Budget 2022: ತೆರಿಗೆ ಪಾವತಿದಾರರಿಗೊಂದು ಸಂತಸದ ಸುದ್ದಿ, 8 ವರ್ಷಗಳ ಬಳಿಕ ಸಿಗಲಿದೆ ಈ ಲಾಭ!

Budget 2022: ಈ ಬಾರಿಯ ಬಜೆಟ್‌ನಿಂದ ತೆರಿಗೆದಾರರು ಹೆಚ್ಚಿನ ನಿರೀಕ್ಷೆಯನ್ನು ಹೊಂದಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ತೆರಿಗೆ ವಿನಾಯಿತಿಯ ವ್ಯಾಪ್ತಿ ಹೆಚ್ಚಿಸಲಾಗಿಲ್ಲ. ಹೀಗಾಗಿ ತೆರಿಗೆ ಪಾವತಿದಾರರು ಈ ಬಾರಿಯ ಬಜೆಟ್‌ನಲ್ಲಿ ಹಲವು ರೀತಿಯ ರಿಯಾಯಿತಿಗಳನ್ನು ಕಾಣಬಹುದು. ಈ ಬಜೆಟ್‌ನಿಂದ ತೆರಿಗೆದಾರರ ನಿರೀಕ್ಷೆಗಳೇನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ, 

Written by - Nitin Tabib | Last Updated : Jan 23, 2022, 06:33 PM IST
  • ತೆರಿಗೆ ಪಾವತಿದಾರರಿಗೆ ಸಂತಸದ ಸುದ್ದಿ ಸಿಗುವ ಸಾಧ್ಯತೆ ಇದೆ.
  • FD ಹೂಡಿಕೆಯನ್ನು ತೆರಿಗೆ ವ್ಯಾಪ್ತಿಯಿಂದ ಹೊರಗಿಡುವ ಬೇಡಿಕೆ
  • 80C ವ್ಯಾಪ್ತಿಯ ವಿಸ್ತರಣೆಯ ನಿರೀಕ್ಷೆ.
Budget 2022: ತೆರಿಗೆ ಪಾವತಿದಾರರಿಗೊಂದು ಸಂತಸದ ಸುದ್ದಿ, 8 ವರ್ಷಗಳ ಬಳಿಕ ಸಿಗಲಿದೆ ಈ ಲಾಭ! title=
Budget 2022 (File Photo)

ನವದೆಹಲಿ: Budget 2022 - ಸಾಮಾನ್ಯ ಜನರು ಈ ಬಾರಿಯ ಬಜೆಟ್‌ನಿಂದ (Union Budget 2022) ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದ್ದಾರೆ. ವಾಸ್ತವವಾಗಿ, ಆರ್ಥಿಕತೆ ಮತ್ತು ಕೊರೊನಾ ವಿನಾಶದಿಂದ ಏರುತ್ತಿರುವ ಹಣದುಬ್ಬರದಿಂದಾಗಿ, ಈ ಬಾರಿಯ ಬಜೆಟ್‌ನಲ್ಲಿ ಸರ್ಕಾರವು ತಮಗೆ ಪರಿಹಾರವನ್ನು ನೀಡುತ್ತದೆ ಎಂಬ ಭರವಸೆಯಲ್ಲಿ ಜನರು ಇದ್ದಾರೆ. ಈ ಹಿನ್ನೆಲೆ ಸರ್ಕಾರ ಆರ್ಥಿಕತೆಗೆ ಬೆಳವಣಿಗೆಯ ಉತ್ತೇಜನವನ್ನು ನೀಡುವುದಲ್ಲದೆ, ಬಜೆಟ್‌ನಲ್ಲಿ ತೆರಿಗೆದಾರರಿಗೆ ದೊಡ್ಡ ಪರಿಹಾರ ಒದಗಿಸುವ  ಸಾಧ್ಯತೆಯಿದೆ. ವಾಸ್ತವದಲ್ಲಿ ಕಳೆದ ಹಲವು ವರ್ಷಗಳಿಂದ ತೆರಿಗೆದಾರರಿಗೆ ಇಂತಹ ಯಾವುದೇ ಘೋಷಣೆ ಮಾಡಲಾಗಿಲ್ಲ, ಹೀಗಿರುವಾಗ ಈ ಬಾರಿ ಸರಕಾರ ತೆರಿಗೆ ವಿನಾಯಿತಿ ಉಡುಗೊರೆ ನೀಡಿ ಸಂತಸ ನೀಡಬಹುದೆಂಬ ನಿರೀಕ್ಷೆ ಇದೆ.

