Turkey Syria Earthquake : ಟರ್ಕಿ, ಸಿರಿಯಾ ಭೂಕಂಪ, ಸಾವಿನ ಸಂಖ್ಯೆ 7000ಕ್ಕೆ ಏರಿಕೆ..!

ಟರ್ಕಿ, ಸಿರಿಯಾ ಭೂಕಂಪದಲ್ಲಿ ಸತ್ತವರ ಸಂಖ್ಯೆ 7000 ದಾಟಿದೆ. ಭೂಕಂಪದಲ್ಲಿ ಇಲ್ಲಿಯವರೆಗೆ 7800 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗಬಹುದು. ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ. ಆದರೆ ಭಾರೀ ಹಿಮ ಮತ್ತು ಮಳೆಯು ರಕ್ಷಣಾ ಕಾರ್ಯಾಚರಣೆಗೆ ಸವಾಲಾಗಿ ನಿಂತಿದೆ. ಕಟ್ಟಡಗಳ ನಡುವೆ ಸಿಲುಕಿರುವವರನ್ನು ರಕ್ಷಿಸುವ ಪ್ರಯತ್ನ ಮುಂದುವರಿದಿದೆ. ಈ ಭೂಕಂಪ ಟರ್ಕಿ ದೇಶ ಕಂಡ ಅತಿ ದೊಡ್ಡ ಭೂಕಂಪವಾಗಿದೆ. 

Written by - Krishna N K | Last Updated : Feb 8, 2023, 04:31 PM IST
  • ಟರ್ಕಿ, ಸಿರಿಯಾ ಭೂಕಂಪದಲ್ಲಿ ಸತ್ತವರ ಸಂಖ್ಯೆ 7000 ದಾಟಿದೆ.
  • ಭೂಕಂಪದಲ್ಲಿ ಇಲ್ಲಿಯವರೆಗೆ 7800 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
  • ಸಾವಿನ ಸಂಖ್ಯೆ ಹೆಚ್ಚಾಗಬಹುದು. ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ.
Turkey Syria Earthquake : ಟರ್ಕಿ, ಸಿರಿಯಾ ಭೂಕಂಪ, ಸಾವಿನ ಸಂಖ್ಯೆ 7000ಕ್ಕೆ ಏರಿಕೆ..! title=

Turkey Syria Earthquake Updates : ಟರ್ಕಿ, ಸಿರಿಯಾ ಭೂಕಂಪದಲ್ಲಿ ಸತ್ತವರ ಸಂಖ್ಯೆ 7000 ದಾಟಿದೆ. ಭೂಕಂಪದಲ್ಲಿ ಇಲ್ಲಿಯವರೆಗೆ 7800 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗಬಹುದು. ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ. ಆದರೆ ಭಾರೀ ಹಿಮ ಮತ್ತು ಮಳೆಯು ರಕ್ಷಣಾ ಕಾರ್ಯಾಚರಣೆಗೆ ಸವಾಲಾಗಿ ನಿಂತಿದೆ. ಕಟ್ಟಡಗಳ ನಡುವೆ ಸಿಲುಕಿರುವವರನ್ನು ರಕ್ಷಿಸುವ ಪ್ರಯತ್ನ ಮುಂದುವರಿದಿದೆ. ಈ ಭೂಕಂಪ ಟರ್ಕಿ ದೇಶ ಕಂಡ ಅತಿ ದೊಡ್ಡ ಭೂಕಂಪವಾಗಿದೆ. 

ಕಟ್ಟಡದೊಳಗೆ ಸಿಲುಕಿರುವವರು ಸಹಾಯಕ್ಕಾಗಿ ಧ್ವನಿ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕವೂ ಸಹಾಯಕ್ಕಾಗಿ ಮನವಿಗಳ ಮಹಾಪೂರವೇ ಹರಿದು ಬರುತ್ತಿದೆ. ಆದರೆ ರಕ್ಷಣಾ ಪಡೆಗಳು ಸಂತ್ರಸ್ತರ ಸ್ಥಳಗಳನ್ನು ತಲುಪಲು ಸಾಧ್ಯವಾಗುತ್ತಿಲ್ಲ. ಒಡೆದ ರಸ್ತೆಗಳು ಮತ್ತು ವಿದ್ಯುತ್ ತಂತಿಗಳಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಅಲ್ಲದೆ, ಹವಾಮಾನ ಪ್ರಮುಖ ಅಡಚಣೆಯಾಗಿದೆ. ಇದುವರೆಗೆ 8000ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ ಎಂದು ಟರ್ಕಿ ಹೇಳಿದೆ.

