PPF, Sukanya Samridhi, NSC ಮೇಲಿನ ಬಡ್ಡಿಯಲ್ಲಿ ಕಡಿತ ; ಜುಲೈ ಒಂದರಿಂದ ಜಾರಿಯಾಗಲಿದೆ ಹೊಸದರ

ತಜ್ಞರ ಪ್ರಕಾರ, ಬೆಳವಣಿಗೆ ದರವನ್ನು ಹಳಿಗೆ ತರಲು ಹಣಕಾಸು ಮತ್ತು ವಿತ್ತೀಯ ಬೆಂಬಲ ಎರಡರ ಅಗತ್ಯವಿದೆ. ಸಣ್ಣ ಉಳಿತಾಯ ಯೋಜನೆಗಳ ಬಡ್ಡಿಯನ್ನು  ಕಡಿತಗೊಳಿಸಿದರೆ ಸರ್ಕಾರದ ಮೇಲೆ ಸಾಲದ ಹೊರೆ ಕಡಿಮೆಯಾಗಲಿದೆ.

Written by - Ranjitha R K | Last Updated : May 17, 2021, 10:19 AM IST
  • ಕಡಿಮೆಯಾಗಲಿದೆ ಸಣ್ಣ ಉಳಿತಾಯ ಯೋಜನೆಯ ಬಡ್ಡಿದರ
  • ಜೂನ್ 30 ರಂದು ಬಡ್ಡಿದರಗಳ ಬಗ್ಗೆ ಪರಿಶೀಲನೆ ನಡೆಯಲಿದೆ
  • ಬಡ್ಡಿ ಕಡಿಮೆಯಾದರೆ ಸಣ್ಣ ಉಳಿತಾದದಾರರಿಗೆ ಭಾರೀ ನಷ್ಟವಾಗಲಿದೆ
PPF, Sukanya Samridhi,  NSC ಮೇಲಿನ ಬಡ್ಡಿಯಲ್ಲಿ ಕಡಿತ ; ಜುಲೈ ಒಂದರಿಂದ ಜಾರಿಯಾಗಲಿದೆ ಹೊಸದರ  title=
ಕಡಿಮೆಯಾಗಲಿದೆ ಸಣ್ಣ ಉಳಿತಾಯ ಯೋಜನೆಯ ಬಡ್ಡಿದರ (file photo)

ನವದೆಹಲಿ : ಸಣ್ಣ ಉಳಿತಾಯ ಯೋಜನೆಗಳಾದ ಸುಕನ್ಯಾ ಸಮೃದ್ಧಿ (Sukanya Samridhi), ನ್ಯಾಷನಲ್ ಸೇವಿಂಗ್ ಸರ್ಟಿಫಿಕೇಟ್  (NSC) ಮತ್ತು ಪಿಪಿಎಫ್ ಮೇಲಿನ ಬಡ್ಡಿದರಗಳು ಜುಲೈಯಿಂದ ಕಡಿಮೆಯಾಗುವ ಸಾಧ್ಯತೆಗಳಿವೆ. ಕೆಲ ವರದಿಗಳ ಪ್ರಕಾರ, ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳನ್ನು (Interest rate)  ಕಡಿತಗೊಳಿಸುವ ಬಗ್ಗೆ ಕೇಂದ್ರ ಸರ್ಕಾರವು ನಿರ್ಧಾರ ತೆಗೆದುಕೊಳ್ಳಬಹುದು ಎಂದು ಹೇಳಲಾಗುತ್ತಿದೆ. ಒಂದು ವೇಳೆ ಹೀಗಾದಲ್ಲಿ ಜುಲೈ 1 ರಿಂದ, ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ ಕಡಿಮೆಯಾಗಲಿದೆ. 

ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ಕಡಿತಗೊಳಿಸಲು ತಯಾರಿ!
ತಜ್ಞರ ಪ್ರಕಾರ, ಬೆಳವಣಿಗೆ ದರವನ್ನು ಹಳಿಗೆ ತರಲು ಹಣಕಾಸು ಮತ್ತು ವಿತ್ತೀಯ ಬೆಂಬಲ ಎರಡರ ಅಗತ್ಯವಿದೆ. ಸಣ್ಣ ಉಳಿತಾಯ ಯೋಜನೆಗಳ (Small saving scheme)  ಬಡ್ಡಿಯನ್ನು  ಕಡಿತಗೊಳಿಸಿದರೆ ಸರ್ಕಾರದ ಮೇಲೆ ಸಾಲದ ಹೊರೆ ಕಡಿಮೆಯಾಗಲಿದೆ. ಇದು ಆರ್ಥಿಕತೆಗೆ ಬೆಂಬಲವನ್ನು ನೀಡುತ್ತದೆ. ರಿಸರ್ವ್ ಬ್ಯಾಂಕ್ ಮತ್ತು ಬ್ಯಾಂಕುಗಳು ಎರಡೂ ಬಡ್ಡಿದರಗಳನ್ನು (Interest rate) ಕಡಿತಗೊಳಿಸುವ ನಿರ್ಧಾರದ ಪರವಾಗಿದೆ ಎನ್ನಲಾಗಿದೆ. 

