ಇಪಿಎಫ್ ಖಾತೆ ಯುಎಎನ್ ಪಾಸ್‌ವರ್ಡ್ ಮರೆತಿದ್ದೀರಾ? ಈ ರೀತಿ ಸುಲಭವಾಗಿ ಮರುಹೊಂದಿಸಿ!

UAN Password: ಪಿ‌ಎಫ್ ಖಾತೆಯನ್ನು ನಿರ್ವಹಿಸಲು ಸಾರ್ವತ್ರಿಕ ಖಾತೆ ಸಂಖ್ಯೆ ಎಂದರೆ ಯುಎಎನ್ ಹೊಂದಿರುವುದು ತುಂಬಾ ಮುಖ್ಯ. ಆದರೆ, ನಿವೇನಾದರೂ ಯುಎಎನ್ ಸಂಖ್ಯೆಯ ಪಾಸ್‌ವರ್ಡ್ ಮರೆತಿದ್ದರೆ ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. 

Written by - Yashaswini V | Last Updated : Apr 23, 2024, 10:54 AM IST
  • ಪಿಎಫ್ ಖಾತೆಯನ್ನು ನಿರ್ವಹಿಸಲು ಯುನಿವರ್ಸಲ್ ಖಾತೆ ಸಂಖ್ಯೆ ಅಥವಾ ಯುಎಎನ್ ಅತ್ಯಂತ ಪ್ರಮುಖ ಮಾಹಿತಿಯಾಗಿದೆ.
  • ಯುಎಎನ್ ಖಾತೆಯನ್ನು ನಿರ್ವಹಿಸಲು ಪಾಸ್‌ವರ್ಡ್ ಕೊಡೋಯ ಅಗತ್ಯ.
  • ಆದಾಗ್ಯೂ, ನೀವು ಈ ಯುಎಎನ್ ಖಾತೆಯ ಪಾಸ್‌ವರ್ಡ್ ಮರೆತಿದ್ದರೆ ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ.
ಇಪಿಎಫ್ ಖಾತೆ ಯುಎಎನ್ ಪಾಸ್‌ವರ್ಡ್ ಮರೆತಿದ್ದೀರಾ? ಈ ರೀತಿ ಸುಲಭವಾಗಿ ಮರುಹೊಂದಿಸಿ!  title=

EPF Account UAN Password: ನೌಕರರ ಭವಿಷ್ಯ ನಿಧಿ ಅಥವಾ ಇಪಿಎಫ್ ಖಾತೆಯನ್ನು ನಿರ್ವಹಿಸಲು ಯುನಿವರ್ಸಲ್ ಖಾತೆ ಸಂಖ್ಯೆ ಅಥವಾ ಯುಎಎನ್   ಅತ್ಯಂತ ಪ್ರಮುಖ ಮಾಹಿತಿಯಾಗಿದೆ. ಯುಎಎನ್ ಖಾತೆಯನ್ನು ನಿರ್ವಹಿಸಲು ಪಾಸ್‌ವರ್ಡ್ ಕೊಡೋಯ ಅಗತ್ಯ. ಆದಾಗ್ಯೂ, ನೀವು ಈ ಯುಎಎನ್ ಖಾತೆಯ ಪಾಸ್‌ವರ್ಡ್ ಮರೆತಿದ್ದರೆ ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಕೆಲವೇ ಕೆಲವು ಸುಲಭ ಹಂತಗಳನ್ನು ಅನುಸರಿಸಿ ಈ ಕೆಲಸವನ್ನು ಸುಲಭವಾಗಿ ಪೂರ್ಣಗೊಳಿಸಬಹುದು. 

ಯುಎಎನ್ ಪಾಸ್‌ವರ್ಡ್ ಮರು ಹೊಂದಿಸಲು ಇಲ್ಲಿದೆ ಹಂತ-ಹಂತದ ಪ್ರಕ್ರಿಯೆ!
ಹಂತ 1:- ಇಪಿಎಫ್  ವೆಬ್‌ಸೈಟ್‌ಗೆ ಭೇಟಿ ನೀಡಿ

ನೀವು ನಿಮ್ಮ ಯುಎಎನ್ ಪಾಸ್‌ವರ್ಡ್ ಮರುಹೊಂದಿಸಲು (Retrieve UAN Password) ಮೊದಲಿಗೆ ಯುಎಎನ್   ಪೋರ್ಟಲ್‌ಗೆ unifiedportal-mem.epfindia.gov.in. ಭೇಟಿ ನೀಡಬೇಕು.

