Pan Card ಅನ್ನು ಸುಲಭವಾಗಿ ಆನ್ಲೈನ್ ಮೂಲಕವೇ ಅಪ್ಡೇಟ್ ಮಾಡಿಕೊಳ್ಳಿ!ಇಲ್ಲಿದೆ ಹಂತ ಹಂತದ ಪ್ರಕ್ರಿಯೆ

Pan Card Update: ಪಾನ್ ಕಾರ್ಡ್ ಪ್ರತಿಯೊಬ್ಬ ಭಾರತೀಯನೂ ಹೊಂದಿರಬೇಕಾದ ಪ್ರಮುಖ ದಾಖಲೆಯಾಗಿದೆ.ಅನೇಕ ಬಾರಿ ಅದರಲ್ಲಿ ಜನರ ಹೆಸರುಗಳನ್ನು ತಪ್ಪಾಗಿ ಮುದ್ರಿಸಲಾಗುತ್ತದೆ.

Written by - Ranjitha R K | Last Updated : Mar 20, 2024, 04:20 PM IST
  • ಪಾನ್ ಕಾರ್ಡ್ ಪ್ರಮುಖ ದಾಖಲೆಯಾಗಿದೆ
  • ಅನೇಕ ಬಾರಿ ಅದರಲ್ಲಿ ಜನರ ಹೆಸರುಗಳನ್ನು ತಪ್ಪಾಗಿ ಮುದ್ರಿಸಲಾಗುತ್ತದೆ.
  • ಈ ಕಾರಣದಿಂದಾಗಿ ಅನೇಕ ಸಮಸ್ಯೆಗಳನ್ನು ಎದುರಿಸಬಹುದು.
Pan Card ಅನ್ನು ಸುಲಭವಾಗಿ ಆನ್ಲೈನ್ ಮೂಲಕವೇ ಅಪ್ಡೇಟ್ ಮಾಡಿಕೊಳ್ಳಿ!ಇಲ್ಲಿದೆ ಹಂತ ಹಂತದ ಪ್ರಕ್ರಿಯೆ  title=

Pan Card Update : ಪಾನ್ ಕಾರ್ಡ್ ಪ್ರತಿಯೊಬ್ಬ ಭಾರತೀಯನೂ ಹೊಂದಿರಬೇಕಾದ ಪ್ರಮುಖ ದಾಖಲೆಯಾಗಿದೆ.ಅನೇಕ ಬಾರಿ ಅದರಲ್ಲಿ ಜನರ ಹೆಸರುಗಳನ್ನು ತಪ್ಪಾಗಿ ಮುದ್ರಿಸಲಾಗುತ್ತದೆ. ಈ ಕಾರಣದಿಂದಾಗಿ ಅನೇಕ ಸಮಸ್ಯೆಗಳನ್ನು ಎದುರಿಸಬಹುದು. ಹೀಗಾದಾಗ ಈ ತಪ್ಪುಗಳನ್ನು ಆನ್‌ಲೈನ್ ಮೂಲಕವೇ ಸರಿಪಡಿಸಿಕೊಳ್ಳಬಹುದು. ಆನ್ಲೈನ್ ನಲ್ಲಿ ಅಪ್ಡೇಟ್ ಮಾಡುವ ಹಂತ ಹಂತದ ಪ್ರಕ್ರಿಯೆ ಇಲ್ಲಿದೆ. 

