ಆಧಾರ್‌ನೊಂದಿಗೆ ಪ್ಯಾನ್‌ ಲಿಂಕ್:‌ 600 ಕೋಟಿ ರೂ. ದಂಡ ಸಂಗ್ರಹಿಸಿದ ಕೇಂದ್ರ ಸರ್ಕಾರ!

PAN and Aadhaar Link: ಬಯೋಮೆಟ್ರಿಕ್ ಆಧಾರ್ ಜೊತೆಗೆ ಪ್ಯಾನ್ ಲಿಂಕ್ ಮಾಡಲು ಕೊನೆಯ ದಿನಾಂಕ ಜೂನ್ 30, 2023 ಆಗಿತ್ತು. ಈ ಗಡುವು ಉಲ್ಲಂಘಿಸಿದವರಿಗೆ 1,000 ರೂ ದಂಡ ವಿಧಿಸಲಾಗುತ್ತಿದೆ. ​

Written by - Puttaraj K Alur | Last Updated : Feb 8, 2024, 02:17 PM IST
  • ನಿಗದಿತ ಗಡುವಿನೊಳಗೆ ಪ್ಯಾನ್‌ ಮತ್ತು ಆಧಾರ್‌ ಕಾರ್ಡ್‌ ಲಿಂಕ್‌ ಮಾಡದವರಿಂದ ಭಾರೀ ದಂಡ ವಸೂಲಿ
  • ಜನರಿಂದ ಬರೋಬ್ಬರಿ 600 ಕೋಟಿ ರೂಪಾಯಿ ದಂಡ ವಸೂಲಿ ಮಾಡಿರುವ ಕೇಂದ್ರ ಸರಕಾರ
  • ಇನ್ನೂ 11.48 ಕೋಟಿ ಜನರು ತಮ್ಮ ಪ್ಯಾನ್‌ ಕಾರ್ಡ್‌ ಅನ್ನು ಆಧಾರ್‌ ಕಾರ್ಡ್‌ ಜೊತೆಗೆ ಲಿಂಕ್‌ ಮಾಡಿಲ್ಲ
ಆಧಾರ್‌ನೊಂದಿಗೆ ಪ್ಯಾನ್‌ ಲಿಂಕ್:‌ 600 ಕೋಟಿ ರೂ. ದಂಡ ಸಂಗ್ರಹಿಸಿದ ಕೇಂದ್ರ ಸರ್ಕಾರ! title=
600 ಕೋಟಿ ರೂ. ದಂಡ ವಸೂಲಿ 

ನವದೆಹಲಿ: ಆಧಾರ್‌ನೊಂದಿಗೆ ಪ್ಯಾನ್ ಲಿಂಕ್ ಮಾಡಲು ವಿಳಂಬ ಮಾಡಿದ ಜನರಿಂದ ಕೇಂದ್ರ ಸರ್ಕಾರವು ಬರೋಬ್ಬರಿ 600 ಕೋಟಿ ರೂ.ಗಳನ್ನು ದಂಡದ ರೂಪದಲ್ಲಿ ಸಂಗ್ರಹಿಸಿದೆ. ಇದಲ್ಲದೆ ಇದುವರೆಗೆ (ಜನವರಿ 29, 2024) ಒಟ್ಟು 11.48 ಕೋಟಿ ಮಂದಿ ತಮ್ಮ‌ ಪ್ಯಾನ್‌ ಕಾರ್ಡ್‌ ಅನ್ನು ಆಧಾರ್‌ ಕಾರ್ಡ್ ಜೊತೆಗೆ ಲಿಂಕ್‌ ಮಾಡಿಲ್ಲವೆಂದು ಹಣಕಾಸು ಇಲಾಖೆ ರಾಜ್ಯ ಸಚಿವ ಪಂಕಜ್‌ ಚೌಧರಿ ಲೋಕಸಭೆಯಲ್ಲಿ ತಿಳಿಸಿದ್ದಾರೆ. 

