ಪಿಪಿ ಎಫ್ ನಲ್ಲಿ ಹೂಡಿಕೆ ಮಾಡಿದವರಿಗೆ ಗುಡ್ ನ್ಯೂಸ್ !

Public Provident Fund Scheme:ಇನ್ನು ಮುಂದೆ ಪಿಪಿಎಫ್‌ನಲ್ಲಿ ಹಣವನ್ನು ಠೇವಣಿ ಮಾಡಲು ಶಾಖೆಗೆಯೇ  ಹೋಗಬೇಕಾಗಿಲ್ಲ. ನೀವು ಕುಳಿತಲ್ಲಿಂದಲೇ ಹಣವನ್ನು ಆನ್‌ಲೈನ್‌ನಲ್ಲಿ ವರ್ಗಾಯಿಸಬಹುದು ಎಂದು ಬ್ಯಾಂಕ್ ಹೇಳಿದೆ.

Written by - Ranjitha R K | Last Updated : Aug 7, 2023, 03:23 PM IST
  • ಕೇಂದ್ರ ಸರ್ಕಾರವು ಜನ ಸಾಮಾನ್ಯರಿಗಾಗಿ ಅನೇಕ ಯೋಜನೆಗಳನ್ನು ನಡೆಸುತ್ತಿದೆ.
  • ಪಿಪಿಎಫ್ ನಲ್ಲಿ ಹೂಡಿಕೆ ಮಾಡುವವರಿಗೆ ವಿಶೇಷ ಉಡುಗೊರೆ
  • ಟ್ವೀಟ್ ಮೂಲಕ ಮಾಹಿತಿ ನೀಡಿದ ಬ್ಯಾಂಕ್
ಪಿಪಿ ಎಫ್ ನಲ್ಲಿ ಹೂಡಿಕೆ ಮಾಡಿದವರಿಗೆ ಗುಡ್ ನ್ಯೂಸ್ !   title=

Public Provident Fund Scheme : ಕೇಂದ್ರ ಸರ್ಕಾರವು ಜನ ಸಾಮಾನ್ಯರಿಗಾಗಿ ಅನೇಕ ಯೋಜನೆಗಳನ್ನು ನಡೆಸುತ್ತಿದೆ. ಇದೀಗ ದೇಶದ ಸರ್ಕಾರಿ ಬ್ಯಾಂಕ್ PNB ಗ್ರಾಹಕರಿಗಾಗಿ ವಿಶೇಷ ಸೌಲಭ್ಯವನ್ನು ತಂದಿದ್ದು, ಇದರಲ್ಲಿ ಹೆಚ್ಚಿನ ಪ್ರಯೋಜನಗಳನ್ನು ಪಡೆಯಲಿದ್ದೀರಿ. ಪಬ್ಲಿಕ್ ಪ್ರಾವಿಡೆಂಟ್ ಫಂಡ್ ನಲ್ಲಿ ಹಣ ಹೂಡಿಕೆ ಮಾಡುವವರಿಗೆ ಈ ಮೂಲಕ ವಿಶೇಷ ಉಡುಗೊರೆ ಸಿಗುತ್ತಿದೆ. ಈ ಬಗ್ಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದೆ. 

ಪಂಜಾಬ್ ನ್ಯಾಷನಲ್ ಬ್ಯಾಂಕ್ ತನ್ನ ಅಧಿಕೃತ ಟ್ವೀಟ್‌ನಲ್ಲಿ ಈ ಮಾಹಿತಿ ನೀಡಿದೆ. ಈಗ ಉಳಿತಾಯ ಮತ್ತು ತೆರಿಗೆ ಉಳಿತಾಯ ಎರಡೂ ಸಾಧ್ಯ ಎಂದು ತನ್ನ ಟ್ವೀಟ್ ನಲ್ಲಿ ಹೇಳಿದೆ. ಇನ್ನು ಮುಂದೆ ಪಿಪಿಎಫ್‌ನಲ್ಲಿ ಹಣವನ್ನು ಠೇವಣಿ ಮಾಡಲು ಶಾಖೆಗೆಯೇ  ಹೋಗಬೇಕಾಗಿಲ್ಲ. ನೀವು ಕುಳಿತಲ್ಲಿಂದಲೇ ಹಣವನ್ನು ಆನ್‌ಲೈನ್‌ನಲ್ಲಿ ವರ್ಗಾಯಿಸಬಹುದು ಎಂದು ಬ್ಯಾಂಕ್ ಹೇಳಿದೆ.

