Banking Sector: ಈ 3 ಬ್ಯಾಂಕುಗಳು ಮುಳುಗಿದ್ರೆ ಭಾರತದ ಆರ್ಥಿಕತೆ ಡಂ ಡಂ.. ಡಮಾರ್..!

ಭಾರತವು ತನ್ನ ಆರ್ಥಿಕತೆಯನ್ನು ದೃಢವಾಗಿರಿಸಿಕೊಂಡಿದೆ. ಇತ್ತೀಚೆಗೆ ವಿಶ್ವದ ಅನೇಕ ಬ್ಯಾಂಕುಗಳು ಮುಳುಗಿವೆ. ಈ ಪೈಕಿ ಅಮೆರಿಕದ ಹಲವು ಬ್ಯಾಂಕ್‌ಗಳೂ ಸೇರಿವೆ. ಈ ಬ್ಯಾಂಕ್‌ಗಳ ಮುಳುಗಡೆ ವಿಶ್ವದ ಹಲವು ದೇಶಗಳ ಮೇಲೂ ಪರಿಣಾಮ ಬೀರಿದೆ. ಅದೇ ರೀತಿ ಭಾರತದಲ್ಲಿಯೂ ಕೆಲವು ಬ್ಯಾಂಕುಗಳಿವೆ. ಇವುಗಳು ಮುಳುಗಿದರೆ ದೇಶವು ದೊಡ್ಡ ನಷ್ಟವನ್ನು ಅನುಭವಿಸಬೇಕಾಗುತ್ತದೆ.

Written by - Puttaraj K Alur | Last Updated : Apr 12, 2023, 08:19 PM IST
  • ಪ್ರಸ್ತುತ ವಿಶ್ವದ ಅನೇಕ ದೇಶಗಳಲ್ಲಿ ಆರ್ಥಿಕ ಬಿಕ್ಕಟ್ಟು ಉಂಟಾಗಿದೆ
  • ಅನೇಕ ದೇಶಗಳು ಆರ್ಥಿಕ ಹಿಂಜರಿತದ ಹೊಡೆತವನ್ನು ಎದುರಿಸುತ್ತಿವೆ
  • ಭಾರತದ 3 ಬ್ಯಾಂಕುಗಳು ಮುಳುಗಿದರೆ ಆರ್ಥಿಕತೆಗೆ ಬಹುದೊಡ್ಡ ಪೆಟ್ಟು
Banking Sector: ಈ 3 ಬ್ಯಾಂಕುಗಳು ಮುಳುಗಿದ್ರೆ ಭಾರತದ ಆರ್ಥಿಕತೆ ಡಂ ಡಂ.. ಡಮಾರ್..! title=
ಭಾರತದ ಆರ್ಥಿಕ ಸ್ಥಿತಿ ಹೇಗಿದೆ?

ನವದೆಹಲಿ: ಪ್ರಸ್ತುತ ವಿಶ್ವದ ಅನೇಕ ದೇಶಗಳಲ್ಲಿ ಆರ್ಥಿಕ ಬಿಕ್ಕಟ್ಟಿನ ಸಾಧ್ಯತೆಯಿದೆ. ಅನೇಕ ದೇಶಗಳು ಆರ್ಥಿಕ ಹಿಂಜರಿತದ ಹೊಡೆತವನ್ನು ಸಹ ಎದುರಿಸುತ್ತಿವೆ. ಭಾರತವು ತನ್ನ ಆರ್ಥಿಕತೆಯನ್ನು ಬಲವಾಗಿಸಿದೆ. ಏತನ್ಮಧ್ಯೆ ಇತ್ತೀಚೆಗೆ ವಿಶ್ವದ ಅನೇಕ ಬ್ಯಾಂಕುಗಳು ಮುಳುಗಿವೆ. ಈ ಪೈಕಿ ಅಮೆರಿಕದ ಹಲವು ಬ್ಯಾಂಕ್‌ಗಳೂ ಸೇರಿವೆ. ಈ ಬ್ಯಾಂಕ್‌ಗಳ ಮುಳುಗಡೆ ವಿಶ್ವದ ಹಲವು ದೇಶಗಳ ಮೇಲೂ ಪರಿಣಾಮ ಬೀರಿದೆ. ಅದೇ ರೀತಿ ಕೆಲವು ಬ್ಯಾಂಕುಗಳು ಭಾರತದಲ್ಲಿಯೂ ಇವೆ. ಒಂದು ವೇಳೆ ಇವು ಮುಳುಗಿದರೆ ದೇಶವು ದೊಡ್ಡ ನಷ್ಟವನ್ನು ಅನುಭವಿಸಬೇಕಾಗುತ್ತದೆ.

