ಆರ್ಆರ್ಆರ್ ಚಿತ್ರತಂಡಕ್ಕೆ ಈಗ ಸುಗ್ಗಿ ಕಾಲ. ಸಾಲು ಸಾಲು ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬರ್ತಿವೆ. ಇತ್ತೀಚಿಗೆ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿಗೆ ಪಾತ್ರವಾಗಿದ್ದ ರಾಜಮೌಳಿ ಚಿತ್ರತಂಡ ಇದೀಗ ಆಸ್ಕರ್ ಅಂಗಳದಲ್ಲಿದೆ. ಇನ್ನು ಇದೇ ವೇಳೆ ಈ ʼನಾಟು ನಾಟುʼ ಹಾಡಿನ ಸಂಗೀತ ಸಂಯೋಜಕ ಎಂ.ಎಂ. ಕೀರವಾಣಿ ಅವರು ಪದ್ಮಶ್ರೀ ಗೌರವಕ್ಕೆ ಪಾತ್ರರಾಗಿದ್ದಾರೆ. ಈ ಕುರಿತು ಸಂತೋಷ ವ್ಯಕ್ತಪಡಿಸಿರುವ ನಿರ್ದೇಶಕ ರಾಜಮೌಳಿ, ಸುದೀರ್ಘ ಬರಹದ ಮೂಲಕ ಕೀರವಾಣಿಯವರನ್ನು ಹಾಡಿ ಹೊಗಳಿದ್ದಾರೆ.
RRR for Oscar : ಎಸ್ಎಸ್ ರಾಜಮೌಳಿ ಅವರ ಆರ್ಆರ್ಆರ್ ಆಸ್ಕರ್ ರೇಸ್ನಲ್ಲಿದೆ. ಇದೀಗ ಅಕಾಡೆಮಿಯಿಂದ ಅಪ್ಡೇಟ್ ಹೊರಬಿದ್ದಿದ್ದು, ತೆಲುಗು ಬ್ಲಾಕ್ಬಸ್ಟರ್ ಆರ್ಆರ್ಆರ್ ಸಿನಿಮಾದ ʼನಾಟು ನಾಡುʼ ಹಾಡು 95 ನೇ ಅಕಾಡೆಮಿ ಪ್ರಶಸ್ತಿಯ ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ನಾಮನಿರ್ದೇಶನ ಗೊಂಡಿದೆ ಎಂದು ಘೋಷಿಸಲಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಮಾರ್ಚ್ 12 ರಂದು ಲಾಸ್ ಏಂಜಲೀಸ್ನಲ್ಲಿ ನಡೆಯಲಿದೆ.
ಆರ್ಆರ್ಆರ್ ಸಿನಿಮಾ ಅಶ್ವಮೇಧದ ಕುದುರೆಯಂತೆ ಒಂದರ ಮೇಲೊಂದು ದಾಖಲೆ ಬರೆಯುತ್ತ ಸಾಗುತ್ತಿದೆ. ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ರಾಜಮೌಳಿ ನಿರ್ದೇಶನದ ಚಿತ್ರ ಇತ್ತೀಚೆಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪಡೆದುಕೊಂಡು ಇತಿಹಾಸ ಸೃಷ್ಟಿಸಿತು. ಅತ್ಯುತ್ತಮ ಒರಿಜಿನಲ್ ಹಾಡಿಗಾಗಿ ಈ ಪ್ರಶಸ್ತಿ ಬಂದಿತ್ತು. ನಾಟು ನಾಟು ಹಾಡಿಗೆ ಸಂಗೀತ ನೀಡಿದ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ತಂಡದ ಪರವಾಗಿ ಪ್ರಶಸ್ತಿ ಸ್ವೀಕರಿಸಿದರು.
ಇತ್ತೀಚೆಗೆ, ಪ್ರಸಿದ್ಧ ಚಲನಚಿತ್ರ ನಿರ್ಮಾಪಕ ಎಸ್ಎಸ್ ರಾಜಮೌಳಿ ಅವರ ಹಳೆಯ ಕ್ಲಿಪ್ ಏಕಾಏಕಿ ವೈರಲ್ ಆಗಿತ್ತು, ಇದರಲ್ಲಿ ಅವರು ಪ್ರಭಾಸ್ಗೆ ಹೋಲಿಸಿದರೆ ಬಾಲಿವುಡ್ ಸ್ಟಾರ್ ಹೃತಿಕ್ ರೋಷನ್ 'ಏನೂ ಇಲ್ಲ' ಎಂದು ಹೇಳಿರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ.ಈಗ ಈ ವಿಡಿಯೋ ಬಗ್ಗೆ ಪ್ರತಿಕ್ರಿಯಿಸಿರುವ ರಾಜಮೌಳಿ ಇದು ಹಳೆಯ ವಿಡಿಯೋ ಎಂದು ಹೇಳಿದ್ದಾರೆ.
