Pushpa 2 Teaser: ಅಲ್ಲು ಅರ್ಜುನ್ ನಟನೆಯ 'ಪುಷ್ಪ 2 ದಿ ರೂಲ್' ಟೀಸರ್ ಬಿಡುಗಡೆ

Pushpa 2 Teaser : ಇಂದು (ಏಪ್ರಿಲ್ 8) ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಪುಷ್ಪ 2 ಟೀಸರ್ ಬಿಡುಗಡೆ ಮಾಡಲಾಗಿದೆ.

Written by - Chetana Devarmani | Last Updated : Apr 8, 2024, 12:10 PM IST
  • ಇಂದು ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಹುಟ್ಟುಹಬ್ಬ
  • ಬರ್ತ್‌ ಡೇ ಗೆ ಸಲ್ಪೆಷಲ್‌ ಗಿಫ್ಟ್‌ ಕೊಟ್ಟ ಪುಷ್ಪ 2 ಚಿತ್ರತಂಡ
  • 'ಪುಷ್ಪ 2 ದಿ ರೂಲ್' ಟೀಸರ್ ಬಿಡುಗಡೆ
Pushpa 2 Teaser: ಅಲ್ಲು ಅರ್ಜುನ್ ನಟನೆಯ 'ಪುಷ್ಪ 2 ದಿ ರೂಲ್' ಟೀಸರ್ ಬಿಡುಗಡೆ title=

Pushpa 2 Teaser Released : ಕೊನೆಗೂ ಬನ್ನಿ ಅಭಿಮಾನಿಗಳ ಕಾಯುವಿಕೆ ಅಂತ್ಯವಾಗಿದೆ. ಪುಷ್ಪ 2 ನಿರ್ಮಾಪಕರು ಪುಷ್ಪರಾಜ್‌ಗೆ ಹುಟ್ಟುಹಬ್ಬಕ್ಕೆ ಸ್ಪೆಷಲ್‌ ಗಿಫ್ಟ್‌ ಕೊಟ್ಟಿದ್ದಾರೆ. ಇಂದು (ಏಪ್ರಿಲ್ 8) ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಪುಷ್ಪ 2 ಟೀಸರ್ ಬಿಡುಗಡೆ ಮಾಡಲಾಗಿದೆ. ಭಾರೀ ನಿರೀಕ್ಷೆಗಳ ನಡುವೆ ಬಿಡುಗಡೆಯಾಗಿರುವ ಈ ಟೀಸರ್ ಚಿತ್ರದ ಹೈಪ್ ಹೆಚ್ಚಿಸಿದೆ. 

ಫುಲ್ ಮಾಸ್ ಅವತಾರದಲ್ಲಿ ಬನ್ನಿ ನೋಡಿ ಫ್ಯಾನ್ಸ್‌ ದಿಲ್‌ ಖುಷ್‌ ಆಗಿದೆ. ದೇವಿ ಶ್ರೀ ನೀಡಿದ ಬಿಜಿಎಂ ಗೂಸ್‌ಬಂಪ್ಸ್ ಬರಿಸುವಂತಿದೆ. ಹಿಂದೆಂದೂ ಕಾಣದ ಮಾಸ್‌ ಗೆಟಪ್‌ನಲ್ಲಿ ಅಲ್ಲು ಅರ್ಜುನ್‌ ಮಿಂಚಿದ್ದಾರೆ. ಒಂದೇ ಒಂದು ಡೈಲಾಗ್ ಇಲ್ಲದ ಕೇವಲ ಬಿಜಿಎಂ ಜೊತೆಗೆ ಬರುವ ಇಡೀ ಟೀಸರ್ ಗೂಸ್ ಬಂಪ್ಸ್ ನೀಡುತ್ತಿದೆ. ಪುಷ್ಪಾ 2 ಟೀಸರ್ ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಫುಲ್ ಮೀಲ್ಸ್ ನೀಡಿದೆ. 

