Facebook ಬಳಕೆದಾರರಿಗೊಂದು ಎಚ್ಚರಿಕೆ! ಈ ರೀತಿಯ Comment ನಿಮ್ಮನ್ನು ಶಿಕ್ಷೆಗೆ ಗುರಿಯಾಗಿಸಬಹುದು

ಒಂದು ವೇಳೆ ನೀವೂ ಕೂಡ ಫೇಸ್ ಬುಕ್ (Facebook) ಬಳಕೆದಾರರಾಗಿದ್ದರೆ, ಈ ಸುದ್ದಿ ನಿಮಗಾಗಿ. ಈ ಸಾಮಾಜಿಕ ಮಾಧ್ಯಮದ ಮೇಲೆ ಕಾಮೆಂಟ್ (Facebook Comment) ಮಾಡುವಾಗ ಎಚ್ಚರಿಕೆ ವಹಿಸುವುದು ತುಂಬಾ ಮುಖ್ಯವಾಗಿದೆ. ಏಕೆ ತಿಳಿದುಕೊಳ್ಳೋಣ ಬನ್ನಿ.

Written by - Nitin Tabib | Last Updated : Jan 22, 2022, 06:09 PM IST
  • ಫೇಸ್ ಬುಕ್ ಬಳಕೆದಾರರೇ ಎಚ್ಚರಿಕೆ.
  • ಈ ರೀತಿಯ ಕಾಮೆಂಟ್ ಮಾಡುವುದರಿಂದ ದೂರ ಉಳಿಯಿರಿ
  • ಜೈಲು ಶಿಕ್ಷೆ ಕೂಡ ಆಗಬಹುದು.
Facebook ಬಳಕೆದಾರರಿಗೊಂದು ಎಚ್ಚರಿಕೆ! ಈ ರೀತಿಯ Comment ನಿಮ್ಮನ್ನು ಶಿಕ್ಷೆಗೆ ಗುರಿಯಾಗಿಸಬಹುದು title=
Facebook Inappropriate Comment (File Photo)

Facebook Inappropriate Comments : ಇಂದಿನ ಸ್ಮಾರ್ಟ್ ಫೋನ್ ಯುಗದಲ್ಲಿ ಹೆಚ್ಚಿನ ಜನರು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳನ್ನು ಬಳಸುತ್ತಾರೆ (Facebook Users) ಮತ್ತು ಫೇಸ್‌ಬುಕ್ (Facebook Inappropriate) ಮತ್ತು ಇನ್‌ಸ್ಟಾಗ್ರಾಮ್ ಅತ್ಯಂತ ಜನಪ್ರಿಯ ವೇದಿಕೆಗಳಲ್ಲಿ ಒಂದಾಗಿವೆ. ಆದರೆ ಈ ಸಾಮಾಜಿಕ ಮಾಧಯ್ಮಗಳ ಮೇಲೆ ಕಾಮೆಂಟ್ ಮಾಡುವಾಗ ಎಚ್ಚರಿಕೆ ವಹಿಸುವುದು ತುಂಬಾ ಮುಖ್ಯವಾದ ಸಂಗತಿಯಾಗಿದೆ. ಹೌದು, ನೀವು ಮಾಡುವ ವಿಶೇಷ ರೀತಿಯ ಕಾಮೆಂಟ್ ವಿರುದ್ಧ ಫೇಸ್ ಬುಕ್ ನಿಮ್ಮ ಮೇಲೆ ಕ್ರಮ ಜರುಗಿಸಬಹುದು. ಅಷ್ಟೇ ಯಾಕೆ ನಿಮಗೆ ಜೈಲು ಶಿಕ್ಷೆಯಾಗುವ ಸಾಧ್ಯತೆ ಕೂಡ ಇದೆ.

ಫೇಸ್ ಬುಕ್ ಮೇಲೆ ಈ ಬಳಕೆದಾರರಿಗೆ ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ
ಸಾಮಾಜಿಕ ಮಾಧ್ಯಮದ ಹೆಚ್ಚುತ್ತಿರುವ ಕ್ರೇಜ್‌ನಲ್ಲಿ, ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು ಬಳಕೆದಾರರ ಸುರಕ್ಷತೆಯ ಬಗ್ಗೆ ವಿಶೇಷ ಕಾಳಜಿ ವಹಿಸಲು ಪ್ರಯತ್ನಿಸುತ್ತಿವೆ. ಏಕೆಂದರೆ ಫೇಸ್‌ಬುಕ್‌ನಲ್ಲಿ ಇಂತಹ ಅನೇಕ ಬಳಕೆದಾರರು ತಮ್ಮ ಪೋಸ್ಟ್‌ಗಳ ಮೇಲೆ ತಪ್ಪು ರೀತಿಯ ಕಾಮೆಂಟ್‌ಗಳನ್ನು ಮಾಡುವ ಮೂಲಕ ಇತರರಿಗೆ ಕಿರುಕುಳ ಮತ್ತು ಮಾನಹಾನಿ ಮಾಡಲು ಪ್ರಯತ್ನಿಸುತ್ತಾರೆ. ಅಂತಹ ಬಳಕೆದಾರರ ಕಾಮೆಂಟ್‌ಗಳ ಮೇಲೆ ಫೇಸ್‌ಬುಕ್ ಕ್ರಮ ಕೈಗೊಳ್ಳಬಹುದು (Facebook Security Policy) ಮತ್ತು ಅಗತ್ಯವಿದ್ದರೆ ಬಳಕೆದಾರರನ್ನು ಜೈಲಿಗೆ ಕಳುಹಿಸಬಹುದು.