ಸ್ಟಾರ್ ಡೈರೆಕ್ಟರ್ ಎಸ್. ಎಸ್. ರಾಜಮೌಳಿ ಚಿತ್ರ ಆರ್ಆರ್ಆರ್ ಭಾರತ ಮತ್ತು ವಿದೇಶಗಳಲ್ಲಿಯೂ ಅದ್ಬುತ ಪ್ರತಿಕ್ರಿಯೆಗೆ ಸಾಕ್ಷಿಯಾಗಿದೆ. ಕಳೆದ ವಾರವಷ್ಟೇ, ಈ ಸಿನಿಮಾದ ನಾಟು ನಾಟು ಹಾಡಿಗೆ ಗೋಲ್ಡನ್ ಗ್ಲೋಬ್ಸ್ 2023 ಅತ್ಯುತ್ತಮ ಒರಿಜಿನಲ್ ಸಾಂಗ್ ಎಂಬ ಪ್ರಶಸ್ತಿ ಬಂದಿತ್ತು. ಈ ಮೂಲಕ ರಾಜಮೌಳಿ ಸಿನಿಮಾ ಇತಿಹಾಸವನ್ನು ನಿರ್ಮಿಸಿತು. ಅಲ್ಲದೆ, ಆಸ್ಕರ್ ಅಂಗಳದಲ್ಲಿಯೂ ಈ ಸಿನಿಮಾದ ಹೆಸರು ಕೇಳಿ ಬರುತ್ತಿದೆ.
SS Rajamouli: ಸೇಥ್ ಮೇಯರ್ಸ್ ಅವರೊಂದಿಗಿನ ಸಂವಾದದಲ್ಲಿ ಮಾತನಾಡಿದ ಎಸ್ಎಸ್ ರಾಜಮೌಳಿ, “ನಾವು ವಿಶ್ವದ ಅಗ್ರಸ್ಥಾನದಲ್ಲಿದ್ದೇವೆ. ನಾನು ಭಾರತದಲ್ಲಿನ ಮತ್ತು ಜಗತ್ತಿನಾದ್ಯಂತ ಇರುವ ಭಾರತೀಯರಿಗಾಗಿ ಚಲನಚಿತ್ರಗಳನ್ನು ಮಾಡುತ್ತೇನೆ. ನಾವು ಪಾಶ್ಚಿಮಾತ್ಯ ರಾಷ್ಟ್ರಗಳಿಂದ ಮೆಚ್ಚುಗೆಯನ್ನು ಪಡೆಯಲು ಪ್ರಾರಂಭಿಸಿದಾಗ ನನ್ನ ಮೊದಲ ಆಲೋಚನೆ ಏನಾಗಿತ್ತೆಂದರೆ, ಚಿತ್ರ ವೀಕ್ಷಿಸಲು ಹೋದವರು ಬಹುಶಃ ನಮ್ಮ ಭಾರತೀಯರ ಸ್ನೇಹಿತರಾಗಿರಬೇಕು” ಎಂದು ಭಾವಿಸಿದ್ದೆ ಎಂದಿದ್ದಾರೆ.
ಎಮ್ಎಮ್ ಕೀರವಾಣಿ ಸಂಯೋಜನೆಯ ಆರ್ಆರ್ಆರ್ ಚಿತ್ರದ ನಾಟು ನಾಟು ಹಾಡು ಇತಿಹಾಸ ಸೃಷ್ಟಿಸಿದೆ. ಈ ಹಾಡಿಗೆ ಜನವರಿ 10 ರಂದು ಅತ್ಯುತ್ತಮ ಮೂಲ ಗೀತೆಗಾಗಿ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಲಭಿಸಿದೆ. ಪಿಎಂ ನರೇಂದ್ರ ಮೋದಿ ಸೇರಿದಂತೆ ಶಾರುಖ್ ಖಾನ್, ಚಿರಂಜೀವಿ, ಆಲಿಯಾ ಭಟ್ ಮತ್ತು ಎಆರ್ ರೆಹಮಾನ್ ರಾಜಮೌಳಿ ತಂಡವನ್ನು ಅಭಿನಂದಿಸಿದ್ದರು. ಇದೀಗ ಟೈಗರ್ ಶ್ರಾಫ್ ಅವರು ಈ ಅದ್ಭುತ ಸಾಧನೆಗೆ ಪರಿಪೂರ್ಣ ನೃತ್ಯ ಗೌರವ ಸೂಚಿಸಿದ್ದಾರೆ.