ಸರ್ಕಾರ ಸಂತಸದ ಸುದ್ದಿ ಪ್ರಕಟಿಸಬಹುದು
3 ವರ್ಷಗಳ ನಿಶ್ಚಿತ ಠೇವಣಿಯನ್ನು ತೆರಿಗೆ ವಿನಾಯಿತಿ ಮಿತಿಗೆ ತರಬೇಕು ಎಂದು ಭಾರತೀಯ ಬ್ಯಾಂಕ್‌ಗಳ ಸಂಘ (IBA) ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿದೆ. ಸರ್ಕಾರದಿಂದ ಅನುಮೋದನೆ ದೊರೆತರೆ ಖಂಡಿತಾ ದೊಡ್ಡ ಪರಿಹಾರ ಸಿಗಲಿದೆ. ತೆರಿಗೆದಾರರನ್ನು ಸಂತೋಷಪಡಿಸಲು ಸರ್ಕಾರವು ಯಾವ ಕ್ರಮಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಎಫ್‌ಡಿ ತೆರಿಗೆ ಮುಕ್ತಗೊಳಿಸಲು ಆಗ್ರಹ
ತೆರಿಗೆ ಮುಕ್ತ ಸ್ಥಿರ ಠೇವಣಿಗಳ ಲಾಕ್-ಇನ್ ಅವಧಿಯನ್ನು ಕಡಿಮೆ ಮಾಡಬೇಕು ಎಂದು ಭಾರತೀಯ ಬ್ಯಾಂಕ್‌ಗಳ ಸಂಘ (IBA) ಒತ್ತಾಯಿಸಿದೆ. ಪ್ರಸ್ತುತ, 5 ವರ್ಷಗಳ FD (Fixed Deposit) ಮೇಲೆ ತೆರಿಗೆ ವಿನಾಯಿತಿ ಲಭ್ಯವಿದೆ. ಆದರೆ, ಅದನ್ನು 3 ವರ್ಷಕ್ಕೆ ಇಳಿಸಬೇಕೆಂಬ ಬೇಡಿಕೆ ಇದೆ. ಅಸೋಸಿಯೇಷನ್ ​​ಪ್ರಕಾರ, 3 ವರ್ಷಗಳ ಎಫ್‌ಡಿಯನ್ನು ತೆರಿಗೆ ವಿನಾಯಿತಿ ಅಡಿಯಲ್ಲಿ ತರುವ ಮೂಲಕ, ತೆರಿಗೆದಾರರು (Tax Saving) ಇತರ ಉತ್ಪನ್ನಗಳ ಆಯ್ಕೆಯನ್ನು ಸಹ ಪಡೆಯುತ್ತಾರೆ. ಈ ಸಮಯದಲ್ಲಿ ಜನರು ಕಡಿಮೆ ಬಡ್ಡಿದರಗಳ ಕಾರಣದಿಂದಾಗಿ ಎಫ್‌ಡಿ ಬದಲಿಗೆ ಪಿಪಿಎಫ್ ಅಥವಾ ಸುಕನ್ಯಾದಂತಹ ಇತರ ಉತ್ಪನ್ನಗಳಲ್ಲಿ ಹೆಚ್ಚು ಹೂಡಿಕೆ ಮಾಡುತ್ತಿದ್ದಾರೆ. ಇದಲ್ಲದೆ  ಮ್ಯೂಚುಯಲ್ ಫಂಡ್ಗಳು ಅಪಾಯದ ಅಂಶಗಳೊಂದಿಗೆ ಹೂಡಿಕೆದಾರರಿಗೆ ಉತ್ತಮ ಆಯ್ಕೆಗಳಾಗಿವೆ.

ಇದನ್ನೂ ಓದಿ-Post Office ನಿಯಮಗಳಲ್ಲಿ ಬದಲಾವಣೆ, ಇನ್ಮುಂದೆ ಕೇವಲ ಪಾಸ್ಬುಕ್ ನಿಂದ ನೀವು ಈ ಕೆಲಸ ಮಾಡಲು ಸಾಧ್ಯವಿಲ್ಲ

