ಕಬ್ಬಿಣದ ಪಾತ್ರೆಯಲ್ಲಿ ಈ ಐದು ಆಹಾರಗಳನ್ನು ಬೇಯಿಸಬಾರದು !ಯಾಕೆ ಎನ್ನುವುದನ್ನು ಕೂಡಾ ತಿಳಿದುಕೊಳ್ಳಿ !

Foods To Avoid Cooking In An Iron Kadhai : ಕೆಲವೊಂದು ಆಹಾರ ಪದಾರ್ಥಗಳನ್ನು ಕಬ್ಬಿಣದ ಪಾತ್ರೆಯಲ್ಲಿ ಮಾಡಿದರೆ ಸಮಸ್ಯೆಯನ್ನು ಉಂಟು ಮಾಡುತ್ತದೆ.

Written by - Ranjitha R K | Last Updated : May 16, 2024, 02:32 PM IST
  • ಅಡುಗೆಗೆ ಕಬ್ಬಿಣದ ಪಾತ್ರೆಗಳನ್ನು ಬಳಸಲು ಶಿಫಾರಸು ಮಾಡುತ್ತಾರೆ.
  • ಇದು ಆರೋಗ್ಯಕ್ಕೆ ಹಲವಾರು ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ.
  • ಕೆಲವೊಂದು ಆಹಾರ ಪದಾರ್ಥಗಳನ್ನು ಕಬ್ಬಿಣದ ಪಾತ್ರೆಯಲ್ಲಿ ಮಾಡಬಾರದು
 ಕಬ್ಬಿಣದ ಪಾತ್ರೆಯಲ್ಲಿ ಈ ಐದು ಆಹಾರಗಳನ್ನು ಬೇಯಿಸಬಾರದು !ಯಾಕೆ ಎನ್ನುವುದನ್ನು ಕೂಡಾ ತಿಳಿದುಕೊಳ್ಳಿ ! title=

Foods To Avoid Cooking In An Iron Kadhai : ಆರೋಗ್ಯ ತಜ್ಞರು ಸಾಮಾನ್ಯವಾಗಿ ಅಡುಗೆಗೆ ಕಬ್ಬಿಣದ ಪಾತ್ರೆಗಳನ್ನು ಬಳಸಲು ಶಿಫಾರಸು ಮಾಡುತ್ತಾರೆ.ಬದಲಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ವಿವಿಧ ರೀತಿಯ ಅಡುಗೆ ಸಾಮಾನುಗಳು ಬಂದರೂ ಇಂದಿಗೂ ಅನೇಕ ಮನೆಗಳಲ್ಲಿ ಅಡುಗೆಗೆ ಕಬ್ಬಿಣದ ಪಾತ್ರೆಯನ್ನೇ ಬಳಸುತ್ತಾರೆ.ಆಹಾರದ ರುಚಿ ಹೆಚ್ಚುವುದು ಮಾತ್ರ ಇದರ ಹಿಂದಿನ ಕಾರಣವಲ್ಲ, ಬದಲಿಗೆ ಇದು ಆರೋಗ್ಯಕ್ಕೆ ಹಲವಾರು ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಆದರೆ ಕೆಲವೊಂದು ಆಹಾರ ಪದಾರ್ಥಗಳನ್ನು ಕಬ್ಬಿಣದ ಪಾತ್ರೆಯಲ್ಲಿ ಮಾಡಿದರೆ ಸಮಸ್ಯೆಯನ್ನು ಉಂಟು ಮಾಡುತ್ತದೆ.

ಪಾಲಕ್ ಸೊಪ್ಪು :
ಕಬ್ಬಿಣದ ಪ್ಯಾನ್‌ನಲ್ಲಿ  ಪಾಲಕ್ ಸೊಪ್ಪಿನ ಯಾವುದೇ ರೀತಿಯ ಖಾದ್ಯವನ್ನು ಮಾಡಬಾರದು. ಪಾಲಕ್ ಸೊಪ್ಪಿನಲ್ಲಿರುವ ಆಕ್ಸಾಲಿಕ್ ಆಮ್ಲವು ಕಬ್ಬಿಣದೊಂದಿಗೆ ವೇಗವಾಗಿ ಪ್ರತಿಕ್ರಿಯಿಸುತ್ತದೆ.ಇದು ಪಾಲಕ್‌ನ ನೈಸರ್ಗಿಕ ಬಣ್ಣವನ್ನು ಹಾಳುಮಾಡುತ್ತದೆ. ಇದಲ್ಲದೆ,ಇದನ್ನು ತಿನ್ನುವುದು ನಿಮ್ಮ ಆರೋಗ್ಯಕ್ಕೆ ಹಾನಿ ಮಾಡುತ್ತದೆ.

