ಇನ್ಮುಂದೆ ಟ್ವಿಟರ್‌ನಲ್ಲಿಯೂ ಆಡಿಯೋ & ವಿಡಿಯೋ ಕರೆ ಸೌಲಭ್ಯ: ಮಸ್ಕ್ ಘೋಷಣೆ

ಟ್ವಿಟರ್ ಅನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡ ಬಳಿಕ ಮಸ್ಕ್ ನಿರಂತರವಾಗಿ ಬದಲಾವಣೆಗಳನ್ನು ತರುತ್ತಿದ್ದಾರೆ. ಆಡಿಯೋ ಮತ್ತು ವಿಡಿಯೋ ಕರೆ ಸೌಲಭ್ಯದ ಮೂಲಕ ಆದಾಯ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಇದೀಗ ಮತ್ತೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

Written by - Puttaraj K Alur | Last Updated : Sep 1, 2023, 09:25 AM IST
  • ‘X’ ಬಳಕೆದಾರರಿಗೆ ಭರ್ಜರಿ ಸಿಹಿಸುದ್ದಿ ನೀಡಿದ ಖ್ಯಾತ ಉದ್ಯಮಿ ಎಲಾನ್ ಮಸ್ಕ್
  • ಶೀಘ್ರವೇ ಟ್ವಿಟರ್‍ನಲ್ಲಿಯೂ ಆಡಿಯೋ-ವಿಡಿಯೋ ಕರೆ ಸೇವೆ ಆರಂಭಿಸುವುದಾಗಿ ಘೋಷಣೆ
  • ಮೊಬೈಲ್‌ ಸಂಖ್ಯೆ ಇಲ್ಲದೆ ಕರೆ ಮಾಡಲು ಹೊಸ ಫೀಚರ್‌ ಪರಿಚಯಿಸಲಿರುವ X
ಇನ್ಮುಂದೆ ಟ್ವಿಟರ್‌ನಲ್ಲಿಯೂ ಆಡಿಯೋ & ವಿಡಿಯೋ ಕರೆ ಸೌಲಭ್ಯ: ಮಸ್ಕ್ ಘೋಷಣೆ title=
 ‘X’ ಬಳಕೆದಾರರಿಗೆ ಭರ್ಜರಿ ಸಿಹಿಸುದ್ದಿ

ನವದೆಹಲಿ: ಜಗತ್ತಿನ ಶ್ರೀಮಂತ ವ್ಯಕ್ತಿ, ಖ್ಯಾತ ಉದ್ಯಮಿ ಎಲಾನ್ ಮಸ್ಕ್ ‘X’ ಬಳಕೆದಾರರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದಾರೆ. ಶೀಘ್ರವೇ ಟ್ವಿಟರ್‍ನಲ್ಲಿಯೂ ಆಡಿಯೋ-ವಿಡಿಯೋ ಕರೆ ಸೇವೆ ಆರಂಭಿಸುವುದಾಗಿ ಘೋಷಿಸಿದ್ದಾರೆ. ಮೊಬೈಲ್‌ ಸಂಖ್ಯೆ ಇಲ್ಲದೆಯೇ ಕರೆ ಮಾಡಲು ಎಕ್ಸ್‌ನಿಂದ ಹೊಸ ಫೀಚರ್‌ ಪರಿಚಯಿಸಲಾಗುವುದು ಎಂದು ಅವರು ಟ್ವೀಟ್ ಮಾಡಿದ್ದಾರೆ.

