Bank Holidays March 2023 : ಬ್ಯಾಂಕ್ ಗ್ರಾಹಕರ ಗಮನಕ್ಕೆ : ಮಾರ್ಚ್‌ನಲ್ಲಿ 12 ದಿನ ಬ್ಯಾಂಕ್ ಬಂದ್!

Bank Holidays : ಮಾರ್ಚ್ 2023 ರಲ್ಲಿ ಒಟ್ಟು 12 ದಿನಗಳವರೆಗೆ ಬ್ಯಾಂಕ್‌ಗಳು ರಜೆ ಇರುತ್ತವೆ ಮತ್ತು ವಾರಾಂತ್ಯಗಳು ಸಹ ಇವುಗಳಲ್ಲಿ ಸೇರಿವೆ. ಆದುದರಿಂದ ತಡಮಾಡದೆ ಈ ತಿಂಗಳಲ್ಲೇ ನಿಮ್ಮ ಬ್ಯಾಂಕಿಗೆ ಸಂಬಂಧಿಸಿದ ಎಲ್ಲಾ ಕೆಲಸಗಳನ್ನು ಮುಗಿಸಿಕೊಳ್ಳಿ.

Written by - Channabasava A Kashinakunti | Last Updated : Feb 22, 2023, 11:09 AM IST
  • ಮಾರ್ಚ್ 2023 ರಲ್ಲಿ ಒಟ್ಟು 12 ದಿನಗಳವರೆಗೆ ಬ್ಯಾಂಕ್‌ಗಳು ರಜೆ ಇರುತ್ತವೆ
  • ಮಾರ್ಚ್‌ನಲ್ಲಿ ಬ್ಯಾಂಕ್ ರಜಾದಿನಗಳ ಸಂಪೂರ್ಣ ಪಟ್ಟಿ ಇಲ್ಲಿದೆ
  • ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ರಜಾದಿನಗಳು
Bank Holidays March 2023 : ಬ್ಯಾಂಕ್ ಗ್ರಾಹಕರ ಗಮನಕ್ಕೆ : ಮಾರ್ಚ್‌ನಲ್ಲಿ 12 ದಿನ ಬ್ಯಾಂಕ್ ಬಂದ್! title=

Bank Holidays March 2023 : ಮಾರ್ಚ್ 2023 ರಲ್ಲಿ ಒಟ್ಟು 12 ದಿನಗಳವರೆಗೆ ಬ್ಯಾಂಕ್‌ಗಳು ರಜೆ ಇರುತ್ತವೆ ಮತ್ತು ವಾರಾಂತ್ಯಗಳು ಸಹ ಇವುಗಳಲ್ಲಿ ಸೇರಿವೆ. ಆದುದರಿಂದ ತಡಮಾಡದೆ ಈ ತಿಂಗಳಲ್ಲೇ ನಿಮ್ಮ ಬ್ಯಾಂಕಿಗೆ ಸಂಬಂಧಿಸಿದ ಎಲ್ಲಾ ಕೆಲಸಗಳನ್ನು ಮುಗಿಸಿಕೊಳ್ಳಿ. ದೇಶದಲ್ಲಿನ ಬ್ಯಾಂಕುಗಳು ತಿಂಗಳ ಮೊದಲ ಮತ್ತು ಮೂರನೇ ಶನಿವಾರದಂದು ರಜೆ ಇರುತ್ತವೆ. ಆದರೆ ಎರಡನೇ ಮತ್ತು ನಾಲ್ಕನೇ ಶನಿವಾರಗಳು ಬ್ಯಾಂಕ್ ರಜಾದಿನಗಳಾಗಿವೆ. ಮಾರ್ಚ್ 2023 ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಕ್ಯಾಲೆಂಡರ್ ಪ್ರಕಾರ, ಖಾಸಗಿ ಮತ್ತು ಸಾರ್ವಜನಿಕ ವಲಯದ ಬ್ಯಾಂಕುಗಳು 12 ದಿನಗಳವರೆಗೆ ರಜೆ ಇದೆ. ಮಾರ್ಚ್‌ನಲ್ಲಿ ಬ್ಯಾಂಕ್ ರಜಾದಿನಗಳ ಸಂಪೂರ್ಣ ಪಟ್ಟಿಯ ಬಗ್ಗೆ ಮಾಹಿತಿ ಇಲ್ಲಿದೆ.

ನಿರ್ದಿಷ್ಟ ರಾಜ್ಯದ ಪ್ರಾದೇಶಿಕ ರಜಾದಿನಗಳನ್ನು ಅವಲಂಬಿಸಿ ಎಲ್ಲಾ ಸಾರ್ವಜನಿಕ ರಜಾದಿನಗಳಲ್ಲಿ ಬ್ಯಾಂಕುಗಳು ರಜೆ ಇರುತ್ತವೆ.. ಅಂತಹ ಪ್ರಾದೇಶಿಕ ರಜಾದಿನಗಳನ್ನು ಆಯಾ ರಾಜ್ಯ ಸರ್ಕಾರಗಳು ನಿರ್ಧರಿಸುತ್ತವೆ ಮತ್ತು ಆರ್‌ಬಿಐನ ಅಧಿಕೃತ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಲಾಗಿಲ್ಲ.