ಈ ಬ್ಯಾಂಕ್ ಮುಖ್ಯವಾಗಿದೆ

ದೇಶದಲ್ಲಿ 3 ಪ್ರಮುಖ ಬ್ಯಾಂಕ್‍ಗಳಿದ್ದು, ಇವು ಮುಳುಗಡೆಯಾದರೆ ಸರ್ಕಾರ ಹಾಗೂ ದೇಶದ ಆರ್ಥಿಕತೆ ಎರಡೂ ಅಲ್ಲೋಲಕಲ್ಲೋಲವಾಗುತ್ತದೆ. ಇತ್ತೀಚೆಗೆ ಭಾರತೀಯ ರಿಸರ್ವ್ ಬ್ಯಾಂಕ್ (RBI) 2021ರ ದೇಶೀಯ ವ್ಯವಸ್ಥಿತ ಪ್ರಮುಖ ಬ್ಯಾಂಕ್‌ಗಳ (D-SIB) ಪಟ್ಟಿಯನ್ನು ಬಿಡುಗಡೆ ಮಾಡಿದೆ. ಎಸ್‌ಬಿಐ, ಐಸಿಐಸಿಐ ಬ್ಯಾಂಕ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ಗಳನ್ನು ಡಿ-ಎಸ್‌ಐಬಿಗಳ ಪಟ್ಟಿಯ ಪ್ರಕಾರ ಪ್ರಮುಖವೆಂದು ವರ್ಗೀಕರಿಸಲಾಗಿದೆ.

ಇದನ್ನೂ ಓದಿ: Good News: 40 ಲಕ್ಷಕ್ಕೂ ಅಧಿಕ ಸರ್ಕಾರಿ ನೌಕರರಿಗೆ ಭಾರಿ ಸಂತಸದ ಸುದ್ದಿ, ಸರ್ಕಾರ ಕೈಗೊಂಡಿದೆ ಈ ನಿರ್ಧಾರ!

ಚಟುವಟಿಕೆಗಳ ಮೇಲೆ ಕಣ್ಣಿಟ್ಟಿರುವ RBI

ಎಸ್‍ಬಿಐ, ಐಸಿಐಸಿಐ ಬ್ಯಾಂಕ್ ಮತ್ತು ಎಚ್‍ಡಿಎಫ್‍ಸಿ ಬ್ಯಾಂಕ್‍ಗಳು ದೇಶದಲ್ಲಿ ಮಹತ್ವದ ಸ್ಥಾನ ಪಡೆದಿವೆ. ಈ 3 ಬ್ಯಾಂಕ್‌ಗಳು ವಿಫಲವಾದರೆ ದೇಶದ ಆರ್ಥಿಕತೆ ಭಾರಿ ನಷ್ಟ ಅನುಭವಿಸಬೇಕಾಗುತ್ತದೆ. ಅಲ್ಲದೆ ಇವುಗಳ ಮುಳುಗಡೆಯ ಹೊಡೆತ ಸಹಿಸಲು ಸರ್ಕಾರಕ್ಕೆ ಸಾಧ್ಯವಾಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಆರ್‍ಬಿಐ ಕೂಡ ಈ ಬ್ಯಾಂಕ್‍ಗಳ ಚಟುವಟಿಕೆಗಳ ಮೇಲೆ ಕಣ್ಣಿಟ್ಟಿದೆ. ಅದೇ ರೀತಿ ಆರ್‌ಬಿಐ ಡಿ-ಎಸ್‌ಐಬಿಯಲ್ಲಿ ಒಳಗೊಂಡಿರುವ ಬ್ಯಾಂಕ್‌ಗಳಿಗೆ ಪ್ರತ್ಯೇಕ ನಿಯಮಗಳನ್ನು ರೂಪಿಸಿದೆ.

ಜಿಡಿಪಿಯ ಶೇ.2ಕ್ಕಿಂತ ಹೆಚ್ಚು ಇರಬೇಕು

ಬ್ಯಾಂಕ್‌ಗಳಿಗೆ ಅವುಗಳ ಕಾರ್ಯಕ್ಷಮತೆ, ಗ್ರಾಹಕರ ಆಧಾರದ ಮೇಲೆ ವ್ಯವಸ್ಥಿತ ಪ್ರಾಮುಖ್ಯತೆ ಸ್ಕೋರ್ ನೀಡಲಾಗುತ್ತದೆ. ಮತ್ತೊಂದೆಡೆ ಬ್ಯಾಂಕ್ ಅನ್ನು ಡಿ-ಎಸ್‌ಐಬಿ ಎಂದು ಪಟ್ಟಿ ಮಾಡಿದ್ದರೆ, ಅವುಗಳ ಸ್ವತ್ತುಗಳು ರಾಷ್ಟ್ರೀಯ ಜಿಡಿಪಿಯ ಶೇ.2ಕ್ಕಿಂತ ಹೆಚ್ಚು ಇರಬೇಕು. ಅದೇ ರೀತಿ RBI ಈ ಬ್ಯಾಂಕುಗಳನ್ನು ದೇಶೀಯ ಆರ್ಥಿಕತೆಯ ಆಧಾರದ ಮೇಲೆ ಆಯ್ಕೆ ಮಾಡುತ್ತದೆ.

ಇದನ್ನೂ ಓದಿ: Retail Inflation: ಮಾರ್ಚ್‌ನಲ್ಲಿ ಮತ್ತೆ ರಿಟೇಲ್ ಹಣದುಬ್ಬರ ಕುಸಿತ! ಎಷ್ಟಿದೆ ಗೊತ್ತಾ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
                              

Trending News