ಖ್ಯಾತ ಮೈಕ್ರೋ ಬ್ಲಾಗಿಂಗ್ ಸಾಮಾಜಿಕ ಜಾಲತಾಣ ಟ್ವಿಟರ್ ಹೆಸರನ್ನು ಮಸ್ಕ್ ‘X’ ಎಂದು ಬದಲಾಯಿಸಿದ್ದು, ಪಕ್ಷಿಯನ್ನು ‘X’ ಲೋಗೋದಿಂದ ಬದಲಾಯಿಸಲಾಗಿದೆ. ಇದೀಗ ಹೊಸ ವೈಶಿಷ್ಟ್ಯವನ್ನು ಪರಿಚಯಿಸುವುದಾಗಿ ಟ್ವೀಟ್ ಮಾಡಿರುವ ಮಸ್ಕ್, ‘ಶೀಘ್ರವೇ ಟ್ವಿಟರ್‍ನಲ್ಲಿ ಆಡಿಯೋ-ವಿಡಿಯೋ ಕರೆ ಸೌಲಭ್ಯ ಬರಲಿದೆ. iOS, Android, Mac ಮತ್ತು PCನಲ್ಲಿಯೂ ಈ ಇದು ಕಾರ್ಯನಿರ್ವಹಿಸುತ್ತದೆ. ಇದಕ್ಕೆ ಯಾವುದೇ ರೀತಿಯ ಫೋನ್ ನಂಬರ್ ಸಂಖ್ಯೆಯ ಅಗತ್ಯವಿಲ್ಲ. ‘X’ ಅಥವಾ ಟ್ವಿಟರ್ ಪರಿಣಾಮಕಾರಿ ‘global address book’ ಆಗಿದೆ’ ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: Gas Cylinder: ಶ್ರಾವಣ ಮಾಸದಲ್ಲಿ ಈ ರಾಜ್ಯದ ಜನರಿಗೆ ₹450ಕ್ಕೆ ಸಿಗಲಿದೆ ಗ್ಯಾಸ್ ಸಿಲಿಂಡರ್!

ಟ್ವಿಟರ್ ಅನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡ ಬಳಿಕ ಮಸ್ಕ್ ನಿರಂತರವಾಗಿ ಬದಲಾವಣೆಗಳನ್ನು ತರುತ್ತಿದ್ದಾರೆ. ಆಡಿಯೋ ಮತ್ತು ವಿಡಿಯೋ ಕರೆ ಸೌಲಭ್ಯದ ಮೂಲಕ ಆದಾಯ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಇದೀಗ ಮತ್ತೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಟ್ವಿಟರ್‍ನಲ್ಲಿ ಫೋನ್ ಸಂಖ್ಯೆಯ ಅಗತ್ಯವಿಲ್ಲದೆ ಬಳಕೆದಾರರೊಂದಿಗೆ ಕರೆಗಳ ಮೂಲಕ ಸಂಪರ್ಕಿಸುವ ಸೌಲಭ್ಯವನ್ನು ಪರಿಚಯಿಸಲಾಗುತ್ತಿದೆ. ಟ್ವಿಟರ್‍ನಲ್ಲಿ ಉದ್ಯೋಗಾವಕಾಶದ ವೈಶಿಷ್ಟ್ಯವನ್ನು ಪರಿಚಯಿಸುವುದಾಗಿ ಇತ್ತೀಚೆಗಷ್ಟೇ ಮಸ್ಕ್‌ ಘೋಷಿಸಿದ್ದರು. ವೆರಿಫೈಡ್ ಖಾತೆಗಳಿಗೆ ‘X’ನಲ್ಲಿ ಉದ್ಯೋಗಾವಕಾಶದ ಕುರಿತು ಪೋಸ್ಟ್ ಮಾಡುವ ಸೇವೆ ಪ್ರಾರಂಭಿಸಲಾಗಿದೆ. ಮಸ್ಕ್ ತಮ್ಮ ವಿಭಿನ್ನ ಆಲೋಚನೆಗಳ ಮೂಲಕ ಹೊಸ ಹೊಸ ಬದಲಾವಣೆ ತರಲು ಪ್ಲ್ಯಾನ್ ಮಾಡುತ್ತಿದ್ದಾರೆ ಅಂತಾ ಟ್ವಿಟರ್ ಬಳಕೆದಾರರು ಕಾಮೆಂಟ್ ಮಾಡುತ್ತಿದ್ದಾರೆ.  

ಇದನ್ನೂ ಓದಿ: ನಾಳೆಯಿಂದ ದೇಶಾದ್ಯಂತ ಬದಲಾಗಲಿವೆ ಈ ಐದು ನಿಯಮಗಳು, ನಿಮಗೂ ಗೊತ್ತಿರಲಿ!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News