Wi-Fi Router: ರಾತ್ರಿ ಮಲಗುವ ಮುನ್ನ Wi-Fi ರೂಟರ್ ಆಫ್ ಮಾಡಲ್ವಾ? ಇದೆಷ್ಟು ಡೇಂಜರಸ್ ಗೊತ್ತಾ?

Wifi Router Tips: ರೂಟರ್ ಅನ್ನು ನಿರಂತರವಾಗಿ ಆನ್ ಮಾಡಿ ಇಡುವುದು ಅಪಾಯಕಾರಿ. ಅದರಲ್ಲೂ ರಾತ್ರಿ ಮಲಗುವಾಗಲೂ ವೈಫೈ ರೂಟರ್ ಆನ್ ಮಾಡಿ ಇಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ.

Written by - Bhavishya Shetty | Last Updated : Feb 3, 2024, 11:30 AM IST
    • ಅನೇಕ ಮನೆಗಳಲ್ಲಿ ವೈಫೈ ರೂಟರ್ ಬಳಕೆ ಮಾಡಲಾಗುತ್ತದೆ
    • ರೂಟರ್ ಅನ್ನು ನಿರಂತರವಾಗಿ ಆನ್ ಮಾಡಿ ಇಡುವುದು ಅಪಾಯಕಾರಿ
    • ವೈಫೈ ರೂಟರ್ ರೇಡಿಯೋ ತರಂಗಗಳನ್ನು ಹೊರಸೂಸುತ್ತದೆ
Wi-Fi Router: ರಾತ್ರಿ ಮಲಗುವ ಮುನ್ನ Wi-Fi ರೂಟರ್ ಆಫ್ ಮಾಡಲ್ವಾ? ಇದೆಷ್ಟು ಡೇಂಜರಸ್ ಗೊತ್ತಾ?  title=
wifi router

Wifi Router Tips: ಇತ್ತೀಚಿನ ದಿನಗಳಲ್ಲಿ ಅನೇಕ ಮನೆಗಳಲ್ಲಿ ವೈಫೈ ರೂಟರ್ ಬಳಕೆ ಮಾಡಲಾಗುತ್ತದೆ. ಇದರ ಹಿಂದಿನ ಪ್ರಮುಖ ಕಾರಣವೆಂದರೆ ಮೊದಲಿಗಿಂತ ಹೆಚ್ಚು ಇಂಟರ್ನೆಟ್ ಪಡೆಯುವುದು. ವೀಡಿಯೊ ವೀಕ್ಷಿಸಲು ಅಥವಾ ಯಾವುದೇ ರೀತಿಯ ವಿಷಯವನ್ನು ಡೌನ್‌ ಲೋಡ್ ಮಾಡಲು ಹೆಚ್ಚಿನ ವೇಗದ ಇಂಟರ್ನೆಟ್ ಅಗತ್ಯವಿರುತ್ತದೆ. ಫೋನ್‌ ಇಂಟರ್‌ನೆಟ್ ಮೂಲಕ ಇಷ್ಟೆಲ್ಲಾ ಮಾಡಲು ಸಾಧ್ಯವಿಲ್ಲ. ಹೀಗಿರುವಾಗ ವೈಫೈ ರೂಟರ್ ಸಾಕಷ್ಟು ಪ್ರಯೋಜನ ನೀಡುತ್ತದೆ.

ಆದರೆ ರೂಟರ್ ಅನ್ನು ನಿರಂತರವಾಗಿ ಆನ್ ಮಾಡಿ ಇಡುವುದು ಅಪಾಯಕಾರಿ. ಅದರಲ್ಲೂ ರಾತ್ರಿ ಮಲಗುವಾಗಲೂ ವೈಫೈ ರೂಟರ್ ಆನ್ ಮಾಡಿ ಇಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ.

ಇದನ್ನೂ ಓದಿ: ರಂಗಾಯಣ ರಘು ನಾಯಕನಟರಾಗಿ ನಟಿಸಿರುವ ಶಾಖಾಹಾರಿ ಚಿತ್ರದ ಟ್ರೇಲರ್ ರಿಲೀಸ್!

