ಲೋಕಸಭೆ ಚುನಾವಣೆ ಬಳಿಕ ಒಮ್ಮೆಲೇ ಏರಿಕೆಯಾಗಲಿದೆ ಮೊಬೈಲ್ ಬಿಲ್ !ಜೇಬಿಗೆ ಬೀಳಲಿದೆ ಕತ್ತರಿ

Loksabha Election 2024 :ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಸ್ಮಾರ್ಟ್ಫೋನ್ ಗಳನ್ನು ಬಳಸುತ್ತಾರೆ.ತಮ್ಮ ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ಮಾತನಾಡುವುದರಿಂದ,ಹಿಡಿದು ವೃತ್ತಿಪರ ಕೆಲಸಕ್ಕೂ  ಮೊಬೈಲ್ ಬಳಸುತ್ತಾರೆ. ಹೀಗಿರುವಾಗ ಮೊಬೈಲ್ ಬಿಲ್ ಗಳ ಹೆಚ್ಚಳ ಜನರ ಜೇಬಿಗೆ ದೊಡ್ಡ ಮಟ್ಟದ ಹೊಡೆತ ನೀಡಬಹುದು. 

Written by - Ranjitha R K | Last Updated : Apr 12, 2024, 01:40 PM IST
  • ಲೋಕಸಭೆ ಚುನಾವಣೆ 2024 ಶೀಘ್ರದಲ್ಲೇ ನಡೆಯಲಿದೆ
  • ಸಾರ್ವತ್ರಿಕ ಚುನಾವಣೆಗಳು ಏಪ್ರಿಲ್ 19 ರಿಂದ ಜೂನ್ 1 ರವರೆಗೆ ನಡೆಯಲಿದೆ.
  • ಈ ಬಾರಿ ದೇಶಾದ್ಯಂತ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ.
 ಲೋಕಸಭೆ ಚುನಾವಣೆ ಬಳಿಕ ಒಮ್ಮೆಲೇ ಏರಿಕೆಯಾಗಲಿದೆ ಮೊಬೈಲ್ ಬಿಲ್ !ಜೇಬಿಗೆ ಬೀಳಲಿದೆ ಕತ್ತರಿ  title=

Loksabha Election 2024 : ಲೋಕಸಭೆ ಚುನಾವಣೆ 2024 ಶೀಘ್ರದಲ್ಲೇ ನಡೆಯಲಿದೆ. ಸಾರ್ವತ್ರಿಕ ಚುನಾವಣೆಗಳು ಏಪ್ರಿಲ್ 19 ರಿಂದ ಜೂನ್ 1 ರವರೆಗೆ ನಡೆಯಲಿದೆ.ಈ ಬಾರಿ ದೇಶಾದ್ಯಂತ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಇದಾದ ನಂತರ ಜೂನ್ 4 ರಂದು ಮತ ಎಣಿಕೆ ನಡೆಯಲಿದೆ.ಲೋಕಸಭೆ ಚುನಾವಣೆ ನಂತರ ಜನರ ಜೇಬಿಗೆ ಕತ್ತರಿ ಬೀಳಲಿದೆ ಎಂದು ಹೇಳಲಾಗುತ್ತಿದೆ.ನೀವು ಬಳಸುವ   ಸ್ಮಾರ್ಟ್‌ಫೋನ್ ನಿಮ್ಮ ಜೇಬು ಖಾಲಿ ಮಾಡಿ ಬಿಡಬಹುದು.ಸಾರ್ವತ್ರಿಕ ಚುನಾವಣೆಯ ನಂತರ ಫೋನ್ ಬಿಲ್ ಹೆಚ್ಚಾಗಬಹುದು.ಫೋನ್ ಬಿಲ್ 15-17ರಷ್ಟು ಏರಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ.ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಸ್ಮಾರ್ಟ್ಫೋನ್ ಗಳನ್ನು ಬಳಸುತ್ತಾರೆ.ತಮ್ಮ ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ಮಾತನಾಡುವುದರಿಂದ,ಹಿಡಿದು ವೃತ್ತಿಪರ ಕೆಲಸಕ್ಕೂ ಮೊಬೈಲ್ ಬಳಸುತ್ತಾರೆ. ಹೀಗಿರುವಾಗ ಮೊಬೈಲ್ ಬಿಲ್ ಗಳ ಹೆಚ್ಚಳ ಜನರ ಜೇಬಿಗೆ ದೊಡ್ಡ ಮಟ್ಟದ ಹೊಡೆತ ನೀಡಬಹುದು. 