80 ಸಿ ವ್ಯಾಪ್ತಿ ವಿಸ್ತರಣೆಯಾಗುವ ನಿರೀಕ್ಷೆಯಿದೆ
ಪ್ರಸ್ತುತ, ಸೆಕ್ಷನ್ 80ಸಿ ಅಡಿಯಲ್ಲಿ ಮಾಡಿದ ರೂ 1.5 ಲಕ್ಷದವರೆಗಿನ ಹೂಡಿಕೆಯ ಮೇಲೆ ತೆರಿಗೆ ವಿನಾಯಿತಿ ಲಭ್ಯವಿದೆ. ಇದರಲ್ಲಿ ಪಿಪಿಎಫ್, ಸುಕನ್ಯಾ ಸಮೃದ್ಧಿ ಯೋಜನೆ, ಜೀವ ವಿಮೆ ಮುಂತಾದ ಹಲವು ಉತ್ಪನ್ನಗಳಿವೆ. ಈ ಹಿಂದೆ 2014ರಲ್ಲಿ 80ಸಿ (Section 80c) ವ್ಯಾಪ್ತಿಯನ್ನು 1 ಲಕ್ಷದಿಂದ 1.5 ಲಕ್ಷಕ್ಕೆ ಹೆಚ್ಚಿಸಲಾಗಿತ್ತು ಎಂಬುದು ಇಲ್ಲಿ ಉಲ್ಲೇಖನೀಯ. ಅಂದರೆ, ಕಳೆದ 8 ವರ್ಷಗಳಲ್ಲಿ ಇದು ಬದಲಾಗಿಲ್ಲ. ವಿಶೇಷವಾಗಿ ವೇತನ ಪಡೆಯುವ ವರ್ಗಕ್ಕೆ, ತೆರಿಗೆ ಉಳಿಸಲು ಸೆಕ್ಷನ್ 80 ಸಿ ಅತ್ಯುತ್ತಮ ಆಯ್ಕೆಯಾಗಿದೆ. ಈ ಸೆಕ್ಷನ್ ಅಡಿಯಲ್ಲಿ ಸರ್ಕಾರ ವಿನಾಯಿತಿ ಮಿತಿಯನ್ನು ಹೆಚ್ಚಿಸಿದರೆ, ಹೆಚ್ಚಿನ ಜನರು ಅದರಲ್ಲಿ ಹೂಡಿಕೆ ಮಾಡಬಹುದು.

ಇದನ್ನೂ ಓದಿ-ನಿಮ್ಮ ಖಾತೆಗೂ LPG ಸಬ್ಸಿಡಿ ಬರುತ್ತಿಲ್ಲವೇ? ಇಂದೇ ಈ ಕೆಲಸ ಮಾಡಿ, ತಕ್ಷಣ ಹಣ ಬರುತ್ತದೆ

ಮೂಲ ಮಿತಿಯನ್ನು ಸಹ ಹೆಚ್ಚಿಸಬಹುದು
ಮೂಲ ತೆರಿಗೆ ವಿನಾಯಿತಿ (Income Tax) ಮಿತಿ ಪ್ರಸ್ತುತ 2.5 ಲಕ್ಷ ರೂ. ಈ ಹಿಂದೆ 2014ರಲ್ಲಿ 2 ಲಕ್ಷದಿಂದ 2.5 ಲಕ್ಷಕ್ಕೆ ಹೆಚ್ಚಿಸಲಾಗಿತ್ತು. ಆದರೆ, ಕಳೆದ 8 ವರ್ಷಗಳಿಂದ ಇದರಲ್ಲೂ ಯಾವುದೇ ಬದಲಾವಣೆ ಆಗಿಲ್ಲ. ಆದ್ದರಿಂದ ತೆರಿಗೆದಾರರಿಗೆ ಪರಿಹಾರ ನೀಡಲು ಮೂಲ ಆದಾಯ ತೆರಿಗೆ ಮಿತಿಯನ್ನು ಸರ್ಕಾರ 3 ಲಕ್ಷ ರೂ.ಗೆ ಹೆಚ್ಚಿಸಬಹುದು ಎಂದು ನಿರೀಕ್ಷಿಸಲಾಗಿದೆ. ಹಾಗೆ ನೋಡಿದರೆ, ಈ ವರ್ಷ 5 ರಾಜ್ಯಗಳಲ್ಲಿ ಚುನಾವಣೆ ನಡೆಯಬೇಕಿದೆ. ಇಂತಹ ಪರಿಸ್ಥಿತಿಯಲ್ಲಿ, ಮೂಲ ಮಿತಿಯನ್ನು ಹೆಚ್ಚಿಸುವ ಮೂಲಕ, ತೆರಿಗೆದಾರರು ಅಂದರೆ ನಿರ್ದಿಷ್ಟ ವರ್ಗದ ಮತದಾರರನ್ನು ಸರ್ಕಾರ ಸಂತೋಷಪಡಿಸಬಹುದು.

ಇದನ್ನೂ ಓದಿ-Pension Scheme : ಹಿರಿಯ ನಾಗರಿಕರಿಗೆ ಪಿಂಚಣಿ ಯೋಜನೆ ಪ್ರಾರಂಭ : ನಿಮಗೆ ಸಿಗಲಿದೆ ₹1.1 ಲಕ್ಷ ಪಿಂಚಣಿ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News