ಕಾಂಗ್ರೆಸ್‍ನ ಆಮಿಷದ ಗ್ಯಾರಂಟಿ ತಿರಸ್ಕರಿಸಿ, ‘ಮೋದಿ’ ಎಂಬ ಅಸಲಿ ಗ್ಯಾರಂಟಿ ಒಪ್ಪಿದ ಜನ: ಬಿಜೆಪಿ

Assembly Election Results 2023: ಪ್ರಧಾನಿ ಮೋದಿಯವರು ಜಾರಿಗೆ ತಂದ ಅನೇಕ ಯೋಜನೆಗಳನ್ನು ಕೀಳುಮಟ್ಟದಲ್ಲಿ ಅಪಹಾಸ್ಯ ಮಾಡಿದ ಕಾಂಗ್ರೆಸ್‌ನ ನಾಯಕರಿಗೆ ಈಗ ಅದೇ ಬಡವರು ಮುಟ್ಟಿ ನೋಡಿಕೊಳ್ಳುವಂತಹ ಉತ್ತರ ನೀಡಿದ್ದಾರೆ ಎಂದು ಬಿಜೆಪಿ ಕುಟುಕಿದೆ.

Written by - Puttaraj K Alur | Last Updated : Dec 4, 2023, 09:08 PM IST
  • ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಬಿಜೆಪಿಯ ಸಾಧನೆ ಅತ್ಯದ್ಭುತ
  • ಪ್ರಧಾನಿ ಮೋದಿ ಸಮರ್ಥ, ದಕ್ಷ ಹಾಗೂ ಸದೃಢ ನಾಯಕತ್ವವನ್ನು 3 ರಾಜ್ಯಗಳ ಮತದಾರ ಒಪ್ಪಿಕೊಂಡಿದ್ದಾರೆ
  • ಕಾಂಗ್ರೆಸ್‍ಗೆ 3 ರಾಜ್ಯಗಳ ಮತದಾರ ಕಪಾಳಮೋಕ್ಷ ಮಾಡಿರುವುದು ಸಮಯೋಚಿತ ನಿರ್ಧಾರ
ಕಾಂಗ್ರೆಸ್‍ನ ಆಮಿಷದ ಗ್ಯಾರಂಟಿ ತಿರಸ್ಕರಿಸಿ, ‘ಮೋದಿ’ ಎಂಬ ಅಸಲಿ ಗ್ಯಾರಂಟಿ ಒಪ್ಪಿದ ಜನ: ಬಿಜೆಪಿ title=
ಕಾಂಗ್ರೆಸ್‍ಗೆ 3 ರಾಜ್ಯಗಳ ಮತದಾರರ ಕಪಾಳಮೋಕ್ಷ

ಬೆಂಗಳೂರು: ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢದಲ್ಲಿ ಬಿಜೆಪಿಯ ಸಾಧನೆ ಅತ್ಯದ್ಭುತ. ಪ್ರಧಾನಿ ಮೋದಿಯವರ ಸಮರ್ಥ, ದಕ್ಷ ಹಾಗೂ ಸದೃಢ ನಾಯಕತ್ವವನ್ನು 3 ರಾಜ್ಯಗಳ ಮತದಾರ ಮನಃಪೂರ್ವಕ ಒಪ್ಪಿಕೊಂಡಿದ್ದಾರೆ ಎಂಬುದಕ್ಕೆ ಮತದಾರ ನೀಡಿದ ಆಶೀರ್ವಾದ ಹಾಗೂ ದೊರೆತ ಅದ್ಭುತ ಫಲಿತಾಂಶವೇ ಸಾಕ್ಷಿ ಎಂದು ಬಿಜೆಪಿ ಹೇಳಿದೆ.

