ಇನ್ನು ಇಲ್ಲೂ ಸಿಗುತ್ತದೆ 500 ರೂಪಾಯಿಗೆ ಗ್ಯಾಸ್ ಸಿಲಿಂಡರ್

Pradhan Mantri Ujjwala Yojana : ರಾಜಸ್ಥಾನದ ಬಳಿಕ ಗೋವಾದಲ್ಲಿಯೂ 500 ರೂ.ಗೆ ಗ್ಯಾಸ್ ಸಿಲಿಂಡರ್ ನೀಡುವ ಬಗ್ಗೆ ಇದೀಗ ಕಾಂಗ್ರೆಸ್ ಮಾತನಾಡುತ್ತಿದೆ. 500 ರೂ.ಗೆ ಗ್ಯಾಸ್ ಸಿಲಿಂಡರ್ ಲಭ್ಯವಾಗುವಂತೆ ಮಾಡುವುದಾಗಿ ಈ ಪತ್ರಗಳಲ್ಲಿ ಹೇಳಲಾಗಿದೆ.

Written by - Ranjitha R K | Last Updated : Jan 27, 2023, 03:25 PM IST
  • ಗೋವಾದಲ್ಲಿಯೂ 500 ರೂ.ಗೆ ಗ್ಯಾಸ್ ಸಿಲಿಂಡರ್
  • ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಲಾಭ
  • ಮನೆ ಮನೆಗೂ ಹಂಚಲಾಗುತ್ತಿದೆ ಪತ್ರ
ಇನ್ನು ಇಲ್ಲೂ ಸಿಗುತ್ತದೆ 500  ರೂಪಾಯಿಗೆ ಗ್ಯಾಸ್ ಸಿಲಿಂಡರ್ title=

Pradhan Mantri Ujjwala Yojana : ರಾಜಸ್ಥಾನದ ನಂತರ ಈಗ ಗೋವಾದಲ್ಲಿಯೂ 500 ರೂ.ಗೆ ಗ್ಯಾಸ್ ಸಿಲಿಂಡರ್ ಸಿಗುವ ಮಾತು ಕೇಳಿ ಬರುತ್ತಿದೆ. ಇತ್ತೀಚೆಗೆ, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ 500 ರೂ.ಗೆ  ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಗಳನ್ನು ಒದಗಿಸುವ ಬಗ್ಗೆ ಹೇಳಿಕೆ ನೀಡಿದ್ದರು. ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ 500 ರೂ. ಬೆಲೆಯ ಗ್ಯಾಸ್ ಸಿಲಿಂಡರ್ ನೀಡುವುದಾಗಿ  ಘೋಷಿಸಿದ್ದರು. 

ಮನೆ ಮನೆಗೂ ಹಂಚಲಾಗುತ್ತಿದೆ ಪತ್ರ : 
ರಾಜಸ್ಥಾನದ ಬಳಿಕ ಗೋವಾದಲ್ಲಿಯೂ 500 ರೂ.ಗೆ ಗ್ಯಾಸ್ ಸಿಲಿಂಡರ್ ನೀಡುವ ಬಗ್ಗೆ ಇದೀಗ ಕಾಂಗ್ರೆಸ್ ಮಾತನಾಡುತ್ತಿದೆ.  ಈ ಬಗ್ಗೆ ರಾಹುಲ್ ಗಾಂಧಿ ಬರೆದ ಪತ್ರಗಳನ್ನು ಗೋವಾ ಕಾಂಗ್ರೆಸ್ ಪರವಾಗಿ ರಾಜ್ಯದಲ್ಲಿ ಹಂಚಲಾಗುತ್ತಿದೆ. 2024ರಲ್ಲಿ ಪಕ್ಷ ಮತ್ತೆ ಅಧಿಕಾರಕ್ಕೆ ಬಂದರೆ 500 ರೂ.ಗೆ ಗ್ಯಾಸ್ ಸಿಲಿಂಡರ್ ಲಭ್ಯವಾಗುವಂತೆ ಮಾಡುವುದಾಗಿ ಈ ಪತ್ರಗಳಲ್ಲಿ ಹೇಳಲಾಗಿದೆ.

ಇದನ್ನೂ ಓದಿ : Old Pension Scheme : ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ : ಹಳೆಯ ಪಿಂಚಣಿ ವ್ಯವಸ್ಥೆ ಮರು ಜಾರಿಗೆ ಸುಪ್ರೀಂ ಅಸ್ತು!

ರಾಜಧಾನಿ ಪಣಜಿಯಲ್ಲಿ ಕಾಂಗ್ರೆಸ್ ನಿಂದ ಹಾತ್ ಸೇ ಹಾತ್ ಜೋಡೋ ಕಾರ್ಯಕ್ರಮ ಆರಂಭವಾಗಿದೆ. ಇದು ಭಾರತ್ ಜೋಡೋ ಯಾತ್ರೆಯ ಫಾಲೋ ಅಪ್ ಎಂದು ಹೇಳಲಾಗುತ್ತಿದೆ. ಮುಂದಿನ ಎರಡು ತಿಂಗಳ ಕಾಲ ಈ ಕಾರ್ಯಕ್ರಮವನ್ನು ಮುಂದುವರಿಸಲಾಗುವುದು. ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಅಮಿತ್ ಪಾಟ್ಕರ್ ಮಾತನಾಡಿ, 'ಹಾತ್ ಸೇ ಹಾತ್ ಜೋಡೋ ' ಕಾರ್ಯಕ್ರಮದ ಮುಖ್ಯ ಉದ್ದೇಶ ರಾಹುಲ್ ಗಾಂಧಿಯವರ ಪತ್ರ ಹಂಚುವುದು ಎಂದಿದ್ದಾರೆ. 

ಬೆಲೆ ಏರಿಕೆಯಿಂದಾಗಿ ಅಗತ್ಯ ವಸ್ತುಗಳ ದರ ಗಗನಮುಖಿಯಾಗಿದೆ ಎಂದು ಪಾಟ್ಕರ್ ಹೇಳಿದ್ದಾರೆ. 500 ರೂಪಾಯಿಗೆ ಸಿಲಿಂಡರ್ ನೀಡುವುದಾಗಿ ರಾಹುಲ್ ಗಾಂಧಿ ಭರವಸೆ ನೀಡಿದ್ದು, ರಾಹುಲ್ ಗಾಂಧಿ ಬರೆದ ಪತ್ರವನ್ನು ಪ್ರತಿ ಮನೆಗೂ ತಲುಪಿಸಲಾಗುವುದು ಎಂದು ಹೇಳಿದ್ದಾರೆ. ದೇಶದ ಯುವಕರಿಗೆ ಉದ್ಯೋಗ ನೀಡುವಲ್ಲಿ ಬಿಜೆಪಿ ವಿಫಲವಾಗಿದೆ ಎಂದು ಅವರು ಇದೆ ವೇಳೆ ದೂರಿದ್ದಾರೆ.    

ಇದನ್ನೂ ಓದಿ : Driving Licence : ಈಗ ಕಾರು, ಬೈಕ್, ಸ್ಕೂಟರ್ ಓಡಿಸಲು ಅಗತ್ಯವಿಲ್ಲ ಡಿಎಲ್ : ಅದಕ್ಕೆ ಈ ಕೆಲಸ ಮಾಡಿ!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News