Is Allu Arjun Arrested? Pushpa 2 ಚಿತ್ರೀಕರಣದ ಮಧ್ಯೆಯೇ ಅಲ್ಲು ಅರ್ಜುನ್ ಅರೆಸ್ಟ್! ನಿಜಾನಾ?

Pushpa 2 Shooting Update: ಟಾಲಿವುಡ್ ಸೂಪರ್ ಸ್ಟಾರ್ ಅಲ್ಲು ಅರ್ಜುನ್ (Tollywood Super Star Allu Arjun) ಛಾಯಾ ಚಿತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿದೆ. ಈ ಛಾಯಾಚಿತ್ರ ವೈರಲ್ ಆದ ಬಳಿಕ ನಟನನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ ಎಂದು ಸಾಕಷ್ಟು ಸುದ್ದಿಗಳು ಹ್ರಬರಲಾರಂಭಿಸಿದವು. ಈ ಸುದ್ದಿಯ ಹಿಂದಿನ ಸಂಪೂರ್ಣ ಸತ್ಯಾಸತ್ಯತೆ ಏನು ತಿಳಿದುಕೊಳ್ಳೋಣ ಬನ್ನಿ (Entertainment News In Kannada)  

Written by - Nitin Tabib | Last Updated : Mar 25, 2024, 04:30 PM IST
  • ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಇತ್ತೀಚೆಗಷ್ಟೇ ವೈಜಾಗ್ ತಲುಪಿದ್ದರು.
  • ನಿರ್ದೇಶಕ ಸುಕುಮಾರ್ ಅವರ ಮುಂಬರುವ ಚಿತ್ರ ಪುಷ್ಪ 2 ಅಲ್ಲಿ ಚಿತ್ರೀಕರಣಗೊಳ್ಳಬೇಕಿತ್ತು.
  • ಈ ವೇಳೆ ಸೂಪರ್‌ಸ್ಟಾರ್ ಅಲ್ಲು ಅರ್ಜುನ್‌ಗೆ ವೈಜಾಗ್‌ನಲ್ಲಿ ಅದ್ಧೂರಿ ಸ್ವಾಗತ ನೀಡಲಾಗಿದೆ.
Is Allu Arjun Arrested? Pushpa 2 ಚಿತ್ರೀಕರಣದ ಮಧ್ಯೆಯೇ ಅಲ್ಲು ಅರ್ಜುನ್ ಅರೆಸ್ಟ್! ನಿಜಾನಾ? title=

Allu Arjun Arrested? ಟಾಲಿವುಡ್ ಸೂಪರ್‌ಸ್ಟಾರ್ ಅಲ್ಲು ಅರ್ಜುನ್ (Allu Arjun) ಇತ್ತೀಚಿನ ದಿನಗಳಲ್ಲಿ ತಮ್ಮ ಮುಂಬರುವ ಚಿತ್ರ ಪುಷ್ಪ 2 ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಏತನ್ಮಧ್ಯೆ, ಇತ್ತೀಚೆಗೆ ಪುಷ್ಪಾ ಸ್ಟಾರ್ ಅವರ ಫೋಟೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸದ್ದು ಮಾಡಿದೆ. ಇದರಲ್ಲಿ ಅವರು ಸರ್ಕಾರಿ ಕಚೇರಿಯೊಳಗೆ (Allu Arjun Hyderabad RTO Office Visit Photo Goes Viral On Social Media) ಕೆಲವು ದಾಖಲೆಗಳಿಗೆ ಸಹಿ ಹಾಕುತ್ತಿರುವುದು ಕಂಡುಬಂದಿದೆ. ಈ ಛಾಯಾಚಿತ್ರ ವೈರಲ್ ಆಗುತ್ತಿದ್ದಂತೆ ಎಲ್ಲೆಡೆ ಚಿತ್ರನಟನನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ ಎಂಬ ಊಹಾಪೋಹಗಳು ಕೇಳಿಬಂದವು. ಸೂಪರ್‌ಸ್ಟಾರ್ ಅಲ್ಲು ಅರ್ಜುನ್ ಅವರನ್ನು ಹೈದರಾಬಾದ್ ಪೊಲೀಸರು (Hyderabad Police) ಬಂಧಿಸಿದ್ದಾರೆ ಎಂಬ ವರದಿಗಳು ಬಿತ್ತರಗೊಳ್ಳಲು ಆರಂಭಿಸಿದವು. ಬಳಿಕ ಅವರು ಹೈದರಾಬಾದ್‌ನ ಆರ್‌ಟಿಒ ಕಚೇರಿ ತಲುಪಿದರು ಮತ್ತು ಈ ಸುದ್ದಿ ಶುದ್ಧ ಅಸಂಬದ್ಧ ಎಂದು ಸಾಬೀತಾಯಿತು.