ಹಂತ 2: - ಪಾಸ್‌ವರ್ಡ್ ಮರೆತುಹೋಗಿದೆ ಆಯ್ಕೆಯನ್ನು ಆರಿಸಿ 
ಪೋರ್ಟಲ್‌ನಲ್ಲಿ ಪಾಸ್‌ವರ್ಡ್ ಮರೆತು ಹೋಗಿದೆ (Forgot Password) ಎಂಬ ಆಯ್ಕೆಯನ್ನು ಆರಿಸಿ. 

ಹಂತ 3:- ಯುಎಎನ್ ಮತ್ತು ಕ್ಯಾಪ್ಚಾ ನಮೂದಿಸಿ 
ನಂತರ ನಿಗದಿತ ಬಾಕ್ಸ್ ನಲ್ಲಿ ಯುಎಎನ್ (UAN) ನಮೂದಿಸಿ ಸ್ಕ್ರೀನ್ ಮೇಲೆ ಕಾಣಿಸುವ ಕ್ಯಾಪ್ಚಾವನ್ನು ನಮೂದಿಸಿ. 

ಇದನ್ನೂ ಓದಿ- Bank Scheme: ಎಚ್‌ಡಿ‌ಎಫ್‌ಸಿ ಬ್ಯಾಂಕ್‌ನ ವಿಶೇಷ ಯೋಜನೆ, ಸಿಗುತ್ತೆ ಬಂಪರ್ ಲಾಭ

ಹಂತ 4:- ಓ‌ಟಿ‌ಪಿ ಪರಿಶೀಲನೆ 
ಯುಎಎನ್ ಕ್ಯಾಪ್ಚಾವನ್ನು ನಮೂದಿಸಿಸ ನಂತರ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ ಓ‌ಟಿ‌ಪಿ (ಒನ್ ಟೈಮ್ ಪಾಸ್‌ವರ್ಡ್) ಅನ್ನು ಪೋರ್ಟಲ್‌ನಲ್ಲಿ ನಮೂದಿಸಿ. 

ಹಂತ 5:- ಪಾಸ್‌ವರ್ಡ್ ಮರುಹೊಂದಿಸಿ 
ಓಟಿಪಿ ನಮೂದಿಸಿದ ಬಳಿಕ ಪಾಸ್‌ವರ್ಡ್ ಮರುಹೊಂದಿಸಲು ಕೇಳಲಾಗುತ್ತದೆ. ನಿಗದಿತ ಮಾನದಂಡಗಳನ್ನು ಪೂರೈಸುವ ಬಲವಾದ ಪಾಸ್‌ವರ್ಡ್ ನಮೂದಿಸಿ. 

ಇದನ್ನೂ ಓದಿ- ನಿಮ್ಮ ಬಳಿ ಇದೊಂದಿದ್ದರೆ ಸಾಕು, ವೋಟರ್ ಐಡಿ ಇಲ್ಲದೆಯೂ ಮತ ಚಲಾಯಿಸಬಹುದು !

ಹಂತ 6:- ಹೊಸ ಪಾಸ್‌ವರ್ಡ್‌ನೊಂದಿಗೆ ಲಾಗಿನ್ ಇನ್ ಆಗಿ 
ನೀವು ಹೊಸ ಪಾಸ್‌ವರ್ಡ್ ಅನ್ನು ಮರುಹೊಂದಿಸಿದ ಬಳಿಕ ಪೇಜ್ ರಿಫ್ರೇಶ್ ಮಾಡಿ, ಹೊಸ ಪಾಸ್‌ವರ್ಡ್‌ನೊಂದಿಗೆ ಲಾಗಿನ್ ಇನ್ ಮಾಡಿ. ಸುರಕ್ಷತೆ ದೃಷ್ಟಿಯಿಂದ ನಿಮ್ಮ ಈ ಪಾಸ್‌ವರ್ಡ್ ಅನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News