ಇದನ್ನೂ ಓದಿ : 'PF' ಖಾತೆಯ ಬ್ಯಾಲೆನ್ಸ್ 'Online' ನಲ್ಲಿ ಚೆಕ್ ಮಾಡುವುದು ಹೇಗೆ ಗೊತ್ತ? ಇಲ್ಲಿದೆ ನೋಡಿ

ಚುನಾವಣೆ ಮುಗಿಯುತ್ತಿದ್ದಂತೆ ಬಡ್ಡಿದರಗಳಲ್ಲಿ  ಕಡಿತ ಪ್ರಾರಂಭ : 
ಪ್ರಸ್ತುತ, ಹೆಚ್ಚಿನ ಸಣ್ಣ ಉಳಿತಾಯ ಯೋಜನೆಗಳಲ್ಲಿ  6.9% ಕ್ಕಿಂತ ಹೆಚ್ಚು ಬಡ್ಡಿ ಸಿಗುತ್ತಿದೆ.  ಆಗಸ್ಟ್ 2019 ರಿಂದ ಇಲ್ಲಿಯವರೆಗೆ ರಿಸರ್ವ್ ಬ್ಯಾಂಕ್ (RBI) ರೆಪೊ ದರವನ್ನು ಶೇಕಡಾ 1.75 ರಷ್ಟು ಕಡಿತಗೊಳಿಸಿದೆ. ಅಂದಿನಿಂದ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳನ್ನು 0.8-1% ರಷ್ಟು ಕಡಿತಗೊಳಿಸಲಾಗಿದೆ. ಅರ್ಥಶಾಸ್ತ್ರಜ್ಞರ ಪ್ರಕಾರ,  ವಿಧಾನಸಭಾ ಚುನಾವಣೆಗಳು (Assembly election) ಮುಗಿದಿರುವುದರಿಂದ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳನ್ನು ಕಡಿತಗೊಳಿಸುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ. 

ಜೂನ್ 30 ರಂದು ಬಡ್ಡಿದರಗಳ ಬಗ್ಗೆ ಪರಿಶೀಲನೆ ನಡೆಯಲಿದೆ :
5 ರಾಜ್ಯಗಳ ವಿಧಾನಸಭಾ ಚುನಾವಣೆಗೂ ಮುನ್ನ ಮಾರ್ಚ್ 31 ರಂದು ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳನ್ನು ಕಡಿತಗೊಳಿಸಲಾಗಿತ್ತು. ಆದರೆ, ಅದರ ಮರುದಿನವೇ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Seetharaman) , ತಪ್ಪಾಗಿದೆ  ಎಂದು ಹೇಳಿ ನಿರ್ಧಾರವನ್ನು ವಾಪಸ್ ಪಡೆದಿದ್ದರು. ಬಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿಯೇ ಈ ನಿರ್ಧಾರ ವಾಪಸ್ ಪಡೆಯಲಾಗಿತ್ತು ಎನ್ನಲಾಗಿದೆ. ಆದರೆ ಈಗ ಸರ್ಕಾರದ ಮುಂದೆ ಅಂಥ ಅನಿವಾರ್ಯಗಳೇನಿಲ್ಲ. ಪ್ರತೀ ಮೂರು ತಿಂಗಳಿಗೊಮ್ಮೆ ಸರ್ಕಾರ ಸಣ್ಣ ಉಳಿತಾಯ ಯೋಜನೆಯ ಬಡ್ಡಿ ನಿರ್ಧರಿಸುತ್ತದೆ. ಜೂನ್ 30ರಂದು ಈ ತ್ರೈಮಾಸಿಕದ ಪರಿಶೀಲನೆ ನಡೆಯಲಿದೆ. ಒಂದು ವೇಳೆ ಬಡ್ಡಿ ಕಡಿಮೆಯಾದರೆ ಸಣ್ಣ ಉಳಿತಾದದಾರರಿಗೆ ಭಾರೀ ನಷ್ಟವಾಗಲಿದೆ.  

ಇದನ್ನೂ ಓದಿ : NSC ಮೂಲಕ ಎಷ್ಟು ತೆರಿಗೆ ಉಳಿತಾಯ ಮಾಡಬಹುದು? ಉತ್ತಮ ಆದಾಯದ ಜೊತೆಗೆ ಹೂಡಿಕೆಯೂ ಸುರಕ್ಷಿತ

ಯಾವ ಯೋಜನೆಯಲ್ಲಿ ಎಷ್ಟು ಬಡ್ಡಿ : 
ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಪ್ರಸ್ತುತ 7.6% ಬಡ್ಡಿ ಸಿಗುತ್ತಿದೆ.  ಹಿರಿಯ ನಾಗರಿಕ ಉಳಿತಾಯ ಯೋಜನೆಯಲ್ಲಿ ಬಡ್ಡಿ 7.4%, ಪಬ್ಲಿಕ್ ಪ್ರಾವಿಡೆಂಟ್ ಫಂಡ್ ನಲ್ಲಿ (PPF) 7.1%, ಕಿಸಾನ್ ವಿಕಾಸ್ ಪತ್ರದಲ್ಲಿ 6.9%, ನ್ಯಾಷನಲ್ ಸೇವಿಂಗ್ ಸರ್ಟಿಫಿಕೇಟ್ (NSC) ಮೇಲೆ  6.8% ಮತ್ತು ಮಾಸಿಕ ಆದಾಯ ಖಾತೆಯಲ್ಲಿ 6.6% ಬಡ್ಡಿ ಸಿಗುತ್ತಿದೆ.  ಸಣ್ಣ ಯೋಜನೆಗಳ ಬಡ್ಡಿದರಗಳನ್ನು ಪ್ರತಿ ತ್ರೈಮಾಸಿಕದಲ್ಲಿ ಪರಿಶೀಲಿಸಲಾಗುತ್ತದೆ. ಈ ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕವನ್ನು ಜೂನ್‌ನಲ್ಲಿ ಪರಿಶೀಲಿಸಲಾಗುವುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News