ಬುಕ್ ಮಾಡಿದ ತಕ್ಷಣ ಸಿಗುವುದು ಕಂಫರ್ಮ್ ಟ್ರೈನ್ ಟಿಕೆಟ್ ! ಮುಂದಿನ 5 ವರ್ಷಗಳಿಗೆ ಸಿದ್ದವಾಗಿದೆ ಮೆಗಾ ಯೋಜನೆ

ರೈಲು  ಪ್ರಯಾಣಿಕರ ಸಾಮರ್ಥ್ಯವನ್ನು 800 ಕೋಟಿಗಳಿಂದ 1000 ಕೋಟಿಗಳಿಗೆ ಹೆಚ್ಚಿಸಲು ಭಾರತ ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ಮುಂದಿನ 5 ವರ್ಷಗಳಲ್ಲಿ 3 ಸಾವಿರ ಹೊಸ ರೈಲುಗಳನ್ನು ಆರಂಭಿಸುವ ಯೋಜನೆಗೆ ಚಾಲನೆ ನೀಡಲಾಗಿದೆ. 

Written by - Ranjitha R K | Last Updated : Nov 17, 2023, 03:09 PM IST
  • ದೇಶದಲ್ಲಿ ರೈಲು ಪ್ರಯಾಣಿಕರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ.
  • ಮುಂದಿನ 5 ವರ್ಷಗಳಲ್ಲಿ ದೇಶದಲ್ಲಿ 3 ಸಾವಿರ ಹೊಸ ರೈಲು
  • ಪ್ರಯಾಣಿಕರ ಸಾಮರ್ಥ್ಯ 800 ಕೋಟಿಗಳಿಂದ 1000 ಕೋಟಿಗೆ ಹೆಚ್ಚಳ
ಬುಕ್ ಮಾಡಿದ ತಕ್ಷಣ ಸಿಗುವುದು ಕಂಫರ್ಮ್ ಟ್ರೈನ್ ಟಿಕೆಟ್ !  ಮುಂದಿನ 5 ವರ್ಷಗಳಿಗೆ ಸಿದ್ದವಾಗಿದೆ ಮೆಗಾ ಯೋಜನೆ title=

ಬೆಂಗಳೂರು : ದೇಶದಲ್ಲಿ ರೈಲು ಪ್ರಯಾಣಿಕರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ದೂರದ ಪ್ರಯಾಣಕ್ಕೆ ಬಹುತೇಕರು ರೈಲು ಪ್ರಯಾಣವನ್ನೇ ನೆಚ್ಚಿಕೊಳ್ಳುತ್ತಾರೆ.  ರೈಲುಗಳಲ್ಲಿ ಜನಸಂದಣಿ ಕಡಿಮೆ ಮಾಡುವ ನಿಟ್ಟಿನಲ್ಲಿ ಸರ್ಕಾರ ದೊಡ್ಡ ಯೋಜನೆ ಸಿದ್ಧಪಡಿಸಿದೆ. ಈ ಯೋಜನೆಯಡಿ ಮುಂದಿನ 5 ವರ್ಷಗಳಲ್ಲಿ ದೇಶದಲ್ಲಿ 3 ಸಾವಿರ ಹೊಸ ರೈಲುಗಳನ್ನು ಆರಂಭಿಸುವ ಕೆಲಸ ನಡೆಯುತ್ತಿದೆ.

ರೈಲ್ವೇಯ ಪ್ರಸ್ತುತ ಪ್ರಯಾಣಿಕರ ಸಾಮರ್ಥ್ಯವನ್ನು 800 ಕೋಟಿಗಳಿಂದ 1000 ಕೋಟಿಗಳಿಗೆ ಹೆಚ್ಚಿಸಲು ಭಾರತ ಸರ್ಕಾರ  ನಿರ್ಧರಿಸಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಇದಕ್ಕಾಗಿ ಮುಂದಿನ 5 ವರ್ಷಗಳಲ್ಲಿ 3 ಸಾವಿರ ಹೊಸ ರೈಲುಗಳನ್ನು ಆರಂಭಿಸುವ ಯೋಜನೆಗೆ ಚಾಲನೆ ನೀಡಲಾಗಿದೆ.

ಇದನ್ನೂ ಓದಿ :  ಸರ್ಕಾರದ ಉಚಿತ ಪಡಿತರ ಯೋಜನೆ ಮುಂದಿನ ಐದು ವರ್ಷದವರೆಗೆ ವಿಸ್ತರಣೆ

ಹೆಚ್ಚುತ್ತಿದೆ ದೇಶದ ಜನಸಂಖ್ಯೆ :
ರೈಲು ಪ್ರಯಾಣದ ಸಮಯವನ್ನು ಕಡಿಮೆ ಮಾಡುವುದು ಸಚಿವಾಲಯದ ಮತ್ತೊಂದು ಪ್ರಮುಖ ಗುರಿಯಾಗಿದೆ ಎಂದು ವೈಷ್ಣವ್ ಹೇಳಿದ್ದಾರೆ. ದೆಹಲಿಯ ರೈಲು ಭವನದಲ್ಲಿ ಮಾತನಾಡಿದ ರೈಲ್ವೆ ಸಚಿವರು, 'ಸದ್ಯ ಪ್ರತಿ ವರ್ಷ ಸುಮಾರು 800 ಕೋಟಿ ಪ್ರಯಾಣಿಕರು ರೈಲಿನಲ್ಲಿ ಪ್ರಯಾಣಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.  

