Sanchar Saathi Portal: ರೈಲು ಪ್ರಯಾಣದ ವೇಳೆ ಫೋನ್ ಕಳೆದು ಹೋಗಿದ್ಯಾ! ಈ ಪೋರ್ಟಲ್‌ನಲ್ಲಿ ದೂರು ನೀಡಿ

Sanchar Saathi Portal: ರೈಲಿನಲ್ಲಿ ಪ್ರಯಾಣಿಸುವಾಗ ಫೋನ್ ಕಳೆದುಹೋದರೆ ಚಿಂತಿಸುವ ಅಗತ್ಯವಿಲ್ಲ. ಬದಲಿಗೆ ಕೂಡಲೇ ಸಂಚಾರ ಸಾಥಿ ಪೋರ್ಟಲ್‌ನಲ್ಲಿ ದೂರು ದಾಖಲಿಸಿದರೆ ನಿಮ್ಮ ಫೋನ್ ಮರಳಿ ಪಡೆಯಬಹುದು. ಹೇಗೆ ಅಂತೀರಾ ಈ ಸುದ್ದಿ ಓದಿ... 

Written by - Yashaswini V | Last Updated : May 10, 2024, 10:51 AM IST
  • ಭಾರತೀಯ ರೈಲ್ವೆ ಸಂಚಾರ್ ಸಾಥಿ ಪೋರ್ಟಲ್‌ನೊಂದಿಗೆ ಕೈಜೋಡಿಸುತ್ತಿದೆ.
  • ಇದರ ಸಹಾಯದಿಂದ, ರೈಲು ಪ್ರಯಾಣಿಕರು ರೈಲಿನಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಕಳೆದು ಹೋದ ಫೋನ್‌ಗಳನ್ನು ಸುಲಭವಾಗಿ ಹುಡುಕಬಹುದು.
  • ಇದಕ್ಕಾಗಿ ಏನು ಮಾಡಬೇಕು ಎಂದು ನೋಡುವುದಾದರೆ...
Sanchar Saathi Portal: ರೈಲು ಪ್ರಯಾಣದ ವೇಳೆ ಫೋನ್ ಕಳೆದು ಹೋಗಿದ್ಯಾ! ಈ ಪೋರ್ಟಲ್‌ನಲ್ಲಿ ದೂರು ನೀಡಿ  title=

Sanchar Saathi Portal: ಪ್ರಯಾಣಿಸುವಾಗ ವಸ್ತುಗಳು ಕಳುವಾಗುವುದು ಸಾಮಾನ್ಯ ಸಂಗತಿ. ಇತ್ತೀಚಿನ ದಿನಗಳಲ್ಲಿ ಎಲ್ಲರ ಜೀವನಾಡಿಯಾಗಿರುವ ಫೋನ್ ಕೂಡ ಕಳ್ಳತನವಾಗಬಹುದು, ಇಲ್ಲವೇ ಎಲ್ಲಾದರೂ ಮಿಸ್ ಆಗಬಹುದು. ಒಂದೊಮ್ಮೆ ರೈಲು ಪ್ರಯಾಣದ ಸಂದರ್ಭದಲ್ಲಿ ನಿಮ್ಮ ಫೋನ್ ಮಿಸ್ ಆದರೆ, ತಕ್ಷಣ ಸಂಚಾರ ಸಾಥಿ ಪೋರ್ಟಲ್‌ನಲ್ಲಿ ದೂರು ದಾಖಲಿಸುವ ಮೂಲಕ ನಿಮ್ಮ ಫೋನ್ ಅನ್ನು ಮರಳಿ ಪಡೆಯಬಹುದು. ಜನರ ಪ್ರಯಾಣವನ್ನು ಸಶಕ್ತಗೊಳಿಸಲು ಮತ್ತು ಅವರ ಸುರಕ್ಷತೆಗಾಗಿ ದೂರಸಂಪರ್ಕ ಇಲಾಖೆಯು ಭಾರತೀಯ ರೈಲ್ವೆಯೊಂದಿಗೆ ಕೈಜೋಡಿಸಿದೆ ಎಂದು ಟೆಲಿಕಾಂ ಇಲಾಖೆ ಗುರುವಾರ (ಮೇ 09) ತಿಳಿಸಿದೆ. 

