WiFi Speed Boost: ವೈಫೈಗೆ ಸಂಬಂಧಿಸಿದ ಈ ಸೂಪರ್ ಹಿಟ್ ಸಲಹೆಗಳನ್ನು ಅನುಸರಿಸಿ ಜಬರ್ದಸ್ತ್ ಸ್ಪೀಡ್ ಪಡೆಯಿರಿ

Increase WiFi Speed: ನೀವೂ ಕೂಡ ನಿಮ್ಮ ಮನೆಯಲ್ಲಿ ವೈಫೈ ರೂಟರ್ ಅಳವಡಿಸಿದ್ದರೆ ಮತ್ತು ರೂಟರ್‌ನಲ್ಲಿ ಸಿಗ್ನಲ್ ಸರಿಯಾಗಿ ಬರುತ್ತಿಲ್ಲ ಎಂದಾದರೆ, ಈ ಸಲಹೆಗಳು ನಿಮಗಾಗಿ. ಇವುಗಳನ್ನು ಅನುಸರಿಸುವ ಮೂಲಕ ನೀವು ನಿಮ್ಮ ವೈಫೈ ರೂಟರ್‌ನ ವೇಗವನ್ನು ಹೆಚ್ಚಿಸಬಹುದು.  

Written by - Nitin Tabib | Last Updated : Apr 24, 2022, 11:09 PM IST
  • ನಿಮ್ಮ ಮನೆಯಲ್ಲಿಯೂ ಕೂಡ ವೈಫೈ ಬರುತ್ತಿಲ್ಲವೇ?
  • ವೈಫೈ ವೇಗವನ್ನು ಸರಿಪಡಿಸಲು ನೀವು ಪರದಾಡುತ್ತಿರುವಿರಾ?
  • ಇಲ್ಲಿವೆ ನಿಮಗಾಗಿ ಕೆಲ ಸಲಹೆಗೆಳು
WiFi Speed Boost: ವೈಫೈಗೆ ಸಂಬಂಧಿಸಿದ ಈ ಸೂಪರ್ ಹಿಟ್ ಸಲಹೆಗಳನ್ನು ಅನುಸರಿಸಿ ಜಬರ್ದಸ್ತ್ ಸ್ಪೀಡ್ ಪಡೆಯಿರಿ title=
wifi internet tips

Boost WiFi Internet Speed Follow Tips and Tricks: ತಂತ್ರಜ್ಞಾನ ಮತ್ತು ಇಂಟರ್ನೆಟ್‌ನಿಂದ  ಕೂಡಿದ ಈ ಜಗತ್ತಿನಲ್ಲಿ, ನಾವು ನಮ್ಮ ಎಲ್ಲಾ ಕೆಲಸಗಳಿಗೆ ಇಂಟರ್ನೆಟ್ ಅನ್ನು ಬಳಸುತ್ತೇವೆ ಮತ್ತು ಇಂಟರ್ನೆಟ್ ಇಲ್ಲದೆಯೇ ನಮ್ಮ ಯಾವುದೇ ಕೆಲಸ ಪೂರ್ಣಗೊಳ್ಳುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಹೆಚ್ಚಿನ ಜನರು ತಮ್ಮ ಮನೆಗೆ ವೈಫೈ ರೂಟರ್ ಅನ್ನು ಅಳವಡಿಸಿಕೊಂಡಿದ್ದಾರೆ, ಇದರಿಂದ ಮನೆಯ ಎಲ್ಲಾ ಸದಸ್ಯರಿಗೆ ಇಂಟರ್ನೆಟ್ ಸೌಲಭ್ಯ ಸಿಗುತ್ತದೆ. ಆದರೆ ನಿಮ್ಮ ರೂಟರ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಸಂಗತಿ ಹಲವು ಬಾರಿ ನಿಮ್ಮ ಗಮನಕ್ಕೆ ಬರುತ್ತದೆ, ಇಂಟರ್ನೆಟ್ ವೇಗವನ್ನು ಸರಿಯಾಗಿಲ್ಲದಿರುವುದು ಕೂಡ ಇದರಲ್ಲಿ ಒಂದು. ಇಂದು ನಾವು ನಿಮಗೆ ನಿಮ್ಮ ವೈಫೈ ರೂಟರ್‌ನ ಇಂಟರ್ನೆಟ್ ವೇಗವನ್ನು ಹೆಚ್ಚಿಸುವ ಕೆಲವು ಸಲಹೆಗಳನ್ನು ನೀಡಲಿದ್ದೇವೆ.

ಸಿಗ್ನಲ್ ಗಳನ್ನು ನಿರ್ಬಂಧಿಸುವ ವಸ್ತುಗಳನ್ನು ತೆಗೆದುಹಾಕಿ
ಗೋಡೆಗಳು ಮತ್ತು ದೊಡ್ಡ ಲೋಹದ ವಸ್ತುಗಳು ನಿಮ್ಮ ಮನೆಯಲ್ಲಿ ಸ್ಥಾಪಿಸಲಾದ ವೈಫೈ ರೂಟರ್‌ನ ಸಿಗ್ನಲ್‌ಗಳನ್ನು ನಿರ್ಬಂಧಿಸುತ್ತವೆ. ಇಂತಹ ಪರಿಸ್ಥಿತಿಯಲ್ಲಿ, ನಿಮ್ಮ ವೈಫೈ ರೂಟರ್‌ನ ಸಿಗ್ನಲ್‌ ಸಮಸ್ಯೆ ಇರಬಾರದು ಎಂದು ನೀವು ಬಯಸುತ್ತಿದ್ದರೆ, ಅದಕ್ಕಾಗಿ ನೀವು ರೂಟರ್‌ನ ಮುಂಭಾಗದಿಂದ ಎಲ್ಲಾ ರೀತಿಯ ಲೋಹದ ವಸ್ತುಗಳನ್ನು ತೆಗೆದುಹಾಕಬೇಕು. 