ಹೌದು, ಅಕ್ಟೋಬರ್ 10, 1973 ರಂದು ರಾಯಚೂರಿನಲ್ಲಿ ಜನಿಸಿದ ಎಸ್.ಎಸ್ ರಾಜಮೌಳಿ ತಮ್ಮ ಸಿನಿಮಾ ಜಗತ್ತು ಮೀರಿದ ವೈಯಕ್ತಿಕ ಬದುಕಿನ ಬಗ್ಗೆ ಅಷ್ಟಾಗಿ ಎಂದಿಗೂ ಮಾತನಾಡಿಲ್ಲ ಈಗ ನಾವು ಅವರ ಪ್ರೇಮ ಕಥೆಗೆ ಸಂಬಂಧಿಸಿದ ಅಪರೂಪದ ಮಾಹಿತಿಯನ್ನು ನೀಡುತ್ತಿದ್ದೇವೆ. ರಾಜಮೌಳಿ ಅವರು 2001 ರಲ್ಲಿ ರಮಾ ಅವರನ್ನು ವಿವಾಹವಾಗಿದ್ದಾರೆ.
Golden Globe Awards: RRR ಚಿತ್ರದ ಸಂಗೀತ ನಿರ್ದೇಶಕ ಎಂ.ಎಂ.ಕೀರವಾಣಿಯವರು ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸ್ವೀಕರಿಸಿದರು. ಪ್ರಶಸ್ತಿ ಸಮಾರಂಭದಲ್ಲಿ ನಿರ್ದೇಶಕ ಎಸ್.ಎಸ್.ರಾಜಮೌಳಿ, ಜೂನಿಯರ್ NTR ಮತ್ತು ರಾಮ್ ಚರಣ್ ಹಾಗೂ ಅವರ ಪತ್ನಿ ಉಪಾಸನಾ ಕಾಮಿನೇನಿ ಭಾಗಿಯಾಗಿದ್ದರು.
RRR Golden Globe awards : ರಾಜಮೌಳಿ ನಿರ್ದೇಶನದ ʼRRRʼ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಧೂಳ್ ಎಬ್ಬಿಸಿ ವಿಶ್ವದಾದ್ಯಂತ ಹಿಟ್ ಸಿನಿಮಾ ಆಗಿ ಹೊರಹೊಮ್ಮಿದೆ. ಸಾಲು ಸಾಲು ದಾಖಲೆ ನಿರ್ಮಿಸುತ್ತಿರುವ ಸಿನಿಮಾ ಈಗ ಆಸ್ಕರ್ನಷ್ಟೇ ಪ್ರತಿಷ್ಠಿತವಾದ ಗೋಲ್ಡನ್ ಗ್ಲೋಬ್ ಪ್ರಶಸ್ತಿಗೆ ನಾಮನಿರ್ದೇಶನವಾಗಿದೆ. ಈ ಕುರಿತು ಸ್ವತಃ ಎಸ್ಎಸ್ ರಾಜಮೌಳಿ ಅವರು ಸೋಷಿಯಲ್ ಮೀಡಿಯಾದ ಮೂಲಕ ಫ್ಯಾನ್ಸ್ ಜೊತೆ ಹಂಚಿಕೊಂಡಿದ್ದಾರೆ
ಅಖಂಡ ಭಾರತದೇಶದ ಸಿನಿ ರಂಗದಲ್ಲೇ ಬಾಹುಬಲಿ ಮೂಲಕ ಕೀರ್ತಿ ಪತಾಕೆ ಹಾರಿಸಿದ ಸ್ಟಾರ್ ನಿರ್ದೇಶಕ ರಾಜಮೌಳಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಆರ್ಆರ್ಆರ್ ಚಿತ್ರದ ಮೂಲಕ ರಾಜಮೌಳಿ ಇಂಡಿಯನ್ ಫಿಲ್ಮ್ ಇಂಡಸ್ಟ್ರಿಯನ್ನು ಜಾಗತಿಕ ಮಟ್ಟಕ್ಕೆ ಕರೆದೊಯ್ದರು. ಅಂತಹ ಸ್ಟಾರ್ ನಿರ್ದೇಶಕನ ಸಾಲು ಸಾಲು ಸಿನಿಮಾಗಳು ಯಶಸ್ಸಿನ ಪತಂಗ ಹಾರಿಸಿದ್ದು ಬಿಟ್ಟರೆ ಸೋಲು ಕಂಡ ಇತಿಹಾಸವೇ ಇಲ್ಲ.