ಹೆಸರು ತಿದ್ದುಪಡಿಯ ಆನ್‌ಲೈನ್ ಪ್ರಕ್ರಿಯೆ :
1. ಮೊದಲನೆಯದಾಗಿ, Income Tax Department ವೆಬ್‌ಸೈಟ್‌ಗೆ ಹೋಗಿ. 
2. "Online Services" ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
3. "PAN Services" ಅಡಿಯಲ್ಲಿ, "Request for PAN Card Reprint/Correction/Change of Address ಮೇಲೆ ಕ್ಲಿಕ್ ಮಾಡಿ. 
4. "Apply Online" ಕ್ಲಿಕ್ ಮಾಡಿ.
5.ಈಗ, PAN Number, Date of Birth,  ಮತ್ತು Gender ನಮೂದಿಸಿ.
6. "I am not a Robot" ಚೆಕ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ.
7. "Submit" ಕ್ಲಿಕ್ ಮಾಡಿ.
8.ಈಗ, ಹೊಸ ಪುಟ ತೆರೆಯುತ್ತದೆ. ಅದರಲ್ಲಿ ತಿದ್ದುಪಡಿಗಾಗಿ ಅಗತ್ಯವಿರುವ  ಮಾಹಿತಿಯನ್ನು ನಮೂದಿಸಬೇಕು. 
9.ನೀವು ಎಲ್ಲಾ ಮಾಹಿತಿಯನ್ನು ನಮೂದಿಸಿದ ನಂತರ, "Submit" ಕ್ಲಿಕ್ ಮಾಡಿ.
ಇಲ್ಲಿ ನಿಮಗೆ   Acknowledgement Number ಸಿಗುತ್ತದೆ. ಈ ನಂಬರ್ ಅನ್ನು  ಎಚ್ಚರಿಕೆಯಿಂದ ಇರಿಸಿಕೊಳ್ಳಿ.

ಇದನ್ನೂ ಓದಿ : WhatsAppನಲ್ಲಿ ನಂಬರ್ ಸೇವ್ ಇಲ್ಲದಿದ್ದರೂ chat ಮಾಡಬಹುದು! ಇಲ್ಲಿದೆ ಸುಲಭ ಟ್ರಿಕ್

ನಿಮ್ಮ ಹೆಸರು ಬದಲಾವಣೆಯ ವಿನಂತಿಯನ್ನು ಅನುಮೋದಿಸಲು ಇದು 15-20 ದಿನಗಳನ್ನು ತೆಗೆದುಕೊಳ್ಳಬಹುದು. ಒಮ್ಮೆ ನಿಮ್ಮ ಹೆಸರು ಬದಲಾವಣೆಯ ವಿನಂತಿಯನ್ನು ಅನುಮೋದಿಸಿದ ನಂತರ, ನಿಮ್ಮ ಸರಿಯಾದ ಹೆಸರನ್ನು ಮುದ್ರಿಸಿದ ಹೊಸ PAN ಕಾರ್ಡ್ ನಿಮಗೆ ಸಿಗುತ್ತದೆ. 

ನಿಮ್ಮ ಹೆಸರು ಬದಲಾವಣೆ ವಿನಂತಿಯನ್ನು ಅನುಮೋದಿಸದಿದ್ದರೆ,ನಿಮ್ಮ ಹೆಸರು ಬದಲಾವಣೆಯ ವಿನಂತಿ ತಿರಸ್ಕರಿಸಿರುವ ಕಾರಣಗಳನ್ನು ನೀಡುತ್ತದೆ.ಈ ಕಾರಣಗಳು ನಿಮಗೆ ಸರಿ ಇಲ್ಲ ಎಂದಾದರೆ ಮತ್ತೆ ಅರ್ಜಿ ಸಲ್ಲಿಸಬಹುದು.

ಆಫ್‌ಲೈನ್ ನಲ್ಲಿ ಹೆಸರು ಬದಲಾವಣೆಗೆ ಅರ್ಜಿ ಸಲ್ಲಿಸುವುದು ಹೇಗೆ ? : 
ನೀವು ಆನ್‌ಲೈನ್‌ನಲ್ಲಿ ಹೆಸರು ಬದಲಾವಣೆಗೆ ಅರ್ಜಿ ಸಲ್ಲಿಸುವಾಗಲೂ ಕೆಲವು  ಹಂತಗಳನ್ನು ಅನುಸರಿಸಬೇಕು:

ಇದನ್ನೂ ಓದಿ : Zomato Feature: ಶಾಕಾಹಾರಿಗಳಿಗೊಂದು ಸಂತಸದ ಸುದ್ದಿ ಪ್ರಕಟಿಸಿದ Zomato, ಬಿಡುಗಡೆಯಾಗಿದೆ ಹೊಸ ವೈಶಿಷ್ಟ್ಯ!

