ಪುಷ್ಪಾ 2 ಸಿನಿಮಾದಲ್ಲಿ ಅಲ್ಲು ಅರ್ಜುನ್‌ ತೊಟ್ಟಿರುವ ಸೀರೆ ಹಿಂದಿದೆ ಭಾವನಾತ್ಮ ಕತೆ..! ಅಷ್ಟಕ್ಕೂ ಈ ಸೀರೆ ಯಾರದ್ದು ಗೊತ್ತೆ..?

Allu arjun saree : ಬಹುನಿರೀಕ್ಷಿತ ಪುಷ್ಪ 2 ಚಿತ್ರ ಆಗಸ್ಟ್‌ನಲ್ಲಿ ಬಿಡುಗಡೆಯಾಗಲಿದೆ. ಪುಷ್ಪಾ ಮೊದಲ ಬಾಗ ಸೂಪರ್‌ ಹಿಟ್‌ ಆದನಂತರ ಇದೀಗ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಪುಷ್ಪಾ 2 (Pushpa 2 Allu Arjun) ಮೂಲಕ ಪ್ಯಾನ್ ಇಂಡಿಯಾ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸಲು ಸಜ್ಜಾಗಿದ್ದಾರೆ.

Written by - Krishna N K | Last Updated : Apr 10, 2024, 05:19 PM IST
    • ಪುಷ್ಪ 2 ಚಿತ್ರ ಆಗಸ್ಟ್‌ನಲ್ಲಿ ಬಿಡುಗಡೆಯಾಗಲಿದೆ.
    • ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಪುಷ್ಪಾ 2
    • ಪುಷ್ಪಾ 2 ಸಿನಿಮಾದಲ್ಲಿ ಅರ್ಜುನ್‌ ತೊಟ್ಟ ಸೀರೆ ಯಾರದ್ದು ಗೊತ್ತೆ..?
ಪುಷ್ಪಾ 2 ಸಿನಿಮಾದಲ್ಲಿ ಅಲ್ಲು ಅರ್ಜುನ್‌ ತೊಟ್ಟಿರುವ ಸೀರೆ ಹಿಂದಿದೆ ಭಾವನಾತ್ಮ ಕತೆ..! ಅಷ್ಟಕ್ಕೂ ಈ ಸೀರೆ ಯಾರದ್ದು ಗೊತ್ತೆ..? title=

Pushpa 2: The Rule Teaser  : ಸ್ಟಾರ್‌ ಡೈರೆಕ್ಟರ್‌ ಸುಕುಮಾರ್‌ ನಿರ್ದೇಶನದ ಸ್ಟೈಲಿಶ್‌ ಸ್ಟಾರ್‌ ಅಲ್ಲು ಅರ್ಜುನ್‌ ಅಭಿನಯದ ಪುಷ್ಪಾ 2 ಸಿನಿಮಾದ ಟೀಸರ್‌ ಬಿಡುಗಡೆಯಾಗಿದ್ದು, ಕುತೂಹಲ ಕೆರಳಿಸುತ್ತಿದೆ. ಟೀಸರ್‌ನಲ್ಲಿ ಅರ್ಜುನ್‌ ಸೀರೆಯುಟ್ಟು ಮಾತೆ ಕಾಳಿಯ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಈ ದೃಶ್ಯದಲ್ಲಿ ಬನ್ನಿ ತೊಟ್ಟ ಸೀರೆಯ ಬಗ್ಗೆ ಇದೀಗ ಚರ್ಚೆ ನಡೆಯುತ್ತಿದೆ.