ಇದನ್ನೂ ಓದಿ : ಅಪರೂಪದ ಶಸ್ತ್ರಚಿಕಿತ್ಸೆ: ಲಿವರ್ ಟ್ರಾನ್ಸಪ್ಲಾಂಟೇಶನ್ ಮೂಲಕ ಹೆಣ್ಣು ಶಿಶುವಿನ ಜೀವ ಉಳಿಸಿದ ವೈದ್ಯರು

ಮೊಟ್ಟೆ :
ಮೊಟ್ಟೆಗಳನ್ನು ಬೇಯಿಸಲು ಅಥವಾ ಯಾವುದೇ ಮೊಟ್ಟೆಯ ಭಕ್ಷ್ಯವನ್ನು ತಯಾರಿಸಲು ಕಬ್ಬಿಣದ ಪ್ಯಾನ್ ಅನ್ನು ಬಳಸದಿರುವುದು ಒಳ್ಳೆಯದು.  ಮೊಟ್ಟೆಯಲ್ಲಿರುವ ಸಲ್ಫರ್ ಕಬ್ಬಿಣದೊಂದಿಗೆ ಪ್ರತಿಕ್ರಿಯಿಸುತ್ತದೆ.ಇದರಿಂದಾಗಿ ಅವು ಕಂದು ಬಣ್ಣಕ್ಕೆ ತಿರುಗುತ್ತವೆ ಮತ್ತು ಅವುಗಳ ರುಚಿಯೂ ಹದಗೆಡುತ್ತದೆ. ಇದಲ್ಲದೆ, ಇದು ಹೊಟ್ಟೆಯಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು.

ನಿಂಬೆ  :
ಅಪ್ಪಿತಪ್ಪಿಯೂ ಕಬ್ಬಿಣದ ಬಾಣಲೆಯಲ್ಲಿ ನಿಂಬೆಹಣ್ಣನ್ನು ಬಳಸಬಾರದು. ಕಬ್ಬಿಣದ ಬಾಣಲೆಯಲ್ಲಿ ಯಾವುದೇ ರೀತಿಯ ಅಡುಗೆ ಮಾಡಿದರೂ ಅದಕ್ಕೆ ನಿಂಬೆ ಬೆರೆಸಬಾರದು. ನಿಂಬೆ ಬೆರೆಸಿದರೆ ಅದು ಜೀರ್ಣಾಂಗ ವ್ಯವಸ್ಥೆಯ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರಬಹುದು.ನಿಂಬೆಯಲ್ಲಿ ಕಂಡುಬರುವ ಅಸಿಟಿಕ್ ಆಮ್ಲವು ಕಬ್ಬಿಣದೊಂದಿಗೆ ಪ್ರತಿಕ್ರಿಯಿಸುತ್ತದೆ. ಇದು ಆಹಾರದ ರುಚಿಯನ್ನು ಹಾಳುಮಾಡುತ್ತದೆ. 

ಬೀಟ್ರೂಟ್ : 
ಕಬ್ಬಿಣದ ಪ್ಯಾನ್‌ನಲ್ಲಿ ಬೀಟ್‌ರೂಟ್ ಭಕ್ಷ್ಯಗಳನ್ನು ಕೂಡಾ ಮಾಡುವಂತಿಲ್ಲ. ಬೀಟ್ರೂಟ್ ಕಬ್ಬಿಣದಲ್ಲಿ ಸಮೃದ್ಧವಾಗಿದೆ. ಇದು ಕಬ್ಬಿಣದೊಂದಿಗೆ ಹೆಚ್ಚಿನ ರೀತಿಯಲ್ಲಿ ಪ್ರತಿಕ್ರಿಯಿಸುತ್ತದೆ. ಇದರಿಂದ ಆಹಾರದ ಬಣ್ಣ ಮತ್ತು ರುಚಿ ಹಾಳಾಗುತ್ತದೆ.ಇದಲ್ಲದೆ, ಇದು ಆರೋಗ್ಯಕ್ಕೂ ಹಾನಿ ಉಂಟು ಮಾಡುತ್ತದೆ. 

ಇದನ್ನೂ ಓದಿ : Soups For Diabetes: ಮಧುಮೇಹ ನಿಯಂತ್ರಣಕ್ಕೆ ವರದಾನವಿದ್ದಂತೆ ಈ 3 ಬಗೆಯ ವೆಜ್ ಸೂಪ್‌ಗಳು

ಟೊಮೆಟೊ :
ಟೊಮೆಟೊಗಳು ಹೆಚ್ಚಿನ ಪ್ರಮಾಣದ ಟಾರ್ಟಾರಿಕ್ ಆಮ್ಲವನ್ನು ಹೊಂದಿರುತ್ತವೆ.ಇದು ಕಬ್ಬಿಣದೊಂದಿಗೆ ಬಹಳ ಸುಲಭವಾಗಿ  ಪ್ರತಿಕ್ರಿಯಿಸುತ್ತದೆ.ಇದು ಆಹಾರದಲ್ಲಿ ಲೋಹೀಯ ರುಚಿಯನ್ನು ಉಂಟುಮಾಡಬಹುದು. 

(ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=O-hDphMYFMg

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News