ಪಿಎಫ್ ಚಂದಾದಾರರಿಗೆ ಬಿಗ್ ರಿಲೀಫ್ ನೀಡಿದೆ ಹೊಸ ನಿಯಮ !ಈಗ ಕೆಲಸ ಬದಲಿಸಿದರೂ ಈ ಚಿಂತೆ ಇಲ್ಲ !

Epfo Latest Update : ಏಪ್ರಿಲ್ 1 ರಿಂದ, ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಪ್ರಮುಖ ಬದಲಾವಣೆಗಳನ್ನು ತಂದಿದೆ.  ಇದು ವೇತನ ಪಡೆಯುವ ವರ್ಗಕ್ಕೆ  ಸಮಾಧಾನಕರ ವಿಷಯವಾಗಿದೆ.    

Written by - Ranjitha R K | Last Updated : Apr 2, 2024, 10:08 AM IST
  • ಏಪ್ರಿಲ್ 1ರಿಂದ ಭಾರತದಲ್ಲಿ ಹೊಸ ಹಣಕಾಸು ವರ್ಷ ಆರಂಭವಾಗಿದೆ.
  • ಭವಿಷ್ಯ ನಿಧಿ ನಿಯಮದಲ್ಲಿ ಪ್ರಮುಖ ಬದಲಾವಣೆ
  • ಏಪ್ರಿಲ್ 1 ರಿಂದ, ಈ ನಿಯಮ ಜಾರಿ
ಪಿಎಫ್ ಚಂದಾದಾರರಿಗೆ ಬಿಗ್ ರಿಲೀಫ್ ನೀಡಿದೆ ಹೊಸ ನಿಯಮ !ಈಗ ಕೆಲಸ ಬದಲಿಸಿದರೂ ಈ ಚಿಂತೆ ಇಲ್ಲ ! title=

Epfo Latest Update : ಏಪ್ರಿಲ್ 1ರಿಂದ ಭಾರತದಲ್ಲಿ ಹೊಸ ಹಣಕಾಸು ವರ್ಷ ಆರಂಭವಾಗಿದೆ.ಹೊಸ ಹಣಕಾಸು ವರ್ಷದಲ್ಲಿ, ಹಣಕಾಸು ಮತ್ತು ಉಳಿತಾಯದಂತಹ ಅನೇಕ ಯೋಜನೆಗಳಲ್ಲಿ ಹಲವು ಬದಲಾವಣೆಗಳು ಜಾರಿಗೆ ಬಂದಿವೆ.ಏಪ್ರಿಲ್ 1 ರಿಂದ, ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಪ್ರಮುಖ ಬದಲಾವಣೆಗಳನ್ನು ತಂದಿದೆ.  ಹೊಸ ನಿಯಮದ ಪ್ರಕಾರ,ವ್ಯಕ್ತಿಯು ತನ್ನ ಕೆಲಸವನ್ನು ಬದಲಾಯಿಸಿದಾಗ, ಅವನ ಹಳೆಯ ಇಪಿಎಫ್ ಬ್ಯಾಲೆನ್ಸ್ ಸ್ವಯಂಚಾಲಿತವಾಗಿ ಹೊಸ ಕಂಪನಿಗೆ ವರ್ಗಾಯಿಸಲ್ಪಡುತ್ತದೆ. ಅಂದರೆ EPF ಖಾತೆದಾರರು ಹೊಸ ಸಂಸ್ಥೆಗೆ ಸೇರಿದಾಗ PF ವರ್ಗಾವಣೆಯನ್ನು ಮಾನ್ಯುಯಲ್ ಆಗಿ ರಿಕ್ವೆಸ್ಟ್ ಮಾಡುವ ಅಗತ್ಯವಿಲ್ಲ. ಇದು ವೇತನ ಪಡೆಯುವ ವರ್ಗಕ್ಕೆ ಸಮಾಧಾನಕರ ವಿಷಯವಾಗಿದೆ.  

ಈ ಹಿಂದೆ, PF ವರ್ಗಾವಣೆಗಾಗಿ ರಿಕ್ವೆಸ್ಟ್ ಮಾಡಬೇಕಾಗಿತ್ತು. ಆದರೆ ಇನ್ನು ಮುಂದೆ ಆ ಕಷ್ಟ  ಇರುವುದಿಲ್ಲ. ಈ ಹಿಂದೆ ಖಾತೆಯನ್ನು ಬೇರೆ ಕಂಪನಿಗೆ ವರ್ಗಾಯಿಸುವುದು ಸಂಕೀರ್ಣ ಪ್ರಕ್ರಿಯೆಯಾಗಿದ್ದು, ಈಗ ಆ ಸಮಸ್ಯೆಯ ಚಿಂತೆ ಇರುವುದಿಲ್ಲ.  

