ಅಮೆರಿಕ ಅಧ್ಯಕ್ಷ Joe Biden ಆಪ್ತ ವಲಯದಲ್ಲಿ ಇನ್ನಿಬ್ಬರು ಭಾರತೀಯರು

ವಿನಯ್ ರೆಡ್ಡಿ ಮತ್ತು ಗೌತಮ್ ರಾಘವನ್ ಅವರ ನೇಮಕಾತಿಯು ಅಧ್ಯಕ್ಷ ಜೊ ಬಿಡೆನ್ ಮತ್ತು ಉಪಾಧ್ಯಕ್ಷರಾಗಿ ಚುನಾಯಿತರಾದ ಕಮಲಾ ಹ್ಯಾರಿಸ್ ಸೂಚಿಸಿರುವ ಇತರೆ ನಾಲ್ಕು ಹಿರಿಯ ಶ್ವೇತಭವನದ ಸಿಬ್ಬಂದಿ ನೇಮಕಾತಿಗಳ ಘೋಷಣೆಯೊಂದಿಗೆ ಪ್ರಕಟಗೊಳ್ಳಲಿದೆ.  

Written by - Yashaswini V | Last Updated : Dec 23, 2020, 09:05 AM IST
  • ಜೋ ಬಿಡೆನ್ ಅವರ ಭಾಷಣ ಬರಹಗಾರ ಹುದ್ದೆಗೆ ವಿನಯ್ ರೆಡ್ಡಿ ಹೆಸರು ಶಿಫಾರಸು
  • ಅಧ್ಯಕ್ಷರ ಸಿಬ್ಬಂದಿ ಕಚೇರಿ ಉಪ ನಿರ್ದೇಶಕರ ಹುದ್ದೆಗೆ ಗೌತಮ್ ರಾಘವನ್ ಹೆಸರು ಶಿಫಾರಸು
  • ಈಗಾಗಲೇ ಆರೋಗ್ಯ ಇಲಾಖೆ ಸಲಹೆಗಾರರ ಸ್ಥಾನಕ್ಕೆ ಸೂಚಿತರಾಗಿರುವ ಡಾ.‌ ವಿವೇಕ್ ಮೂರ್ತಿ
ಅಮೆರಿಕ ಅಧ್ಯಕ್ಷ Joe Biden ಆಪ್ತ ವಲಯದಲ್ಲಿ ಇನ್ನಿಬ್ಬರು ಭಾರತೀಯರು title=
Gautam Raghavan, Vinay Reddy (Image courtesy: ANI)

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷರಾಗಿ ಚುನಾಯಿತರಾದ ಜೋ ಬಿಡನ್ (US President Joe Biden) ಜನವರಿಯಲ್ಲಿ ಅಧಿಕಾರ ವಹಿಸಿಕೊಳ್ಳಲು ಸಿದ್ಧತೆ ನಡೆಸುತ್ತಿದ್ದು ಅವರ ಆಪ್ತ ವಲಯದಲ್ಲಿ ಇನ್ನಿಬ್ಬರು ಭಾರತೀಯ ಮೂಲದ ಅಮೆರಿಕನ್ನರ ಹೆಸರು ಕೇಳಿಬರುತ್ತಿದೆ.

ದೀರ್ಘಕಾಲದ ಸಹವರ್ತಿ ವಿನಯ್ ರೆಡ್ಡಿ (Vinay reddy) ಅವರನ್ನು ಬಿಡೆನ್ ತಮ್ಮ ಭಾಷಣ ಬರಹಗಾರ ಹುದ್ದೆಗೆ ಸೂಚಿಸಿದ್ದಾರೆ.‌ ಈ ಹಿಂದೆ ಶ್ವೇತಭವನದಲ್ಲಿ ಸಮುದಾಯದ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಗೌತಮ್ ರಾಘವನ್ (Gowtham Raghawan) ಅವರನ್ನು ಅಧ್ಯಕ್ಷರ ಸಿಬ್ಬಂದಿ ಕಚೇರಿಯ ಉಪ ನಿರ್ದೇಶಕರನ್ನಾಗಿ ನೇಮಕ ಮಾಡಲು ಸೂಚಿಸಿದ್ದಾರೆ. 

ವಿನಯ್ ರೆಡ್ಡಿ ಮತ್ತು ಗೌತಮ್ ರಾಘವನ್ ಅವರ ನೇಮಕಾತಿಯು ಅಧ್ಯಕ್ಷ ಜೊ ಬಿಡೆನ್ ಮತ್ತು ಉಪಾಧ್ಯಕ್ಷರಾಗಿ ಚುನಾಯಿತರಾದ ಕಮಲಾ ಹ್ಯಾರಿಸ್ (Kamala Harries) ಸೂಚಿಸಿರುವ ಇತರೆ ನಾಲ್ಕು ಹಿರಿಯ ಶ್ವೇತಭವನದ ಸಿಬ್ಬಂದಿ ನೇಮಕಾತಿಗಳ ಘೋಷಣೆಯೊಂದಿಗೆ ಪ್ರಕಟಗೊಳ್ಳಲಿದೆ.