ಹೌದು.. ಭಾರತೀಯ ಸಿನಿರಂಗದಲ್ಲಿ ಸಧ್ಯಕ್ಕೆ ಸದ್ದು ಮಾಡುತ್ತಿರುವ ಸಿನಿಮಾ ಅಂದ್ರೆ ಪುಷ್ಪ 2. ಈ ಚಿತ್ರ ಆಗಸ್ಟ್‌ನಲ್ಲಿ ಬಿಡುಗಡೆಯಾಗಲಿದೆ. ಪುಷ್ಪಾ ಮೊದಲ ಬಾಗ ಸೂಪರ್‌ ಹಿಟ್‌ ಆದನಂತರ ಇದೀಗ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಪುಷ್ಪಾ 2 (Pushpa 2 Allu Arjun) ಮೂಲಕ ಪ್ಯಾನ್ ಇಂಡಿಯಾ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸಲು ಸಜ್ಜಾಗಿದ್ದಾರೆ.

ಸಧ್ಯ ಪುಷ್ಪಾ 2 ಟೀಸರ್ ಸಖತ್‌ ಸದ್ದು ಮಾಡುತ್ತಿದೆ. ಟೀಸರ್‌ನಲ್ಲಿ ಅಲ್ಲು ಅರ್ಜುನ್​ ಗಂಗಮ್ಮ ಜಾತ್ರೆಯಲ್ಲಿ ಕಾಳಿ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಎಲ್ಲರ ಗಮನ ಸೆಳೆಯುತ್ತಿದೆ. ಈ ದೃಶ್ಯ ಸಿನಿಮಾದ ಹೈಲೈಟ್ ಎನ್ನಲಾಗುತ್ತಿದ್ದು, ಕುತೂಹಲ ಕೆರಳಿಸುತ್ತಿದೆ. ಇದೇ ವೇಳೆ ಅರ್ಜುನ್‌ ತೊಟ್ಟ ಸೀರೆಯ ಬಗ್ಗೆ ಚರ್ಚೆಯೂ ಸಹ ನಡೆಯುತ್ತಿದೆ. 

ಗಂಗಮ್ಮ ಜಾತ್ರೆಯಲ್ಲಿ ಅಲ್ಲು ಅರ್ಜುನ್ ತೊಟ್ಟ ಸೀರೆಯ ಹಿಂದೆ ಭಾವನಾತ್ಮಕ ನಂಟಿದೆ ಅಂತ ಹೇಳಲಾಗುತ್ತಿದೆ. ​ ಕಟ್ಟಿದ ಸೀರೆಯಲ್ಲಿ ವಿಶೇಷತೆ ಇದೆ ಎನ್ನಲಾಗುತ್ತದೆ.. ಇದು ತಾಯಿಯ ಸೆಂಟಿಮೆಂಟ್ ಗೆ ಸಂಬಂಧಿಸಿದ್ದು. ಈ ದೃಶ್ಯದಲ್ಲಿ ಐಕಾನ್ ಸ್ಟಾರ್ ಧರಿಸಿರುವ ಸೀರೆ ನಿಜವಾಗಿ ಬನ್ನಿ ತಾಯಿಯದ್ದಾಗಿದೆ. ಇದು ಸೆಂಟಿಮೆಂಟ್ ಆಗಿರುತ್ತದೆ ಎಂದುಕೊಂಡು ನಿರ್ದೇಶಕ ಸುಕುಮಾರ್ ಇಂಥದ್ದೊಂದು ನಿರ್ಧಾರ ಕೈಗೊಂಡಿದ್ದಾರಂತೆ. ಈ ಹೊಡೆದಾಟದ ದೃಶ್ಯ ಸಿನಿಮಾದಲ್ಲಿ ಹೇಗೆ ಇರಲಿದೆ ಎಂಬುದನ್ನು ನೋಡಲು ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.

ಈ ವರ್ಷ ಆಗಸ್ಟ್ 15 ರಂದು ಪುಷ್ಪ 2 (Allu Arjun) ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ (Rashmika Mandanna) ನಾಯಕಿಯಾಗಿದ್ದರೆ. ರಾವ್ ರಮೇಶ್, ಫಹಾದ್ ಫಾಜಿಲ್, ಅನಸೂಯಾ, ಸುನೀಲ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ದೇವಿಶ್ರೀ ಸಂಗೀತ ನಿರ್ದೇಶನವಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News