Government Scheme: ಅದ್ಭುತ ಸರ್ಕಾರಿ ಯೋಜನೆ, ನಿತ್ಯ ಕೇವಲ ರೂ.200 ಉಳಿತಾಯ ಮಾಡಿ 20 ಲಕ್ಷ ರೂ.ಗಳ ಮಾಲೀಕರಾಗಿ

Power Of Compounding - ಸರ್ಕಾರದ ಇಂತಹ ಹಲವು ಯೋಜನೆಗಳಿದ್ದು, ಇವುಗಳಲ್ಲಿ ಹೂಡಿಕೆದಾರರು ಹೂಡಿಕೆ ಮಾಡುವ ಮೂಲಕ ಖಾತರಿಯ ಲಾಭವನ್ನು ಪಡೆಯುವುದರ ಜೊತೆಗೆ ತಮ್ಮ ಹಣವನ್ನು ಕೂಡ ಸಂಪೂರ್ಣವಾಗಿ ಸುರಕ್ಷಿತವಾಗಿರಿಸಬಹುದು.

Written by - Nitin Tabib | Last Updated : Sep 14, 2021, 02:50 PM IST
  • PPF ಒಂದು ಸಣ್ಣ ಉಳಿತಾಯ ಯೋಜನೆಯಾಗಿದ್ದು, ದಿರ್ಘಾವಧಿಯಲ್ಲಿ ಹಲವು ಲಾಭಗಳನ್ನೂ ನೀಡುತ್ತದೆ.
  • ಇದರಲ್ಲಿ ನೀವು ಮಾಡುವ ಹೂಡಿಕೆಗೆ ಸರ್ಕಾರದ ಗ್ಯಾರಂಟಿ ಸಿಗುತ್ತದೆ.
  • ಬ್ಯಾಂಕ್ ನಲ್ಲಿ ನೀವು ಮಾಡುವ ಹೂಡಿಕೆಗೆ ಕೇವಲ 5 ಲಕ್ಷ ರೂ.ವರೆಗೆ ವಿಮಾ ರಕ್ಷಣೆ ಸಿಗುತ್ತದೆ.
Government Scheme: ಅದ್ಭುತ ಸರ್ಕಾರಿ ಯೋಜನೆ, ನಿತ್ಯ ಕೇವಲ ರೂ.200 ಉಳಿತಾಯ ಮಾಡಿ 20 ಲಕ್ಷ ರೂ.ಗಳ ಮಾಲೀಕರಾಗಿ title=
Benefits Of Investing In PPF Scheme (File Photo)

Benefits Of Investing In PPF Scheme: ಸಣ್ಣ ಉಳಿತಾಯದ (Small Saving Scheme) ಅಭ್ಯಾಸ ನಿಮ್ಮನ್ನು ಭವಿಷ್ಯದಲ್ಲಿ ಲಕ್ಶಾಧಿಪತಿಯನ್ನಾಗಿಸಬಹುದು. ಸರ್ಕಾರದ ಇಂತಹ ಅನೇಕ ಯೋಜನೆಗಳಿವೆ, ಇದರಲ್ಲಿ ಹೂಡಿಕೆದಾರರು ಖಾತರಿಯ ಲಾಭವನ್ನು ಪಡೆಯುವುದರ ಜೊತೆಗೆ ತಮ್ಮ ಹಣವನ್ನು ಕೂಡ ಸುರಕ್ಷಿತವಾಗಿರಿಸಬಹುದು. ಪೋಸ್ಟ್ ಆಫೀಸ್ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF) ಕೂಡ ಇಂತಹ ಯೋಜನೆಗಳಲ್ಲಿ ಒಂದಾಗಿದೆ. ಇದರಲ್ಲಿ ದೀರ್ಘಾವಧಿಯ ದೃಷ್ಟಿಕೋನದಿಂದ ಹೂಡಿಕೆ ಮಾಡಿದರೆ, ಅದು ಲಕ್ಷಾಂತರ ರೂಪಾಯಿಗಳ ನಿಧಿಯಾಗಿ ಬದಲಾಗುತ್ತದೆ. ಇದರ ಜೊತೆಗೆ ಹಣವೂ ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತದೆ ಮತ್ತು ತೆರಿಗೆಯನ್ನು ಸಂಪೂರ್ಣವಾಗಿ ಉಳಿಸುತ್ತದೆ. ಇದರಲ್ಲಿ ನೀವು 200 ರೂ.ಗಳ ದೈನಂದಿನ ಉಳಿತಾಯ ಮಾಡಿದರೆ, ನಂತರ ಪಿಪಿಎಫ್‌ನಲ್ಲಿ ಮಾಸಿಕ ಹೂಡಿಕೆ ಮಾಡುವ ಮೂಲಕ, ನೀವು 15 ವರ್ಷಗಳವರೆಗೆ ಸುಮಾರು 20 ಲಕ್ಷ ರೂಪಾಯಿಗಳ ನಿಧಿಯನ್ನು ಸುಲಭವಾಗಿ ನಿರ್ಮಿಸಬಹುದು. ಇದರಲ್ಲಿ ಹೂಡಿಕೆದಾರರಿಗೆ ಕಂಪೌಂಡಿಂಗ್ ನ ಸಂಪೂರ್ಣ ಲಾಭ ಸಿಗುತ್ತದೆ.