ಇದನ್ನೂ ಓದಿ : One Vehicle One FASTag: ಏಪ್ರಿಲ್ 1ರಿಂದ ಜಾರಿಯಾಗಿದೆ ಹೊಸ ನಿಯಮ, ಕಾರಿನಲ್ಲಿ ಹೊರ ಹೋಗುವ ಮುನ್ನ ತಪ್ಪದೇ ತಿಳಿಯಿರಿ

ಈಗ EPF ಸದಸ್ಯರು ತಮ್ಮ PF ಖಾತೆಯನ್ನು ನಿರ್ವಹಿಸುವ ಭಯವಿಲ್ಲದೆ ಹೊಸ ವೃತ್ತಿಪರ ಅವಕಾಶಗಳನ್ನು ಹುಡುಕಬಹುದು. ಉದ್ಯೋಗಿಗಳು ತಮ್ಮ ಭವಿಷ್ಯ ನಿಧಿಯ ಬಗ್ಗೆ ನಿಗಾ ಇಡಲು ಚಿಂತಿಸಬೇಕಾಗಿಲ್ಲ. 

EPFO ಮಾಡಿರುವ ಈ ಸುಧಾರಣೆಯೊಂದಿಗೆ, ಉದ್ಯೋಗಿಗಳು ತಾವು ಉಳಿಸಿರುವ ಹಣವನ್ನು ಸುಲಭವಾಗಿ ಆಕ್ಸೆಸ್ ಪಡೆಯಲು ಅವಕಾಶ ಇಲ್ಲ. ಅಲ್ಲದೆ, ಇದು ನಿವೃತ್ತಿ ಜೀವನವನ್ನು  ಸುರಕ್ಷಿತ ಮತ್ತು ಹೆಚ್ಚು ಆರಾಮದಾಯಕವಾಗಿಸುತ್ತದೆ. 

ಯುನಿವರ್ಸಲ್ ಖಾತೆ ಸಂಖ್ಯೆ ಎಂದರೇನು? : 
ಯುನಿವರ್ಸಲ್ ಖಾತೆ ಸಂಖ್ಯೆಯು ಉದ್ಯೋಗಿಗಾಗಿ ವಿವಿಧ ಸಂಸ್ಥೆಗಳಿಂದ ನೀಡಲಾದ ಬಹು ಸದಸ್ಯ IDಗಳಿಗೆ ಕೇಂದ್ರೀಕೃತ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ.ಇದು ಸದಸ್ಯರು ಹೊಂದಿರುವ ಬಹು EPF ಖಾತೆಗಳನ್ನು ಲಿಂಕ್ ಮಾಡಲು ಸಹಾಯ ಮಾಡುತ್ತದೆ. UAN ಹಲವು ಪ್ರಯೋಜನಗಳನ್ನು ನೀಡುತ್ತದೆ. 

ಇದನ್ನೂ ಓದಿ : Arecanut Price in Karnataka: ಹಠಾತ್‌ ಏರಿಕೆ ಕಂಡ ಅಡಿಕೆ ಧಾರಣೆ..!

ಕಚೇರಿ ನೌಕರರು ಪ್ರತಿ ತಿಂಗಳು ತಮ್ಮ ಸಂಬಳದ ಒಂದು ಭಾಗವನ್ನು ನೌಕರರ ಭವಿಷ್ಯ ನಿಧಿಗೆ ಕೊಡುಗೆ ನೀಡುತ್ತಾರೆ. ಕಂಪನಿಯು ಪ್ರತಿ ತಿಂಗಳು ಅದೇ ಮೊತ್ತವನ್ನು ಉದ್ಯೋಗಿಯ ಖಾತೆಗೆ ಜಮಾ ಮಾಡುತ್ತದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಉದ್ಯೋಗಿಗಳ EPF ಖಾತೆಗಳನ್ನು ನಿರ್ವಹಿಸುತ್ತದೆ. ಉದ್ಯೋಗಿ ಕೊಡುಗೆಯನ್ನು ಇಪಿಎಫ್ ಖಾತೆಯಲ್ಲಿ ಠೇವಣಿ ಮಾಡಿದರೆ, ಕಂಪನಿಯ ಕೊಡುಗೆಯ ಒಂದು ಭಾಗವು ಇಪಿಎಫ್ ಖಾತೆಗೆ ಮತ್ತು ಇನ್ನೊಂದು ಭಾಗವು ಉದ್ಯೋಗಿಗಳ ಭವಿಷ್ಯ ನಿಧಿಗೆ (ಇಪಿಎಸ್)  ವರ್ಗಾಯಿಸುತ್ತದೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News