ಎಲೆಕ್ಟ್ರಾನಿಕ್ ವಸ್ತುಗಳಿಂದ ದೂರವಿಡಿ
ನಿಮ್ಮ ಮನೆಯಲ್ಲಿ ವೈಫೈ ರೂಟರ್ ಅನ್ನು ಅಳವಡಿಸುವಾಗ ಅದನ್ನು ಇತರ ಯಾವುದೇ ಸಿಗ್ನಲ್ ಆಧಾರಿತ ಎಲೆಕ್ಟ್ರಾನಿಕ್ ಸಾಧನಕ್ಕೆ ಹತ್ತಿರದಲ್ಲಿ ಅಳವಡಿಸಬೇಡಿ.ಏಕೆಂದರೆ ಸಿಗ್ನಲ್ ಗಳ ಘರ್ಷಣೆಯಿಂದ ಕೂಡ ಸಿಗ್ನಲ್‌ಗಳು ದುರ್ಬಲವಾಗುತ್ತವೆ ಮತ್ತು ಇದು ನಿಮ್ಮ ಇಂಟರ್ನೆಟ್ ಅನ್ನು ನಿಧಾನಗೊಳಿಸುತ್ತದೆ.

ವೈಫೈ ರೂಟರ್ ಆಂಟೆನಾವನ್ನು ಬದಲಾಯಿಸಿ
ಪ್ರತಿ ವೈಫೈ ರೂಟರ್‌ನಲ್ಲಿ ಆಂಟೆನಾ ಇರುವುದನ್ನು ನೀವು ಗಮನಿಸಿರಬಹುದು. ಈ ಆಂಟೆನಾದ ಸಹಾಯದಿಂದ, ವೈಫೈ ರೂಟರ್ ಇಂಟರ್ನೆಟ್ ಸಿಗ್ನಲ್ ಗಳನ್ನು ಪಡೆಯುತ್ತದೆ. ಕೆಲವೊಮ್ಮೆ ಈ ಆಂಟೆನಾ ರೂಟರ್ ಒಳಗೆ ಮತ್ತು ಕೆಲವೊಮ್ಮೆ ಹೊರಗೆ ಇರುತ್ತದೆ. ನಿಮ್ಮ ವೈಫೈ ಸಿಗ್ನಲ್ ದುರ್ಬಲವಾಗಿದ್ದರೆ, ಮೊದಲು ನಿಮ್ಮ ರೂಟರ್‌ನ ಆಂಟೆನಾದ ಸ್ಥಾನವನ್ನು ಬದಲಾಯಿಸಲು ಪ್ರಯತ್ನಿಸಿ, ಇದು ಡೇಟಾ ವೇಗದಲ್ಲಿ ದೊಡ್ಡ ವ್ಯತ್ಯಾಸವನ್ನು ತರುತ್ತದೆ.

ಇದನ್ನೂ ಓದಿ-ಇನ್ಮುಂದೆ ಯಾವುದೇ ನೆಟ್ವರ್ಕ್ ಇಲ್ಲದೆ ಬಿಂದಾಸ್ ಕರೆ ಮಾಡಿ

ಮನೆಯ ಎತ್ತರದ ಜಾಗದಲ್ಲಿ ವೈಫೈ ರೂಟರ್ ಅನ್ನು ಅಳವಡಿಸಿ
ವೈಫೈ ರೂಟರ್ ಅನ್ನು ಅಳವಡಿಸುವಾಗ, ನಿಮ್ಮ ಮನೆಯ ಎತ್ತರದ ಸ್ಥಳದಲ್ಲಿ ಅದನ್ನು ಅಳವಡಿಸಬೇಕು ಎಂಬುದನ್ನು ನೆನಪಿನಲ್ಲಿಡಿ. ನೀವು ವೈಫೈ ರೂಟರ್ ಅನ್ನು ಎತ್ತರದ ಸ್ಥಳದಲ್ಲಿ ಇರಿಸಿದರೆ, ಇಂಟರ್ನೆಟ್ ಎಲ್ಲರಿಗೂ ಸುಲಭವಾಗಿ ತಲುಪುತ್ತದೆ ಮತ್ತು ಸಿಗ್ನಲ್‌ಗಳಲ್ಲಿ ಯಾವುದೇ ಅಡಚಣೆ ಉಂಟಾಗುವುದಿಲ್ಲ.

ಇದನ್ನೂ ಓದಿ-WhatsAppನ ಈ ವೈಶಿಷ್ಟ್ಯ ಬಳಸಲು ಬಳಕೆದಾರರು ಶುಲ್ಕ ಪಾವತಿಸಬೇಕು, ಸಿಗಲಿವೆ ಸಾಕಷ್ಟು ಸೌಲಭ್ಯಗಳು

ಮೇಲೆ ನೀಡಲಾಗಿರುವ ಸುಲಭ ಸಲಹೆಗಳನ್ನು ಅನುಸರಿಸುವ ಮೂಲಕ, ನಿಮ್ಮ ಮನೆಯಲ್ಲಿ ಸ್ಥಾಪಿಸಲಾದ ವೈಫೈ ರೂಟರ್‌ನ ವೇಗವನ್ನು ನೀವು ಹೆಚ್ಚಿಸಬಹುದು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News