41 ವಯಸ್ಸಾದರೂ ತ್ರಿಶಾ ಇನ್ನೂ ಯಾಕೆ ಮದುವೆಯಾಗಿಲ್ಲ ಗೊತ್ತೆ..? ನಟಿಗೆ ಈ ಕ್ವಾಲೀಟಿ ಇರೋ ಹುಡುಗನೇ ಬೇಕಂತೆ

Trishna Krishan Marriage : ನಟಿ ತ್ರಿಶಾ ಪ್ರಸ್ತುತ ತಮಿಳು ಚಿತ್ರರಂಗದಲ್ಲಿ ಮಾತ್ರವಲ್ಲದೆ ದಕ್ಷಿಣ ಭಾರತದ ಟಾಪ್ ನಟಿ. ಮಲಯಾಳಂನಲ್ಲಿ ಟೊವಿನೋ ಥಾಮಸ್ ಜೊತೆ ಐಡೆಂಟಿಟಿ ಸಿನಿಮಾದಲ್ಲಿ ನಟಿಸುತ್ತಿರುವ ಅವರು ತೆಲುಗಿನಲ್ಲಿ ಮೆಗಾ ಸ್ಟಾರ್‌ ಚಿರಂಜೀವಿ ಜೊತೆ ವಿಶ್ವಂಬರ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ವಿಡತಿಲಾ ಚಿತ್ರದಲ್ಲಿ ಅಜಿತ್ ಜೊತೆಗೆ ನಾಯಕಿಯಾಗಿಯೂ ನಟಿಸಲಿದ್ದಾರೆ ಎನ್ನಲಾಗಿದೆ.  

Written by - Krishna N K | Last Updated : May 4, 2024, 04:31 PM IST
    • ನಟಿ ತ್ರಿಶಾ ದಕ್ಷಿಣ ಭಾರತದ ಟಾಪ್ ನಟಿ.
    • ಮದುವೆ ಕುರಿತು ಕ್ಲಾರೀಟಿ ನೀಡಿದ ತ್ರಿಶಾ.
    • ತ್ರಿಶಾ ಮದುವೆಯಾಗೊ ಹುಡುಗ ಹೇಗಿರ್ಬೇಕು ಗೊತ್ತೆ..?
41 ವಯಸ್ಸಾದರೂ ತ್ರಿಶಾ ಇನ್ನೂ ಯಾಕೆ ಮದುವೆಯಾಗಿಲ್ಲ ಗೊತ್ತೆ..? ನಟಿಗೆ ಈ ಕ್ವಾಲೀಟಿ ಇರೋ ಹುಡುಗನೇ ಬೇಕಂತೆ title=

Trisha Krishna Birthday : ಪೋಷಕ ನಟಿಯಾಗಿ ನಟನಾ ವೃತ್ತಿ ಪ್ರಾರಂಭಿಸಿದ ಚೆಲುವು, ಸೌತ್‌ ಸಿನಿ ಪ್ರೇಕ್ಷಕರ ನೆಚ್ಚಿನ ನಟಿಯಾಗಿ ಹೊರ ಹೊಮ್ಮಿದ್ದಾರೆ. ಇನ್ನು ತ್ರಿಶಾ ಎಂಥಾ ಬ್ಲಾಕ್ಬಸ್ಟರ್‌ ಹಿಟ್‌  ಸಿನಿಮಾ ಮಾಡಿದ್ರೂ ಸಹ ಜನ ಕೊನಗೆ ಅವರನ್ನ ಕೇಳುತ್ತಿರುವ ಒಂದೇ ಒಂದು ಪ್ರಶ್ನೆ ಅಂದ್ರೆ, ‘ನೀವು ಇನ್ನೂ ಏಕೆ ಮದುವೆಯಾಗಿಲ್ಲ’ ಅಂತ.. ಸಧ್ಯ ಈ ಕುರಿತು ನಟಿ ಉತ್ತರ ನೀಡಿದ್ದಾರೆ.

ನಟಿ ತ್ರಿಶಾ ಕೆಲವು ವರ್ಷಗಳ ಹಿಂದೆ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರಿಗೆ ಮದುವೆಯ ಬಗ್ಗೆ ಕೇಳಲಾಯಿತು. ಅದಕ್ಕೆ ಅವರು, ನನಗೆ ಉತ್ತರ ಗೊತ್ತಿಲ್ಲ. ಯೋಗ್ಯ ವ್ಯಕ್ತಿ ಸಿಕ್ಕರೆ, ಮದುವೆಯ ಬಗ್ಗೆ ಖಂಡಿತವಾಗಿಯೂ ಯೋಚಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಸತತವಾಗಿ ಸೋಲುತ್ತಿರುವ ಶ್ರೀಲೀಲಾ ಗೆಲ್ಲೋಕೆ ಇರೋದು ಒಂದೇ ಒಂದು ಚಾನ್ಸ್‌..! ಆ ಸಿನಿಮಾ ಸೋತರೆ..?

ಕಳೆದ ಕೆಲವು ವರ್ಷಗಳ ಹಿಂದೆ ನಟಿ ತೆಲುಗು ನಟ ರಾಣಾ ಜೊತೆ ಡೇಟಿಂಗ್‌ ಮಾಡುತ್ತಿದ್ದರು ಅಂತ ಹೇಳಲಾಗಿತ್ತು. ಇಬ್ಬರೂ ಬಾಲ್ಯದಿಂದಲೂ ಸ್ನೇಹಿತರಾಗಿದ್ದ ಕಾರಣ ಲವ್‌ ಹುಟ್ಟಿತ್ತು ಅಂತ ವದಂತಿ ಇತ್ತು. ಆದ್ರೆ, ಈ ಜೋಡಿ ಕೆಲಸ ವರ್ಷಗಳಿಂದ ದೂರವಾಗಿದ್ದಾರೆ ಎನ್ನಲಾಗಿದೆ.

ಅಂದಹಾಗೆ 2015ರಲ್ಲಿ ನಟಿ ತ್ರಿಶಾ ವರುಣ್ ಎಂಬ ಉದ್ಯಮಿಯ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ ಕಾರಣಾಂತರದಿಂದ ಇವರಿಬ್ಬರ ಸಂಬಂಧ ಮುರಿದು ಬಿದ್ದಿತ್ತು. ಅಂದಿನಿಂದ ತ್ರಿಶಾ ಯಾವುದೇ ಸಂಬಂಧದ ಸುಳಿಗೆ ಸಿಲುಕದೆ ಏಕಾಂಗಿಯಾಗಿ ಸರಳ ಜೀವನ ನಡೆಸುತ್ತಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News