ ಠೇವಣಿಯನ್ನೂ ಸಹ ಠೇವಣಿ ಮಾಡಬೇಕು. ಅದನ್ನು ಪ್ರಯಾಣದ ನಂತರ ಹಿಂತಿರುಗಿಸಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News