ಇದನ್ನೂ ಓದಿ: ಅಲ್ಲು ಅರ್ಜುನ್ ಪತ್ನಿ ಸ್ನೇಹಾ ರೆಡ್ಡಿಗಿಂತಲೂ ಸುಂದರಿ ಅವರ ಮೊದಲ ಗರ್ಲ್‌ಫ್ರೆಂಡ್!!‌ ಯಾರು ಗೊತ್ತೇ? 

ಅಲ್ಲು ಅರ್ಜುನ್ ಮತ್ತು ಸುಕುಮಾರ್ ಕಾಂಬಿನೇಷನ್‌ನಲ್ಲಿ ಬರುವ ಪುಷ್ಪ ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಸೃಷ್ಟಿಸಿದ್ದು ಗೊತ್ತೇ ಇದೆ. ಆ ಕಂಟೆಂಟ್.. ಆ ಮ್ಯೂಸಿಕ್ ಪ್ಯಾನ್ ಇಂಡಿಯಾವನ್ನೇ ಬೆಚ್ಚಿಬೀಳಿಸಿತ್ತು. ಪುಷ್ಪರಾಜ್ ಪಾತ್ರದಲ್ಲಿ ನಟಿಸಿದ ಅಲ್ಲು ಅರ್ಜುನ್ ಕಂಡು ಇಡೀ ದೇಶವೇ ಮೆಚ್ಚಿಕೊಂಡಿದೆ. ಈಗ ಈ ಚಿತ್ರದ ಎರಡನೇ ಭಾಗವಾದ ಪುಷ್ಪ 2 ದಿ ರೂಲ್ ಟೀಸ್ರ್‌ ಜನರ ನಿರೀಕ್ಷೆಯನ್ನು ಹೆಚ್ಚಿಸಿದೆ. 

ಹಿಂದಿನ ಬ್ಲಾಕ್ ಬಸ್ಟರ್ ಹಿಟ್ ಪುಷ್ಪಾ ಚಿತ್ರದ ಸೀಕ್ವೆಲ್ ಆಗಿ ಬರುತ್ತಿರುವ ಈ ಸಿನಿಮಾದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹದ್ ಫಾಜಿಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದೀಗ ಪುಷ್ಪ 2 ದಿ ರೂಲ್ ಮತ್ತೊಮ್ಮೆ ಗಲ್ಲಾಪೆಟ್ಟಿಗೆಯನ್ನು ಕೊಳ್ಳೆಹೊಡೆಯುವ ಸಾಧ್ಯತೆಯಿದೆ. ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ದೇವಿ ಶ್ರೀ ಪ್ರಸಾದ್ ಸಂಗೀತ ನೀಡಿದ್ದಾರೆ.

ಈ ವರ್ಷ ಆಗಸ್ಟ್ 15 ರಂದು ಪುಷ್ಪ 2 ಬಿಡುಗಡೆ ಮಾಡಲು ತಯಾರಕರು ಯೋಜಿಸುತ್ತಿದ್ದಾರೆ. ಸುಮಾರು ಎರಡು ವರ್ಷಗಳಿಂದ ಪುಷ್ಪ 2  ಚಿತ್ರೀಕರಣ ನಡೆಯುತ್ತಿದ್ದು, ಭಾರೀ ನಿರೀಕ್ಷೆಗಳಿವೆ. ತೆಲುಗು ಅಲ್ಲದೆ ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ. 

ಇದನ್ನೂ ಓದಿ: Allu Arjun Birthday: ಐಷಾರಾಮಿ ವಿಲ್ಲಾ, ಪ್ರೈವೇಟ್ ಜೆಟ್ ಒಡೆಯನಾಗಿರುವ ಐಕಾನ್‌ ಸ್ಟಾರ್ ಒಟ್ಟು ಆಸ್ತಿ ಎಷ್ಟು ಗೊತ್ತೇ? 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News