Puri Jagannath Temple: ಜಗನ್ನಾಥನ ವಿಗ್ರಹದ ನೆರಳು ಕನ್ನಡಿಯಲ್ಲಿ ಕಾಣಲಿಲ್ಲ ಏಕೆ? ತಿಳಿಯಿರಿ

Jagannath Temple: ಈ ದೇವಾಲಯಕ್ಕೆ ಸಂಬಂಧಿಸಿದಂತೆ ಅನೇಕ ಆಸಕ್ತಿದಾಯಕ ಕಥೆಗಳು ಮತ್ತು ರಹಸ್ಯಗಳಿವೆ. ಭಗವಾನ್ ಜಗನ್ನಾಥನ ವಿಗ್ರಹವನ್ನು ಒಳಗೊಂಡ ಘಟನೆಯು ಜನರನ್ನು ಆಶ್ಚರ್ಯಗೊಳಿಸುತ್ತಲೇ ಇದೆ. ವಾಸ್ತವವಾಗಿ, ಒಮ್ಮೆ ಜಗನ್ನಾಥನ ವಿಗ್ರಹದ ನೆರಳು ಇದ್ದಕ್ಕಿದ್ದಂತೆ ಕಣ್ಮರೆಯಾಯಿತು. ಇದರ ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯಿರಿ..

Written by - Zee Kannada News Desk | Last Updated : Feb 9, 2024, 08:39 PM IST
  • ಜಗತ್ಪ್ರಸಿದ್ಧ ಪುರಿಧಾಮದಲ್ಲಿರುವ ಜಗನ್ನಾಥನ ವಿಗ್ರಹ ಯಾವಾಗಲೂ ಚರ್ಚೆಯ ವಿಷಯವಾಗಿದೆ.
  • ಭಗವಾನ್ ಜಗನ್ನಾಥನ ವಿಗ್ರಹವನ್ನು ಒಳಗೊಂಡ ಘಟನೆಯು ಜನರನ್ನು ಆಶ್ಚರ್ಯಗೊಳಿಸುತ್ತಲೇ ಇದೆ.
  • ಜಗನ್ನಾಥನು ನೆರಳು ಕಾಣಿಸಿಕೊಂಡಾಗ ಮಾತ್ರ ನೈವೇದ್ಯವನ್ನು ಸ್ವೀಕರಿಸಿದನೆಂದು ಪರಿಗಣಿಸಲಾಗಿದೆ.
Puri Jagannath Temple: ಜಗನ್ನಾಥನ ವಿಗ್ರಹದ ನೆರಳು ಕನ್ನಡಿಯಲ್ಲಿ ಕಾಣಲಿಲ್ಲ ಏಕೆ? ತಿಳಿಯಿರಿ title=

Puri Temple: ಹಿಂದೂ ಧರ್ಮದಲ್ಲಿ ಚಾರ್ ಧಾಮ್ ಯಾತ್ರೆಗೆ ವಿಶೇಷ ಮಹತ್ವವಿದೆ. ಚಾರ್ ಧಾಮ್ ಯಾತ್ರೆಯನ್ನು ಪೂರ್ಣಗೊಳಿಸಿದವರು ದೇವರ ಸನ್ನಿಧಿಯನ್ನು ತಲುಪುತ್ತಾರೆ ಎಂದು ನಂಬಲಾಗಿದೆ.  ಅಲ್ಲದೇ ನಾಲ್ಕು ಧಾಮಗಳಲ್ಲಿ ಒಂದಾದ ಜಗತ್ಪ್ರಸಿದ್ಧ ಪುರಿ ಜಗನ್ನಾಥನ  ದೇವಾಲಯವು ಒಂದು. ಈ ದೇವಾಲಯದಲ್ಲಿರುವ ಜಗನ್ನಾಥನ ವಿಗ್ರಹದ ಬಗ್ಗೆ ಒಂದಲ್ಲ ಒಂದು ಚರ್ಚೆ ಕೇಳಿ ಬರುತ್ತಲೇ ಇರುತ್ತೆ. ಈ ಪುರಿ ಧಾಮದಲ್ಲಿರುವ ಜಗನ್ನಾಥನ ವಿಗ್ರಹದ ಬಗ್ಗೆ ತುಂಬಾ ಆಸಕ್ತಿದಾಯಕವಾದ ಕಥೆ  ಇದೆ. ಅದರ ಬಗ್ಗೆ ಇಂದು ನಾವು ಹೇಳಹೋರಟಿದ್ದೇವೆ.  