ದಯವಿಟ್ಟು ಈ ರೀತಿಯ ಕಾಮೆಂಟ್ ಮಾಡುವುದರಿಂದ ದೂರ ಉಳಿಯಿರಿ
ಯಾವ ರೀತಿಯ ಕಾಮೆಂಟ್‌ಗಳನ್ನು ತಪ್ಪಿಸಬೇಕು ಎಂದು ನೀವೂ ಕೂಡ ಯೋಚಿಸುತ್ತಿದ್ದರೆ ಕೇಳಿ, ನೀವು ಯಾರೊಬ್ಬರ ಪೋಸ್ಟ್‌ನ ಅಡಿಯಲ್ಲಿ ಜಾತಿ ಅಥವಾ ಯಾವುದೇ ನಿರ್ದಿಷ್ಟ ಧರ್ಮಕ್ಕೆ ಸಂಬಂಧಿಸಿದ ಯಾವುದೇ ಕಾಮೆಂಟ್‌ಗಳನ್ನು ಮಾಡಿದರೆ, ನಿಮ್ಮ ವಿರುದ್ಧ ಕಠಿಣ ಫೇಸ್ ಬುಕ್ ಕ್ರಮ ಕೈಗೊಳ್ಳಬಹುದು. ಕಾಮೆಂಟ್‌ಗಳ ವಿಭಾಗದಲ್ಲಿ ನೀವು ಅವಮಾನಿಸಿದರೂ, ನಿಂದಿಸಿದರೂ ಅಥವಾ ಅಶ್ಲೀಲ ಚಿತ್ರಗಳನ್ನು ಕಳುಹಿಸಿದರೂ ನಿಮ್ಮ ವಿರುದ್ಧ ಕ್ರಮ ಜರುಗಲಿದೆ.

ಇದನ್ನೂ ಓದಿ-Pensionಗೆ ಸಂಬಂಧಿಸಿದಂತೆ ಒಳ್ಳೆಯ ಸುದ್ದಿ ಪ್ರಕಟ! NPS ಅಡಿ ಸಿಗಲಿದೆ ನಿಶ್ಚಿತ ರಿಟರ್ನ್!

ಅನುಚಿತ ಕಾಮೆಂಟ್‌ಗಳ ಮೇಲೆ ದೂರು ನೀಡಿ
ನಿಮ್ಮ ಪೋಸ್ಟ್ ಅಥವಾ ಬೇರೆಯವರ ಪೋಸ್ಟ್‌ನಲ್ಲಿ ಮಾಡಿದ ಕಾಮೆಂಟ್ ಅಶ್ಲೀಲ ಅಥವಾ ತಪ್ಪಾಗಿದ್ದರೆ, ನೀವು ಬಯಸಿದರೆ ಅವರ ವಿರುದ್ಧವೂ ದೂರು ದಾಖಲಿಸಬಹುದು. Facebook ನಲ್ಲಿ, ಪ್ರತಿಯೊಬ್ಬ ಬಳಕೆದಾರರು ಯಾವುದೇ ಕಾಮೆಂಟ್ ಅನ್ನು ವರದಿ ಮಾಡುವ ಆಯ್ಕೆಯನ್ನು ಹೊಂದಿರುತ್ತಾರೆ, ಇದರಿಂದಾಗಿ ಬಳಕೆದಾರರು ತಪ್ಪಾದ ಕಾಮೆಂಟ್ (Comment) ಅನ್ನು Facebook ಗೆ ವರದಿ ಮಾಡಬಹುದು.

ಇದನ್ನೂ ಓದಿ-ಬಹುಮಹಡಿ ಕಟ್ಟಡದ 18ನೇ ಮಹಡಿಯಲ್ಲಿ ಭೀಕರ ಅಗ್ನಿ ಅವಘಡ, ಮೂವರು ಸಾವು, 15ಕ್ಕೂ ಹೆಚ್ಚು ಜನರಿಗೆ ಗಾಯ

ಇಂತಹ ಕಾಮೆಂಟ್‌ಗಳನ್ನು ಮಾಡುವುದರಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಬೇಕು. ಇದರಿಂದ ಫೇಸ್‌ಬುಕ್ ನಿಮ್ಮ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ ಮತ್ತು ನೀವು ಯಾವುದೇ ಅಡೆತಡೆಯಿಲ್ಲದೆ ಅಪ್ಲಿಕೇಶನ್ ಅನ್ನು ಬಳಸಬಹುದು.

ಇದನ್ನೂ ಓದಿ-ಲಕ್ಷ್ಮಿ ಕೃಪೆಗೆ ಪಾತ್ರರಾಗಲು ಬಾರ್ಲಿಗೆ ಸಂಬಂಧಿಸದ ಈ ಉಪಾಯಗಳನ್ನು ಅನುಸರಿಸಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News