ಈ ಬಗ್ಗೆ ಸೋಮವಾರ ಸರಣಿ ಟ್ವೀಟ್ ಮಾಡಿದ ಬಿಜೆಪಿ, ‘ಸಮಾಜದಲ್ಲಿ ಜಾತಿಯ ವಿಷಬೀಜ ಬಿತ್ತಿ, ಸುಳ್ಳು, ಕುಹಕ, ಅಪಪ್ರಚಾರ ನಿಂದನೆಗಳನ್ನೇ ವೈಭವೀಕರಿಸುತ್ತಿದ್ದ ಕಾಂಗ್ರೆಸ್ ಪಕ್ಷಕ್ಕೆ 3 ರಾಜ್ಯಗಳ ಮತದಾರರ ಗಂಭೀರ ಕಪಾಳಮೋಕ್ಷ ಮಾಡಿರುವುದು ಅತ್ಯಂತ ಸಮಯೋಚಿತ ನಿರ್ಧಾರ. ಕಾಂಗ್ರೆಸ್‌ ಒಡ್ಡಿದ ಆಸೆ-ಆಮಿಷದ ಗ್ಯಾರಂಟಿಗಳನ್ನು ಸ್ಪಷ್ಟವಾಗಿ ತಿರಸ್ಕರಿಸಿ, “ಮೋದಿ” ಎಂಬ ಅಸಲಿ ಗ್ಯಾರಂಟಿಯನ್ನು ‘ಮಹಿಳೆಯರು, ಯುವಕರು, ರೈತರು ಹಾಗೂ ಬಡವರು' ಸೇರಿದಂತೆ ಪ್ರತಿಯೊಬ್ಬರು ಅಪ್ಪಿ-ಒಪ್ಪಿಕೊಂಡಿರುವುದು ಚುನಾವಣಾ ಫಲಿತಾಂಶದಿಂದ ಸ್ಪಷ್ಟ’ವೆಂದು ಬಿಜೆಪಿ ಟೀಕಿಸಿದೆ.

ಇದನ್ನೂ ಓದಿ: ಜಗತ್ತಿನ ಈ 6 ದೇಶಗಳಲ್ಲಿ ಸೂರ್ಯ ಮುಳುಗುವುದೇ ಇಲ್ಲ: ಅವು ಯಾವುವು ಗೊತ್ತಾ?

‘ಜಾತಿ-ಧರ್ಮಗಳನ್ನು ನೋಡದೇ, ದೇಶದ ಬಡವರಿಗಾಗಿ ಪ್ರಧಾನಿ ಮೋದಿ ಸರ್ಕಾರ ಜಾರಿಗೆ ತಂದಿದ್ದ ‘ಪಿಎಂ ಆವಾಸ್‌ ಯೋಜನೆ, ವಂದೇ ಭಾರತ್‌ ರೈಲು, ಜಲಜೀವನ್‌ ಮಿಷನ್‌, ಆಯುಷ್ಮಾನ್‌ ಭಾರತ್‌ ಸೇರಿದಂತೆ ಅನೇಕ ಯೋಜನೆಗಳನ್ನು ಕೀಳುಮಟ್ಟದಲ್ಲಿ ಅಪಹಾಸ್ಯ ಮಾಡಿದ ಕಾಂಗ್ರೆಸ್‌ನ ನಾಯಕರಿಗೆ ಈಗ ಅದೇ ಬಡವರು ಮುಟ್ಟಿ ನೋಡಿಕೊಳ್ಳುವಂತಹ ಉತ್ತರ ನೀಡಿದ್ದಾರೆ’ ಎಂದು ಬಿಜೆಪಿ ಕುಟುಕಿದೆ.

‘ಜಾತಿ-ಧರ್ಮಗಳಿಗಿಂತಲೂ ದೇಶ ದೊಡ್ಡದು, ದೇಶದ ಅಭಿವೃದ್ಧಿ ದೊಡ್ಡದು ಎಂಬ ಸ್ಪಷ್ಟ ಸಂದೇಶವನ್ನು ಕಾಂಗ್ರೆಸ್‌ಗೆ ಮತದಾರರು ಈ ಚುನಾವಣೆಯಲ್ಲಿ ನೀಡಿದ್ದಾರೆ. ಪ್ರಧಾನಿ ಮೋದಿಯವರ ಪರಿಕಲ್ಪನೆಯ ಪ್ರಕಾರ, ಪ್ರಸ್ತುತ ದೇಶದಲ್ಲಿ ಇರುವ 4 ಪ್ರಮುಖ ಜಾತಿಗಳಾದ ನಾರಿಶಕ್ತಿ, ಯುವಶಕ್ತಿ, ಬಡವರು ಮತ್ತು ರೈತರ ಸರ್ವತೋಮುಖ ಅಭಿವೃದ್ಧಿಗೆ ಅಹರ್ನಿಶಿಯಾಗಿ ಶ್ರಮಿಸುತ್ತಿರುವ ಬಿಜೆಪಿಗೆ ಹಾಗೂ ಪ್ರಧಾನಿ ಮೋದಿಯವರ ನಾಯಕತ್ವಕ್ಕೆ ಸಂದ ಜಯ ಇದು’ ಎಂದು ಬಿಜೆಪಿ ಟ್ವೀಟ್ ಮಾಡಿದೆ.