ಯಾವ ಕಂಪನಿಗೆ ಹೆಚ್ಚು ಲಾಭ ? : 
ವರದಿಯ ಪ್ರಕಾರ,ಮೊಬೈಲ್ ಫೋನ್ ಬಿಲ್‌ಗಳಲ್ಲಿ ಹೆಚ್ಚಳವಾಗುವ ಸಾಧ್ಯತೆ ಹೆಚ್ಚಿದೆ. ಈ ಬೆಳವಣಿಗೆಯಿಂದ ಭಾರ್ತಿ ಏರ್‌ಟೆಲ್ ಹೆಚ್ಚು ಪ್ರಯೋಜನ ಪಡೆಯಬಹುದು.ಭಾರ್ತಿ ಏರ್‌ಟೆಲ್ ಭಾರತದ ಪ್ರಸಿದ್ಧ ದೂರಸಂಪರ್ಕ ಕಂಪನಿಯಾಗಿದೆ. ಭಾರ್ತಿ ಏರ್‌ಟೆಲ್ ದೇಶದಲ್ಲಿ ಕೋಟಿಗಟ್ಟಲೆ ಬಳಕೆದಾರರನ್ನು ಹೊಂದಿದೆ. ಬಹಳ ಸಮಯದ ನಂತರ ಮೊಬೈಲ್ ಫೋನ್ ಬಿಲ್‌ನಲ್ಲಿ ಈ ಹೆಚ್ಚಳವನ್ನು ಮಾಡಲಾಗುತ್ತಿದೆ. ಇದಕ್ಕೂ ಮೊದಲು,2021 ರ ಕೊನೆಯಲ್ಲಿ   ಫೋನ್ ಬಿಲ್ ನಲ್ಲಿ ಹೆಚ್ಚಳ ಮಾಡಲಾಗಿತ್ತು. 

ಇದನ್ನೂ ಓದಿ : Two Years To Save The World: 'ಕೇವಲ ಎರಡೇ ಎರಡು ವರ್ಷ.... ಜಗತ್ತಿನ ಸರ್ವನಾಶ ಖಚಿತ!'

ಬ್ರೋಕರೇಜ್ ನೋಟ್‌ನಲ್ಲಿ ಟೆಲಿಕಾಂ ಕಂಪನಿಗಳ ನೀಲನಕ್ಷೆಯನ್ನು ಪ್ರಸ್ತುತಪಡಿಸಲಾಗಿದೆ. ಇಲ್ಲಿ ಭಾರ್ತಿ ಏರ್‌ಟೆಲ್‌ನ ಪ್ರಸ್ತುತ ಸರಾಸರಿ ಆದಾಯವು ಪ್ರತಿ ಬಳಕೆದಾರರಿಗೆ (ARPU) ಆರ್ಥಿಕ ವರ್ಷಕ್ಕೆ 208 ರೂ.ಆಗಿದೆ. 2026-27 ರ ಅಂತ್ಯದ ವೇಳೆಗೆ ಇದು 286 ರೂ.ತಲುಪಬಹುದು. ಇದರೊಂದಿಗೆ, ಭಾರ್ತಿ ಏರ್‌ಟೆಲ್‌ನ ಗ್ರಾಹಕರ ನೆಲೆಯು ವರ್ಷಕ್ಕೆ ಸುಮಾರು 2 ಪ್ರತಿಶತದಷ್ಟು ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ. 

ಮಾರುಕಟ್ಟೆ ಪಾಲು :
ಭಾರ್ತಿ ಏರ್‌ಟೆಲ್‌ನ ಮಾರುಕಟ್ಟೆ ಪಾಲು ಶೇಕಡಾ 29 ರಿಂದ ಶೇಕಡಾ 33 ಕ್ಕೆ ಏರಿದೆ. ಜಿಯೋ ಮಾರುಕಟ್ಟೆ ಪಾಲು ಕೂಡಾ ಹೆಚ್ಚಾಗಿದ್ದು, 21 ಪ್ರತಿಶತದಿಂದ 39 ಪ್ರತಿಶತಕ್ಕೆ ಏರಿದೆ. ವೊಡಾಫೋನ್ ಐಡಿಯಾ ಬಗ್ಗೆ ಹೇಳುವುದಾದರೆ ಅದರ ಮಾರುಕಟ್ಟೆ ಪಾಲು ಕುಸಿದಿದೆ.2018 ರಲ್ಲಿ, ಇದು 37 ಪ್ರತಿಶತದಷ್ಟು ಮಾರುಕಟ್ಟೆ ಪಾಲನ್ನು ಹೊಂದಿತ್ತು  ಆದರೆ ಡಿಸೆಂಬರ್ 2023 ರಲ್ಲಿ, ಇದು ಸುಮಾರು ಅರ್ಧದಷ್ಟು ಕುಸಿದಿದ್ದು 19 ಪ್ರತಿಶತಕ್ಕೆ ಇಳಿದಿದೆ.  

ಇದನ್ನೂ ಓದಿ : Jio Service Down: ಇದ್ದಕ್ಕಿದ್ದಂತೆ ಸ್ಥಗಿತಗೊಂಡ ಜೀಯೋ ಸೇವೆ, ಆಕ್ರೋಶ ಹೊರಹಾಕಿದ ಬಳಕೆದಾರರು!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News