ವರ್ಷ 2024ರಲ್ಲಿ ಬಂಬಾಟ್ ರೀಟರ್ನ್ ನೀಡಲಿದೆ ಈ ಸರ್ಕಾರಿ ಯೋಜನೆ, ನಿಯಮಿತ 4 ಸಾವಿರ ರೂ.ಗಳ ಹೂಡಿಕೆ 22 ಲಕ್ಷ ರೂ.ಗಳಾಗಲಿದೆ!

Government Scheme 2024: ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ, ನೀವು 8.2% ದರದಲ್ಲಿ ಬಡ್ಡಿಯನ್ನು ಗಳಿಸಬಹುದು. ₹ 48,000 ಹೂಡಿಕೆಯಿಂದ 14 ಲಕ್ಷ ರೂ.ಗಳ ಬಡ್ಡಿಯನ್ನು ಹೇಗೆ ಗಳಿಸಬಹುದು ಎಂಬುದನ್ನು ಸಂಪೂರ್ಣ ಲೆಕ್ಕಾಚಾರದೊಂದಿಗೆ ತಿಳಿದುಕೊಳ್ಳೋಣ ಬನ್ನಿ. (Business News In Kannada)  

Written by - Nitin Tabib | Last Updated : Jan 3, 2024, 07:39 PM IST
  • 21 ವರ್ಷಗಳ ನಂತರ ಮೆಚ್ಯೂರಿಟಿ ಅಂದರೆ 2045 ರಲ್ಲಿ, ನೀವು ಕೇವಲ 15 ಲಕ್ಷದ 14 ಸಾವಿರ ಬಡ್ಡಿಯನ್ನು ಪಡೆಯಬಹುದು.
  • ಅಂದರೆ ₹7.20 ಲಕ್ಷ ಹೂಡಿಕೆಯ ಮೇಲೆ ₹15.14 ಲಕ್ಷ ಬಡ್ಡಿ ಪಡೆಯಬಹುದು.
  • ಮೆಚ್ಯೂರಿಟಿಯಲ್ಲಿ ನೀವು ಹೂಡಿಕೆ ಮೊತ್ತ ಮತ್ತು ಬಡ್ಡಿ ಮೊತ್ತವನ್ನು ಒಟ್ಟಿಗೆ ಪಡೆಯುತ್ತೀರಿ, ಅದು ಒಟ್ಟು 22 ಲಕ್ಷ 34 ಸಾವಿರ ರೂ. ಗಳಾಗುತ್ತದೆ.
ವರ್ಷ 2024ರಲ್ಲಿ ಬಂಬಾಟ್ ರೀಟರ್ನ್ ನೀಡಲಿದೆ ಈ ಸರ್ಕಾರಿ ಯೋಜನೆ, ನಿಯಮಿತ 4 ಸಾವಿರ ರೂ.ಗಳ ಹೂಡಿಕೆ 22 ಲಕ್ಷ ರೂ.ಗಳಾಗಲಿದೆ! title=

ನವದೆಹಲಿ: ಕೇಂದ್ರ ಸರ್ಕಾರ ಸುಕನ್ಯಾ ಸಮೃದ್ಧಿ ಯೋಜನೆಗೆ ನೀಡುತ್ತಿದ್ದ ಬಡ್ಡಿ ದರವನ್ನು ಇತ್ತೀಚೆಗಷ್ಟೇ ಪರಿಶೀಲಿಸಿದೆ.. ಈ ಹಿಂದೆ ಗ್ರಾಹಕರಿಗೆ ಯೋಜನೆಯಲ್ಲಿ ಹೂಡಿಕೆಯ ಮೇಲೆ 8% ದರದಲ್ಲಿ ಬಡ್ಡಿಯನ್ನು ನೀಡಲಾಗುತ್ತಿತ್ತು. ಆದರೆ, ಬಡ್ಡಿ ದರ ಹೆಚ್ಚಳದ ಬಳಿಕ ಇದೀಗ ಬಡ್ಡಿ ದರ ಶೇ.8.2ಕ್ಕೆ ಏರಿಕೆಯಾಗಿದೆ. ಯೋಜನೆಯ ವಿಶೇಷತೆಯೆಂದರೆ, ದೀರ್ಘಾವಧಿಯ ಹೂಡಿಕೆಯಿಂದಾಗಿ, ಮ್ಯಾಚುರಿಟಿ ಬಳಿಕ ಈ ಯೋಜನೆ ನಿಮಗೆ ದೊಡ್ಡ ನಿಧಿಯನ್ನು ನೀಡುತ್ತದೆ. ಆದರೆ, ಮಗಳುಲ್ 10 ವರ್ಷವಾಗುವವರೆಗೆ ಮಾತ್ರ ನೀವು ಎಸ್ಎಸ್ವೈ ಖಾತೆಯನ್ನು ತೆರೆಯಬಹುದು ಎಂಬುದು ಇಲ್ಲಿ ಗಮನಾರ್ಹ. (Business News In Kannada)

