ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಮತ್ತೆ ಭೂಕಂಪ: 7.1 ತೀವ್ರತೆ ದಾಖಲೆ

ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ 7.1 ತೀವ್ರತೆಯೊಂದಿಗೆ ಭೂಕಂಪನ ದಾಖಲಾಗಿದೆ

Last Updated : Jul 6, 2019, 10:15 AM IST
ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಮತ್ತೆ ಭೂಕಂಪ: 7.1 ತೀವ್ರತೆ ದಾಖಲೆ title=

ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ 7.1 ತೀವ್ರತೆಯೊಂದಿಗೆ ಭೂಕಂಪನ ದಾಖಲಾಗಿದೆ ಎಂದು ಯು.ಎಸ್. ಭೂವೈಜ್ಞಾನಿಕ ಸಮೀಕ್ಷೆ ಮತ್ತು ಯುರೋಪಿಯನ್ ಭೂಕಂಪ ಮಾನಿಟರ್ ಹೇಳಿದೆ. 25 ವರ್ಷಗಳ ಬಳಿಕ ಶುಕ್ರವಾರ ಈ ಪ್ರದೇಶದಲ್ಲಿ ನಡೆದ 6.4 ತೀವ್ರತೆಯ ಭೂಕಂಪದ ಬೆನ್ನಲ್ಲೇ ಇಂದೂ ಸಹ ಮರುಕಳಿಸಿದೆ. ಭೂಕಂಪದಿಂದಾದ ಹಾನಿಯ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. 

ಗುರುವಾರ ಸಂಭವಿಸಿದ ಭೂಕಂಪದಲ್ಲಿ ಕೆಲವರಿಗೆ ಗಾಯಗಳಾಗಿರುವ ಬಗ್ಗೆ ವರದಿಯಾಗಿದ್ದು, ಮನೆಗಳಲ್ಲಿ ಅನಿಲ ಕೊಳವೆಗಳು ಮುರಿದ ಪರಿಣಾಮ ಬೆಂಕಿ ಕಾಣಿಸಿಕೊಂಡಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 

Trending News