200 ರೂ.ಗಳಿಂದ ಹೇಗೆ 20 ಲಕ್ಷ ಗಳಿಕೆ ಮಾಡಬೇಕು?
ಅಂಚೆ ಕಛೇರಿಯ PPF ನಲ್ಲಿ (Post Office Saving Schemes), ಹೂಡಿಕೆದಾರರಿಗೆ ಕಂಪೌಂಡಿಂಗ್ ಪಾವರ್ ಸಿಗುತ್ತದೆ. ನೀವು ಪ್ರತಿದಿನ 200 ರೂ.ಗಳನ್ನು ಉಳಿಸುತ್ತೀರಿ ಎಂದಾದಲ್ಲಿ ತಿಂಗಳಿಗೆ ನಿಮ್ಮ ಹೂಡಿಕೆ ರೂ. 6,000 ಆಗಲಿದೆ ಮತ್ತು ನೀವು ಅದನ್ನು ಪಿಪಿಎಫ್‌ನಲ್ಲಿ ಹೂಡಿಕೆ ಮಾಡುತ್ತಿರುವಿರಿ. ಈ ರೀತಿಯಾಗಿ, ನಿಮ್ಮ ಹೂಡಿಕೆಯು ವಾರ್ಷಿಕವಾಗಿ 72,000 ರೂಗೆ ತಲುಪಲಿದೆ. ನಿಮ್ಮ ಪಿಪಿಎಫ್ ಖಾತೆಯು 15 ವರ್ಷಗಳಲ್ಲಿ ಪಕ್ವವಾದಾಗ, ನೀವು 19,52,740 ಲಕ್ಷ ರೂ. ಪಡೆಯಬಹುದು.  PPF ಪ್ರಸ್ತುತ ವಾರ್ಷಿಕ ಬಡ್ಡಿ ದರ ಶೇ. 7.1 ರಷ್ಟಿದೆ ಮತ್ತು ಇದೆ ಬಡ್ಡಿದರ ಮ್ಯಾಚ್ಯೂರಿಟಿವರೆಗೆ ಮುಂದುವರೆದರೆ  20 ಲಕ್ಷ ಕಾರ್ಪಸ್ ಅನ್ನು ನೀವು ಸುಲಭವಾಗಿ ರಚಿಸಬಹುದು.  ಪಿಪಿಎಫ್‌ನಲ್ಲಿ  ವಾರ್ಷಿಕ ಆಧಾರದ ಮೇಲೆ ಕಂಪೌಂಡಿಂಗ್ ಮಾಡಲಾಗುತ್ತದೆ. ಪಿಪಿಎಫ್ ಖಾತೆಯಲ್ಲಿ ಸರ್ಕಾರವು ತ್ರೈಮಾಸಿಕದಲ್ಲಿ ಬಡ್ಡಿದರಗಳನ್ನು ಬದಲಾಯಿಸುತ್ತದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳುವುದು ಇಲ್ಲಿ ಮುಖ್ಯ.

PPF Account ಅವಧಿ 15 ವರ್ಷಗಳದ್ದಾಗಿರುತ್ತದೆ. ಆದರೆ ಖಾತೆದಾರರು 5-5 ವರ್ಷಗಳ ಬ್ಲಾಕ್‌ಗಳಲ್ಲಿ ವಿಸ್ತರಣೆಗಾಗಿ ಅರ್ಜಿ ಸಲ್ಲಿಸಬಹುದು. ಇದರಲ್ಲಿ, ಅವರು ಕೊಡುಗೆಯನ್ನು ಮುಂದುವರೆಸುವ ಹಾಗೂ ಮುಂದುವರಿಸದೆ ಇರುವ ಆಯ್ಕೆಯನ್ನು ಸಹ ಹೊಂದಿದ್ದಾರೆ. ಇದರ ಪ್ರಯೋಜನವೆಂದರೆ ದೀರ್ಘಾವಧಿಯಲ್ಲಿ, ನೀವು ದೊಡ್ಡ ನಿಧಿಯನ್ನು ಸಂಪಾದಿಸಬಹುದು.

