ಬೆಳಗಾವಿ ಜಿಲ್ಲೆಯಲ್ಲಿ ಮತ್ತೆ ಮುಂದುವರೆದ ಮಳೆರಾಯನ ಆರ್ಭಟ. ಕಳೆದ ಎರಡ್ಮೂರು ದಿನಗಳಿಂದ ಮಳೆ ಅಬ್ಬರ ಜೋರಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಕಷ್ಟ ಪಟ್ಟು ಬೆಳೆದ ವಿವಿಧ ಬೆಳೆಗಳ ಹಾನಿಯಾಗುವ ಭೀತಿಯಲ್ಲಿ ರೈತರಿದ್ದಾರೆ.
ಧಾರವಾಡ ಜಿಲ್ಲೆಯಾದ್ಯಂತ ಮಳೆರಾಯನ ಆರ್ಭಟ ಜೋರಾಗಿದೆ. ಕುಂದಗೋಳ ತಾಲೂಕು ವರುಣನ ಆರ್ಭಟಕ್ಕೆ ನಲುಗಿದೆ. ಕುಂದಗೋಳ ತಾಲೂಕಿನ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಮಳೆಯಾಗ್ತಿದ್ದು ಮನೆಗಳಿಗೆ ನೀರು ನುಗ್ಗಿದೆ.. ರಸ್ತೆಗಳು ಕೆರೆಯಂತಾಗಿವೆ..
ರಾತ್ರಿ ಇಡೀ ಸುರಿದ ಮಳೆಗೆ ಬೆಂಗಳೂರಿನ ಜನ ತತ್ತರಿಸುವಂತಾಗಿದೆ. ಯುಮಲೂರಿನಲ್ಲಿ ಮಳೆಯಿಂದ ಜನರ ನರಕಯಾತನೆ ಅನುಭವಿಸುವಂತಾಗಿದೆ. ರಸ್ತೆ ಮೇಲೆ ನಿಂತಿರುವ ನೀರು ಇನ್ನೂ ಕಡಿಮೆಯಾಗಿಲ್ಲ. ಯಮಲೂರು ಬಳಿ ಮಳೆಯಿಂದ ಜಲಪ್ರಳಯ ಸೃಷ್ಟಿಯಾಗಿದೆ. ಅಪಾರ್ಟ್ಮೆಂಟ್ ನಿವಾಸಿಗಳು ಟ್ರ್ಯಾಕ್ಟರ್ನಲ್ಲಿ ತೆರಳ್ತಿದ್ದಾರೆ.
ಧಾರಾಕಾರ ಮಳೆ ಸುರಿಯುತ್ತಿದ್ದ ವೇಳೆ ವಿದ್ಯುತ್ ಕಂಬ ಟಚ್ ಆಗಿ ಕರೆಂಟ್ ಶಾಕ್ನಿಂದ ಯುವತಿ ಮೃತಪಟ್ಟಿರುವ ದಾರುಣ ಘಟನೆ ನಿನ್ನೆ ರಾತ್ರಿ ವೈಟ್ ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ ಸಿದ್ದಾಪುರದಲ್ಲಿ ನಡೆದಿದೆ.
ವಿಜಯನಗರ ಜಿಲ್ಲೆಯಲ್ಲಿ ಬೆಳ್ಳಂಬೆಳಗ್ಗೆ ವರುಣ ಅಬ್ಬರಿಸಿದ್ದಾನೆ.. ಜಿಲ್ಲೆಯ ಹೊಸಪೇಟೆ ತಾಲೂಕಿನ ವಿವಿಧ ಭಾಗಗಳಲ್ಲಿ ಭಾರಿ ಮಳೆಯಾಗ್ತಿದೆ. ವಡಕರಾಯನ ದೇವಸ್ಥಾನ, ಪುನೀತ್ ರಾಜ್ಕುಮಾರ್ ಕಾಲೋನಿ, ಕಮಲಾಪುರ ಸೇರಿ ಹಲವೆಡೆ ಮಳೆಯಾಗ್ತಿದ್ದು ಜನ ಜೀವನ ಸಂಪೂರ್ಣ ಅವ್ಯವಸ್ತವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.