ದೇಶದ ಜನಸಂಖ್ಯೆ ಹೆಚ್ಚುತ್ತಿರುವ ಕಾರಣ ಮುಂದಿನ 4-5 ವರ್ಷಗಳಲ್ಲಿ  ಪ್ರಯಾಣಿಕರ ಸಾಮರ್ಥ್ಯವನ್ನು ಒಂದು ಸಾವಿರ ಕೋಟಿಗೆ ಹೆಚ್ಚಿಸಬೇಕಾಗಿದೆ. ಇದಕ್ಕಾಗಿ, 3 ಸಾವಿರ ಹೆಚ್ಚುವರಿ ರೈಲುಗಳ ಅಗತ್ಯವಿದೆ ಎಂದಿದ್ದಾರೆ. 

ಇದನ್ನೂ ಓದಿ :  Arecanut today price: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತೆ ಕುಸಿತ!

ಪ್ರಸ್ತುತ 69 ಸಾವಿರ ಹೊಸ ಕೋಚ್‌ಗಳು : 
ರೈಲ್ವೆ ಮೂಲಗಳ ಪ್ರಕಾರ, ಇಲಾಖೆಯು ಪ್ರಸ್ತುತ 69 ಸಾವಿರ ಹೊಸ ಕೋಚ್‌ಗಳನ್ನು ಹೊಂದಿದ್ದು, ಪ್ರತಿ ವರ್ಷ ರೈಲ್ವೇ ಸುಮಾರು ಐದು ಸಾವಿರ ಹೊಸ ಬೋಗಿಗಳನ್ನು ತಯಾರಿಸುತ್ತಿದೆ. ಈ ಎಲ್ಲಾ ಪ್ರಯತ್ನಗಳಿಂದ, ರೈಲ್ವೆಯು ಪ್ರತಿ ವರ್ಷ 200 ರಿಂದ 250 ಹೊಸ ರೈಲುಗಳನ್ನು ತರಬಹುದು. 

ಮುಂದಿನ ವರ್ಷಗಳಲ್ಲಿ ಈ ರೈಲುಗಳು ರೈಲ್ವೆಗೆ ಸೇರಲಿವೆ. ಪ್ರಯಾಣದ ಸಮಯವನ್ನು ಕಡಿತಗೊಳಿಸುವುದು ರೈಲ್ವೆಯ ಮತ್ತೊಂದು ಗುರಿಯಾಗಿದೆ ಎಂದು ವೈಷ್ಣವ್ ಹೇಳಿದ್ದಾರೆ. ಇದಕ್ಕಾಗಿ ಸಚಿವಾಲಯವು ರೈಲುಗಳ ವೇಗವನ್ನು ಸುಧಾರಿಸಲು ಮತ್ತು ರೈಲು ನೆಟ್ವರ್ಕ್ ವಿಸ್ತರಿಸುವ ಕೆಲಸ ಮಾಡುತ್ತಿದೆ.
ರೈಲ್ವೆಯ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲು, ಪ್ರತಿ ವರ್ಷ ಸುಮಾರು ಐದು ಸಾವಿರ ಕಿಲೋಮೀಟರ್ ಹಳಿಗಳನ್ನು ನಿರ್ಮಿಸಲಾಗುತ್ತಿದೆ. 

ಇದನ್ನೂ ಓದಿ :  ಎಸ್ಬಿಐ ಈ ಯೋಜನೆಯ ಮೂಲಕ 1 ಲಕ್ಷ ರೂ.ಗಳನ್ನು ಈ ರೀತಿಯಾಗಿ 2 ಲಕ್ಷಗಳಿಗೆ ಪರಿವರ್ತಿಸಿ!

ಇನ್ನು, ಒಂದು ಸಾವಿರಕ್ಕೂ ಹೆಚ್ಚು ಫ್ಲೈಓವರ್‌ಗಳು ಮತ್ತು ಕೆಳಸೇತುವೆಗಳಿಗೆ ಅನುಮೋದನೆ ನೀಡಲಾಗಿದ್ದು, ಹಲವೆಡೆ ಕಾಮಗಾರಿ ಆರಂಭಿಸಲಾಗಿದೆ. ಕಳೆದ ವರ್ಷ, 1,002 ಮೇಲ್ಸೇತುವೆ ಮತ್ತು ಕೆಳಸೇತುವೆಗಳನ್ನು ನಿರ್ಮಿಸಿದ್ದೇವೆ ಮತ್ತು ಈ ವರ್ಷ ಈ ಸಂಖ್ಯೆಯನ್ನು 1,200 ಕ್ಕೆ ಹೆಚ್ಚಿಸುವ ಗುರಿಯನ್ನು  ಹೊಂದಿರುವುದಾಗಿ ಹೇಳಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News