IRCTCಯಿಂದ ಆನ್‌ಲೈನ್ ಟಿಕೆಟ್‌ಗಳನ್ನು ಬುಕ್ ಮಾಡುವವರಿಗೆ ಆಘಾತ .!

Indian Railways Latest News: IRCTC ಯ 3 ಕೋಟಿ ಬಳಕೆದಾರರ ವೈಯಕ್ತಿಕ ವಿವರಗಳನ್ನು ಹ್ಯಾಕರ್ ಡಾರ್ಕ್ ವೆಬ್‌ನಲ್ಲಿ  ಸೇಲ್ ಗೆ ಇಡಲಾಗಿದೆ. ಈ ವಿವರವು ಹೆಸರು, ಇಮೇಲ್, ಫೋನ್ ಸಂಖ್ಯೆ, ಲಿಂಗ ಮತ್ತು ಇತರ ವೈಯಕ್ತಿಕ ಮಾಹಿತಿಯನ್ನು ಒಳಗೊಂಡಿದೆ.

Written by - Ranjitha R K | Last Updated : Dec 29, 2022, 12:37 PM IST
  • IRCTC ಪ್ರಯಾಣಿಕರಿಗೆ ಆಘಾತ
  • 3 ಕೋಟಿ ಬಳಕೆದಾರರ ವೈಯಕ್ತಿಕ ವಿವರ ಲೀಕ್
  • ಡೇಟಾ ಕಳ್ಳತನ ಆಗಿಲ್ಲ ಎಂದ ರೈಲ್ವೆ ಸಚಿವಾಲಯ
 IRCTCಯಿಂದ ಆನ್‌ಲೈನ್ ಟಿಕೆಟ್‌ಗಳನ್ನು ಬುಕ್ ಮಾಡುವವರಿಗೆ ಆಘಾತ .! title=
Indian Railways Latest News

Indian Railways Latest News : ರೈಲಿನಲ್ಲಿ ಪ್ರಯಾಣಿಸುವ ಸಲುವಾಗಿ IRCTC ವೆಬ್‌ಸೈಟ್‌ ಮೂಲಕ ಆಗಾಗ ಆನ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡುತ್ತಿದ್ದರೆ, ಈ ಸುದ್ದಿ ನಿಮಗೆ ಆಘಾತ ನೀಡಲಿದೆ. IRCTC ಯ 3 ಕೋಟಿ ಬಳಕೆದಾರರ ವೈಯಕ್ತಿಕ ವಿವರಗಳನ್ನು ಹ್ಯಾಕರ್ ಡಾರ್ಕ್ ವೆಬ್‌ನಲ್ಲಿ  ಸೇಲ್ ಗಾಗಿ ಹಾಕಲಾಗಿದೆ. ಈ ವಿವರವು ಹೆಸರು, ಇಮೇಲ್, ಫೋನ್ ಸಂಖ್ಯೆ, ಲಿಂಗ ಮತ್ತು ಇತರ ವೈಯಕ್ತಿಕ ಮಾಹಿತಿಯನ್ನು ಒಳಗೊಂಡಿದೆ. ಇದು ಅನೇಕ ಸರ್ಕಾರಿ ಅಧಿಕಾರಿಗಳು ಮತ್ತು ಪ್ರಸಿದ್ಧ ವ್ಯಕ್ತಿಗಳ ಡೇಟಾವನ್ನು ಸಹ ಒಳಗೊಂಡಿದೆ.