ಇದಲ್ಲದೆ ಮ್ಯಾನೇಜ್ಮೆಂಟ್ ಮತ್ತು ಅಡ್ಮಿನಿಸ್ಟ್ರೇಷನ್ ನಿರ್ದೇಶಕರಾಗಿ ಆನ್ ಫಿಲಿಪಿಕ್, ವೇಳಾಪಟ್ಟಿ ಮತ್ತು ಮುಂಗಡ ನಿರ್ದೇಶಕರಾಗಿ ರಿಯಾನ್ ಮೊಂಟೊಯಾ, ಉಪ ಮುಖ್ಯಸ್ಥರಾದ ಬ್ರೂಸ್ ರೀಡ್ ಹಾಗೂ ಅಧ್ಯಕ್ಷರ ಹಿರಿಯ ಸಲಹೆಗಾರರಾಗಿ ಎಲಿಜಬೆತ್ ವಿಲ್ಕಿನ್ಸ್ ಅವರನ್ನು ನೇಮಿಸುವಂತೆ ಕೂಡ ಸೂಚಿಸಲಾಗಿದೆ.

ಇದನ್ನೂ ಓದಿ: ಅಧ್ಯಕ್ಷೀಯ ಚುನಾವಣೆಯಲ್ಲಿ ಸೋತ ನಂತರ ಟ್ರಂಪ್ ಟ್ವಿಟ್ಟರ್ ಫಾಲೋವರ್ ಸಂಖ್ಯೆಯಲ್ಲಿ ತೀವ್ರ ಕುಸಿತ...!

ಈ ಅನುಭವಿ ವ್ಯಕ್ತಿಗಳು ನಮ್ಮ ರಾಷ್ಟ್ರವನ್ನು ಹಿಂದೆಂದಿಗಿಂತಲೂ ಉತ್ತಮವಾಗಿ ನಿರ್ಮಿಸುವ ಹಾದಿಯಲ್ಲಿ ಸಾಗಿಸುವ ನೀತಿಗಳನ್ನು ಕೈಗೊಳ್ಳಲು ನನ್ನ ಆಡಳಿತಕ್ಕೆ ಸೇರುತ್ತಿದ್ದಾರೆ ಎಂದು ಬಿಡೆನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇವರೆಲ್ಲರೂ ಗೌರವಾನ್ವಿತ ನಾಯಕರಾಗಿದ್ದು, ಅವರ ಮೌಲ್ಯಗಳು ಮತ್ತು ಆದ್ಯತೆಗಳು ನನ್ನ ಯೋಚನೆಗೆ ಹೊಂದಿಕೊಳ್ಳುತ್ತವೆ ಮತ್ತು ಅಮೆರಿಕಾದ ಜನರಿಗೆ ಸೇವೆ ಸಲ್ಲಿಸಲು ತಮ್ಮ ಪಾತ್ರಗಳನ್ನು ಕರ್ತವ್ಯದಿಂದ ನಿರ್ವಹಿಸುತ್ತವೆ. ನಮ್ಮ ದೇಶ ಎದುರಿಸುತ್ತಿರುವ ಸವಾಲುಗಳನ್ನು ನಿವಾರಿಸಲು ಅವರ ಸಮರ್ಪಣೆ ಅವರ ವೈವಿಧ್ಯಮಯ ಹಿನ್ನೆಲೆ ಸಹಕಾರಿಯಾಗಲಿದೆ. ಈ ಕಷ್ಟದ ಸಮಯದಲ್ಲಿ ಅಮೆರಿಕಕ್ಕೆ ಅಗತ್ಯವಿರುವ ಬದಲಾವಣೆಯನ್ನು ತಲುಪಿಸಲು ಸಹಾಯ ಮಾಡುತ್ತದೆ ಎಂದು ಅಧ್ಯಕ್ಷರಾಗಿ ಚುನಾಯಿತರಾದ ಬಿಡೆನ್ ಹೇಳಿಕೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಟ್ರಂಪ್ ಒಪ್ಪಿಕೊಳ್ಳದಿದ್ದರೂ ಜ.20 ರಂದು ಜೋ ಬಿಡನ್‌ಗೆ @POTUS ಖಾತೆ ಹಸ್ತಾಂತರಿಸಲಿದೆ ಟ್ವಿಟರ್..!