ಆರೋಗ್ಯ ಕಾಳಜಿಗಳು:

ವೈಫೈ ರೂಟರ್ ರೇಡಿಯೋ ತರಂಗಗಳನ್ನು ಹೊರಸೂಸುತ್ತದೆ. ಅವು ಕಡಿಮೆ ಆವರ್ತನದ ವಿದ್ಯುತ್ಕಾಂತೀಯ ಅಲೆಗಳಾಗಿವೆ. ಈ ತರಂಗಗಳಿಗೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಋಣಾತ್ಮಕ ಆರೋಗ್ಯ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ಕೆಲವು ಸಂಶೋಧನೆಗಳು ತೋರಿಸಿವೆ, ಅವುಗಳೆಂದರೆ ತಲೆನೋವು, ಸುಸ್ತು, ನಿದ್ರೆಯ ಸಮಸ್ಯೆಗಳು, ಏಕಾಗ್ರತೆಯ ಕೊರತೆ, ಮೆಮೊರಿ ನಷ್ಟ ಹೀಗೆ ಹಲವಾರು. ಆದರೆ, ಈ ಸಂಶೋಧನೆಯ ಫಲಿತಾಂಶಗಳು ಇನ್ನೂ ಅಸ್ಪಷ್ಟವಾಗಿದೆ.

ವಿದ್ಯುತ್ ಉಳಿತಾಯ:

ವೈಫೈ ರೂಟರ್ ಅನ್ನು ಸ್ವಿಚ್ ಆಫ್ ಮಾಡುವುದರಿಂದ ವಿದ್ಯುತ್ ಉಳಿತಾಯವಾಗುತ್ತದೆ. ಇದು ಸಣ್ಣ ಉಳಿತಾಯದಂತೆ ಕಾಣಿಸಬಹುದು, ಆದರೆ ಪ್ರತಿ ರಾತ್ರಿ ಆಫ್ ಮಾಡಿದರೆ, ವರ್ಷದಲ್ಲಿ ಗಮನಾರ್ಹ ವ್ಯತ್ಯಾಸವನ್ನು ಮಾಡಬಹುದು.

ಭದ್ರತೆ:

ವೈಫೈ ರೂಟರ್ ಅನ್ನು ಆಫ್ ಮಾಡುವುದರಿಂದ ಅನಧಿಕೃತ ಪ್ರವೇಶದ ಅಪಾಯವನ್ನು ಕಡಿಮೆ ಮಾಡುತ್ತದೆ. ವೈಫೈ ರೂಟರ್ ಅನ್ನು ನೀವು ಬಳಸದೇ ಇರುವಾಗ ಆಫ್ ಮಾಡಿಡಿ, ಇಲ್ಲವಾದರೆ ಹ್ಯಾಕರ್‌ಗಳು ಅಥವಾ ಇತರ ಅನಧಿಕೃತ ಬಳಕೆದಾರರು ನಿಮ್ಮ ನೆಟ್‌ವರ್ಕ್’ನ್ನು ಪ್ರವೇಶ ಮಾಡುವ ಸಾಧ್ಯತೆ ಇದೆ

ನಿದ್ರೆ:

ವೈಫೈ ರೂಟರ್‌’ಗಳಿಂದ ಹೊರಸೂಸುವ ರೇಡಿಯೋ ತರಂಗಗಳು ನಿದ್ರೆಯ ಗುಣಮಟ್ಟದ ಮೇಲೆ ಪರಿಣಾಮ ಬೀರಬಹುದು ಎಂದು ಕೆಲವರು ಹೇಳುತ್ತಾರೆ. ಹಾಗಾಗಿ ಮಲಗುವ ಮುನ್ನ ವೈಫೈ ರೂಟರ್ ಅನ್ನು ಆಫ್ ಮಾಡಿ. ಆಗ ವೈಫೈ ಅನುಕೂಲಗಳು ಮತ್ತು ಅನಾನುಕೂಲಗಳ ವ್ಯತ್ಯಾಸ ಸ್ಪಷ್ಟವಾಗಿ ಗೋಚರವಾಗುತ್ತದೆ.

ಇದನ್ನೂ ಓದಿ: Saturday Remedies: ಅಶುಭ ಗ್ರಹಗಳ ಪ್ರಭಾವದಿಂದ ನೀವು ಶೀಘ್ರದಲ್ಲೇ ಪರಿಹಾರವನ್ನು ಪಡೆಯುತ್ತೀರಿ!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News