ಆರ್ಆರ್ಆರ್ ಭಾರತದ ಸಿನಿ ಜಗತ್ತಿನಲ್ಲಿ ರಾರಾಜಾಜಿಸಿದ ಸಿನಿಮಾಗಳಲ್ಲಿ ಒಂದು. ಸ್ಟಾರ್ ಡೈರೆಕ್ಟರ್ ರಾಜಮೌಳಿ ನಿರ್ದೇಶನದ ಈ ಸಿನಿಮಾ ಅಭಿಮಾನಿಗಳ ಫೇವರಿಟ್. ರಾಮ್ ಚರಣ್ ಮತ್ತು ಜ್ಯೂ. ಎನ್ಟಿಆರ್ ಕಾಂಬಿನೇಷನ್ ಸಿನಿಮಾಗೆ ಬಲ ತುಂಬಿತ್ತು. ಡಿವಿವಿ ದಾನಯ್ಯ ಸುಮಾರು 400 ಕೋಟಿ ರೂ. ವೆಚ್ಚದಲ್ಲಿ ಈ ಸಿನಿಮಾ ನಿರ್ಮಿಸಿದ್ದರು. ಪ್ರಪಂಚದಾದ್ಯಂತ ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾಗಿ ಆರ್ಆರ್ಆರ್ ಸೂಪರ್ ಹಿಟ್ ಆಗಿತ್ತು. ಸುಮಾರು 1150 ಕೋಟಿಗೂ ಹೆಚ್ಚು ಕಲೆಕ್ಷನ್ ಗಳಿಸಿತು. ಆದರೆ ಈ ಸಿನಿಮಾ ಆಸ್ಕರ್ನಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾಗಿದೆ.
India's Official Entry To Oscars: ಈ ವರ್ಷದ ಎರಡು ಅತಿ ದೊಡ್ಡ ಚಿತ್ರಗಳಾದ 'ದಿ ಕಾಶ್ಮೀರ್ ಫೈಲ್ಸ್' ಹಾಗೂ ಆರ್.ಆರ್.ಆರ್ ಚಿತ್ರಗಳ ಮಧ್ಯ ಆಸ್ಕರ್ ಪ್ರವೇಶಕ್ಕಾಗಿ ತೀವ್ರ ಪೈಪೋಟಿ ನಡೆಯಲಿದೆ ಎಂದು ಭಾವಿಸಲಾಗಿತ್ತು. ಆದರೆ, ವಾಸ್ತವದಲ್ಲಿ ಈ ಎರಡೂ ಚಿತ್ರಗಳನ್ನು ಹಿಂದಿಕ್ಕಿ ಗುಜರಾತಿ ಚಲನಚಿತ್ರ Chhello Show ಬಾಜಿ ಹೊಡೆದಿದೆ.
ಯಾವುದೇ ಒಂದು ಸಿನಿಮಾ ನೋಡುವ ಮುನ್ನ IMDB ಹಾಗೂ Googleನಲ್ಲಿ ರೇಟಿಂಗ್ ಪರ್ಸಂಟೇಜ್ ನೋಡುವುದು ಮಾಮೂಲಿ. ಹಾಗೆ ನೋಡುವುದಾದ್ರೆ 'ಲೈಗರ್'ಗೆ IMDB ರೇಂಟಿಗ್ ವಿಚಾರದಲ್ಲೂ ಹಿನ್ನಡೆಯಾಗಿದೆ. IMDB ರೇಟಿಂಗ್ ಅನ್ನ 10 ಅಂಕದ ಮೂಲಕ ಅಳೆಯಲಾಗುತ್ತೆ. ಈ ಪೈಕಿ 'ಲೈಗರ್'ಗೆ 18 ಸಾವಿರ ಜನ ವೋಟ್ ಮಾಡಿದ್ದು, ಕೇವಲ 1.6 ರೇಂಟಿಗ್ ಪಡೆದುಕೊಂಡಿದೆ ವಿಜಯ್ ದೇವಕೊಂಡ ಮುಖ್ಯಭೂಮಿಕೆಯ ಸಿನಿಮಾ.
Oscar Awards 2023: ಎಲ್ಲಾ RRR ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದಿದೆ. ಹಾಲಿವುಡ್ ಆಸ್ಕರ್ 2023 ರಲ್ಲಿ ಅತ್ಯುತ್ತಮ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆಲ್ಲಲು ಉತ್ತಮ ಅವಕಾಶವನ್ನು ಆರ್ಆರ್ಆರ್ ಸಿನಿಮಾ ಹೊಂದಿದೆ.
