ಬುಧವಾರ ರಾತ್ರಿ ಗುಜರಾತಿನ ಹಲವು ಭಾಗಗಳಲ್ಲಿ ಭೂಕಂಪದ ಅನುಭವವಾಗಿದ್ದು, ರಿಕ್ಟರ್ ಮಾಪನದಲ್ಲಿ 4.0 ತೀವ್ರತೆ ದಾಖಲಾಗಿದೆ. ಅಹಮದಾಬಾದ್, ಸಬರ್ಕಾಂತ, ಬನಸ್ಕಾಂತ, ಅರಾವಳಿ ಮತ್ತು ಅಂಬಾಜಿಗಳಲ್ಲಿ ಭೂಕಂಪದ ಅನುಭವವಾಗಿರುವ ಬಗ್ಗೆ ವರದಿಗಳಿವೆ.
ಭೂಕಂಪನವು ರಿಕ್ಟರ್ ಮಾಪನದಲ್ಲಿ 3.1ರಷ್ಟಿದ್ದು ಯಾವುದೇ ಸಾವು ನೋವಾದ ವರದಿಯಾಗಿಲ್ಲ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.ಈ ರೀತಿಯ ಭೂಕಂಪನವು ಕಳೆದ ವರ್ಷ ನವಂಬರ್ ನಿಂದಲೂ ಉಂಟಾಗಿದೆ ಎಂದು ತಿಳಿದುಬಂದಿದೆ.
ಇಂಡೋನೇಷ್ಯಾದ ದ್ವೀಪದ ಸುಲಾವೆಸಿಯನ್ನು 7.5 ಭಾರಿ ಭೂಕಂಪದ ನಂತರ ಸುನಾಮಿಯಿಂದ ಅಪ್ಪಳಿಸಿದೆ ಎಂದು ಸುದ್ದಿ ಸಂಸ್ಥೆ ಎಎನ್ಪಿ ಜಿಯೋಫಿಸಿಕ್ಸ್ ಏಜೆನ್ಸಿ ಉಲ್ಲೇಖಿಸಿ ವರದಿ ಮಾಡಿದೆ. ಭೂಕಂಪದ ನಂತರ ಸುನಾಮಿಯ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿತ್ತು.
ಶುಕ್ರವಾರದಂದು ಇಂಡೋನೆಷ್ಯಾದಲ್ಲಿ ರಿಕ್ಟರ್ ಮಾಪಕದಲ್ಲಿ 7.5 ಭೂಕಂಪ ಸಂಭವಿಸಿದೆ ಎಂದು ಅಮೆರಿಕಾದ ಭೂವೈಜ್ಞಾನಿಕ ಸಮೀಕ್ಷೆ ಹೇಳಿದೆ. ಆದರೆ ತಕ್ಷಣ ಇದುವರೆಗೆ ಸಾವು ನೋವುಗಳ ವರದಿಯಾಗಿಲ್ಲ ಎಂದು ಹೇಳಲಾಗಿದೆ.
ಕಳೆದ ಐದು ಗಂಟೆಗಳಲ್ಲಿ ಭಾರತದ ಆರು ರಾಜ್ಯಗಳಲ್ಲಿ ಭೂಕಂಪ ಸಂಭವಿಸಿದೆ. ಬಿಹಾರ, ಅಸ್ಸಾಂ, ಜಾರ್ಖಂಡ್, ಹರಿಯಾಣ, ಪಶ್ಚಿಮ ಬಂಗಾಳ ಮತ್ತು ಜಮ್ಮು ಮತ್ತು ಕಾಶ್ಮೀರದ ಕೆಲವು ಭಾಗಗಳಲ್ಲಿ ಭೂಕಂಪ ಉಂಟಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.