ಯಾವುದೇ ಲೋನ್ ಮೇಲೆ ಬ್ಯಾಂಕ್ ಈ ಬಡ್ಡಿ ವಿಧಿಸಿದ್ದರೆ ಗ್ರಾಹಕರಿಗೆ ಹಿಂದಿರುಗಿಸಬೇಕಾಗುತ್ತದೆ ! ಆರ್‌ಬಿಐ ಕಟ್ಟು ನಿಟ್ಟಿನ ನಿರ್ಧಾರ

Levy Interest on Loan: ಬ್ಯಾಂಕ್ ನಿಂದ ಲೋನ್ ಪಡೆದವರ ಪರವಾಗಿ ಆರ್ ಬಿಐ ಕೆಲ ನಿರ್ಧಾರ ತೆಗೆದುಕೊಂಡಿದೆ. ಈ ನೀತಿನಲ್ಲಿ ಬ್ಯಾಂಕ್ ಗಳು ಅನುಸರಿಸಿಕೊಂಡು ಬರುತ್ತಿರುವ ಕೆಲವು ಕ್ರಮ ತಪ್ಪು ಎನ್ನುವುದನ್ನು ಹೇಳಿದೆ.   

Written by - Ranjitha R K | Last Updated : May 1, 2024, 08:38 AM IST
  • ಬ್ಯಾಂಕ್‌ಗಳು ಮತ್ತು ಎನ್‌ಬಿಎಫ್‌ಸಿಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ
  • ಬಡ್ಡಿ ವಿಧಿಸುವ ಕ್ರಮಕ್ಕೆ ಆಕ್ಷೇಪ
  • ಸಾಲಗಾರರ ಮೇಲಿನ ಹೊರೆ ಕಡಿಮೆ ಮಾಡುವಂತೆ ಕ್ರಮ
ಯಾವುದೇ ಲೋನ್ ಮೇಲೆ ಬ್ಯಾಂಕ್ ಈ ಬಡ್ಡಿ ವಿಧಿಸಿದ್ದರೆ ಗ್ರಾಹಕರಿಗೆ ಹಿಂದಿರುಗಿಸಬೇಕಾಗುತ್ತದೆ ! ಆರ್‌ಬಿಐ ಕಟ್ಟು ನಿಟ್ಟಿನ ನಿರ್ಧಾರ  title=

Levy Interest on Loan : ಗೃಹ ಸಾಲ,ವೈಯಕ್ತಿಕ ಸಾಲ ಅಥವಾ ಯಾವುದೇ ರೀತಿಯ ಸಾಲವನ್ನು ತೆಗೆದುಕೊಂಡಿದ್ದರೆ ಅಥವಾ ತೆಗೆದುಕೊಳ್ಳುವ ಬಗ್ಗೆ ಯೋಚನೆ ಇದ್ದರೆ ಈ ಸುದ್ದಿ ನಿಮಗೆ ಉಪಯುಕ್ತವಾಗಿರಲಿದೆ.ಭಾರತೀಯ ರಿಸರ್ವ್ ಬ್ಯಾಂಕ್ ಬ್ಯಾಂಕ್‌ಗಳು ಮತ್ತು ಎನ್‌ಬಿಎಫ್‌ಸಿಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.ಸಾಲ ಮಂಜೂರಾದ ದಿನಾಂಕದಿಂದಲೇ ಗ್ರಾಹಕರಿಗೆ ಬಡ್ಡಿ ವಿಧಿಸುವ ಬಗ್ಗೆ ಆರ್ ಬಿಐ ಆಕ್ಷೇಪ ವ್ಯಕ್ತಪಡಿಸಿದೆ.ಪ್ರಸ್ತುತ ಯಾವುದೇ ಸಾಲವನ್ನು ವಿ ತರಿಸಿದ ದಿನದಿಂದಲೇ ಬಡ್ಡಿಯನ್ನು ಲೆಕ್ಕಹಾಕಲಾಗುತ್ತದೆ.ಗೃಹ ಸಾಲ ಅಥವಾ ಇತರ ಯಾವುದೇ ರೀತಿಯ ಸಾಲವನ್ನು ತೆಗೆದುಕೊಳ್ಳುವಾಗ,ಹಣದ ಮಂಜೂರಾತಿ ಮತ್ತು ಸ್ವೀಕೃತಿಯ ನಡುವೆ ಬಹಳಷ್ಟು ದಿನಗಳ ಅಂತರವಿರುತ್ತದೆ.ಆದರೆ, ಬ್ಯಾಂಕ್ ಗಳು ಸಾಲ ಮಂಜೂರಾದ ದಿನಾಂಕದಿಂದಲೇ ಬಡ್ಡಿಯನ್ನು ವಿಧಿಸುತ್ತದೆ. ಅದು ಸಾಲ ಪಡೆಯುವವರಿಗೆ ಹೆಚ್ಚುವರಿ ಹೊರೆಯಾಗುತ್ತದೆ.