ಇದನ್ನೂ ಓದಿ : Wheat Price : ಗೋಧಿ ಮತ್ತು ಅದರ ಹಿಟ್ಟಿನ ಬೆಲೆಯ ಬಗ್ಗೆ ಮೋದಿ ಸರ್ಕಾರದಿಂದ ಮಹತ್ವದ ನಿರ್ಧಾರ!

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ರಜಾದಿನಗಳನ್ನು ಮೂರು ಬ್ರಾಕೆಟ್‌ಗಳಲ್ಲಿ ಇರಿಸಿದೆ. ನೆಗೋಶಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ; ನೆಗೋಶಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಆಕ್ಟ್ ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್‌ಮೆಂಟ್ ಹಾಲಿಡೇ ಇರುತ್ತವೆ.

ಮಾರ್ಚ್ 2023 ರಲ್ಲಿ ಬ್ಯಾಂಕ್ ರಜಾದಿನಗಳ ಸಂಪೂರ್ಣ ಪಟ್ಟಿ

ಮಾರ್ಚ್ 3 ಚಾಪ್ಚಾರ್ ಕುಟ್

ಮಾರ್ಚ್ 5 ಭಾನುವಾರ

ಮಾರ್ಚ್ 7 ಹೋಳಿ / ಹೋಳಿ (ಎರಡನೇ ದಿನ) / ಹೋಲಿಕಾ ದಹನ್ / ಧೂಲಂಡಿ / ಡೋಲ್ ಜಾತ್ರೆ

ಮಾರ್ಚ್ 8 ಧುಲೇತಿ / ಡೋಲ್ಜಾತ್ರಾ / ಹೋಳಿ / ಯೋಸಾಂಗ್ ಎರಡನೇ ದಿನ

ಮಾರ್ಚ್ 9 ಹೋಳಿ

ಮಾರ್ಚ್ 11 ತಿಂಗಳ ಎರಡನೇ ಶನಿವಾರ

ಮಾರ್ಚ್ 12 ಭಾನುವಾರ

ಮಾರ್ಚ್ 19 ಭಾನುವಾರ

ಮಾರ್ಚ್ 22 ಗುಡಿ ಪಾಡ್ವಾ / ಯುಗಾದಿ ಹಬ್ಬ / ಬಿಹಾರ ದಿನ / ಸಜಿಬು ನೋಂಗ್ಮಪನ್ಬಾ (ಚೀರಒಬಾ) / ತೆಲುಗು ಹೊಸ ವರ್ಷದ ದಿನ / ಮೊದಲ ನವರಾತ್ರಿ

ಮಾರ್ಚ್ 25 ನಾಲ್ಕನೇ ಶನಿವಾರ

ಮಾರ್ಚ್ 26 ಭಾನುವಾರ

ಮಾರ್ಚ್ 30 ಶ್ರೀರಾಮ ನವಮಿ

ಮೊದಲ ಬ್ಯಾಂಕ್ ರಜೆಗಳು ಮಾರ್ಚ್ 3 ರಂದು ಚಾಪ್ಚಾರ್ ಕುಟ್‌ನಿಂದ ಪ್ರಾರಂಭವಾಗುತ್ತದೆ ಮತ್ತು ಗುಡಿ ಪಾಡ್ವಾ / ಯುಗಾದಿ ಹಬ್ಬ / ಬಿಹಾರ ದಿವಸ್‌ನಂತಹ ಇತರ ರಜಾದಿನಗಳು ಮಾರ್ಚ್ 22 ರವರೆಗೆ ರಜೆ ಇರುತ್ತವೆ. ಕೆಲವು ರಾಜ್ಯಗಳಲ್ಲಿನ ಬ್ಯಾಂಕ್‌ಗಳು ಆರ್‌ಬಿಐ ಕ್ಯಾಲೆಂಡರ್‌ನ ಪ್ರಕಾರ ರಜಾದಿನಗಳನ್ನು ಆಚರಿಸುತ್ತವೆ. ಮಾರ್ಚ್‌ನಲ್ಲಿ ನಾಲ್ಕು ಭಾನುವಾರಗಳಿದ್ದು ಅದು ಮಾರ್ಚ್ 5,12,19 ಮತ್ತು 26 ರಂದು ಬರುತ್ತದೆ. ಎರಡನೇ ಮತ್ತು ನಾಲ್ಕನೇ ಶನಿವಾರಗಳು ಮಾರ್ಚ್ 11 ಮತ್ತು 25 ರಂದು. ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ, ಆರ್‌ಬಿಐ ಮಾರ್ಚ್ 3, 7, 8, 9, 22 ಮತ್ತು 30 ರಂದು ರಜೆ ಘೋಷಿಸಿದೆ. ಇದಲ್ಲದೆ, ಆರ್‌ಬಿಐ ಕ್ಯಾಲೆಂಡರ್‌ನ ಪ್ರಕಾರ ಮಾರ್ಚ್ 2023 ರಲ್ಲಿ ಆರು ಬ್ಯಾಂಕ್ ರಜೆಗಳಿವೆ.

ಇದನ್ನೂ ಓದಿ : 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News