ಸದ್ಯ ಕರ್ನಾಟಕದ ಮೂಲದ 1904 ಮಂದಿ ಯುಎಇಯಲ್ಲಿದ್ದು, ಈ ಪೈಕಿ 121 ಗರ್ಭಿಣಿಯರಿದ್ದಾರೆ. ವೀಸಾ ಅವಧಿ ಮುಗಿದ 522 ನಿರೋದ್ಯೋಗಿಗಳು, 157 ರೋಗಿಗಳು ಇತರ 95 ಮಂದಿ ಇತರೆ ಕಾರಣಗಳಿಂದ ವಾಪಸ್ ಬರಲಾರದೆ ಸಂಕಷ್ಟಕ್ಕೆ ಸಿಲುಕಿ ತಾಯ್ನಾಡಿಗೆ ವಾಪಸಾಗಲು ಸರ್ಕಾರದ ನೆರವನ್ನು ಕೋರಿರುತ್ತಾರೆ.
ಕೋವಿಡ್ ಹಿನ್ನಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ದುಬೈ ಕನ್ನಡಿಗರಿಗೆ ಆಹಾರ, ಆರೋಗ್ಯ ಹಾಗೂ ಕಾನೂನು ಸೇವೆ ಒದಗಿಸಲು ಅಲ್ಲಿನ ಅನಿವಾಸಿ ಭಾರತೀಯ ಉದ್ಯಮಿಗಳು, ವೃತ್ತಿಪರರು ವೆಬ್ಸೈಟ್ ಆರಂಭಿಸಿ ನೆರವು ಒದಗಿಸುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ವಿದೇಶಗಳಿಂದ ಬರುವ 10-12 ಸಾವಿರ ಜನರಿಗೆ ಕ್ವಾರಂಟೈನ್ ವ್ಯವಸ್ಥೆಯನ್ನೂ ರಾಜ್ಯ ಸರ್ಕಾರದ ಕಡೆಯಿಂದ ಮಾಡಲಾಗುತ್ತದೆ ಎಂದರು.
ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಬಾಂಧವ್ಯವನ್ನು ಹೆಚ್ಚಿಸುವ ಪ್ರಧಾನಿ ಮೋದಿ ಪ್ರಯತ್ನಕ್ಕೆ ಯುಎಇಯ ಅತ್ಯುನ್ನತ ನಾಗರಿಕ ಪ್ರಶಸ್ತಿ 'ಆರ್ಡರ್ ಆಫ್ ಜಾಯೆದ್' ನ್ನು ನೀಡಿ ಗೌರವಿಸಲಾಯಿತು.ಈ ಹಿಂದೆ ಈ ಪ್ರಶಸ್ತಿಯನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ರಾಣಿ ಎಲಿಜಬೆತ್ II ಮತ್ತು ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಸೇರಿದಂತೆ ಹಲವಾರು ವಿಶ್ವ ನಾಯಕರಿಗೆ ನೀಡಲಾಗಿದೆ.
ಭಾರತ-ಪಾಕ್ ನಡುವಿನ ವಿಚಾರದಲ್ಲಿ ನಾವು ಮಧ್ಯಸ್ಥಿಕೆ ವಹಿಸಿಲ್ಲ, ಆದರೆ ಪ್ರಕ್ಷುಬ್ಧ ಸ್ಥಿತಿ ಕುಗ್ಗಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದೇವೆ ಎಂದು ಯುಎಇ ಭಾರತ ರಾಯಭಾರಿ ಅಹ್ಮದ್ ಅಲ್ಬನ್ನಾ ಸೋಮವಾರದಂದು ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.