ಉಪಯೋಗಿಸದೇ ಇರುವ ಹಣದ ಮೇಲೆಯೂ ಬಡ್ಡಿ : 
ಆರ್‌ಬಿಐ ಪ್ರಕಾರ, ಸಾಲ ಮಂಜೂರಾತಿ ಅಥವಾ ಸಾಲ ಒಪ್ಪಂದದ ದಿನಾಂಕದಿಂದ ಬಡ್ಡಿ ವಿಧಿಸುವುದು ನಿಯಮಗಳಿಗೆ ವಿರುದ್ಧವಾಗಿದೆ.ಅನೇಕ ಬಾರಿ ಬ್ಯಾಂಕ್‌ಗಳು ಸಾಲವನ್ನು ವಿತರಿಸುವ ಮೊದಲಿನಿಂದಲೇ ಗ್ರಾಹಕರಿಗೆ ಬಡ್ಡಿ  ವಿಧಿಸಲು ಪ್ರಾರಂಭಿಸುತ್ತವೆ.ಸಾಲ ಮಂಜೂರಾದ ನಂತರ ಅದು ಗ್ರಾಹಕರ ಖಾತೆಗೆ ಬರುವಾಗ ಹಲವು ಬಾರಿ ವಿಳಂಬವಾಗುತ್ತದೆ.ಈ ಅವಧಿಯಲ್ಲಿ,ಬ್ಯಾಂಕ್ ಬಡ್ಡಿ ವಿಧಿಸಿದರೆ, ಗ್ರಾಹಕ ತಾನು ಸ್ವೀಕರಿಸದ ಹಣಕ್ಕೂ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.ಇದು ಸಾಲದ ಮೇಲಿನ ವೆಚ್ಚವನ್ನು ಹೆಚ್ಚಿಸುತ್ತದೆ. ಎರಡನೆಯದಾಗಿ,ಚೆಕ್ ಮೂಲಕ ಸಾಲವನ್ನು ನೀಡಿದರೆ,ಅನೇಕ ಬಾರಿ ಬ್ಯಾಂಕ್‌ಗಳು ಚೆಕ್‌ನ ದಿನಾಂಕದಿಂದ ಬಡ್ಡಿಯನ್ನು ವಿಧಿಸಲು ಪ್ರಾರಂಭಿಸುತ್ತವೆ  ಚೆಕ್ ಅನ್ನು ಎನ್‌ಕ್ಯಾಶ್ ಮಾಡಿದ ದಿನಾಂಕದಿಂದ ಅಲ್ಲ.ಇದರರ್ಥ ಗ್ರಾಹಕ ತಾನು ಇನ್ನೂ ಬಳಸದ ಹಣಕ್ಕೂ ಬಡ್ಡಿಯನ್ನು ಪಾವತಿಸಬೇಕಾಗಬಹುದು.

ಇದನ್ನೂ ಓದಿ : Ampere Electric: ಹೊಚ್ಚ ಹೊಸ ಇವಿ ಸ್ಕೂಟರ್‌ ಬಿಡುಗಡೆ ಮಾಡಿದ ಆಂಪಿಯರ್!