ಇದನ್ನೂ ಓದಿ ವೇತನ ಹೆಚ್ಚಳದ ಸಂತಸದಲ್ಲಿದ್ದ ಸರ್ಕಾರಿ ನೌಕರರಿಗೆ ಶಾಕ್ ! ಸ್ಯಾಲರಿ ಹೆಚ್ಚಳ ಬಗ್ಗೆ ಸರ್ಕಾರದ ನಿರ್ಧಾರ ಇದು

500 ರೂಪಾಯಿಯಿಂದ ಹೂಡಿಕೆ ಆರಂಭಿಸಿ : 
ಸಾರ್ವಜನಿಕ ಭವಿಷ್ಯ ನಿಧಿ ಯೋಜನೆಯಲ್ಲಿ ಕನಿಷ್ಠ  500 ರೂಪಾಯಿಯೊಂದಿಗೆ ಹೂಡಿಕೆಯನ್ನು ಪ್ರಾರಂಭಿಸಬಹುದು. ಹತ್ತಿರದ ಅಂಚೆ ಕಚೇರಿ ಅಥವಾ ಬ್ಯಾಂಕ್‌ ಮೂಲಕ ಪಿಪಿಎಫ್ ಖಾತೆಯನ್ನು ತೆರೆಯಬಹುದು. ಜನವರಿ 1, 2023 ರಿಂದ, ಸರ್ಕಾರವು ಈ ಯೋಜನೆಯಲ್ಲಿ ಶೇಕಡಾ 7.1 ರ ದರದಲ್ಲಿ ಬಡ್ಡಿ ನೀಡುತ್ತಿದೆ.  

ನಿಮ್ಮ ಹೂಡಿಕೆಯನ್ನು 5-5 ವರ್ಷಗಳವರೆಗೆ ಹೆಚ್ಚಿಸಬಹುದು. ಈ ಯೋಜನೆಯಲ್ಲಿ, ಖಾತೆದಾರರು ಹೂಡಿಕೆಯನ್ನು 5-5 ವರ್ಷಗಳ ಬ್ಲಾಕ್‌ನಲ್ಲಿ ಹೆಚ್ಚಿಸಲು ಅರ್ಜಿ ಸಲ್ಲಿಸಬಹುದು. ಇದರಲ್ಲಿ,  ಹೂಡಿಕೆಯನ್ನು ಮುಂದುವರಿಸುವ ಅಥವಾ ಮುಂದುವರಿಸದಿರುವ ಆಯ್ಕೆ ಇದೆ. 

ಇದನ್ನೂ ಓದಿ : ನೌಕರಿಯಿಂದ ಬೇಸತ್ತು ಹೋಗಿದ್ದೀರಾ? ಇಂದೇ ಕಪ್ಪು ಅರಿಶಿನದ ಬಿಸ್ನೆಸ್ ಆರಂಭಿಸಿ ಕೈತುಂಬಾ ಸಂಪಾದಿಸಿ!

ಪಿಪಿಎಫ್ ಯೋಜನೆಯಲ್ಲಿ ತೆರಿಗೆ ವಿನಾಯಿತಿಯ ಲಾಭ : 
ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ತೆರಿಗೆ ವಿನಾಯಿತಿಯ ಲಾಭವನ್ನು ಪಡೆಯಬಹುದು. ಈ ಯೋಜನೆಯಲ್ಲಿ, ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿಯ ಲಾಭವನ್ನು ಪಡೆಯಬಹುದು. ಈ ಯೋಜನೆಯಲ್ಲಿ ಬಡ್ಡಿಯ ಮೂಲಕ ಗಳಿಸಿದ ಮೊತ್ತವು ತೆರಿಗೆ ಮುಕ್ತವಾಗಿದೆ. ಈ ಯೋಜನೆಯಲ್ಲಿ 5 ವರ್ಷಗಳು ಪೂರ್ಣಗೊಂಡ ನಂತರ, ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು. 

ಅಧಿಕೃತ ಲಿಂಕ್‌ಗೆ ಭೇಟಿ ನೀಡಿ :
PPF ಯೋಜನೆಯ ಕುರಿತು ಹೆಚ್ಚಿನ ಮಾಹಿತಿಗಾಗಿ, ನೀವು ಅಧಿಕೃತ ಲಿಂಕ್ https://www.pnbindia.in/public-provident-fund.html ಗೆ ಭೇಟಿ ನೀಡಬಹುದು . ಇಲ್ಲಿ ನೀವು ಪಿಪಿಎಫ್ ಯೋಜನೆಯ ಬಗ್ಗೆ ಎಲ್ಲಾ ಮಾಹಿತಿಯನ್ನು ಪಡೆಯಬಹುದು.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News