1.ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್‌ನಿಂದ ಪ್ಯಾನ್ ಕಾರ್ಡ್ ತಿದ್ದುಪಡಿ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿ.
2. ಫಾರ್ಮ್ ಅನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ ಮತ್ತು ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಲಗತ್ತಿಸಿ.
3.ನಿಮ್ಮ ಹತ್ತಿರದ PAN ಕಾರ್ಡ್ ವಿತರಣಾ ಪ್ರಾಧಿಕಾರ (PCIA) ಕಚೇರಿಗೆ ಫಾರ್ಮ್ ಅನ್ನು ಸಲ್ಲಿಸಿ.
4.PCIA ನಿಮ್ಮ ಹೆಸರು ಬದಲಾವಣೆಯ ವಿನಂತಿಯನ್ನು 15-20 ದಿನಗಳಲ್ಲಿ ಅನುಮೋದಿಸುತ್ತದೆ ಅಥವಾ ತಿರಸ್ಕರಿಸುತ್ತದೆ. ಒಮ್ಮೆ ನಿಮ್ಮ ಹೆಸರು ಬದಲಾವಣೆಯ ವಿನಂತಿಯನ್ನು ಅನುಮೋದಿಸಿದ ನಂತರ, ನಿಮ್ಮ ಸರಿಯಾದ ಹೆಸರನ್ನು ಮುದ್ರಿಸಿದ ಹೊಸ PAN ಕಾರ್ಡ್  ಸಿಗುತ್ತದೆ. 

ಅಗತ್ಯ ದಾಖಲೆಗಳು :
ಹೆಸರು ಬದಲಾವಣೆ ವಿನಂತಿಗಾಗಿ ನೀವು ಈ ಕೆಳಗಿನ ದಾಖಲೆಗಳನ್ನು ಲಗತ್ತಿಸಬೇಕಾಗಿದೆ:
ಪ್ಯಾನ್ ಕಾರ್ಡ್: ತಪ್ಪಾದ ಹೆಸರು ಮುದ್ರಿಸಲಾದ ಪಾನ್ ಕಾರ್ಡ್ .
ಆಧಾರ್ ಕಾರ್ಡ್: ಸರಿಯಾದ ಹೆಸರಿನ ಪುರಾವೆಯಾಗಿ ಆಧಾರ್ ಕಾರ್ಡ್ .
ಮದುವೆ ಪ್ರಮಾಣಪತ್ರ: ಮದುವೆಯ ನಂತರ ನೀವು ನಿಮ್ಮ ಹೆಸರನ್ನು ಬದಲಾಯಿಸಿದ್ದರೆ ನಿಮ್ಮ ಮದುವೆ ಪ್ರಮಾಣಪತ್ರವನ್ನು ಲಗತ್ತಿಸಬೇಕು.
ವಿಚ್ಛೇದನ ಪ್ರಮಾಣಪತ್ರ: ವಿಚ್ಛೇದನದ ನಂತರ ನಿಮ್ಮ ಹೆಸರನ್ನು ಬದಲಾಯಿಸಿದ್ದರೆ ನಿಮ್ಮ ವಿಚ್ಛೇದನ ಪ್ರಮಾಣಪತ್ರವನ್ನು ಲಗತ್ತಿಸಬೇಕು.
ನ್ಯಾಯಾಲಯದ ಆದೇಶ: ನೀವು ನಿಮ್ಮ ಹೆಸರನ್ನು ಕಾನೂನುಬದ್ಧವಾಗಿ ಬದಲಾಯಿಸಿದ್ದರೆ, ಸಂಬಂಧಪಟ್ಟ ನ್ಯಾಯಾಲಯದ ಆದೇಶವನ್ನು ಲಗತ್ತಿಸಬೇಕು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News