ಇದನ್ನೂ ಓದಿ: Photos : ಭೂಕಂಪದ ನಂತರ 17 ಗಂಟೆಗಳವರೆಗೆ ತನ್ನ ಪುಟ್ಟ ತಮ್ಮನನ್ನು ಸುರಕ್ಷಿತವಾಗಿರಿಸಿದ ಏಳು ವರ್ಷದ ಬಾಲಕಿ

ತಮ್ಮ ಮನೆ ಮತ್ತು ನಿವಾಸಗಳನ್ನು ಕಳೆದುಕೊಂಡವರಿಗೆ ಪುನರ್ವಸತಿ ಮತ್ತು ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ದುರಂತದ ಪ್ರದೇಶದಲ್ಲಿ 50,000 ಡೇರೆಗಳು ಮತ್ತು 100,000 ಹಾಸಿಗೆಗಳನ್ನು ಸಿದ್ಧಪಡಿಸಲಾಗಿದೆ ಎಂದು ಟರ್ಕಿ ಘೋಷಿಸಿತು. ಮತ್ತಷ್ಟು ಕಂಪನಕ್ಕೆ ಒಳಗಾಗುವ ಪ್ರದೇಶಗಳನ್ನು ಗುರುತಿಸಲು ಇತರ ದೇಶಗಳೊಂದಿಗೆ ಉಪಗ್ರಹ ನಿಗಾ ವರದಿಗಳನ್ನು ಹಂಚಿಕೊಳ್ಳುವುದಾಗಿ ಯುರೋಪಿಯನ್ ಯೂನಿಯನ್ ತಿಳಿಸಿದೆ.

ಸಿರಿಯಾದಲ್ಲಿ, ಸರ್ಕಾರಿ ನಿಯಂತ್ರಿತ ಪ್ರಾಂತ್ಯಗಳಾದ ಅಲೆಪ್ಪೊ, ಲಟಾಕಿಯಾ, ಹಮಾ, ಇಡ್ಲಿಬ್ ಮತ್ತು ಟಾರ್ಟೌಸ್‌ನಲ್ಲಿ 812 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಸಿರಿಯಾದ ವಿರೋಧದ ಹಿಡಿತದಲ್ಲಿರುವ ವಾಯುವ್ಯ ಪ್ರದೇಶದಲ್ಲಿ 1,120 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಈ ಮಧ್ಯ, ಟರ್ಕಿಯ ಅಧ್ಯಕ್ಷ ಎರ್ಡೋಗನ್ 10 ಟರ್ಕಿಯ ಪ್ರಾಂತ್ಯಗಳನ್ನು ವಿಪತ್ತು ವಲಯಗಳಾಗಿ ಘೋಷಿಸಿದ್ದಾರೆ ಮತ್ತು ಮೂರು ತಿಂಗಳ ತುರ್ತು ಪರಿಸ್ಥಿತಿಯನ್ನು ವಿಧಿಸಿದ್ದಾರೆ.

ಇದನ್ನೂ ಓದಿ: ಟರ್ಕಿಗೆ ನೆರವು ನೀಡಲು ಮುಂದಾಗಿದ್ದ ಭಾರತಕ್ಕೆ ವಾಯುಪ್ರದೇಶ ನಿರಾಕರಿಸಿದ ಪಾಕ್

ಸಧ್ಯ ಟರ್ಕಿ ಸಹಾಯಕ್ಕೆ ವಿವಿಧ ದೇಶಗಳು ಮುಂದಾಗಿವೆ. ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ಸೇರಿದಂತೆ 45 ದೇಶಗಳು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಾಯ ನೀಡಿವೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಎರಡು ತಂಡಗಳನ್ನು ಟರ್ಕಿಗೆ ಕಳುಹಿಸಲು ಸಿದ್ಧ ಎಂದು ಭಾರತ ಘೋಷಿಸಿದೆ. ಭಾರತವು ಟರ್ಕಿಯಲ್ಲಿ ಎರಡು 50 ಸದಸ್ಯರ NDRF ತಂಡಗಳನ್ನು ನಿಯೋಜಿಸಿದೆ. ಜನರಿಗೆ ಆಹಾರ ಮತ್ತು ಔಷಧ ಸೇರಿದಂತೆ ಇತರೆ ಅಗತ್ಯ ವಸ್ತುಗಳನ್ನು ಸೇನೆ ವಿಮಾನಗಳ ಮೂಲಕ ತೆಗೆದುಕೊಂಡು ಹೋಗಿವೆ. ಅಲ್ಲದೆ, ನೆಲದಡಿ ಸಿಲುಕಿರುವವರನ್ನು ಪತ್ತೆ ಹಚ್ಚಲು ವಿಶೇಷ ತರಬೇತಿ ಪಡೆದ ಶ್ವಾನ ದಳದ ತಂಡವನ್ನು ಜೊತೆಗೆ ಕರೆದೊಯ್ಯದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News