ವಿನಯ್ ರೆಡ್ಡಿ ಬಿಡೆನ್-ಹ್ಯಾರಿಸ್ ಪರಿವರ್ತನೆಯ ಭಾಷಣ ಬರಹಗಾರರಾಗಿ ಸೇವೆ ಸಲ್ಲಿಸುತ್ತಾರೆ. ಹಿಂದೆ ಜೊ ಬಿಡೆನ್ (Joe Biden)-ಹ್ಯಾರಿಸ್ ಅಭಿಯಾನದ ಹಿರಿಯ ಸಲಹೆಗಾರ ಮತ್ತು ಭಾಷಣ ಬರಹಗಾರರಾಗಿದ್ದರು. ಅಲ್ಲದೆ ಅವರು ಒಬಾಮಾ-ಬಿಡೆನ್ ಶ್ವೇತಭವನದ ಎರಡನೇ ಅವಧಿಯಲ್ಲಿ ಮಾಜಿ ಉಪಾಧ್ಯಕ್ಷ ಬಿಡೆನ್‌ಗೆ ಮುಖ್ಯ ಭಾಷಣಕಾರರಾಗಿ ಸೇವೆ ಸಲ್ಲಿಸಿದ್ದರು, ನಂತರ ಅವರು ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್ ಸಂಘದಲ್ಲಿ ಕಾರ್ಯತಂತ್ರದ ಸಂವಹನಗಳ ಉಪಾಧ್ಯಕ್ಷರಾಗಿ ಕೆಲಸ ಮಾಡಿದ್ದರು.

ಇದನ್ನೂ ಓದಿ: 'ಕಾಲು ಮುರಿದುಕೊಂಡ' ಅಮೆರಿಕ ಅಧ್ಯಕ್ಷ ಬೈಡನ್!

ಒಬಾಮಾ-ಬಿಡೆನ್ ಆಡಳಿತದ ಸಮಯದಲ್ಲಿ ವಿನಯ್ ರೆಡ್ಡಿ ಯು.ಎಸ್. (US) ಎನ್ವಿರಾನ್ಮೆಂಟಲ್ ಪ್ರೊಟೆಕ್ಷನ್ ಏಜೆನ್ಸಿ ಮತ್ತು ಆರೋಗ್ಯ ಮತ್ತು ಮಾನವ ಸೇವೆಗಳ ಇಲಾಖೆಯಲ್ಲಿ ಹಿರಿಯ ಭಾಷಣಕಾರರಾಗಿ, ಒಬಾಮಾ-ಬಿಡೆನ್ ಮರು-ಚುನಾವಣಾ ಪ್ರಚಾರದ ಉಪ ಭಾಷಣಕಾರರಾಗಿ ಮತ್ತು ಅವರ ತವರು ರಾಜ್ಯ ಸೆನೆಟರ್ ಶೆರೋಡ್ ಬ್ರೌನ್ ಅವರ ಭಾಷಣ ಬರಹಗಾರರಾಗಿಯೂ ಸೇವೆ ಸಲ್ಲಿಸಿದ್ದರು.

ಭಾರತೀಯ ಮೂಲದ ವಿನಯ್ ರೆಡ್ಡಿ ಅಮೇರಿಕಾದ ಓಹಿಯೋದ ಡೇಟನ್‌ನಲ್ಲಿ ಬೆಳೆದರು. ಇವರು ಅಮೆರಿಕಾಕ್ಕೆ ವಲಸೆ ಬಂದ ಕುಟುಂಬದ ಮೂವರು ಗಂಡು ಮಕ್ಕಳಲ್ಲಿ ಎರಡನೆಯವರು. ಇವರು ಓಹಿಯೋ ಸಾರ್ವಜನಿಕ ಶಾಲೆಗಳ ಶಿಶುವಿಹಾರದಿಂದ ಮಿಯಾಮಿ ವಿಶ್ವವಿದ್ಯಾಲಯದವರೆಗೆ, ಓಹಿಯೋ ಸ್ಟೇಟ್ ಯೂನಿವರ್ಸಿಟಿ ಕಾಲೇಜ್ ಆಫ್ ಲಾ ವರೆಗೆ ಸಾಗಿಬಂದರು. ಇವರು ಪ್ರಸ್ತುತ ನ್ಯೂಯಾರ್ಕ್ನಲ್ಲಿ ತಮ್ಮ ಪತ್ನಿ ಮತ್ತು ಇಬ್ಬರು ಹೆಣ್ಣುಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ.

ಮುಂಬೈನಲ್ಲಿದ್ದಾರೆ ಅಮೆರಿಕಾದ ನೂತನ ಅಧ್ಯಕ್ಷ ಜೋ ಬಿಡೆನ್ ಸಂಬಂಧಿಕರು!