ಹೌದು, ರೈಲಿನಲ್ಲಿ ಪ್ರಯಾಣಿಸುವಾಗ (Traveling By Train) ನಿಮ್ಮ ಫೋನ್ ಆಕಸ್ಮಿಕವಾಗಿ ಕಳೆದುಹೋದರೆ ಅಥವಾ ಕಳವಾದರೆ ಅಂತಹ ಕಳೆದುಹೋದ ಫೋನ್‌ಗಳನ್ನು ಹುಡುಕುವ ದೃಷ್ಟಿಯಿಂದ ಭಾರತೀಯ ರೈಲ್ವೆ (Indian Railways) ಸಂಚಾರ್ ಸಾಥಿ ಪೋರ್ಟಲ್‌ನೊಂದಿಗೆ ಕೈಜೋಡಿಸುತ್ತಿದೆ. ಇದರ ಸಹಾಯದಿಂದ, ರೈಲು ಪ್ರಯಾಣಿಕರು ರೈಲಿನಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಕಳೆದು ಹೋದ ಫೋನ್‌ಗಳನ್ನು ಸುಲಭವಾಗಿ ಹುಡುಕಬಹುದು. ಇದಕ್ಕಾಗಿ ಏನು ಮಾಡಬೇಕು ಎಂದು ನೋಡುವುದಾದರೆ...

ಇದನ್ನೂ ಓದಿ- ವಾಟ್ಸಾಪ್‌ನಲ್ಲಿ ಸದ್ಯದಲ್ಲೇ ಬರಲಿದೆ ಆಡಿಯೋ ಕಾಲ್ ಫೀಚರ್: ಏನಿದರ ವಿಶೇಷತೆ!

ಕಳೆದುಹೋದ ಫೋನ್ ಬಗ್ಗೆ ಇಲ್ಲಿ ದೂರು ನೀಡಿ: 
ರೈಲಿನಲ್ಲಿ ಪ್ರಯಾಣಿಸುವಾಗ ನಿಮ್ಮ ಕಳುವಾದ ನಿಮ್ಮ ಫೋನ್ ಬಗ್ಗೆ ಕೂಡಲೇ  ಸಂಚಾರ್ ಸಾಥಿ ಪೋರ್ಟಲ್‌ನಲ್ಲಿ ದೂರು (Complaint on Sanchar Sathi portal) ದಾಖಲಿಸಿ. ಇದರಿಂದ ನಿಮ್ಮ ಫೋನ್ ಬೇಗನೆ ನಿಮ್ಮ ಕೈಸೇರಬಹುದು. ವಾಸ್ತವವಾಗಿ ಕಳೆದೊಂದು ವಾರದಲ್ಲಿ  ಸಂಚಾರ್ ಸಾಥಿ ಪೋರ್ಟಲ್‌ನಲ್ಲಿ ಫೋನ್ ಕಳ್ಳತನದ ಬಗ್ಗೆ  25 ದೂರುಗಳು ದಾಖಲಾಗಿದ್ದು, ಇದರಲ್ಲಿ 10 ಫೋನ್‌ಗಳನ್ನು ಮರುಪಡೆಯಲಾಗಿದೆ ಎಂದು ಇಲಾಖೆ  ಮಾಹಿತಿ ನೀಡಿದೆ. 