 ಈ ದೇವಾಲಯಕ್ಕೆ ಸಂಬಂಧಿಸಿದಂತೆ ಅನೇಕ ಆಸಕ್ತಿದಾಯಕ ಕಥೆಗಳು ಮತ್ತು ರಹಸ್ಯಗಳಿವೆ ಎಂಬ ಸುದ್ದಿ ಕೇಳಿ ಬರುತ್ತಿವೆ.  ಅದರೊಂದಿಗೆ ಭಗವಾನ್ ಜಗನ್ನಾಥನ ವಿಗ್ರಹವನ್ನು ಒಳಗೊಂಡ ಘಟನೆಯು ಜನರನ್ನು ಆಶ್ಚರ್ಯಗೊಳಿಸುತ್ತಲೇ ಇದೆ ಎಂದು  ಹೇಳಲಾಗುತ್ತಿದೆ.  ಅದಲ್ಲದೇ, ಒಮ್ಮೆ ಜಗನ್ನಾಥನ ವಿಗ್ರಹದ ನೆರಳು ಇದ್ದಕ್ಕಿದ್ದಂತೆ ಕಣ್ಮರೆಯಾಗಿರುವ ಘಟನೆಯನ್ನು ಕಂಡು ಎಲ್ಲಾ ವಿದ್ವಾಂಸರು ಮತ್ತು ಭಕ್ತರು ಬೆಚ್ಚಿಬಿದ್ದರು. ಅದೇನು ಎಂಬುದನ್ನು ಈ ಸ್ಟೋರಿಯಲ್ಲಿ ನೋಡಿ..

ಇದನ್ನೂ ಓದಿ: Bhopal Tourism: ಭೋಪಾಲ್‌ನಲ್ಲಿ ನೀವು ಭೇಟಿ ನೀಡಲೇಬೇಕಾದ 5 ಪ್ರಮುಖ ಸ್ಥಳಗಳು!

ಜಗನ್ನಾಥ ದೇವಾಲಯದಲ್ಲಿ ಆಸಕ್ತಿದಾಯಕ ಘಟನೆ ಯಾವುದು?

1890 ರಲ್ಲಿ ಒಮ್ಮೆ ಪೂರ್ಣರಾಜು ಜನ್ಮಾಷ್ಟಮಿಯ ದಿನ ದೇವರಿಗೆ ಪ್ರಸಾದವನ್ನು ಅರ್ಪಿಸುತ್ತಿದ್ದರು. ಆ ವೇಳೆಗೆ ಜಗನ್ನಾಥನ ನೆರಳು ಕನ್ನಡಿಯಲ್ಲಿ ಕಾಣದೇ ಇರುವುದು ಎಲ್ಲಾರಲ್ಲಿ  ಅಚ್ಚರಿಯನ್ನು ಮೂಡಿಸಿತು. ಅದಲ್ಲದೇ ಕೆಲವರು ಜಗನ್ನಾಥ ಭಗವಾನ್ ಊಟ ಮಾಡುತ್ತಿಲ್ಲಎಂದು ಯೋಚಿಸ ತೊಡಗಿದರು. ನಂತರ ನಗರದ ಎಲ್ಲಾ ಜನರು ದಿನವಿಡೀ ಜಗನ್ನಾಥನಿಗೆ ವಿವಿಧ ರೀತಿಯ ಆಹಾರವನ್ನು ತಯಾರಿಸಿ ನೈವಿದ್ಯೆ ಅರ್ಪಿಸಿದರೂ ಜಗನ್ನಾಥ್‌ ದೇವರ ನೆರಳು ಕಾಣಲೇ ಇಲ್ಲ.