ಗೌತಮ್ ರಾಘವನ್, ಬಿಡೆನ್-ಹ್ಯಾರಿಸ್ ಪರಿವರ್ತನೆಯ ಅಧ್ಯಕ್ಷೀಯ ನೇಮಕಾತಿಗಳ ಉಪ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕೂ ಮೊದಲು ಅವರು ಕಾಂಗ್ರೆಸ್ಸಿನ ಪ್ರೋಗ್ರೆಸ್ಸಿವ್ ಕಾಕಸ್‌ ಅಧ್ಯಕ್ಷರಾದ ಭಾರತೀಯ-ಅಮೆರಿಕನ್ ಕಾಂಗ್ರೆಸ್ ವುಮೆನ್ ಪ್ರಮೀಲಾ ಜಯಪಾಲ್ ಅವರಿಗೆ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು.

ಇದನ್ನೂ ಓದಿ: ಈ ಒಂದು ಷರತ್ತಿನ ಮೇರೆಗೆ ಜೋ ಬಿಡೆನ್ ಗೆಲುವು ಒಪ್ಪಿಕೊಳ್ಳುವುದಾಗಿ ಹೇಳಿದ ಟ್ರಂಪ್..!

ರಾಘವನ್ ಅವರು ಬಿಡೆನ್ ಫೌಂಡೇಶನ್‌ನ ಸಲಹೆಗಾರರಾಗಿ ಮತ್ತು ಗಿಲ್ ಫೌಂಡೇಶನ್‌ನ ನೀತಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು, ಇದು ಎಲ್ಜಿಬಿಟಿಕ್ಯೂ ಸಮಾನತೆಯ ಕಾರಣಕ್ಕಾಗಿ ಮೀಸಲಾಗಿರುವ ಅತ್ಯಂತ ಹಳೆಯ ಮತ್ತು ಅತಿದೊಡ್ಡ ಖಾಸಗಿ ಸಂಸ್ಥೆಗಳಲ್ಲಿ ಒಂದಾಗಿದೆ.

ಒಬಾಮಾ (Obama)-ಬಿಡೆನ್ ಆಡಳಿತದ ಸಮಯದಲ್ಲಿ ಗೌತಮ್ ರಾಘವನ್ ಶ್ವೇತಭವನದಲ್ಲಿ ಎಲ್ಜಿಬಿಟಿಕ್ ಸಮುದಾಯ ಮತ್ತು ಏಷ್ಯನ್ ಅಮೇರಿಕನ್ ಮತ್ತು ಪೆಸಿಫಿಕ್ ಐಲ್ಯಾಂಡರ್ ಸಮುದಾಯದ ಸಂಬಂಧಿಯಾಗಿ ಮತ್ತು ಯುಎಸ್ ರಕ್ಷಣಾ ಇಲಾಖೆಯ ವೈಟ್ ಹೌಸ್ ಸಂಪರ್ಕ ಕಚೇರಿಯಲ್ಲಿ ಮತ್ತು ರಿಟ್ರೀಚ್ ಲೀಡ್ ಆಗಿ ಸೇವೆ ಸಲ್ಲಿಸಿದ್ದರು.

ರಾಘವನ್ ಭಾರತದಲ್ಲಿ ಜನಿಸಿದವರು. ಹಾಗಾಗಿ ಅಮೇರಿಕಾಕ್ಕೆ (America) ಮೊದಲ ತಲೆಮಾರಿನ ವಲಸೆಗಾರ. ಅಮೇರಿಕಾಸ ಸಿಯಾಟಲ್‌ನಲ್ಲಿ ಬೆಳೆದರು ಮತ್ತು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಿಂದ ಪದವಿ ಪಡೆದರು. ಸದ್ಯ ಮಡದಿ ಮತ್ತು ಮಗಳೊಂದಿಗೆ ವಾಷಿಂಗ್ಟನ್ ಡಿ.ಸಿ.ಯಲ್ಲಿ ವಾಸಿಸುತ್ತಿದ್ದಾರೆ.

ಇದಲ್ಲದೆ ಭಾರತೀಯ ಮೂಲದ ಡಾ. ವಿವೇಕ್ ಮೂರ್ತಿ ಈಗಾಗಲೇ ಅಮೆರಿಕದ ಆರೋಗ್ಯ ಇಲಾಖೆಯ ಸಲಹೆಗಾರರನ್ನಾಗಿ ನೇಮಿಸಲು ಸೂಚಿಸಲಾಗಿದೆ. ಭಾರತದ ಅದರಲ್ಲೂ ಕರ್ನಾಟಕದ ಮಂಡ್ಯ ಮೂಲದ ಡಾ.‌ ವಿವೇಕ್ ಮೂರ್ತಿ ಹಿಂದೆ ಕೂಡ ಜೋ ಬಿಡೆನ್ ಉಪಾಧ್ಯಕ್ಷರಾಗಿದ್ದಾಗ ಅವರೊಂದಿಗೆ ಕೆಲಸ ಮಾಡಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News