ಹಾಗಾದ್ರೆ ಅಲ್ಲು ಅರ್ಜುನ್ ನಿಜಕ್ಕೂ ಬಂಧನಕ್ಕೆ ಒಳಗಾಗಿದ್ದರೇ?
ಈಗ ಈ ಸುದ್ದಿಯ ಹಿಂದಿನ ಸಂಪೂರ್ಣ ಸತ್ಯಾಸತ್ಯೆತೆ ಏನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ, ಸೂಪರ್ ಸ್ಟಾರ್ ಅಲ್ಲು ಅರ್ಜುನ್ ತಮ್ಮ ಇಂಟರ್ನ್ಯಾಷನಲ್ ಡ್ರೈವಿಂಗ್ ಲೈಸನ್ಸ್ ಪಡೆಯಲು ಖೈರ್ತಾಬಾದ್‌ನ ಆರ್‌ಟಿಒ ಕಚೇರಿಗೆ ತಲುಪಿದ್ದರು. ಅವರ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ (Social Media) ಕಾಣಿಸಿಕೊಂಡ ತಕ್ಷಣ ವೈರಲ್ ಆಗಲು ಪ್ರಾರಂಭಿಸಿವೆ. ಅವರ ಮುಂಬರುವ ಚಿತ್ರ ಪುಷ್ಪ 2 ರ ಚಿತ್ರೀಕರಣಕ್ಕಾಗಿ ಈ ಅಂತರರಾಷ್ಟ್ರೀಯ ಡ್ರೈವಿಂಗ್ ಲೈಸನ್ಸ್ ಅನ್ನು ಅವರು ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ವರದಿಗಳನ್ನು ನಂಬುವುದಾದರೆ, ಸೂಪರ್‌ಸ್ಟಾರ್ ಅಲ್ಲು ಅರ್ಜುನ್ ಅವರ ಮುಂಬರುವ ಚಿತ್ರ ಪುಷ್ಪ 2 ನಲ್ಲಿ ನಿರ್ದೇಶಕ ಸುಕುಮಾರ್ ಪ್ರಚಂಡ ಸಾಹಸ ದೃಶ್ಯಗಳನ್ನು ಯೋಜಿಸಿದ್ದಾರೆ. ಇದಕ್ಕಾಗಿ ನಟನಿಗೆ ಇಂಟರ್ನ್ಯಾಷನಲ್ ಡ್ರೈವಿಂಗ್ ಲೈಸೆನ್ಸ್ (International Driving License) ಅಗತ್ಯವಿತ್ತು. ಇದರಿಂದ ಚಿತ್ರದ ಶೂಟಿಂಗ್ ಯಾವುದೇ ತೊಂದರೆಯಿಲ್ಲದೆ ಮುಗಿಯುತ್ತದೆ. ಈ ಕಾರಣಕ್ಕಾಗಿ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ನಿನ್ನೆ ಆರ್‌ಟಿಒ ಕಚೇರಿಗೆ ಆಗಮಿಸಿದ್ದರು. 

ಇದನ್ನೂ ಓದಿ-The Great Indian Kapil Show ಟ್ರೇಲರ್ ಬಿಡುಗಡೆ, ಷೋಗೆ ಗುಥ್ಥಿ ಪಾತ್ರದ ಮರುಪ್ರವೇಶ!

ವೈಜಾಗ್‌ನಲ್ಲಿ ಅಲ್ಲು ಅರ್ಜುನ್ ಅವರಿಗೆ ಅದ್ಧೂರಿ ಸ್ವಾಗತ ಕೋರಲಾಗಿದೆ
ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಇತ್ತೀಚೆಗಷ್ಟೇ ವೈಜಾಗ್ ತಲುಪಿದ್ದರು. ನಿರ್ದೇಶಕ ಸುಕುಮಾರ್ ಅವರ ಮುಂಬರುವ ಚಿತ್ರ ಪುಷ್ಪ 2 ಅಲ್ಲಿ ಚಿತ್ರೀಕರಣಗೊಳ್ಳಬೇಕಿತ್ತು. ಈ ವೇಳೆ ಸೂಪರ್‌ಸ್ಟಾರ್ ಅಲ್ಲು ಅರ್ಜುನ್‌ಗೆ ವೈಜಾಗ್‌ನಲ್ಲಿ ಅದ್ಧೂರಿ ಸ್ವಾಗತ ನೀಡಲಾಗಿದೆ. ಇದಾದ ಬಳಿಕ  ಅವರ ಸ್ವಾಗತದ ಛಾಯಾಚಿತ್ರಗಳು ಮನರಂಜನಾ ಸುದ್ದಿ ಜಗತ್ತಿನಲ್ಲಿ ಕಾಡ್ಗಿಚ್ಚಿನಂತೆ ವೈರಲ್ ಆದವು. ಸೂಪರ್‌ಸ್ಟಾರ್‌ನ ಈ ಚಿತ್ರಗಳು ಸಾಕಷ್ಟು ಸುದ್ದಿಯನ್ನು ಮಾಡಿವೆ. 

ಇದನ್ನೂ ಓದಿ-ಇನ್‌ಸ್ಟಾಗ್ರಾಮ್‌ನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಟಾಪ್ 5 ಸೌತ್‌ ನಟರಿವರು!!

ಈ ದಿನ 'ಪುಷ್ಪ 2' ಬೆಳ್ಳಿ ಪರದೆಗೆ ಬರಲಿದೆ
ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ 'ಪುಷ್ಪ 2' ಸಿನಿಮಾದ ಶೂಟಿಂಗ್ ಜೋರಾಗಿ ಸಾಗುತ್ತಿದೆ. ಈ ಚಿತ್ರದಲ್ಲಿ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ನಟಿ ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ, ಫಹದ್ ಫಾಸಿಲ್ (Fahad Fazil) ಮುಖ್ಯ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಅಭಿನಯದ ಈ ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಭಾರೀ ಕ್ರೇಜ್ ಇದೆ. ಈ ವರ್ಷ ಆಗಸ್ಟ್ 15, 2024 ರೊಳಗೆ ಈ ಚಿತ್ರವನ್ನು ಬಿಡುಗಡೆ (Pushpa 2 Release Date) ಮಾಡಲು ನಿರ್ಮಾಪಕ-ನಿರ್ದೇಶಕರು ಸಿದ್ಧತೆ ನಡೆಸುತ್ತಿದ್ದಾರೆ ಎಂಬ ವದಂತಿಗಳಿವೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News