HIGHEST GROSSING INDIAN FILMS: 2022ರಲ್ಲಿ ಈವರೆಗೆ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಟಾಪ್ 10 ಭಾರತೀಯ ಸಿನಿಮಾಗಳ ಪಟ್ಟಿಯನ್ನು ಐಎಂಬಿಡಿ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ. ಈ 10 ಸಿನಿಮಾಗಳಲ್ಲಿ ಬರೋಬ್ಬರಿ 7 ದಕ್ಷಿಣ ಭಾರತದ ಸಿನಿಮಾಗಳಾಗಿವೆ.
ಸೌತ್ ಸಿನಿಮಾಗಳ ಅಬ್ಬರಕ್ಕೆ ಬಾಲಿವುಡ್ ಸಹ ನಿಬ್ಬೆರಗಾಗುತ್ತಿದೆ. ಇದಕ್ಕೆ ಕಾರಣ ಅಂತಹ ಸಿನಿಮಾಗಳನ್ನು ದಕ್ಷಿಣ ಭಾರತದ ಸಿನಿರಂಗದವರು ತಯಾರಿಸುತ್ತಿರುವುದು. ಆರ್ಆರ್ಆರ್, ಬಾಹುಬಲಿ, ಕೆಜಿಎಫ್ 2 ಸಿನಿಮಾಗಳು ಬಾಕ್ಸಾಫೀಸ್ನಲ್ಲಿ ಸಾವಿರಾರು ಕೋಟಿ ಬಾಚಿಕೊಂಡಿವೆ.
ಎಸ್.ಎಸ್.ರಾಜಮೌಳಿ ನಿರ್ದೇಶನದ, ಜೂನಿಯರ್ ಎನ್ ಟಿಆರ್ ಹಾಗೂ ರಾಮ್ ಚರಣ್ ನಟನೆಯ ತ್ರಿಬಲ್ ಆರ್ ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆದು, ಈಗ ಜೀ5 ಒಟಿಟಿಯಲ್ಲಿ ಧೂಳ್ ಎಬ್ಬಿಸ್ತಿದೆ. ಇದೇ ತಿಂಗಳ 20ರಂದು ತಾರಕ್ ಹುಟ್ಟುಹಬ್ಬದಂದು ಒಟಿಟಿಗೆ ಲಗ್ಗೆ ಇಟ್ಟ ತ್ರಿಬಲ್ ಆರ್ ಸಿನಿಮಾ ಹೊಸದೊಂದು ರೆಕಾರ್ಡ್ ಬರೆದಿದೆ.
ಎಸ್.ಎಸ್.ರಾಜಮೌಳಿ ನಿರ್ದೇಶನದ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ RRR ಇದೇ 20ರಂದು ಜೀ5 ಒಟಿಟಿಗೆ ಲಗ್ಗೆ ಇಡ್ತಿದೆ. ವಿಶ್ವ ಬಾಕ್ಸ್ ಆಫೀಸ್ನಲ್ಲಿ ಹೊಸ ದಾಖಲೆ ಬರೆದಿದ್ದ ತ್ರಿಬಲ್ ಆರ್ ಸಿನಿಮಾದಲ್ಲಿ ರಾಮ್-ಭೀಮ್ ಖದರ್ನಲ್ಲಿ ರಾಮ್ ಚರಣ್ ಹಾಗೂ ಜೂ.ಎನ್ಟಿಆರ್ ಜೋಡಿ ಕಮಾಲ್ ಮಾಡಿತ್ತು.
ಸಾಮಾನ್ಯವಾಗಿ ನಟರ ಮಧ್ಯೆ ಬಾಂಧವ್ಯ ಚೆನ್ನಾಗಿದ್ದರೂ ಸಹಿತ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸ್ಟಾರ್ ವಾರ್ ಗಳನ್ನು ಮಾಡುತ್ತಿರುತ್ತಾರೆ.ಕೆಜಿಎಫ್ 2 ಚಿತ್ರ ಬಿಡುಗಡೆಯಾದಾಗಿನಿಂದಲೂ ಕಿಚ್ಚ ಸುದೀಪ್ ಅವರು ಈ ಚಿತ್ರದ ವಿಚಾರವಾಗಿ ಟ್ವೀಟ್ ಮಾಡಿಲ್ಲ ಎಂದು ಅಭಿಮಾನಿಗಳು ದೂರುತ್ತಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.