 ಈ ಘಟನೆಯನ್ನು ನೋಡಿದ  ಆಗಿನ ರಾಜನು ಜಗನ್ನಾಥನ ವಿಗ್ರಹದ ನೆರಳು ಕಣ್ಮರೆಯಾಗುವುದರ ಹಿಂದಿನ ಕಾರಣವನ್ನು ತಿಳಿಯುವವರೆಗೂ ಏನನ್ನು ತಿನ್ನುವುದಿಲ್ಲ ಎಂದು ಪ್ರತಿಜ್ಞೆ ಮಾಡಿದರು. ಇದಲ್ಲದೆ, ರಾಜನು ಆ ದೇವಾಲಯದಲ್ಲಿ ದೇವರ ನೆರಳನ್ನು ಕಾಯುತ್ತಾ ಕುಳಿತಿದ್ದನು ಎನ್ನಲಾಗುತ್ತಿದೆ.  ಈ ಕಾಯುತ್ತಿದ್ದ ರಾಜನಿಗೆ  ತನ್ನ ಕನಸಿನಲ್ಲಿ ಜಗನ್ನಾಥನನ್ನು ನೋಡುತ್ತಾನೆ ಮತ್ತು ದೇವರು ದೇವಾಲಯದಲ್ಲಿಲ್ಲ ಎಂದು ರಾಜನಿಗೆ ಸೂಚನೆ ನೀಡಿದಂತೆ ಮತ್ತು  ಅವರು ಒಬ್ಬ ಬಡ ಭಕ್ತನ ಗುಡಿಸಲಿಗೆ ‌ನೈವಿದ್ಯೆಯನ್ನು ತಿನ್ನಲು ಹೋಗಿರುವುದಕ್ಕಾಗಿ ದೇವಾಲಯದಲ್ಲಿ ವಿಗ್ರಹದ ನೆರಳು ಕಾಣೆಯಾಗಿರುವುದಾಗಿ ಕನಸಿನಲ್ಲಿ ಕಾಣುತ್ತಾನೆ. ಈ ಘಟನೆಯ ನಂತರ ಮತ್ತೆ ಜಗನ್ನಾಥನಿಗೆ ನೈವೇದ್ಯ ಸಲ್ಲಿಸಿದಾಗ ಮೂರ್ತಿಯ ನೆರಳು ಸ್ಪಷ್ಟವಾಗಿ ಗೋಚರಿಸಿತು ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: Hindu Mythology: ಕೃಷ್ಣನ ಸಾವು ಮತ್ತು ದ್ವಾರಕೆಯ ನಾಶ..! ಆ ತಾಯಿಯ ಕಣ್ಣೀರೇ ಕಾರಣ..

ಇಂದಿಗೂ ಜಗನ್ನಾಥ ಪುರಿಯಲ್ಲಿ ವಿದ್ವಾಂಸರು ಜಗನ್ನಾಥನಿಗೆ ನೈವೇದ್ಯವನ್ನು ಅರ್ಪಿಸುವಾಗ ತಮ್ಮ ಅಂಗೈಯಲ್ಲಿ ನೀರನ್ನು ಹಾಕುತ್ತಾರೆ ಎಂದು ಹೇಳಲಾಗುತ್ತದೆ.  ಆ ಸಮಯದಲ್ಲಿ ವಿದ್ವಾಂಸರ ಅಂಗೈಯಲ್ಲಿನ ನೀರಿನಲ್ಲಿ ಜಗನ್ನಾಥನ ವಿಗ್ರಹದ ನೆರಳು ಸ್ಪಷ್ಟವಾಗಿ ಕಾಣಿಸಿಕೊಂಡಾಗ ಮಾತ್ರ ನೈವೇದ್ಯವನ್ನು ಸ್ವೀಕರಿಸಿದನೆಂದು ಪರಿಗಣಿಸಲಾಗುತ್ತದೆ ಎಂದು ಕೆಲವರು ಹೇಳುತ್ತಾರೆ.

(ಸೂಚನೆ:  ಧಾರ್ಮಿಕ ಪಠ್ಯಗಳ ಆಧಾರದ ಮೇಲೆ ಜನರ ಸಾಮಾನ್ಯ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಮೇಲಿನ ಅಂಶಗಳನ್ನು ನೀಡಲಾಗಿದೆ.  Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News