ಡೇಟಾ ಕಳ್ಳತನ ಆಗಿಲ್ಲ ಎಂದ ರೈಲ್ವೆ ಸಚಿವಾಲಯ : 
ಆದರೆ ಈ ಡೇಟಾವು ತನ್ನ ಸರ್ವರ್ ಅಥವಾ ಅಂಗಸಂಸ್ಥೆಯಾದ ಇಂಡಿಯನ್ ರೈಲ್ವೇ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ನ ಸರ್ವರ್‌ನಿಂದ ಲೀಕ್ ಆಗಿಲ್ಲ ಎಂದು ರೈಲ್ವೆ ಸಚಿವಾಲಯ ಹೇಳಿದೆ. ಮತ್ತೊಂದೆಡೆ, ಡೇಟಾ ಕಳ್ಳತನದಂಥಹ ಘಟನೆಯನ್ನು IRCTC ಕೂಡಾ ನಿರಾಕರಿಸಿದೆ. ಡೇಟಾ  ಬ್ರೀಚ್ ಬಗ್ಗೆ ಮಾಹಿತಿಯನ್ನು ಸ್ವೀಕರಿಸಲಾಗಿದೆ ಎಂದು IRCTC ಹೇಳಿದೆ. ಈ ನಿಟ್ಟಿನಲ್ಲಿ, IRCTCಗೆ ವರದಿ ನೀಡುವಂತೆ CRET-Inಗೆ ರೈಲ್ವೆ ಮಂಡಳಿ ಎಚ್ಚರಿಕೆ ನೀಡಿದೆ. 

ಇದನ್ನೂ ಓದಿ : ಸರ್ಕಾರಿ ನೌಕರರಿಗೆ ಬಂಪರ್ .! ಫಿಟ್‌ಮೆಂಟ್ ಫ್ಯಾಕ್ಟರ್ ಬಗ್ಗೆ ಹೊರ ಬಿದ್ದಿದೆ ಅಪ್ಡೇಟ್.! ಕೈ ಸೇರುವುದು ದೊಡ್ಡ ಮೊತ್ತ

IRCTC APIಯೊಂದಿಗೆ ಹೊಂದಿಕೆಯಾಗುತ್ತಿಲ್ಲ ಡೇಟಾ ಮಾದರಿ : 
ಸ್ಯಾಂಪಲ್ ಡೇಟಾವನ್ನು ಪರಿಶೀಲಿಸುವಾಗ, ಡೇಟಾದ ಮಾದರಿಯು IRCTC APIಯೊಂದಿಗೆ ಹೊಂದಿಕೆಯಾಗುತ್ತಿಲ್ಲ ಎನ್ನುವುದು ಕಂಡುಬಂದಿದೆ. ಹ್ಯಾಕ್ ಆಗಿರುವ ಡೇಟಾವು IRCTC ಯ ಸರ್ವರ್‌ನಿಂದ ಹ್ಯಾಕ್  ಆಗಿರುವುದಲ್ಲ ಎಂದು IRCTC ಹೇಳಿದೆ. ಆದರೂ ಈ ಬಗ್ಗೆ IRCTC ಕಡೆಯಿಂದ ತನಿಖೆ ನಡೆಸುತ್ತಿದೆ. ತಮ್ಮ ಡೇಟಾ ಸೋರಿಕೆಯಾಗುತ್ತಿದೆಯೇ ಎಂದು ಪರಿಶೀಲಿಸಲು IRCTC ತನ್ನ ಎಲ್ಲಾ ವ್ಯಾಪಾರ ಪಾಲುದಾರರನ್ನು ಕೇಳಿದೆ. ಪ್ರಯಾಣಿಕರ ಡೇಟಾ ಸುರಕ್ಷತೆಗೆ ಸಂಬಂಧಿಸಿದಂತೆ ತೆಗೆದುಕೊಂಡ ಕ್ರಮಗಳ ಬಗ್ಗೆ ಪಾಲುದಾರರಿಂದ ಮಾಹಿತಿ ಕೇಳಲಾಗಿದೆ.
 
ಇದನ್ನೂ ಓದಿ : Gold Price Today : ಮತ್ತೆ ಏರಿಕೆಯಾಯಿತು ಚಿನ್ನದ ಬೆಲೆ .! ಬೆಳ್ಳಿ ಬೆಲೆ ಎಷ್ಟು ಗೊತ್ತಾ ?

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News