ಇದನ್ನೂ ಓದಿ-Mutual Fund New Scheme: ಕಡಿಮೆ ವೆಚ್ಚ, ಉತ್ತಮ ಆದಾಯ, ಈ ಅವಕಾಶ ಜುಲೈ 12ರವರೆಗೆ ಮಾತ್ರ

EEE ಕ್ಯಾಟೆಗರಿಯಲ್ಲಿ ತೆರಿಗೆ ಉಳಿತಾಯದ ಲಾಭ
PPF ನಲ್ಲಿ(PPF Investment), ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ಪ್ರಯೋಜನಗಳು ಲಭ್ಯವಿದೆ. ಇದರಲ್ಲಿ ಹೂಡಿಕೆ ಮಾಡುವ ಮೂಲಕ ನೀವು ರೂ 1.5 ಲಕ್ಷದವರೆಗೆ ತೆರಿಗೆ ವಿನಾಯ್ತಿ ಕೂಡ ಪಡೆಯಬಹುದು.  PPF ನಲ್ಲಿ ಗಳಿಸಿದ ಬಡ್ಡಿ ಮತ್ತು ಮೆಚ್ಯೂರಿಟಿ ಮೊತ್ತ ಸಂಪೂರ್ಣ ತೆರಿಗೆ ಮುಕ್ತವಾಗಿರುತ್ತದೆ. ಈ ರೀತಿಯಾಗಿ, ಪಿಪಿಎಫ್‌ನಲ್ಲಿನ ಹೂಡಿಕೆ EEE ವರ್ಗಕ್ಕೆ  ಬರುತ್ತದೆ. ಪಿಪಿಎಫ್ ಖಾತೆಗೆ ಸಾಲ ಸೌಲಭ್ಯವೂ ಲಭ್ಯವಿದೆ. ಪಿಪಿಎಫ್ ಖಾತೆ ತೆರೆದ ವರ್ಷದ ಅಂತ್ಯದಿಂದ ಒಂದು ವರ್ಷ ಪೂರ್ಣಗೊಂಡ ನಂತರ ಮತ್ತು 5 ವರ್ಷ ಪೂರ್ಣಗೊಳ್ಳುವ ಮೊದಲು ಸಾಲಕ್ಕಾಗಿ ನೀವು ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ- Mutual Fund Investment: ಮ್ಯೂಚವಲ್ ಫಂಡ್ ಹೂಡಿಕೆಗೂ ಮುನ್ನ ಈ 5 ಸಂಗತಿಗಳು ನಿಮಗೆ ತಿಳಿದಿರಲಿ, ಲಾಭ ನಿಮ್ಮದಾಗಲಿದೆ

PPFನಲ್ಲಿನ ಹೂಡಿಕೆ ಸಂಪೂರ್ಣ ಸೇಫ್ ಆಗಿರಲಿದೆ
ಸರ್ಕಾರ ಸಣ್ಣ ಉಳಿತಾಯ ಯೋಜನೆಗಳನ್ನು ಪ್ರಾಯೋಜಿಸುತ್ತದೆ. ಆದ್ದರಿಂದ, ಚಂದಾದಾರರು ಇದರಲ್ಲಿ ಹೂಡಿಕೆಯ (Investment) ಮೇಲೆ ಸಾವೆರಿನ್  ರಕ್ಷಣೆ ಪಡೆಯುತ್ತಾರೆ. ಇದರಲ್ಲಿ, ಗಳಿಸಿದ ಬಡ್ಡಿಯ ಮೇಲೆ ಸಾರ್ವಭೌಮ ಗ್ಯಾರಂಟಿ ಇದ್ದು ಅದು ಬ್ಯಾಂಕ್  ಬಡ್ಡಿಗೆ ಹೋಲಿಸಿದರೆ ಹೆಚ್ಚು ಸುರಕ್ಷಿತವಾಗಿರುತ್ತದೆ. ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (DICGC) ನಿಂದ ಬ್ಯಾಂಕ್ ಠೇವಣಿಗಳ ಮೇಲೆ ಕೇವಲ 5 ಲಕ್ಷದವರೆಗೆ ಮಾತ್ರ ವಿಮಾ ರಕ್ಷಣೆ ಸಿಗುತ್ತದೆ.

ಇದನ್ನೂ ಓದಿ-Mutual Fund ಗಳಲ್ಲಿ ಮೊಟ್ಟಮೊದಲ ಬಾರಿಗೆ ಹೂಡಿಕೆ ಮಾಡಬೇಕೆ? ಉತ್ತಮ ರಿಟರ್ನ್ ಪಡೆಯಲು ಈ ಅಂಶಗಳನ್ನು ನೆನಪಿನಲ್ಲಿಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News