ನಿಗದಿತ ಗಡುವಿನಲ್ಲಿ ಪ್ಯಾನ್ ಮತ್ತು ಆಧಾರ್‌ ಕಾರ್ಡ್‌ ಲಿಂಕ್‌ ಮಾಡುವಲ್ಲಿ ವಿಫಲರಾದವರಿಂದ ದೊಡ್ಡ ಮೊತ್ತದ ದಂಡವನ್ನು ಸರ್ಕಾರ ವಸೂಲಿ ಮಾಡಿದೆ. 2024ರ ಜನವರಿ 29ರಂತೆ ವಿನಾಯಿತಿ ಪಡೆದ ವರ್ಗಗಳನ್ನು ಹೊರತುಪಡಿಸಿ ಆಧಾರ್‌ನೊಂದಿಗೆ ಲಿಂಕ್ ಮಾಡದ ಪ್ಯಾನ್‌ಗಳ ಸಂಖ್ಯೆ 11.48 ಕೋಟಿಯಾಗಿದೆ ಎಂದು ಚೌಧರಿ ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Modi Government 3.0:ಮೂರನೇ ಅವಧಿಗೂ ಬಿಜೆಪಿ : ಇದೇ ನಮ್ಮ ಗ್ಯಾರಂಟಿ ಎಂದ ಪ್ರಧಾನಿ ಮೋದಿ

ಜೂನ್ 30, 2023ರ ಕೊನೆಯ ದಿನಾಂಕದ ನಂತರ ತಮ್ಮ ಪ್ಯಾನ್ ಮತ್ತು ಆಧಾರ್ ಅನ್ನು ಲಿಂಕ್ ಮಾಡದ ವ್ಯಕ್ತಿಗಳಿಂದ 1,000 ರೂ.ಗಳ ದಂಡದ ಮೂಲಕ ಸರ್ಕಾರ ಗಳಿಸಿದ ವಿವರಗಳ ಕುರಿತ ಪ್ರಶ್ನೆಗೆ ಚೌಧರಿ ಉತ್ತರಿಸಿದ್ದು, “ಆಧಾರ್‌ನೊಂದಿಗೆ ಪ್ಯಾನ್ ಲಿಂಕ್ ಮಾಡದ ವ್ಯಕ್ತಿಗಳಿಂದ ಜುಲೈ 1, 2023ರಿಂದ ಜನವರಿ 31,2024ರವರೆಗೆ ಒಟ್ಟು  601.97 ಕೋಟಿ ರೂ. ದಂಡವನ್ನು ಸಂಗ್ರಹಿಸಲಾಗಿದೆʼʼ ಎಂದು ತಿಳಿಸಿದ್ದಾರೆ. 

ಬಯೋಮೆಟ್ರಿಕ್ ಆಧಾರ್ ಜೊತೆಗೆ ಪ್ಯಾನ್ ಲಿಂಕ್ ಮಾಡಲು ಕೊನೆಯ ದಿನಾಂಕ ಜೂನ್ 30, 2023 ಆಗಿತ್ತು. ಈ ಗಡುವು ಉಲ್ಲಂಘಿಸಿದವರಿಗೆ 1,000 ರೂ ದಂಡ ವಿಧಿಸಲಾಗುತ್ತಿದೆ. ತಮ್ಮ ಆಧಾರ್ ಅನ್ನು ತಿಳಿಸಲು ವಿಫಲವಾದ ತೆರಿಗೆದಾರರ ಪ್ಯಾನ್ ಜುಲೈ 1, 2023ರಿಂದ ನಿಷ್ಕ್ರಿಯಗೊಳ್ಳುತ್ತದೆ. ಇಂತಹ ಪ್ಯಾನ್‌ಗಳ ವಿರುದ್ಧ ಯಾವುದೇ ಮರುಪಾವತಿಯನ್ನು ಮಾಡಲಾಗುವುದಿಲ್ಲವೆಂದು ಆದಾಯ ತೆರಿಗೆ ಇಲಾಖೆ ಹೇಳಿದೆ. ಅಲ್ಲದೆ TDS ಮತ್ತು TCS ಅನ್ನು ಹೆಚ್ಚಿನ ದರದಲ್ಲಿ ಕಡಿತ ಅಥವಾ ಸಂಗ್ರಹಿಸಲಾಗುತ್ತದೆ. ಇಂತಹ ವ್ಯಕ್ತಿಗಳು 1,000 ರೂ.ಗಳ ವಿಳಂಬ ಶುಲ್ಕವನ್ನು ಪಾವತಿಸುವ ಮೂಲಕ ಪ್ಯಾನ್ ಅನ್ನು ಮತ್ತೆ ಕಾರ್ಯಗತಗೊಳಿಸಬಹುದು. 

ಇದನ್ನೂ ಓದಿ: Parliament Updates: ಸಂಸತ್ತಿಗೆ, ದೇಶಕ್ಕೆ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಕೊಡುಗೆ ಶ್ಲಾಘಿಸಿದ ಪ್ರಧಾನಿ ಮೋದಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News