ಅನೇಕ ಬಾರಿ ಬ್ಯಾಂಕುಗಳು ಮುಂಚಿತವಾಗಿ ಕಂತುಗಳನ್ನು ತೆಗೆದುಕೊಳ್ಳುತ್ತವೆ. ಹೀಗೆ ವಿವಿಧ ಸಂದರ್ಭಗಳಲ್ಲಿ ಗ್ರಾಹಕರು ಸಾಲದ ಮೇಲೆ ಹೆಚ್ಚಿನ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.ಇದರಿಂದಾಗಿ ಗ್ರಾಹಕರು ನಷ್ಟ ಅನುಭವಿಸಬೇಕಾಗುತ್ತದೆ. ಬ್ಯಾಂಕಿನ ಮೇಲಿನ ನಂಬಿಕೆಯು ಕಡಿಮೆಯಾಗುತ್ತದೆ.ಇದಲ್ಲದೆ,ಕೆಲವು ಬ್ಯಾಂಕ್‌ಗಳು/ಎನ್‌ಬಿಎಫ್‌ಸಿಗಳು ಅದೇ ತಿಂಗಳಲ್ಲಿ ಸಾಲವನ್ನು ನೀಡಿದರೂ ಅಥವಾ ಹಿಂತಿರುಗಿಸಿದರೂ ಸಹ ಇಡೀ ತಿಂಗಳಿಗೆ ಬಡ್ಡಿಯನ್ನು ವಿಧಿಸುತ್ತವೆ ಎನ್ನುವ ಅಂಶ ಕೂಡಾ ಆರ್‌ಬಿಐ ಗಮನಕ್ಕೆ ಬಂದಿದೆ.ಕೆಲವೊಮ್ಮೆ ಸಾಲ ನೀಡುವಾಗ ಬ್ಯಾಂಕ್‌ಗಳು ಕೆಲವು ಕಂತುಗಳನ್ನು ಮುಂಗಡವಾಗಿ ತೆಗೆದುಕೊಳ್ಳುತ್ತವೆ ಎಂದು ಆರ್‌ಬಿಐ ಹೇಳಿದೆ.ಸಂಪೂರ್ಣ ಸಾಲವನ್ನು ಪಡೆಯದಿದ್ದರೂ,ಸಾಲದ ಸಂಪೂರ್ಣ ಮೊತ್ತಕ್ಕೆ ಬಡ್ಡಿಯನ್ನು ವಿಧಿಸುತ್ತಲೇ ಇರುತ್ತಾರೆ.

ಉದಾಹರಣೆಗೆ, 10,000 ರೂ. ಸಾಲವನ್ನು ಪಡೆದಿದ್ದರೆ ಪ್ರತಿ ತಿಂಗಳು ಕಂತು ಪಾವತಿಸಬೇಕು.ಸಾಲ ನೀಡುವಾಗ ಬ್ಯಾಂಕ್ ಮುಂದಿನ ಎರಡು ತಿಂಗಳ ಕಂತನ್ನು ಅಂದರೆ 2,000 ರೂ.ಗಳನ್ನು ಮುಂಗಡವಾಗಿ ತೆಗೆದುಕೊಳ್ಳುತ್ತದೆ.ಅಂದರೆ ನಿಮಗೆ ಇಲ್ಲಿ ಸಿಗುವುದು ಕೇವಲ 8,000 ರೂ. ಆದರೆ, ಬ್ಯಾಂಕ್ ನಿಮಗೆ ಸಂಪೂರ್ಣ  10,000 ರೂ, ಮೇಲೆ  ಬಡ್ಡಿ ವಿಧಿಸುತ್ತದೆ.ಈ ಕ್ರಮ ತಪ್ಪು ಎನ್ನುತ್ತದೆ ಆರ್ ಬಿಐ.

ಇದನ್ನೂ ಓದಿ :   Lexus NX 350h: ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಮತ್ತೊಂದು ಐಷಾರಾಮಿ ಕಾರು!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News