ಎಸ್ಎಸ್ವೈ ಖಾತೆಯು 21 ವರ್ಷಗಳಲ್ಲಿ ಪಕ್ವವಾಗುತ್ತದೆ. ಆದರೆ, ಮಗಳಿಗೆ 18 ವರ್ಷ ತುಂಬಿದಾಗ ಶಿಕ್ಷಣ ಅಥವಾ ಮದುವೆಗಾಗಿ ಖಾತೆಯಿಂದ ಮೊತ್ತವನ್ನು ಹಿಂಪಡೆಯಬಹುದು. ಇಲ್ಲಿ ನಾವು ನಿಮಗೆ ಈ ಯೋಜನೆಯ ಒಂದು ಜಬರ್ದಸ್ತ್ ಲೆಕ್ಕಾಚಾರದ ಬಗ್ಗೆ ಮಾಹಿತಿಯನ್ನು ಕೊಡುತ್ತಿದ್ದೇವೆ. ಈ ಯೋಜನೆಯಲ್ಲಿ, ನೀವು ಪ್ರತಿ ತಿಂಗಳು 4 ಸಾವಿರ ರೂಪಾಯಿಗಳನ್ನು ಉಳಿತಾಯ ಮಾಡಬೇಕು ಮತ್ತು ಈ ಮೊತ್ತವನ್ನು ಎಸ್ಎಸ್ವೈ ಖಾತೆಗೆ ಜಮಾ ಮಾಡಬೇಕು. ನೀವು 2024 ರಲ್ಲಿ ಹೂಡಿಕೆ ಮಾಡಲು ಆಂಭಿಸಿರುವಿರಿ ಎಂದುಕೊಳ್ಳೋಣ ಮತ್ತು ನಿಮ್ಮ ಮಗಳಿಗೆ 5 ವರ್ಷ ವಯಸ್ಸಾಗಿದೆ ಭಾವಿಸೋಣ. ಇಂತಹ ಪರಿಸ್ಥಿತಿಯಲ್ಲಿ, ಲೆಕ್ಕಾಚಾರದ ಸಂಪೂರ್ಣ ನಿಧಿ ಎಷ್ಟಾಗಲಿದೆ ತಿಳಿದುಕೊಳ್ಳೋಣ ಬನ್ನಿ.

ಇದನ್ನೂ ಓದಿ-ಒಂದು ಲಕ್ಷಕ್ಕೂ ಕಡಿಮೆ ಬೆಲೆ ಬಾಳುವ ಈ ಸ್ಕೂಟರ್ ಗಳು ಮಹಿಳೆಯರಿಗೆ ಬೆಸ್ಟ್ ಆಯ್ಕೆಯಾಗಿವೆ!

ಈ ರೀತಿ  ಬಡ್ಡಿಯಿಂದ ₹15 ಲಕ್ಷ ಸಿಗುತ್ತದೆ
ನಾವು ಈ ಮೊದಲೇ ಹೇಳಿದಂತೆ ಖಾತೆಯ ಮುಕ್ತಾಯ ಅವಧಿಯು 21 ವರ್ಷಗಳು, ಅಂದರೆ, ನೀವು 2024 ರಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದರೆ, ನೀವು 2045 ರಲ್ಲಿ ಅದರಿಂದ ಬಲವಾದ ಆದಾಯವನ್ನು ಪಡೆಯಬಹುದು. ನೀವು ಪ್ರತಿ ತಿಂಗಳು 4,000 ರೂ ಉಳಿಸಿದರೆ, ನೀವು ಒಂದು ವರ್ಷದಲ್ಲಿ 48,000 ರೂ ಹೂಡಿಕೆ ಮಾಡಲು ಸಾಧ್ಯವಾಗುತ್ತದೆ. 15 ವರ್ಷಗಳವರೆಗೆ ಖಾತೆಗೆ ಹಣ ಜಮಾ ಮಾಡಬೇಕು. ಲೆಕ್ಕಾಚಾರದ ಪ್ರಕಾರ, ನೀವು 2042 ರವರೆಗೆ ಈ ಹೂಡಿಕೆಯನ್ನು ಮಾಡಬೇಕಾಗುತ್ತದೆ. ಹೀಗೆ ಮಾಡುವುದರಿಂದ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ 7 ಲಕ್ಷ 20 ಸಾವಿರ ರೂ ಠೇವಣಿಯಾಗುತ್ತದೆ.

ಇದನ್ನೂ ಓದಿ-ಮರೆತ್ಹೋಗಿ ಅಗ್ಗದ ಚಿನ್ನ... ! ಹೊಸ ವರ್ಷದಲ್ಲಿ ಚಿನ್ನದ ಬೆಲೆ ಹೊಸ ಎತ್ತರಕ್ಕೆ ತಲುಪಲಿದೆ, ಇಲ್ಲಿದೆ ಅದರ ಒಂದು ಝಲಕ್!

 21 ವರ್ಷಗಳ ನಂತರ ಮೆಚ್ಯೂರಿಟಿ ಅಂದರೆ 2045 ರಲ್ಲಿ, ನೀವು ಕೇವಲ 15 ಲಕ್ಷದ 14 ಸಾವಿರ ಬಡ್ಡಿಯನ್ನು ಪಡೆಯಬಹುದು. ಅಂದರೆ ₹7.20 ಲಕ್ಷ ಹೂಡಿಕೆಯ ಮೇಲೆ ₹15.14 ಲಕ್ಷ ಬಡ್ಡಿ ಪಡೆಯಬಹುದು. ಮೆಚ್ಯೂರಿಟಿಯಲ್ಲಿ ನೀವು ಹೂಡಿಕೆ ಮೊತ್ತ ಮತ್ತು ಬಡ್ಡಿ ಮೊತ್ತವನ್ನು ಒಟ್ಟಿಗೆ ಪಡೆಯುತ್ತೀರಿ, ಅದು ಒಟ್ಟು 22 ಲಕ್ಷ 34 ಸಾವಿರ ರೂ. ಗಳಾಗುತ್ತದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News