ಏನಿದು ಸಂಚಾರ್ ಸಾಥಿ ಪೋರ್ಟಲ್‌? (What is Sanchar Sathi Portal):
2023ರ ಮೇ ತಿಂಗಳಿನಲ್ಲಿ ಟೆಲಿಕಾಂ ಸಚಿವರಾದ ಅಶ್ವಿನಿ ವೈಷ್ಣವ್ ಅವರು ಸಂಚಾರ್ ಸಾಥಿ ಪೋರ್ಟಲ್‌ (Sanchar Sathi portal) ಅನು ಪ್ರಾರಂಭಿಸಿದರು. ಈ ಪೋರ್ಟಲ್ ಮೊಬೈಲ್ ಫೋನ್ ಕಳುವಾದರೆ ಅಥವಾ ಮಿಸ್ ಆಗಿದ್ದರೆ ವ್ಯಕ್ತಿಯ ಡೇಟಾ ಮತ್ತು ವೈಯಕ್ತಿಕ ವಿಷಯಗಳನ್ನು ಸುರಕ್ಷಿತವಾಗಿರಿಸಲು ಫೋನ್ ಅನ್ನು ಟ್ರ್ಯಾಕ್ ಮಾಡಲು, ನಿರ್ಬಂಧಿಸಲು ಸಹಾಯ ಮಾಡುತ್ತದೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಸಂಚಾರ್ ಸಾಥಿ ಪೋರ್ಟಲ್‌ನಲ್ಲಿ ಇದುವರೆಗೆ 40 ಲಕ್ಷಕ್ಕೂ ಹೆಚ್ಚು ಮೋಸದ ಸಂಪರ್ಕಗಳನ್ನು  ಪತ್ತೆಹಚ್ಚಲಾಗಿದೆ. 

ಇದನ್ನೂ ಓದಿ- Nothing ಹೊರ ತರುತ್ತಿದೆ ಅತ್ಯಂತ ಅಗ್ಗದ Smartphone! ಬ್ಯಾಟರಿ, ಕ್ಯಾಮರಾ ಎಲ್ಲವೂ ಸೂಪರ್ !

ಸಂಚಾರ್ ಸಾಥಿ ಪೋರ್ಟಲ್‌ನ ಪ್ರಯೋಜನ (Benefit of Sanchar Sathi Portal): 
ಸಂಚಾರ್ ಸಾಥಿ ಪೋರ್ಟಲ್‌ನಲ್ಲಿ ಮೊದಲನೆಯದಾಗಿ ಮೊಬೈಲ್ ಫೋನ್ ಕಳೆದುಹೋದರೆ ಅಥವಾ ಕದ್ದಿದ್ದರೆ, ಅದನ್ನು ಹೇಗೆ ನಿರ್ಬಂಧಿಸಬಹುದು, ಟ್ರ್ಯಾಕ್ ಮಾಡಬಹುದು ಮತ್ತು ಪತ್ತೆಹಚ್ಚಬಹುದು (CEIR) ಎಂಬುದಕ್ಕೆ ಇದು ಸಹಾಯಕವಾಗಿದೆ. 
 
ಸಂಚಾರ್ ಸಾಥಿ ಪೋರ್ಟಲ್‌ನ ಸಹಾಯದಿಂದ ಕಳುವಾಗಿರುವ ಫೋನ್‌ನಲ್ಲಿ ವೈಯಕ್ತಿಕ ಡೆತಾವನ್ನು ಸುರಕ್ಷಿತಗೊಳಿಸಬಹುದು. 

ಇದಲ್ಲದೆ ಸಂಚಾರ್ ಸಾಥಿ ಪೋರ್ಟಲ್‌ನಲ್ಲಿ ಗ್ರಾಹಕರು ತಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್ ಗಳನ್ನು ಹೊಂದಿದ್ದಾರೆ. ಇದಕ್ಕಾಗಿ ಯಾವ ದಾಖಲೆಗಳನ್ನು ಒದಗಿಸಲಾಗಿದೆ ಎಂಬ ಮಾಹಿತಿಯನ್ನು ಸಹ ಪಡೆಯಬಹುದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News