ಟರ್ಕಿ- ಸಿರಿಯಾ ಭೂಕಂಪದಲ್ಲಿ ಸತ್ತವರ ಸಂಖ್ಯೆ 16,000ಕ್ಕೆ ಏರಿಕೆ ! ಎತ್ತ ನೋಡಿದರೂ ಆಘಾತಕಾರಿ ದೃಶ್ಯಗಳೇ !

Turkey earth quake : ಟರ್ಕಿ ಮತ್ತು ಸಿರಿಯಾದಲ್ಲಿ ಸೋಮವಾರ ಸಂಭವಿಸಿದ ಭೂಕಂಪಕ್ಕೆ 16,000 ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸತತ ರಕ್ಷಣಾ ಕಾರ್ಯದ ನಂತರ ಇದೀಗ ರಕ್ಷಣಾ ಪಡೆಗಳು ರಕ್ಷಣಾ ಕಾರ್ಯವನ್ನು ಸ್ಥಗಿತಗೊಳಿಸಲಿವೆ ಎನ್ನಲಾಗಿದೆ. 

Written by - Ranjitha R K | Last Updated : Feb 9, 2023, 04:07 PM IST
  • ಭೂಕಂಪಕ್ಕೆ 16,000 ಕ್ಕೂ ಹೆಚ್ಚು ಮಂದಿ ಸಾವು
  • ನಾಲ್ಕನೇ ದಿನವೂ ಮುಂದುವರೆದ ರಕ್ಷಣಾ ಕಾರ್ಯ
  • ರಾಷ್ಟ್ರೀಯ ವಿಪತ್ತು ಎಂದು ಕರೆದ ಟರ್ಕಿ ಅಧ್ಯಕ್ಷ
ಟರ್ಕಿ- ಸಿರಿಯಾ  ಭೂಕಂಪದಲ್ಲಿ ಸತ್ತವರ ಸಂಖ್ಯೆ 16,000ಕ್ಕೆ ಏರಿಕೆ ! ಎತ್ತ ನೋಡಿದರೂ ಆಘಾತಕಾರಿ ದೃಶ್ಯಗಳೇ ! title=

Turkey earth quake : ಟರ್ಕಿ ಮತ್ತು ಸಿರಿಯಾದಲ್ಲಿ ಸೋಮವಾರ ಸಂಭವಿಸಿದ ಭೂಕಂಪಕ್ಕೆ 16,000 ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸಾವಿನ ಸಂಖ್ಯೆಗಳು ಇನ್ನಷ್ಟು ಹೆಚ್ಚಾಗುವ  ಸಾಧ್ಯತೆ ಇದೆ. ಇದುವರೆಗೆ ಟರ್ಕಿಯ ಅಧಿಕಾರಿಗಳು 12,873 ಸಾವು ಪ್ರಕರಣವನ್ನು ದೃಢ ಪಡಿಸಿದ್ದರೆ, ಸಿರಿಯಾದಲ್ಲಿ 3,162ಕ್ಕೂ ಅಧಿಕ ಮಂದಿ ಅಸು ನೀಗಿದ್ದಾರೆ ಎನ್ನಲಾಗಿದೆ. 

ಭೂಕಂಪಗಳ ನಂತರ ನಾಲ್ಕನೇ ದಿನವೂ ರಕ್ಷಣಾ ಕಾರ್ಯ ಮುಂದುವರೆದಿತ್ತು. ಆದರೆ ಇನ್ನು ಅವಶೇಷಗಳಡಿ ಸಿಲುಕಿದವರು ಬದುಕುಳಿಯುವ ಭರವಸೆ ಕಡಿಮೆ ಎಂದೇ ಹೇಳಲಾಗುತ್ತಿದೆ. ಅಲ್ಲಿನ ಮಾಧ್ಯಮಗಳ ಪ್ರಕಾರ, ಸತತ ರಕ್ಷಣಾ ಕಾರ್ಯದ ನಂತರ ಇದೀಗ ರಕ್ಷಣಾ ಪಡೆಗಳು ರಕ್ಷಣಾ ಕಾರ್ಯವನ್ನು ಸ್ಥಗಿತಗೊಳಿಸಲಿವೆ ಎನ್ನಲಾಗಿದೆ.   

ಇದನ್ನೂ ಓದಿ : Turkey Syria Earthquake : ಟರ್ಕಿ, ಸಿರಿಯಾ ಭೂಕಂಪ, ಸಾವಿನ ಸಂಖ್ಯೆ 7000ಕ್ಕೆ ಏರಿಕೆ..!

ಮೊದಲ ಭೂಕಂಪ ಸಂಭವಿಸಿದ ನಂತರ  ಒಟ್ಟು 1,117 ಆಘಾತಗಳನ್ನು ಎದುರಿಸಬೇಕಾಯಿತು ಎಂದು ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ. 

ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಬುಧವಾರ ಭೂಕಂಪದ ಕೇಂದ್ರಬಿಂದುವಿಣ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ. ಅಲ್ಲದೆ ಇದೊಂದು ರಾಷ್ಟ್ರೀಯ ವಿಪತ್ತು ಎಂದು ಅವರು ಬಣ್ಣಿಸಿದ್ದಾರೆ.  ಈ ಹಾನಿಯು  ರಾಷ್ಟ್ರದ ಆರ್ಥಿಕತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನಲಾಗಿದೆ. 

ಇದನ್ನೂ ಓದಿ : Photos : ಭೂಕಂಪದ ನಂತರ 17 ಗಂಟೆಗಳವರೆಗೆ ತನ್ನ ಪುಟ್ಟ ತಮ್ಮನನ್ನು ಸುರಕ್ಷಿತವಾಗಿರಿಸಿದ ಏಳು ವರ್ಷದ ಬಾಲಕಿ

ಮತ್ತೊಂದೆಡೆ, ಭೂಕಂಪದ ಸುದ್ದಿ ತಿಳಿಯುತ್ತಿದ್ದಂತೆಯೇ ಏಷ್ಯಾದ ಹಲವಾರು ದೇಶಗಳು ತಮ್ಮ ಸಹಾಯ ಹಸ್ತ ಚಾಚಿವೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G

Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News