ಇದನ್ನೂ ಓದಿ: Daily GK Quiz: ಜಗತ್ತಿನ ಅತಿದೊಡ್ಡ ಫಿಲ್ಮ್ ಸ್ಟುಡಿಯೋ ಯಾವುದು?

‘ಜಾತಿ ವಿಭಜನೆಯಲ್ಲಿ ನಿರತವಾಗಿದ್ದ ಕಾಂಗ್ರೆಸ್‌ಗೆ ದೇಶದ ಪ್ರಮುಖ ಜಾತಿಗಳಾದ ನಾರಿಶಕ್ತಿ, ಯುವಶಕ್ತಿ, ಬಡವರು ಮತ್ತು ರೈತರು ಸರಿಯಾದ ಉತ್ತರವನ್ನೇ ನೀಡಿರುವುದು ವಿಶೇಷ. ಈ 3 ರಾಜ್ಯಗಳಲ್ಲಿ ದೊರೆತ ಸ್ಪಷ್ಟ ಬಹುಮತದ ಫಲಿತಾಂಶ ಕೇವಲ 3 ರಾಜ್ಯಗಳಲ್ಲಿ ಮಾತ್ರವಲ್ಲದೇ, ಜಗತ್ತಿನಾದ್ಯಂತ ಪ್ರತಿಧ್ವನಿಸಲಿದೆ. ಜನತೆ ಕಿಚಡಿ ಸರ್ಕಾರಕ್ಕಿಂತಲೂ ಪೂರ್ಣ ಬಹುಮತದ ಸರ್ಕಾರಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಾರೆ ಎಂಬ ಸಂದೇಶ ಎಲ್ಲೆಡೆ ಮೊಳಗುತ್ತಿದೆ’ ಎಂದು ಬಿಜೆಪಿ ಟೀಕಿಸಿದೆ.

‘ಪಂಚ ರಾಜ್ಯಗಳ ಚುನಾವಣೆಯನ್ನು ಮುಂಬರುವ ಲೋಕಸಭಾ ಚುನಾವಣೆಯ ಸೆಮಿಫೈನಲ್‌ ಎಂದೇ ಮಾಧ್ಯಮಗಳು ಸೇರಿದಂತೆ ಕಾಂಗ್ರೆಸ್‌ನ ಹಲವರು ಬಿಂಬಿಸಿದ್ದರು. ಸೆಮಿಫೈನಲ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ಕಂಡು ಕೇಳರಿಯದಂತಹ ರೀತಿಯಲ್ಲಿ ಮುಗ್ಗರಿಸಿದೆ. ಸೆಮಿಫೈನಲ್‌ನಲ್ಲಿ ಬಿಜೆಪಿ ಅರ್ಹವಾಗಿ ದಿಗ್ವಿಜಯ ಸಾಧಿಸುವ ಮೂಲಕ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿಯವರು ಹ್ಯಾಟ್ರಿಕ್‌ ಸಾಧಿಸುವುದು ಖಚಿತ ಹಾಗೂ ನಿಶ್ಚಿತ. ರಾಜ್ಯಗಳ ಹಾಗೂ ದೇಶದ ಸುಸ್ಥಿರ ಅಭಿವೃದ್ಧಿಗೆ ಪೂರ್ಣ ಬಹುಮತದ ಬಿಜೆಪಿ ಸರ್ಕಾರಗಳನ್ನು ಅಧಿಕಾರಕ್ಕೆ ತಂದಿರುವ ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಢ ಮತದಾರರು ನಿಜಕ್ಕೂ ಅಭಿನಂದನಾರ್ಹರು’ ಎಂದು ಬಿಜೆಪಿ ಟ್ವೀಟ್ ಮಾಡಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News